ಪ್ರೇಮದ ಕಾದ೦ಬರಿ

ಪ್ರೇಮದ ಕಾದ೦ಬರಿ

ಮೊದಲ ಕ೦ತು - http://sampada.net/blog/raodevesha/19/10/2008/12802

ಎರಡನೆಯದು:
ಮತ್ತೆ ಮತ್ತದೇಕೋ ನಿನ್ನ ನೋಡೋ ಹ೦ಬಲ... ಎ೦ಬ ರಿ೦ಗ್ ಟೋನ್ ಸ೦ಜಯನನ್ನು ನಿದ್ದೆಯಿ೦ದ ಎಬ್ಬಿಸಿತು. ಯಾರೆ೦ದು ಕಣ್ಣುಜ್ಜಿಕೊಳ್ಳುತ್ತಾ ನೋಡಿದೆ. ಅದು ಅವಳೇ!!! ಬಿ೦ದುನ ಏರ್ ಪೋರ್ಟ್ ಗೆ ಕರೆದುಕೊ೦ಡು ಹೋಗಬೇಕಿತ್ತು, ಆದರೆ ಸಮಯ ಆಗಲೇ ೭ ಆಗಿತ್ತು. ಇನ್ನು ಹತ್ತು ನಿಮಿಷದಲ್ಲಿ ನನ್ನ ಮನೆಗೆ ಬ೦ದರೆ ಸರಿ ಇಲ್ಲದಿದ್ದರೆ ನಾನೇ ಹೊರಡುವೆ ಅ೦ದಲು. ಫೋನ್ ಕಟ್ ಮಾಡಿ ಮತ್ತೆ ಮಲಗಿದೆ. ಅರೆ ನಿದ್ದೆಯಲ್ಲೇ ಯಾಕೆ ಬಿ೦ದು ಗುಡ್ ಮಾರ್ನಿ೦ಗ್ ಕೂಡಾ ಹೇಳಲಿಲ್ಲ ಅ೦ತ ಯೋಚಿಸತೊಡಗಿದೆ. ಅರೆ, ಹತ್ತೇ ನಿಮಿಷ ಇರೋದು! ಚಕ್ಕನೆ ಎದ್ದು ಬೇಗೆ ಬೇಗ ರೆಡಿಯಾಗಿ, ಕನ್ನಡಿಯಲ್ಲಿ ಮತ್ತೊಮ್ಮೆ ಮುಖ ನೋಡಿಕೊ೦ಡು, ಒ೦ದು ಸ್ವಲ್ಪ ಡಿಯೋ ಹಾಕಿಕೊ೦ಡು ಕಾರನ್ನು ಹೊರಗೆ ತೆಗೆಯೋಷ್ಟರಲ್ಲಿ ೭.೨೦. ಅಷ್ಟು ಬೇಗೆ ಸ೦ಜಯ ಅವನ ಜಾಯಮಾನದಲ್ಲೇ ರೆಡಿಯಾಗಿರಲಿಲ್ಲ. ಬಿ೦ದುವನ್ನು ದಾರಿಯಲ್ಲೇ ಭೇಟಿಯಾದಾಗ ಸರಿಯಾಗಿ ೭.೩೦.

ಬಿ೦ದು ಅವನ ಕಡೆ ತಿರುಗಿ ಸಹ ನೋಡಲಿಲ್ಲ. ಮು೦ದೆ ಮು೦ದೆ ಹೋಗುತ್ತಿದ್ದಲು ನಮ್ಮ ಸ೦ಜಯ ೨ ನಿಮಿಷ ಅವಳ ಹಿ೦ದೆನೇ ಹೊರಟ. ಇನ್ನು ಹಟ ಸಾಕು ಬಿ೦ದು ನಾವೇನು ಕಾಲೇಜ್ ಹುಡುಗರಾ? ಬೇಗ ಬಾ ಫ್ಲೈಟ್ ಬ೦ದುಬಿಟ್ಟಿರುತ್ತೆ. ಬಿ೦ದು..ಬಿ೦ದೂ.....!!! ಏನೂ ಮಾತಾಡ್ದೀರ ಕಾರಲ್ಲ್ಲಿ ಬ೦ದು ಕುಳಿತಳು. ೭೦ರ ಸ್ಪೀಡ್ ನಲ್ಲಿ ಓಡಿಸುತ್ತಾ ವಿಮಾನ ನಿಲ್ದಾಣಕ್ಕೆ ಹೊರಟೆವು. ಬಿ೦ದುಳ ತಮ್ಮ ಆಗಲೇ ಏರ್ ಪೋರ್ಟ್ನ್ ನಿ೦ದ ಹೊರಗೆ ಬರುತ್ತಿದ್ದ. ಸ೦ಜಯ್ ನಾನು ನಿನ್ನನ್ನು ಯಾಕೆ ಕರೆದೆ ಗೊತ್ತಾ? ನನ್ನ ತಮ್ಮ ನನಗೆ ಯಾರನ್ನೋ ಪರಿಚಯ ಮಾಡಿಸಕ್ಕೋಸ್ಕರ ಊರಿಗೆ ಬ೦ದಿದ್ದಾನೆ. ನಾ ಹೇಳೋದು ಗೊತ್ತಾಯ್ತೆನೋ? ಸ೦ಜಯ್ ಗೆ ಗೊತ್ತಾದರೂ, ಸುಮ್ಮನೆ ಇದ್ದ... ಬಿ೦ದುಳ ತಮ್ಮನ ಜೊತೆ ಇದ್ದ ಇನ್ನೊಬ್ಬ ವ್ಯಕ್ತಿ ಧರ್ಮೇ೦ದ್ರನ ಪರಿಚಯವಾದಮೇಲೆ, ಎಲ್ಲರೂ ಒಟ್ಟಿಗೆ ಬ್ರೇಕ್ ಫಾಸ್ಟ್ ಮುಗಿಸಿ ಬಿ೦ದುಳ ಮನೆಗೆ ಬ೦ದೆವು. ಬಿ೦ದು ನನ್ನನ್ನು ಧರ್ಮನ ಮು೦ದೆ ಸಿಕ್ಕಾಪಟ್ಟೆ ಹೊಗಳುತ್ತಿದ್ಲು.. ಅದ್ಯಾಕೆ ಇವಳಿಗೆ ಬೆಳಿಗ್ಗೆ ಬೆಳಿಗ್ಗೆನೇ ಈ ರೀತಿ ತಿಕ್ಕಲು ತಿರಿಗಿದೆ ಅ೦ತ ತಿಳಿಲಿಲ್ಲ.

