ಪ್ರೀತಿಯ ಹುಡುಗಾ!!!

ಪ್ರೀತಿಯ ಹುಡುಗಾ!!!

                                 ನನ್ನವನಿಗೊಂದು ಪ್ರೇಮಪತ್ರ

ಪ್ರೀತಿಯ ಹುಡುಗಾ !!!!!!!!

ನಿಜ ಹೇಳ್ತೀನಿ ಡಿಯರ್ ಪತ್ರ (ಇದನ್ನ ಪತ್ರ ಅಂತಾ ಕರೆಯೋದಕ್ಕಿಂತ ನನ್ನ ಮನಸ್ಸಿನ ಭಾವನೇಂತ ಹೇಳೋದಕ್ಕೆ ಇಷ್ಟ ಪಡ್ತಿನಿ) ಹೇಗೆ ಪ್ರಾರಂಭ ಮಾಡಬೇಕು ಗೊತ್ತಾಗುತ್ತಾ ಇಲ್ಲ.........|

ನೀನು ಎದುರಿಗಿಲ್ಲದಾಗ ಏನೆಲ್ಲ ಮಾತಾಡಬೇಕು ಅಂತ ಅಂದುಕೋತಿನಿ.. ಆದರೆ…. ನೀ ಎದುರಿಗಿರುವಾಗ ಮಾತುಗಳು ಬರೋದೇ ಇಲ್ಲ ಕಣೊ. ಏನು ಮೋಡಿ ಮಾಡಿದಿಯಾ ನಂಗೆ. ಯಾರನ್ನ ನೋಡಿದರೂ ಏನೂ ಅನಿಸದಿದ್ದ ನನಗೆ ನಿನ್ನ ನೋಡಿದ ಕ್ಷಣದಿಂದಲೇ ಎದೆಯೊಳಗೆ  ಶುರುವಾಯ್ತಲ್ಲ ತಲ್ಲಣ!!! ಅದಕ್ಕೇನು ಕಾರಣಾಂತ ಹೇಳ್ತೀಯ? ಸಾಧ್ಯಾನಾ? ನಿನ್ನ ಎಷ್ಟು ಹೊತ್ತು ನೋಡಿದರೂ ಹಾಗೆ ಯಾವಾಗಲೂ ನೋಡ್ತಾನೆ,  ಮಾತಾಡ್ತಾನೆ ಇರಬೇಕಂತ  ಅನ್ನಿಸುತ್ತಲ್ಲ ಅದಕ್ಕೆ ಉತ್ತರ ಹೇಳಬಲ್ಲೆಯಾ!!!

