ಪ್ರೀತಿಯ ಹಂಬಲ
ನನ್ನ ಮೊಗದಲ್ಲಿ ನಗುವಿಲ್ಲ, ಕಣ್ಣಿಗೆ ನಿದ್ದೆಯಿಲ್ಲ,
ಒಂಟಿತನ ನನ್ನನ್ನು ಒಳಗೊಳಗೆ ತಿನ್ನುತ್ತಿದೆ
ಗೆಳತಿ ನಿನಗಾಗಿಯೇ ಸಿಂಗರಿಸಿಕೊಂಡಿದ್ದು
ವ್ಯರ್ಥವಾಯಿತೇ ? ಅರ್ಥವಿಲ್ಲದೇ ಹೋಯಿತೇ ?
ನನ್ನ ಸ್ವಾರ್ಥದ ಕಹಿನೆರಳಲ್ಲಿ, ನಿನ್ನ ಕೄತಕ
ಭಾಂದವ್ಯದ ಬಂಧನದಲ್ಲಿ ಹೇಗೆ
ಅರಳುವುದೋ ನಮ್ಮ ಪ್ರೇಮಬಳ್ಳಿ ?
ನಿನ್ನೊಳಗೆ ಅನೇಕ ಚಿತ್ತಾರಗಳಿದ್ದರೂ
ನನ್ನ ಚಿತ್ರವೇಕಿಲ್ಲ ?ನಿನ್ನ ಸ್ಥಿತಿ ಪ್ರಜ್ಞೆ - ಮೌನಕ್ಕೆ
ನೆಲೆಯಿಲ್ಲ - ಬೆಲೆಯಿಲ್ಲ !
ನನ್ನೀ ಬರಡು ಬದುಕಿನ ಮೊದಲ ಗೆಳತಿ ನೀ
ಬತ್ತಿಹೋದ ನೆನಪುಗಳು ಚಿಗುರೊಡೆಯ ಬೇಕು
ನೀ ನನ್ನ ಬಿಟ್ಟರು ನಾ ನಿನ್ನ ಬಿಡಲೊಲ್ಲದು
ತೊರೆಯದಿರು ಪ್ರೀತಿಯ ಮರೆಯದಿರು,
ಮೌನವನ್ನೇ ಹೊದ್ದು ಮಲಗಿದ್ದೀನಿ ನಾನಿಲ್ಲಿ
ನೀ ಮೌನ ರೋಧನವನ್ನು ಮುರಿದು ಮಾತಾಡುವೇಯಾ ???
Rating
Comments
ಉ: ಪ್ರೀತಿಯ ಹಂಬಲ
In reply to ಉ: ಪ್ರೀತಿಯ ಹಂಬಲ by ಅರವಿಂದ್
ಉ: ಪ್ರೀತಿಯ ಹಂಬಲ
In reply to ಉ: ಪ್ರೀತಿಯ ಹಂಬಲ by ಶಶೀ H G
ಉ: ಪ್ರೀತಿಯ ಹಂಬಲ
In reply to ಉ: ಪ್ರೀತಿಯ ಹಂಬಲ by ಅರವಿಂದ್
ಉ: ಪ್ರೀತಿಯ ಹಂಬಲ