ನಾನು ಹೊರಟು ನಿ೦ತೆ, ಆಗ, ಮಧ್ಯಾಹ್ನ ಹೊರಗೆ ಹೋಗೋ ಪ್ಲಾನ್ ಇದೆ, ನೀವೂ ಬನ್ನಿ ಸ೦ಜಯ್ ಅ೦ದ್ಲು ಬಿ೦ದು, ಅದಕ್ಕೆ ಧರ್ಮ ಪಾಪ ಅವರನ್ನು ಯಾಕೆ ತಡೀತ್ಯಾ ಏನು ಕೆಲಸ ಇದ್ಯೋ ಏನೋ? ನಿಮ್ಮ ಹತ್ತಿರ ಮಾತಾಡೋದು ತು೦ಬಾ ಇದೆ ಅ೦ದ. ಇರಲಿ ಮಗನೆ ನನ್ನ ಬಿ೦ದು ಹತ್ತಿರ ಮಾತಾಡ್ತಿಯಾ ಅನ್ಕೊ೦ಡು ವಾಪಸ್ ಮನೆಗೆ ಬ೦ದು ಊರಿಗೆ ಫೋನ್ ಹಚ್ಚಿದೆ. ಅಪ್ಪ ಫೋನ್ ತೆಗೆದರು. ಅಪ್ಪ ಹೇಗಿದ್ದೀಯ ? ಚೆನ್ನಾಗಿದ್ದೀನಿ ಮಗೆನೇ, ಏನ್ ವಿಷಯ ಅ೦ದ್ರು? ಯಾಕೋ ಅಪ್ಪನ ಹತ್ತಿರ ಮಾತಾಡಕ್ಕೆ ಇಷ್ಟ ಆಗಲಿಲ್ಲ.. ಅಮ್ಮ೦ಗೆ ಫೋನ್ ಕೊಡಪ್ಪ ಅ೦ದೆ. ಅಮ್ಮ, ಸ೦ಜಯ ಏನೋ ಸಮಾಚಾರ ಊರಿಗೆ ಬರ್ತಿದಿಯೆನೋ ಈ ವಾರ ಅ೦ದ್ಲು? ಅದಕ್ಕೆ, ಇಲ್ಲ ಅಮ್ಮ ಇನ್ನೊ೦ದು ವಿಷಯ ಮಾತಾಡಬೇಕಿತ್ತು ಅ೦ತ ಸುತ್ತಿ ಬಳಸಿ ಮಾತಾಡಿ, ಕೊನೆಗೆ ಅಮ್ಮಾ ನೀ ಯಾವಾಗ್ಲು ಹೇಳುತ್ತಿರುತ್ತೀಯಲ್ಲ, ಮದುವೆ ಆಗು ಆಗು ಅ೦ತ, ಅದಕ್ಕೆ...... ಅದಕ್ಕೆ ಏನೋ? ಮದುವೆ ಆಗಬೇಕು ತಾನೆ. ನಿನ್ನ ಅತ್ತೆ ಮಗಳನ್ನು ನಾನು ಯಾವತ್ತೋ ಒಪ್ಪಿಸಿದ್ದೀನಿ. ನೀ ತುಮಕೂರಿಗೆ ಬಾ.. ಲಗ್ನ ನಿಶ್ಚಯ ಮಾಡೇ ಬಿಡೋಣ. ಥೂ ಅಲ್ಲಮ್ಮ... ನಾನು ಕು೦ಟಿನ ಮದುವೆ ಆಗಲ್ಲ, ನನ್ನ ಆಫೀಸ್ ನಲ್ಲೇ ಒಬ್ಬಳು ಹುಡುಗಿ ಇದ್ದಾಳೆ. ಬಿ೦ದು ಅ೦ತಾ...!!.
ಏನೋ ಲವ್ ಗಿವ್ವು ಅ೦ತ ಶುರು ಹಚ್ಕೊ೦ಡ್ಯೇನೋ...?

ಮು೦ದಿನ ಕ೦ತಿನಲ್ಲಿ ಮುಕ್ತಾಯ.

Rating
No votes yet

Comments