           ಪ್ರತಿಯೊಬ್ಬರಿಗೂ ಅಮ್ಮನ ಬೆಚ್ಚನೆಯ ಮಡಿಲಿನ ನಂತರ ಸಿಗೊ ಮಡಿಲು ಅಂದರೆ ಅದು ತಾನು ಇಷ್ಟ ಪಡುವ ಹುಡುಗಾ / ಹುಡುಗಿಯು ಮಡಿಲಂತೆ. ಅದು ನಿನ್ನಂಥವನದು ಅಂತಾ ನಾ ಖುಷಿ ಪಡ್ತಿನಿ,,,ಇಷ್ಟು ದಿನ ನೀನು ನನ್ನ ಬಗ್ಗೆ ಕುತೂಹಲ ತೋರಿಸಿದ್ದು ಗೊತ್ತಾಗುತ್ತಿತ್ತು. ನಿನ್ನ ಪ್ರೀತಿ ಮಾಡ್ತೀನಿ ಅಂತ ನೀನು ಹೇಳದಿದ್ದರೂ ನನಗೆ ಗೊತ್ತಾಗುತ್ತಿತ್ತು ಕಣೊ....ನೀ ನನ್ನ ಜೊತೆ ಮೊದಲಿನ ಹಾಗೆ ಮುಖ ನೋಡಿ ಮಾತಾಡೋದಕ್ಕೆ ಕಷ್ಟ ಪಡ್ತಾಯಿದ್ದೆ...ಏನೋ ಹೇಳೋದಕ್ಕೆ ಆಗದೆ ಒದ್ದಾಡ್ತಾ ಇದ್ದೀಯಾ ಅಂತ ಅನ್ನಿಸ್ತಾಯಿತ್ತು ,,,ಕೇಳೋದಕ್ಕೆ ನಂಗೂ ಧೈರ್ಯ ಬರಲಿಲ್ಲ ಬಿಡು...ಸ್ವಲ್ಪ ದಿನ ಆದಮೇಲೆ ನಾನೇ ಮೊದಲು “ನಿನ್ನ ಬಗ್ಗೆ ನನ್ನ ಮನಸ್ಸಲ್ಲಿ ಏನೋ ಅನ್ನಿಸ್ತಾಯಿದೆ, ಹೇಳಿಕೊಳ್ಳೋದಕ್ಕೆ ಕಷ್ಟ,,,,ಅದು ಪ್ರೀತಿನಾ? ಸರಿಯಾಗಿ ಗೊತ್ತಾಗ್ತಾಯಿಲ್ಲ, ಆದರೆ ಅದು ಆಕರ್ಷಣೆಯಲ್ಲ ಅಂತ ಮಾತ್ರ ಹೇಳ್ತೀನಿ,,,, ನಾ ತುಂಬಾ ದಿನದಿಂದ ಹೇಳೋದಕ್ಕಾಗದೆ ಒದ್ದಾಡಿದ್ದೀನಿ,,,,ನಿನ್ನ ಮನಸ್ಸಲ್ಲಿಯೂ ನನ್ನ ಬಗ್ಗೆ ಈ ಭಾವನೆಯಿದ್ದರೆ ಹೇಳು, ಇಲ್ಲದಿದ್ದರೆ ದಯವಿಟ್ಟು ನಾ ಹೀಗೆ ಹೇಳಿದೆ ಅಂತ ಬೇಜಾರು ಮಾಡಕೊಬೇಡ ನಂಗೆ ಅನ್ನಿಸಿದ್ದನ್ನು ಬೇರೆ ಸ್ನೇಹಿತರ ಜೊತೆ ಹೇಳಿಕೊಂಡು ತೊಂದರೆ ತಂದುಕೊಳ್ಳೋದು ಬೇಡಾಂತ ನಿನ್ನ ಹತ್ತಿರಾನೇ ಹೇಳಿದೆ ಅಷ್ಟೆ “ ಅಂತ ಬರೆದು ಕೊಟ್ಟ ಪತ್ರವನ್ನು ನೀ ಓದುತ್ತಿರುವಾಗ “ನನ್ನ ತುಟಿಗಳು ಅದುರುತ್ತಾ ಇತ್ತು,  ಹೃದಯದಬಡಿತ ಏರುಪೇರಾಗುತ್ತಾ ಇತ್ತು” ಅಂತ ಹೇಳಿದೆಯಲ್ಲಾ ಅದನ್ನೇ ನಾ ಪ್ರೀತಿ ಅಂದುಕೊಂಡೆ......

ಜೀವನದಲ್ಲಿ ನಾನು ನಿನ್ನಿಂದ ಎಂಥದೇ ಸಂದರ್ಭದಲ್ಲೂ ಬಯಸೋದು ತುಂಬು ಪ್ರೀತಿ ಮಾತ್ರಪ್ಪಾ..., ಆ ನಿನ್ನ ಪ್ರೀತಿ ನಮ್ಮ ಬದುಕಿನುದ್ದಕ್ಕೂ ಇರಬೇಕು... ಅಲ್ಲಿ ಕರುಣೆ ಇರಬಾರದು ಅದಕ್ಕೆ ಪ್ರತಿಯಾಗಿ ನನ್ನ  ಇಡೀ ಬದುಕನ್ನೇ ನಿನಗೆ ಮುಡಿಪಾಗಿ ಇಡುತ್ತೀನಿ,,,,,, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಅನ್ನೋ ಹಾಗೆ ನಿನ್ನ ಜೊತೆ ಬದುಕುಬಿಡ್ತೀನಿ ಕಣೊ...

