ಪ್ರೀತಿಯಿಂದ
ಪ್ರೀತಿಯಿಂದ
ಕವಿಮನದ ಸಹಜ ಆಸೆ ಬಿಟ್ಟು
ಬದುಕ ಕಟ್ಟುವ ಕಾರ್ಯ ಹೊತ್ತು
ದುಡಿಯುತಿರುವೆ ಬದುಕಿಗಾಗಿ
ಅನ್ಯರ ಸಂಸ್ಥೆಗೆ ಹೆಗಲ ಕೊಟ್ಟು
ನನ್ನೊಳಗಿನ ಕವಿಯು ರಾಜಿ ಮಾಡಿ
ಅನ್ಯರ ವ್ಯವಹಾರಕೆ ಹಾದಿ ಮಾಡಿ
ದುಡಿಯುತಿರುವೆ ಆಸೆಗಳ ಮುಂದೂಡಿ
ಬದುಕ ಕಟ್ಟುವನೆಂಬ ಗುರಿಯ ಇಟ್ಟು
ವಾರದ ದಿನಗಳ ಕಚೇರಿ ಕೆಲಸ
ವಾರಾಂತ್ಯದ ಸಂಸಾರದ ಕೆಲಸ
ಕಾರ್ಯಗಳಲೇ ಮುಳುಗುತಿರುವೆ
ಸಾಹಿತ್ಯ ಕೃಷಿಯ ಆಸೆಯ ಬಿಟ್ಟು
ಬದುಕ ಕಟ್ಟುವ ಕಾರ್ಯವೂ ಇರಲಿ
ಸಂಸಾರ ನೊಗದ ಭಾರವೂ ಇರಲಿ
ಹೊಂದಿಕೊಂಡೇ ಸಾಗಿಸುವೆ ನನ್ನೀ
ಹವ್ಯಾಸವ, ಕೊಂಚ ಹೊತ್ತ ಮೀಸಲಿಟ್ಟು
ಹವ್ಯಾಸಕುಂಟು ಬತ್ತದ ಉತ್ಸಾಹ
ಎಲ್ಲ ಕಾಲದಲ್ಲುಂಟು ಸ್ವಪ್ರೋತ್ಸಾಹ
ಅಂತಾರಾಳದ ಸಹಜ ಮಾತುಗಳಿವು
ಕವನ ರಚಿಸುವೆ ನಾ ಪ್ರೀತಿಯಿಟ್ಟು
- ತೇಜಸ್ವಿ.ಎ .ಸಿ
Rating
Comments
ತೇಜಸ್ವಿ, ನಿಮ್ಮ ಪ್ರಯತ್ನ
ತೇಜಸ್ವಿ, ನಿಮ್ಮ ಪ್ರಯತ್ನ ಚೆನ್ನಾಗಿದೆ. ಆದರೆ ಎಲ್ಲ ಸಾಲುಗಳೂ rhyme ಆಗಲೇಬೇಕು ಎಂಬ ಮಿತಿಯೊಳಗೆ ಕೂಡಿಹಾಕಿಕೊಳ್ಳಬೇಡಿ. ಹೀಗೆಯೇ ಮತ್ತಷ್ಟು ಪ್ರಯತ್ನಗಳನ್ನು ಮಾಡಿ. ನೀವು ಕೆಲಸ ಮಾಡುತ್ತಿರುವ ಸಂಸ್ಥೆ ನಿಮಗೆ "ಅನ್ಯರದ್ದು" ಎನಿಸಬಾರದು. ದುಡಿಮೆಗಾದರೂ ಸರಿ, ಹವ್ಯಾಸಕ್ಕಾದರೂ ಸರಿ - ನೀವು ಮಾಡುತ್ತಿರುವ ಕೆಲಸ ನಿಮಗೆ ಯಾವಾಗಲೂ ಖುಷಿ ಕೊಡುತ್ತಿರಬೇಕು.
In reply to ತೇಜಸ್ವಿ, ನಿಮ್ಮ ಪ್ರಯತ್ನ by hpn
ಹರಿ ಪ್ರಸಾದ್ ರವರೇ,
ಹರಿ ಪ್ರಸಾದ್ ರವರೇ,
ಇಲ್ಲ, ಇತ್ತೀಚಿಗೆ ನನ್ನ ಕವನಗಳಲ್ಲಿ ಪ್ರಾಸವನ್ನು ಹೆಚ್ಚಾಗಿ ಬಳಸುತ್ತಿಲ್ಲ. ಆದರೆ ಇತ್ತೀಚಿನ ಸಾಹಿತ್ಯ ಕೃಷಿ ಕಡಿಮೆಯಾಗಿರುವುದಕ್ಕೆ ಹಾಗೆ ಬರೆದೆ...ಬಹುಶಃ ಇತ್ತೀಚಿಗೆ ನನಗೆ ಗಾಡವಾಗಿ ಪ್ರಭಾವ ಬೀರಿದ ರಿಚ್ ಡ್ಯಾಡ್ ಪೂರ್ ಡ್ಯಾಡ್ ಸರಣಿಯ ಪುಸ್ತಕಗಳ ಪರಿಣಾಮವಿದು. ...ಆದರೆ ಮನಸು ಕೊಟ್ಟು ಕೆಲಸ ಮಾಡಿದರೆ ಆನಂದವೆಂಬುದು ನಿಜವೇ ನಾಡಿಗರೇ.
ತೇಜಸ್ವಿಯವರೆ, ಕವನ ಚೆನ್ನಾಗಿದೆ.
ತೇಜಸ್ವಿಯವರೆ, ಕವನ ಚೆನ್ನಾಗಿದೆ. ಸ೦ಸಾರ, ಕಛೇರಿ ಕೆಲಸಗಳು ಎಲ್ಲರಿಗೂ ಇರುವ೦ಥವೆ. ಅವುಗಳಿ೦ದ ತಪ್ಪಿಸಿಕೊಳ್ಳುವುದು ಕಷ್ಟ. ಅವುಗಳ ನಡುವೆ ಮನಸ್ಸಿಗೆ ಹತ್ತಿರವಾದ ಹವ್ಯಾಸವನ್ನು ಮು೦ದುವರೆಸಲು ಗಟ್ಟಿ ನಿರ್ಧಾರ ಬೇಕು. ಆ ನಿರ್ಧಾರ ತಾಳಿದ ನಿಮಗೆ ಅಭಿನ೦ದನೆಗಳು.
In reply to ತೇಜಸ್ವಿಯವರೆ, ಕವನ ಚೆನ್ನಾಗಿದೆ. by spr03bt
ಧನ್ಯವಾದಗಳು ಶಿವ ಪ್ರಕಾಶ್ ರವರೇ,
ಧನ್ಯವಾದಗಳು ಶಿವ ಪ್ರಕಾಶ್ ರವರೇ, ಸಾಹಿತ್ಯದ ಒಲವು ಹಾಗು ಸೃಜನಶೀಲತೆಯಿಂದ ದೊರಕುವ ಆನಂದ ಅಪರಿಮಿತ.