ಪ್ರಿತಿಯ... ಸವಿ-ಸವಿ ನೆನಪು......ಪ್ರೀತಿಯಿಂದ, ಪ್ರೀತಿಗಾಗಿ... ಜಿ.ವಿಜಯ್ ಹೆಮ್ಮರಗಾಲ.

ಪ್ರಿತಿಯ... ಸವಿ-ಸವಿ ನೆನಪು......ಪ್ರೀತಿಯಿಂದ, ಪ್ರೀತಿಗಾಗಿ... ಜಿ.ವಿಜಯ್ ಹೆಮ್ಮರಗಾಲ.

ಪ್ರಿತಿಯ...

ಎತ್ತೆತ್ತೆಲೂ ನಸುಬೆಳಕು
ಹಿತವಾದ ಗಾಳಿ, ತಲೆದೂಗುತಿರುವಾ ಪೈರು,
ಅದುವೇ ; ನೀ ಬರುವೆ ಎಂಬ ಕಾರಣ.
ಹಬ್ಬದ ವಾತವರಣ ಮನೆಯಲಿ,
ಸುಮಧುರ ಕ್ಷಣಗಳ ನೀರಿಕ್ಷೆ ಮನದಲಿ

ಉಷೆಯು ಉದಯಿಸುವ ಮುನ್ನ
ಮೆಲ್ಲನೆ ಬಾಗಿಲ ತೆರೆದು
ತಾಸು-ತಾಸುಗಳವರೆಗೆ ತಂಗಿ ಬಿಡಿಸಿದ ರಂಗೋಲಿ,
ಅದರೊಂದಿಗೆ ತುಂಬಿದ ಬಗೆ-ಬಗೆಯ ರಂಗು
ಆಹಾ...! ಏನು ಹೇಳಲಿ ಎಂಥಾ ಬೆಡಗು..?
ಅದುವೇ ; ನೀ ಬರುವೆ ಎಂಬ ಕಾರಣ.
ಬರುವೇ ನೀ ಬಂದು ಅದರ ಸೌಂದರ್ಯವಾ..
ಸವಿಯುವುದರೊಳಗಾಗಿ
ಮುತ್ತಿತು... ಕಾರ್ಗಾಲದ ಕಾರ್ಮೋಡ,
ಬಿರುಗಾಳಿಯ ರಭಸ, ಗುಡುಗಿನ ಆರ್ಭಟ ,
ಕೋಲ್ಮಿಂಚುಗಳ ಭೀಷಣ ರುದ್ರ-ತಾಂಡವದೊಂದಿಗೆ
ಮಳೆರಾಯನ ಅನೀರಿಕ್ಷಿತ ಆಗಮನ.
ಪಟ-ಪಟ, ತಟ-ತಟ ಎನ್ನುತಾ...
ರಭಸದೊಂದಿಗೆ ವರುಣ ಧರೆಗಿಳಿದಾಗ
ಮೆಲ್ಲಗೆ...ಮೆಲ್ಲಗೆ ಮಣ್ಣಲ್ಲಿ ಬೆರೆತ
ರಂಗು ರಂಗಿನ ರಂಗೋಲಿಯ ಚೆಲುವಿನ ಚಿತ್ತಾರ
ಕಡೆಗೊಮ್ಮೆ ಕೊಚ್ಚಿ ನಿನ್ನಲ್ಲಿ ಬೆರೆತಾಗ
ಕೊನೆಗೂ ನೀ ಬರಲಿಲ್ಲ,
ನೀರವತೆಯ ಮನದಲ್ಲಿ
ಉಳಿದಿದ್ದು ಕೇವಲ
ನಿನ್ನಯ.....
ಸವಿ-ಸವಿ ನೆನಪು......
ಪ್ರೀತಿಯಿಂದ, ಪ್ರೀತಿಗಾಗಿ...
ಜಿ.ವಿಜಯ್ ಹೆಮ್ಮರಗಾಲ.

Rating
No votes yet