ಪ್ರೀತಿ ಕೈ ಜಾರಿದಾ ಕ್ಶಣ
"ಹೆ ಡಿಡ್ ಯು ಗೆಟ್ ದ ಡಿಸಪ್ಲೇ? " ಎಕ್ಸಾಮಿನರ್ ಬಂದು ಕೇಳಿದಾಗ ಭೂಮಿ ಬಾಯ್ಬಿಡಬಾರದೆ ಅನ್ನಿಸಿತು. ಪಿ. ಸಿ ಸರ್ವೀಸಿಂಗ್ ಲ್ಯಾಬ್ ಅದು . ಏನು ಮಾಡಿದರೂ ಡಿಸ್ಪ್ಲೇ ಬರುತ್ತಿರಲಿಲ್ಲ
"ನೊ ಸರ್"
"ಸಾರಿ ಯುವರ್ ಟೈಮ್ ಈಸ್ ಓವರ್ . ಯು ಕ್ಯಾನ್ ಸಿಟ್ ಫಾರ್ ವೈವಾ " ಅಂದು ಮುಂದೆ ಹೋದರು.
ಹೃದಯ ಡವಡವಗುಟ್ಟುತ್ತಿತ್ತು . ಹಣೆ ಬೆವರುತ್ತಿತು. ಜೀವನದಲ್ಲಿ ಮೊದಲ ಬಾರಿ ಅವಳು ಎಡವಿದ್ದಳು ವಿದ್ಯಾರ್ಥಿ ವೃಂದದಲ್ಲೆಲ್ಲಾ ಬಹಳ ಬುದ್ದಿವಂತೆ ಎಂದು ಹಣೆ ಪಟ್ಟಿ ಕಟ್ಟುಕೊಂಡಿದ್ದಳು. ಲೆಕ್ಚರ್ರ್ಸಿಗಂತೂ ಅವಳೆಂಡರೆ ಅಚ್ಚುಮೆಚ್ಚಾಗಿದ್ದಳು.
ಪ್ರಿನ್ಚಿಪಾಲ್ ಎಲ್ಲರಿಗೂ ಅವಳಂತೆ ಇರಲು ಹೇಳುತ್ತಿದ್ದರು ಆದರೆ ಅದು ಎಲ್ಲೀವರೆಗೆ ಅವನು ಅವಳ ಜೀವನದಲ್ಲಿ ಬರುವ ವರೆಗೆ. ಇತ್ತೀಚಿಗೆ ಅವಳ ಕಾಲೇಜ್ನ ಎಲ್ಲರ ಬಾಯಲ್ಲೂ ಆಡಿಕೆಯ ವಸ್ತುವಾಗಿದ್ದಳು. ಪ್ರೀತಿ ಎನ್ನುವ ಬಲೆಯಲ್ಲಿ ಬಿದ್ದ ನಂತರ ಅವಳ ವರ್ತನೆಯೇ ಬದಲಾಗಿತ್ತು. ಅವಳದೇ ಕ್ಲಾಸ್ನ ಅವನು ಅವಳನ್ನು ಪ್ರೀತಿ ಎನ್ನುವ ಚಕ್ರವ್ಯೂಹಕ್ಕೆ ಸಿಕ್ಕಿಸಿದ್ದ. ಪಾರ್ಕ್ , ಸಿನಿಮಾ ಎಲ್ಲೆಲ್ಲೂ ಅವರೆ ಕ್ಲಾಸ್ ಬಿಟ್ಟು . ಸ್ವಲ್ಪ ಅತೀ ಎನ್ನುವಷ್ಟು.
ಅದರ ಪರಿಣಾಮವನ್ನು ಅವಳು ಈಗ ಅನುಭವಿಸುತ್ತಿದ್ದಳು. ಪಿಸಿ ಲ್ಯಾಬ್ ಎಂದರೆ ಕೇವಲ್ ಕಂಪ್ಯೂಟರ್ ಜೋಡಿಸುವುದು ಎಂದುಕೊಂಡು ಲ್ಯಾಬ್ಸ್ಗೆ ಹಾಜಾರಾಗುತ್ತಿರಲಿಲ್ಲ. ಇಂದು ಪರೀಕ್ಷೆಯಲ್ಲಿ ಮೊದಲಬಾರಿಗೆ ವಿಫಲತೆ ಅನುಭವಿಸಿದ್ದಳು.