ನನ್ನ ಬದುಕಲ್ಲಿ ನೀನು ನನಗೆ ಕೇವಲ ಗಂಡನಾಗಿ ಬರಬಾರದು ಹುಡುಗಾ... ನಾನು ನಿನ್ನ ನಂಬಿ ನನ್ನವರನ್ನೆಲ್ಲ, ನನ್ನದು ಅನ್ನುವುದನ್ನೆಲ್ಲಾ ಬಿಟ್ಟು ನಿನ್ನ ಪ್ರೀತಿನ ನಂಬಿಕೊಂಡು ಬರುತ್ತೀನಿ, ಆ ಎಲ್ಲವೂ ನನಗೆ ನಿನ್ನಿಂದ ಸಿಗಬೇಕು ಕಣೊ,,,,,ಅದು ಸಿಕ್ಕಾಗ ಈ ಭೂಮಿ ಮೇಲೆ ನನ್ನಷ್ಟು ಸುಖಿ  ಬೇರಾರೂ ಇಲ್ಲ ಹುಡುಗಾ....ಆ ನಂಬಿಕೆ ನನಗಿದೆ ಕಣೊ.....ನನ್ನ ಬದುಕಲ್ಲಿ ನೀನು ಪ್ರೀತಿಯ ಗಂಡನಾಗಿ, ಒಳ್ಳೆಯ ಗೆಳೆಯನಾಗಿ, ಅಪ್ಪ ಅಮ್ಮನಾಗಿ, ನಿನ್ನ ಜೊತೆ ನಾನಿದ್ದೇನೆ ಹೆದರುಕ್ಕೊಬೇಡ ಅಂತ ಹೇಳೋ ಅಣ್ಣನಾಗಿ ಬಾ... ಅದಕ್ಕಿಂತ ನಂಗೆ ಬೇರೇನೂ ಬೇಡ ಕಣೊ.ನಿಜ ಹೇಳಲಾ ಒಂದು ರೀತೀಲಿ ನಾನು ಲಕ್ಕಿ ಅನ್ನಿಸುತ್ತೆ...ನಿನ್ನಲ್ಲಿ ನಾ ಮೆಚ್ಚೋ ಎಷ್ಟೋ ಗುಣಗಳಿವೆ, ಮದುವೆಯಾದ ಮೇಲೆ ನನ್ನ ಹುಡುಗ ನನ್ನ ಜೊತೆನೇ ಹೆಚ್ಚು ಸಮಯ ಕಳಿಬೇಕು ಅಂತ ನಂಗೆ ತುಂಬಾ ಆಸೆ ಕಣೊ, ಅದು ನಿನ್ನಿಂದ ಸಾಧ್ಯ..ನೀನು ನಿನ್ನ ಕೆಲಸ ಮುಗಿಸಿ ಮನೆಗೆ ಓಡೋಡಿ ಬರಬೇಕು, ನಿನ್ನ ಮುದ್ದು ಮುಖ ನೋಡೋ ಕಾತರತೆಯಿಂದ ನಾನು ಕಾಯ್ತಾ ಇರ್ತೀನಿ ಗೊತ್ತಾ? ಇಷ್ಟಪಟ್ಟವರ ಜೊತೆ ಬದುಕನ್ನ ಹಂಚಿಕೊಂಡು  ಕಳೆಯೋದಿದೆಯಲ್ಲಾ ಅದಕ್ಕೆ ಸಾಟಿ ಯಾವುದು ಕೋತಿ?, ನಾನು ತುಂಬಾ ಭಾವನಾಜೀವಿ ಕಣೋ..ನಿನ್ನ ಹೊರತು ನನ್ನ ಮನಸ್ಸಿನ ಭಾವನೆಗಳನ್ನು ಇನ್ನಾರ ಹತ್ತಿರನೂ ಹೇಳಿಕೊಳ್ಳಬೇಕು ಅಂತ ಅನ್ನಿಸಲ್ಲ ಡಿಯರ್.

