ಪ್ರಾರ್ಥಿಸಲೊಂದು ಬೇರೆಯದೇ ಬಗೆ :)

ಪ್ರಾರ್ಥಿಸಲೊಂದು ಬೇರೆಯದೇ ಬಗೆ :)

ಅಯ್ಯೋ ಗಣೇಶ! ಯಾಕೋ ನೀನಳುವೆ? ನನ್ನ ಕಿವಿಗಳನ್ನೆಳೀತಿದಾನೆ ನೋಡಮ್ಮ!
ಯಾಕೋ ಸ್ಕಂದ? ಯಾಕೀ ಚೇಷ್ಟೆ? ಅವನು ಯಾಕೆ ಮುಂಚೆ ನನ್ನ ಕಣ್ಣೆಣಿಸಿದ್ದು?
ಆನೇ ಮೊಗದವನೇ! ಇದು ಸರಿಯೇನೋ? ನನ್ನ ಮೂಗನ್ನಳೆದಿದ್ದವನೇ ತಾನೇ?
ಇದಕೇಳುತಲೇನೂ ತೋಚದೆ ಹುಸಿಕೋಪವತೋರಿದ ಗೌರಿಯೆ ಕಾಯಲೆಮ್ಮೆಲ್ಲರನ್ನು!

ಸಂಸ್ಕೃತ ಮೂಲ ಹೀಗಿದೆ:

ಹೇ ಹೇರಂಬ ಮದಂಬ ರೋದಿಷಿ ಕಥಂ ಕರ್ಣೌ ಲುಠತ್ಯಗ್ನಿಭೂಃ
ಕಿಂ ತೇ ಸ್ಕಂದ ವಿಚೇಷ್ಟಿತಂ ಮಮ ಪುರಾ ಸಂಖ್ಯಾ ಕೃತಾ ಚಕ್ಷುಷಾಂ
ನೈತತ್ತೇಹ್ಯುಚಿತಂ ಗಜಾಸ್ಯ ಚರಿತಂ ನಾಸಾ ಪ್ರಮೀತಾ ಚ ಮೇ
ತಾವೇವಂ ಸಹಸಾ ವಿಲೋಕ್ಯ ಹಸಿತವ್ಯಗ್ರಾ ಶಿವಾ ಪಾತು ವಃ

ಕೊ.ಕೊ: ಈ ಶ್ಲೋಕವನ್ನು ಮೊದಲು ನನಗೆ ಹೇಳಿದ ಸಂಪದಿಗರಾದ ತುರಂಗ ಅವರಿಗೆ ನಾನು ಆಭಾರಿ

-ಹಂಸಾನಂದಿ

Rating
No votes yet

Comments