ವೈವಾನಲ್ಲಿ ಕೇಳಿದ ಪ್ರಶ್ನೆ ಎಲ್ಲವೂ ಬಹಳ ಸರಳವಾಗಿದ್ದರೂ ಉತ್ತರಿಸಲಾಗಲಿಲ್ಲ . ಕಣ್ಣಿನಲ್ಲಿ ಧಾರಾಕಾರ ನೀರು.
"ಏನಮ್ಮ ಇಷ್ಟು ಸುಲಭವಾದುದ್ದನ್ನೇ ಹೇಳಕಾಗ್ಲಿಲ್ಲ ಅಂದರೆ ನಿಮ್ಮನ್ನ ಇಂಜಿನಿಯರ್ಸ್ ಮಾಡೋರು , ನೀವು , ನಮ್ಮ ದೇಶ ಉದ್ದಾರ ಆದ ಹಾಗೆ " ಅಂತ ಆ external examiner ಹೇಳಿದಾಗ ತಾನೇಕೆ ಬದುಕಿದ್ದೇನೆ ಅನ್ನಿಸಿತು.
ಹೊರಗೆ ಬರುವಾಗ ಲ್ಯಾಬ್ ಫ್ಯಾಕಲ್ಟಿ " ಸುಮ್ಮಸುಮ್ಮನೆ ಕ್ಲಾಸ್ಗೆ ಬಂಕ್ ಹಾಕಿ ರೋಮ್ಯಾನ್ಸ್ ಮಾಡಿದ ಹಾಗಲ್ಲ ಎಕ್ಸಾಮ್ ಪಾಸ್ ಆಗೋದು . ಅದರ ಮೇಲೆ ಕಣ್ಣಲ್ಲಿ ನೀರು ಬೇರೆ ನಾಟಕ ಸಾಕು ಮೊದಲು ಕಾಲೇಜಲ್ಲಿ ಓದೋದು ಮಾತ್ರ ಕಲಿ" ಎಂದು ಗದರಿದಾಗ ತೋಳ ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಎಂಬುದು ನೆನಪಾಯಿತು
ಹೊರಗೆ ಬರುವಾಗ ನಿರ್ಧರಿಸಿದಳು. ಇನ್ನು ಓದು ಮುಗಿಯುವವರೆಗೆ ಆತನ ಸಹವಾಸ ಬೇಡ .
ಆತ ಬಂದ" ಚಿನ್ನೂ ಹ್ಯಾಗೆ ಮಾಡಿದೆ ಎಕ್ಸಾಮ್?"
"ಗ್ಯಾರೆಂಟಿ ಪ್ಝೇಲ್ ಕಣೋ ಭಯ ಆಗ್ತಿದೆ"
"ಪರ್ವಾಗಿಲ್ಲ ಬಿಡು ಹ್ಯಾಗೂ ಸಪ್ಲ್ಲಿ ನಲ್ಲಿಬರೀಬಹುದು"
ಕೋಪ ಕೆರಳಿತು "ಅದು ನಿನ್ನಂಥವರಿಗೆ ನನಗಲ್ಲ. ಯಾವಾಗಲೂ 90 ಮೇಲೆ ಮಾರ್ಕ್ಸ್ ತೊಗಳೋಳೊಳು ನಾನು ನಿನ್ನಿಂದ ಹಾಳಾಗ್ಬಿಟ್ಟೆ"
ಕೆಲ ಕಾಲ ಅತ್ತಳು
" ನಾನು ಒಂದು ಡಿಸೈಡ ಮಾಡಿದ್ದೇನೆ. ಸುಮ್ಮನೆ ಫಿಲ್ಮ ವ್ಯಾಲೆಂಟೈನ್ಸ್ ಡೆ ಪಾರ್ಕ್ ಅದೂ ಇದೂ ಅಂತ ಅಲೆಯೋದು ಬಿಟ್ಟು ಬಿಡೋಣ ಅಂತ "
" ಅಂದ್ರೆ "
" ಇನ್ನು ಮೇಲೆ ನಾವಿಬ್ಬರೂ ಪ್ರೀತಿಸ್ತೀವಿ ಅನ್ನೋದು ಮರೆತುಬಿಡೋಣ. ನಮ್ಮ ಮನೇಲಿ ಒಳ್ಳೆ ಹೋಪ್ಸ್ ಇಟ್ಟುಕೊಂಡಿದಾರೆ ನನ್ನ ಮೇಲೆ. ಅವರ ಆಸೆ ನಿರಾಸೆ ಆಗೋಕೆ ನಾನು ಬಿಡಲ್ಲಾ."