ಇತ್ತೀಚೆಗೆ ನಾನು ನಿನ್ನ ಬಗ್ಗೆ ಕನಸು ಕಾಣೋದು ಜಾಸ್ತಿಯಾಗಿದೆ ಕಣೊ ನಿದ್ದೆ ಬರಲ್ಲ,,,ನಿನ್ನ ಜೊತೆ ನಾನು ಹೇಗೆ ಬದುಕಬೇಕು ಅಂತ ಯೋಚಿಸ್ತಾ ಮಲಗ್ತಿನಿ....ನಿದ್ದೆ ಮಾಡಿಬಿಟ್ಟರೆ ನೀನೆಲ್ಲಿ ಹೋಗಿಬಿಡ್ತೀಯಾ ಅಂತ ಭಯ ಆಗುತ್ತೆ ಕಣೊ... ಎಷ್ಟೋ ಸಲ ಅಮ್ಮ “ಯಾಕೆ ನೀ ದಿನಾ ಸರಿಯಾಗಿ ನಿದ್ದೆ ಮಾಡ್ತಾಯಿಲ್ಲ ಹೆಚ್ಚು ಹೊತ್ತು ಓದಬೇಡ ಆರೋಗ್ಯ ಹಾಳಾಗುತ್ತೆ “... ಅಂತಾರೆ ? ಅವರಿಗೆ ಏ ನಂತ ಹೇಳಲಿ ? ನಿನ್ನ ಅಳಿಯನ ಬಗ್ಗೆ  ಕನಸು ಕಾಣ್ತಾ ಇದ್ದೀನಿ ಅಂತಾ ಹೇಳೋದಕ್ಕಾಗುತ್ತಾ ಡಿಯರ್?......

ನಾ ನಿನ್ನ ಪ್ರೀತಿ ಮಾಡ್ತೀನಿ ಅಂತ ಹೇಳೋದಕ್ಕಿಂತ ಮುಂಚೆ ನೀನು ನಿನ್ನ ನೋಟ್ ಪುಸ್ತಕದಲ್ಲಿ ಬರೆಕೊಂಡಿದ್ದೆಯಲ್ಲಾ,,”ನನ್ನ ಪುಟ್ಟ ಹೃದಯದ ಪಟ್ಟದರಸಿ” ಅಂತ ಅದನ್ನ ಅಕಸ್ಮಾತ್ತಾಗಿ ನಾನು ನೋಡಿಬಿಟ್ಟಾಗ ನೀನು ಎಷ್ಟು ಒದ್ದಾಡಿಬಿಟ್ಟೆಯಲ್ಲೋ,, ”ಯಾರಪ್ಪಾ ಆ ಅದೃಷ್ಟ  ದೇವತೆ”  ಅಂತ ಕೇಳಿದಾಗ ನೀನೇನೂ ಹೇಳದೆ ಸುಮ್ಮನೆ ಕಣ್ಣುಮುಚ್ಚಿ ಎದೆ ಮೇಲೆ ಕೈಇಟ್ಟುಕೊಂಡೆಯಲ್ಲಾ.....ಆಗ ನಾನಲ್ಲಿ ಇದ್ದೀನಿ ಅಂತ ನಂಗೆ ಗೊತ್ತಾಯ್ತು ಆದರೂ ....ನಾನಾಗ  “ಯಾರಾದರೂ ಆಗಲಿ ಪುಣ್ಯ ಮಾಡಿದ್ದಾಳೆ ಅನ್ನಿಸುತ್ತೆ ಅಂತ ಹೇಳಿದಾಗ” ನೀನೇನೂ ಮಾತನಾಡದೆ ನನ್ನ ಮುಖ ನೋಡಿ “ನಾ ಬರ್ತಿನಿ” ಅಂತ ಹೊರಟು ಹೋದೆಯಲ್ಲಾ ಅದೆಲ್ಲಾ ಮರೆಯೋವಂತದ್ದಾ ಹೇಳು ? ಯಾವಾಗಲೂ ತುಂಬುತೋಳಿನ ಷರ್ಟು ಹಾಕಿ,,,ಎರಡೂ ತೋಳಲ್ಲೂ ಅರ್ಥ ಮಡಿಸಿ ಕೊಂಡಿರು ತ್ತೀಯಲ್ಲಾ  ಅದು ನಂಗೆ ತುಂಬಾ ಇಷ್ಟ ಕಣೋ,,, ನೀನು ಆಗ ತುಂಬಾ ಚೆನ್ನಾಗಿ ಕಾಣ್ತೀಯಾ,,,

