ಪ್ರೀತಿಸಿಯೇ ತಿಳಿಯಬೇಕು
ಸರಫ್ರೋಶ್ ಚಲನಚಿತ್ರದ ಈ ಸುಮಧುರ ಹಾಡನ್ನು(ಶಾಯರಿ) ಕನ್ನಡೀಕರಿಸಬೇಕು ಎನಿಸಿತು. ಕನ್ನಡಿ ಹಿಡಿದೆ ಇದೋ ಇಲ್ಲಿದೆ ಪ್ರತಿಫಲ.
ನಿಮ್ಮ ಅಭಿಪ್ರಾಯ ತಿಳಿಸಲು ಮರೆಯ ಬೇಡಿ. ವೀಡಿಯೋ ಲಿಂಕನ್ನೂ ಸೇರಿಸಿದ್ದೇನೆ ಕೇಳಿ ಆನಂದಿಸಿ ಧನ್ಯವಾದ.
ಅರಿವು ಉಳ್ಳವರು ಅರಿವರೆ?
ಅರಿವ ಮರೆಸುವ ಮಿಲನದಾಳದ ಮರ್ಮ.
ಪ್ರೀತಿಸಿಯೇ ತಿಳಿಯಬೇಕಲ್ಲದೆ
ಅರಿಯಲಾಗದು ಜೀವನದೊಳ ಗುಟ್ಟು
ಅವಳ ನೇತ್ರದಿ ಬೆರೆತ ನೋಟಕೆ
ಮಾರು ಹೋಯಿತು ರಶ್ಮಿಯು
ಪ್ರೀತಿ ಮಾಯೆಯ ಕಲಿಸಿಕೊಟ್ಟಿತು
ಇದೇ ಮೊದಲು ನನಗೀದಿನ
ಗಾಳಿಗೆ ತೂರಿದ ಕೇಶರಾಶಿಯು
ರುತುವಿಗೂ ಕಲಿಸಿತು ಕವನವ
ತಗ್ಗಿದ ನೋಟವು ತಿಳಿಸಿ ಹೇಳಿತು
ನಾಚಿದಾಕೆಯ ಮೈ ಮಾಟವ
ಮಾತೆ ಹೊರಡದು ಪ್ರೀತಿಹೇಳಲು
ನನ್ನಿಸ್ಥಿತಿಯ ಅವಳು ಅರಿಯಳು
ಹೇಗೆ ಹೇಳಲಿ ಪ್ರೀತಿಯ?
ಹೋಶವಾಲೋಂ ಕೋ ಖಬರ ಕ್ಯಾ ಬೇಖುದೀ ಕ್ಯಾ ಚೀಜ ಹೈ
ಇಶ್ಕ ಕಿಜೇ ಫಿರ ಸಮಝಿಯೇ, ಜಿನ್ದಗೀ ಕ್ಯಾ ಚೀಜ ಹೈ
ಉನಸೇ ನಜರೇ ಕ್ಯಾ ಮಿಲೀ, ರೋಶನ ಫಿಜಾಯೇಂ ಹೋ ಗಯೀ
ಆಜ ಜಾನಾ ಪ್ಯಾರ ಕೀ ಜಾದೂಗರೀ ಕ್ಯಾ ಚೀಜ ಹೈ
ಖುಲತೀ ಜುಲ್ಫೋಂ ನೇ ಸಿಖಾಈ, ಮೌಸಮೋ ಕೋ ಶಾಯರೀ
ಝುಕತೀ ಆಂಖೋಂ ನೇ ಬತಾಯಾ, ಮಯಕಶೀ ಕ್ಯಾ ಚೀಜ ಹೈ
ಹಮ ಲಬೋಂಸೇ ಕಹ ನಾ ಪಾಏ, ಉನ ಸೇ ಹಾಲ-ಏ-ದಿಲ ಕಭೀ
ಔರ ವೋ ಸಮಝೇ ನಹೀಂ, ಯೇ ಖಾಮೋಶೀ ಕ್ಯಾ ಚೀಜ ಹೈ
ಸಂಗೀತ ನಿರ್ದೇಶಕ: ಜತಿನ್-ಲಲಿತ್
ಸಿಂಗರ್: ಜಗಜಿತ್ ಸಿಂಗ್
ಶಾಯರಿ: ಸಮೀರ್
ಚಿತ್ರ ಕೃಪೆ: ಚಲನ ಚಿತ್ರದ ಸ್ನ್ಯಾಪ್ ಶೋಟ್
ವಿಡಿಯೋಲಿಂಕು:
https://www.youtube.com/watch?v=i1MOHAf_oy8
Comments
ಉ: ಪ್ರೀತಿಸಿಯೇ ತಿಳಿಯಬೇಕು
ಕ್ಷಮಿಸಿ ರುತು -> ಋತು