ಪ್ರೀತಿ ನಮಗೆ ಬೇಕೇ ?

ಪ್ರೀತಿ ನಮಗೆ ಬೇಕೇ ?

ನನ್ನ ಮೊದಲ ಪ್ರೀತಿ ವಿಫಲವಾಗಿ ನಾನು ಸೋತು ಬರೆದ ಕವನವಿದೊಂದು ... ನನ್ನ ನಾನು ಸಮಾಧಾನ ಪಡಿಸಿಕೊಂಡ ಕವಿತೇನೋ ಇದು ..ಗೊತ್ತಿಲ್ಲ ....:-)

ಪ್ರೀತಿ ನಮಗೆ ಬೇಕೇ ?

ಎತ್ತ ನೋಡಿದರತ್ತ , ಹಾರುತಿಹುದು ಚಿತ್ತ
ಮನರತ ಸಾರತಿಯ ಕೈಯಲ್ಲಿ ಇಲ್ಲದಿರಲು ಬೆತ್ತ
ಇದು ಎಲ್ಲ ಹುಡುಗಿಯರ ನೋಡುವುದು ಸುತ್ತ -ಮುತ್ತ !!!
ನನ್ನ ಈ ಮನಸ್ಸಿನ ಅಲೆದಾಟಕೆ ,ಮದ್ದು ಯಾರಿಗಾದರು ಗೊತ್ತಾ?

ಇ ಮನವು ಕಾಲವೆಂಬ ಪಯಣದಲಿ ನೊಂದರು
ಪ್ರೀತಿಯೆಂಬ ಬೆಂಕಿಯಲಿ ಬೆಂದರು
ಮೋಹದ ಮನೆಯಲಿ ಸಂಕಟ ಊಂಡರು
ದೊರೆಯದ ವಳುಮೆಗಾಗಿ , ಬಳಲಿ ಬಹಳ ನೋವು ಕಂಡರೂ
ತನ್ನ ತಾನು ಮರೆತು ಅವಳತ್ತ ವಾಲುವುದು ಯಾಕೆ?
ಇದ ನೆನೆದು ನನಗೆ ಆಗುತಿಹುದು ಅಂಜಿಕೆ ..:-)

ಪ್ರೇಮ ಪಾತಾಳಕ್ಕೆ ಧುಮುಕಿ
ಪ್ರೀತಿಯೆಂಬ ಹುಚ್ಚು ಸುಲಿಗೆ ಸಿಲುಕಿ
ತಂದೆ -ತಾಯಿಯರಿಂದ ದೂರ ಹೋಗಿ
ತಮ್ಮದೇ ಕಲ್ಪನಾ ಲೋಕದಲ್ಲಿ ಸಾಗಿ
ಕೊನೆಗೆ 'ಕೊನೆ ' ಕಾಣದೆ ಸೋತ ಜನರೆಷ್ಟೋ ?
ಕೆಲವೊಮ್ಮೆ ಸಾವಿನ ಮೊರೆ ಹೋದವರೆಷ್ಟೋ ?

ಯಾಕೆ ಇಂತಹ ನೋವಿನ ಬದುಕು ನಮಗೆ
ಬೇಡವಾಗಿದೆಯೇ ಹಿರಿಯರ ವಲವು ನಮಗೆ !!!!
ಇಲ್ಲ , ಪ್ರಿಥಿಯೇಮ್ಬ ಸುಳಿಗೇ ಸಿಗುವುದಿಲ್ಲ ನಾನು
ಎಂದೆಂದು 'ನನ್ನ' ಮರೆಯುವುದಿಲ್ಲ ನಾನು
ಇಗೋ ಪ್ರೀತಿಯೇ ನಿನಗೆ ಕೋಟಿ ಕೋಟಿ ಶರಣು
ಎಂದೆಂದು ಸೆಳೆಯದಿರು ನಿನ್ನಲ್ಲಿಗೆ , ನನ್ನನು .....

Rating
No votes yet

Comments