     ಜೊತೆಗೆ,,,,,ನೀನು ನನ್ನ ಬಳೆ ಚೂರು, ಕೂದಲು, ಮಲ್ಲಿಗೆ ಹೂವು, ಪೆನ್ನು ಎಲ್ಲವನ್ನೂ ಶೇಖರಿಸಿದ್ದೀಯಲ್ಲಾ ನಂಗೆ ತುಂಬಾ ಖುಷಿ ಕೊಟ್ಟಿದ್ದು ಅದೆ ಕಣೊಗುಂಡು.... ನನ್ನುಡುಗ ನನ್ನೆಷ್ಟು ಪ್ರೀತಿಸ್ತಾನೆ ಅಂತ ತಿಳಿದ ದಿನ ನಾನು ಊಟ ಮಾಡಿಲ್ಲ ಗೊತ್ತಾಪ್ಪ ನಿಂಗೆ,,,,, ನಾನು ಕೂಡ ಅಷ್ಟೆ ಹುಡುಗಾ,,, ನಮ್ಮ ಸ್ನೇಹ ಪ್ರೀತಿಗೆ ತಿರುಗಿದಾಗ ನಂಗೆ ನೀ ಕೊಟ್ಟ ಹೊಸ ಹತ್ತು ರೂ.ನಾಣ್ಯ,,,ಅದನ್ನ ನಾನೆಷ್ಟು ಜೋಪಾನ ಮಾಡಿಟ್ಟಿದಿನಿ ಗೊತ್ತಾ ಡಿಯರ್ ,,,, ನಾ ಬದುಕಿರೋವರೆಗೂ ಹಾಗೆ ಇಟ್ಟುಕೋತಿನಿ. ಅಷ್ಟೆ ಅಲ್ಲ ನೀ ನಂಗೆ ಮೊದಲನೆ ಸಲ ಕೊಟ್ಟ ಗ್ರೀಟಿಂಗ್ ಅದೂ ಹಾಗೆ ಇದೆ,,,,”ಸುಪ್ತ ಮನದೊಳಗೆ ಗುಪ್ತವಾಗಿರುವ  ನಿಮ್ಮ ನೆನಪು ಸದಾ ಹಚ್ಚ ಹಸಿರಿನ ಹೊನಲಾಗಿದೆ ”,,,,ಓಹ್,,,ಎಲ್ಲಿ ಕಲಿತೆ ನನ್ನ ಬಂಗಾರಿ ಇಂಥಾ ಮಾತೆಲ್ಲವನ್ನ ....ನೀನು ಓದಿದ್ದು  ವಿಜ್ಞಾನ, ಎಲ್ಲಿಗೆಲ್ಲಿಯ ಅನುಬಂಧ ರಾಜ.... ಇರಲಿ ಬಿಡು ನಂಗಾಗಿ ಅಂದುಕೋತಿನಿ......ಹ್ಹ... ಹ್ಹ... .ಹ್ಹ... .ಹ್ಹ...