"ಹಾಗಾದ್ರೆ ನನ್ನ ಮರೆತು ಬಿಡ್ತೀಯಾ ನೀನು?"
" ಇಲ್ಲ ಕಣೋ ಹ್ಯಾಗೆ ಮರೆಯೋಕೆ ಸಾಧ್ಯ ? ಆದರೆ ನಮ್ಮ ಈ ಪ್ರೀತೀನ ನಾವಿಬ್ಬರೂ ಒಂದು ಸ್ಟಾಂಡ್ಗೆ ಬಂದ ಮೇಲೆ ಮುಂದುವರೆಸೋಣ ."
" ಇಲ್ಲ ಚಿನ್ನೂ ನನ್ನ ಕೈನಲ್ಲಿ ಆಗಲ್ಲ"
"ನಿಂಗಾಗುತ್ತೋ ಬಿಡುತ್ತೋ ನನಗೆ ಗೊತ್ತಿಲ್ಲ ಆದ್ರೆ ನಾನಂತೂ ಇವತ್ತಿನಿಂದ ನಿಂಗೆ ಬರೀ ಫ್ರೆಂಡ್ . ನೀನು ಅಷ್ಟೆ ನಂಗೆ "
"ಇಲ್ಲ ಚಿನ್ನೂ ಹಾಗೆ ಮಾಡ್ಬೇಡಾ. ನಂಗೆ ನಿನ್ನ ಬಿಟ್ತಿರೋಕೆ ಆಗಲ್ಲ"
" ಬೇಡ ನನ್ನ ಹಾಗಂತ ಕರೆದು ಮತ್ತೆ ನಿನ್ನ ಕಡೆಗೆ ಎಳ್ಕೋಬೇಡ. ನಾನು ನನ್ನ ಮನಸನ್ನ ಗಟ್ಟ್ ಮಾಡ್ಕೊಂಡಿದೀನಿ. ಪ್ರೀತಿ ದಾರಿಗೆ ಹೂವ ಆಗಬೇಕು. ಆದರೆ ಈ ಪ್ರೀತಿ ಇಂದ ನನ್ನ ಕರಿಯರ್ ಹಾಳಾಗ್ತಿದೆ,. ಥಿಯರಿ ಎಕ್ಸಾಮ್ ಹಾಗೂ ಲೀವ್ ಕಳೆದು ಬರೋ ಅಷ್ಟಲ್ಲಿ ನೀನು ನನ್ನ ಹಾಗೆ ಆಗ್ರ್ತೀಯಾ ಆಂತ ಅಂದುಕೊಂಡಿದೀನಿ, ಬ್ಯೆ ಮೈ ಫ್ರೆಂಡ್"
ಬೈ ಅಂತ ಬಸ್ ಹತ್ತಿದವಳಿಗೆ ಕಳವಳದಿಂದ ತನ್ನನ್ನೇ ದಿಟ್ತಿಸುತ್ತಿದ್ದವನ ಮುಖ ಮರೆಯಾದ ಮೇಲೆ ನಿರಾಳವಾಯಿತು.
ತಾನು ಮಾಡಿದ್ದು ಸರಿಯಾ?
ಹೌದು ತಾನು ಮಾಡಿದ್ದು ಸರಿ
Comments
ಉ: ಪ್ರೀತಿ ಕೈ ಜಾರಿದಾ ಕ್ಶಣ