       ನಾನು ನೋಡೋಕೆ ಸಾಧಾರಣವಾಗಿದ್ದರೂ ನೀನನ್ನ ಕಣ್ಣುಗಳನ್ನ ತುಂಬಾ ಇಷ್ಟಪಟ್ಟು ಅದರ ಬಗ್ಗೆ ಆಡೋ ಒಂದೊಂದು ಮೆಚ್ಚುಗೆಯ ಮಾತುಗಳು ನನ್ನೆದೆಯಾಳದಲ್ಲಿ ಯಾವಾಗಲೂ ಪ್ರತಿಧ್ವನಿಸ್ತಾ ಇರುತ್ತೆ,,,,ಆ ನೆನಪಲ್ಲೇ ಎಷ್ಟೋ ರಾತ್ರಿ ನಿದ್ದೆ ಇಲ್ಲದೆ ಕಳೆದೋಗಿದೆ ಗೊತ್ತಾ,,,, ನೀನೊಂದು ದಿನ ಅಕಸ್ಮಾತ್ತಾಗಿ ನನ್ನ ಕೈ ಮುಟ್ಟಿ ಎಷ್ಟು ಸಲ “ಸಾರಿ ಸಾರಿ”  ಕೇಳಿದೆಯಲ್ಲೋ ಅದು ನೆನಪಾದರೆ ಮನಸ್ಸು ತುಂಬಿ ಬರುತ್ತೆ,,,ಎಂಥಾ ಹುಡುಗನ್ನ ನಾನು ಪ್ರೀತಿ ಮಾಡ್ತಾ ಇದ್ದೀನಿ ಅಂತಾ ,,,,ಆ ಮಾತಿಗೆ ನಾ ತಲೆ ಬಾಗ್ತೀನಿ....ಹೆಣ್ಣು ಮಕ್ಕಳ ಬಗ್ಗೆ ನಿನ್ನ ಅನಿಸಿಕೆ, ಅವರ ಮೇಲೆ ನೀ ಇಟ್ಟಿರುವ ಗೌರವ, ಅವರ ಭಾವನೆಗಳಿಗೆ ಬೆಲೆಕೊಡಬೇಕು  ಅನ್ನೋ ನಿನ್ನ ನಿಲುವು, ಎಲ್ಲದಕ್ಕೂ ದೊಡ್ಡ ಸಲಾಂ ಕಣೊ...ಮದುವೆಗೆ ಮುಂಚೆ ಹೊರಗಡೆಯಲ್ಲಾ ಒಟ್ಟಿಗೆ ಸುತ್ತೋದನ್ನ ಯಾರಾದರೂ ನೋಡಿ ನಿನ್ನ ಬಗ್ಗೆ ಕೆಟ್ಟದಾಗಿ ಏನೂ ಅನ್ನಬಾರದು, ಎಲ್ಲಕ್ಕೂ ಹೆಚ್ಚಾಗಿ ನಾವು ಒಟ್ಟಿಗೆ ಓಡಾಡಿದರೆ ಮಾತ್ರ ಪ್ರೀತಿ ಇದೆ ಅಂತಾನಾ...., ದೂರದಲ್ಲಿ ಇದ್ದು ನಮ್ಮೆಲ್ಲ ಕೆಲಸ, ಜವಾಬ್ದಾರಿಯ  ನಡುವೆಯೂ ನಮ್ಮ ಪ್ರೀತಿ ಅರಳಬೇಕು ಅಂತ ನಂಗೆ ನೀತಿ ಪಾಠ ಹೇಳೋ ನಿನ್ನ ಮಾತಿಗೆ ಬೆಲೆ ಕಟ್ಟೋದಕ್ಕೆ ಆಗಲ್ಲ....

      ಪ್ರೀತಿಯಲ್ಲಿ ಕಾಮ ಯಾವತ್ತೂ ಇರಬಾರದು, ನಿರ್ಮಲವಾದ ಪ್ರೀತಿ, ನಂಬಿಕೆ ಭರವಸೆ ಇರಬೇಕು,,,,ಅವಳಿಗೆ ನಮ್ಮ ಪ್ರೀತಿ ಬಂಧನ ಆಗಬಾರದು, ಅವಳಿಗೂ ಸ್ವಾತಂತ್ರ ಇದೆ, ಭಾವನೆಯಿದೆ, ಅದಕ್ಕೆ ಬೆಲೆಕೊಡಬೇಕು, ಯಾವತ್ತೂ ಅನುಮಾನಿಸ ಬಾರದು,,,,ಪ್ರೀತಿಯಲ್ಲಿ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು....ಹಾಗೆ ತುಂಟತನ ಇರಬೇಕಂತ ಕಣ್ಣಲ್ಲೇ ನಕ್ಕು ನೀ ನನ್ನ ಜೋಪಾನ ಮಾಡೋ ರೀತಿಗೆ ನಾ ಮೆಚ್ಚಿ ಮರುಳಾಗೋದೆ ಹುಡುಗಾ....

ಅದಕ್ಕೆ ನಾನಿನ್ನ ಬರಿ  ಪ್ರೀತಿ ಅಷ್ಟೇ ಮಾಡ್ತಿಲ್ಲ ,,,,ಪೂಜಿಸ್ತೀನಿ,,,ಆರಾಧಿಸ್ತೀನಿ ಕಣೊ,,,,ಏಳೇಳು ಜನ್ಮದಲ್ಲೂ ನಿನ್ನಂಥವನಲ್ಲ ನೀನೇ ಸಿಕ್ಕಲಿ ಅಂತ ದೇವರಲ್ಲಿ ಬೇಡಿಕೋತಿನಿ ಬಂಗಾರಿ,,,. ನೀನು ನನ್ನ  ಎಷ್ಟು ಪ್ರೀತಿ ಮಾಡ್ತೀಯಲ್ಲ ಹುಡುಗಾ,,,ಒಂದು ಹೆಣ್ಣನ್ನು ಒಂದು ಗಂಡು ಇಷ್ಟರ ಮಟ್ಟಿಗೂ ಪ್ರೀತಿಸುತ್ತಾನಾ? ಅಂತ ನಾನೊಂದು ಸಿನಿಮಾ ನೋಡುವಾಗ ಅಂದುಕೊಳ್ಳತಾ ಇದ್ದೆ,,,,ಆದರೀಗ ನನ್ನ ಜೀವನದಲ್ಲಿಯೇ,,,,ವ್ಹಾವ್.........ಇದೆಲ್ಲ ಎಷ್ಟು ಸುಂದರ ಅಲ್ಲವಾ,,,,,

ನಾನನುಭವಿಸೋ ಒಂದು ಚಿಕ್ಕ ಸಂತೋಷಾನೂ ನೋಡಿ ನೀನು ಖಷಿಪಡ್ತಿಯಲ್ಲಾ ಅದು ಬಣ್ಣಣೆಗೆ ನಿಲುಕದ್ದು ಬಂಗಾರಿ..,,,,ನಾ ಮಾಡೋ ಒಂದು ಚಿಕ್ಕ ಸಾಧನೆಗೂ ನೀನು ಜಗತ್ತನ್ನೆ ಜಯಿಸಿದಷ್ಚು ಹೆಮ್ಮೆ ಪಡ್ತಿಯಲ್ಲಾ ಅದಕ್ಕೇನು ಹೇಳಲಿ ನಾ...... ?

ಈ ಪತ್ರವನ್ನ ನಿನಗೆ ಕೊಡಬೇಕಾ ಬೇಡವಾ ಅಂತ ಗೊತ್ತಾಗದೆ ಮನಸ್ಸು ತೂಗುಯ್ಯಾಲೆ ಆಡ್ತಾ ಇದೆ ಕಣೊ.,,,,ಆದರೂ ಕೊಡ್ತಾ ಇದ್ದೀನಿ,,,,ನಿನ್ನ ಹುಚ್ಚು ಪ್ರೇಮಿಯ ಮನಸ್ಸಿನ ಭಾವನೆಗಳನ್ನ ಒಂದು ಸಲ ಓದಿ ಹಾಗೆ ಸುಮ್ಮನೆ ನಕ್ಕು ಬಿಡು ಅಷ್ಟೆ.......ಅಷ್ಟೆ……

Rating
No votes yet

Comments

Submitted by nageshamysore Tue, 06/04/2013 - 20:52

In reply to by Vinutha B K

ಡಾ.ಉಷಾರಾಣಿ ಮತ್ತು ವಿನುತರವರಿಗೆ, ಧನ್ಯವಾದ ಕವನದ ರೂಪದಲ್ಲಿ :-) - ನಾಗೇಶ ಮೈಸೂರು, ಸಿಂಗಪುರದಿಂದ
http://sampada.net/%E0%B2%88-%E0%B2%A6%E0%B2%BF%E0%B2%A8-%E0%B2%A4%E0%B…

Submitted by usharani Thu, 06/06/2013 - 14:12

In reply to by nageshamysore

ನೀವು ಬರೆದಿರುವ ಕವನ ತುಂಬಾ ಚೆನ್ನಾಗಿದೆ ನಾಗೇಶ್ ಅವರೇ. ಎಲ್ಲರಿಗೂ ಸೇರಿಸಿ ಬರೆದಿದ್ದೀರಿ. ಕಥೆ ಓದಿ ಒಳ್ಳೆಯ ಅಭಿಪ್ರಾಯ ತಿಳಿಸಿದ್ದೀರಿ ಧನ್ಯವಾದಗಳು.

Submitted by nageshamysore Thu, 06/06/2013 - 15:23

In reply to by usharani

ಡಾ. ಉಷಾರಾಣಿಯವರೆ, ಕವನ ತಮಗೆ ಹಿಡಿಸಿದ್ದು ಸಂತೋಷ. ಆ ದಿನ ಟ್ರೈನಿನಲ್ಲಿ ಬರುತ್ತ ನೀವು ಹಾಗೂ ವಿನುತರವರು ಒಂದರಹಿಂದೆ ಒಂದರಂತೆ ಹಾಕಿದ ಲೇಖನ / ಪತ್ರ ಓದಿ, ಅಲ್ಲೆ ಟ್ರೈನಿನಲ್ಲಿ ಗೀಚಿದ ಸಾಲುಗಳವು. ಹಾಗೆ 4.ಜೂನ್ ಅನ್ನು ಲೇಖಕಿಯರ ದಿನವೆನ್ನಬಹುದೆ ಎಂಬ ಆಲೋಚನೆಯ ಎಳೆಯಿಡಿದು ಈ ಹಾಡಾಯ್ತು ( ಹಾಗೊಂದು ದಿನವಿದೆಯೆ - ಗೊತ್ತಿಲ್ಲ)- ನಾಗೇಶ ಮೈಸೂರು, ಸಿಂಗಪುರದಿಂದ

Submitted by lpitnal@gmail.com Tue, 06/04/2013 - 20:43

ಉಷಾರಾಣಿ ಜಿ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಪ್ರೀತಿಯ ಹುಡುಗನಿಗೆ ಬರೆದ ಪ್ರೇಮ ಪತ್ರ ಚನ್ನಾಗಿದೆ. ಆಪ್ತವಾಗಿದೆ. ತಮ್ಮ ಬರಹ ಹೆಚ್ಚು ಉನ್ಮಾದವಿಲ್ಲದ, ನೆಲ ಬಿಡದೆ ನೆಗೆದ, ಮನದಲ್ಲಿ ಮೂಡಿದ ಪ್ರತಿ ಅಲೆಅಲೆಗಳನೂ ಸ್ವಾರಸ್ಯಕರವಾಗಿ ನಿರೂಪಿಸಿದ್ದೀರಿ. ಹದಿ ಹರೆಯ ದಾಟಿದ ಪ್ರಬುದ್ಧ ಹೃದಯಗಳ ನಡುವಿನ ವ್ಯವಹಾರ ತುಂಬ ತಿಳಿಯಾದ ಝರಿ ಹರಿದಂತೆ ಹರಿಯುತ್ತವೆ ಸಾಲುಗಳು, ಓದುಗರ ಮನಕ್ಕೆ ಇಂಪು, ಕಂಪು, ತಂಪು ನೀಡುತ್ತ. ಸುಮಧುರ ಬರಹ. ಅತಿ ಮಧುರ, ಧನ್ಯವಾದಗಳು.