ಪ್ರೇಮ ನಿವೇದನೆ......ಕೆಲವು ಹಾಡುಗಳು......

ಪ್ರೇಮ ನಿವೇದನೆ......ಕೆಲವು ಹಾಡುಗಳು......

ಕೆಲವು ಹಾಡುಗಳು ಬಹಳ ಆತ್ಮೀಯವಾಗುತ್ತವೆ ನಾನು ಹೇಳಹೊರಟಿರುವುದು ಹಳೆಯ ಹಾಡುಗಳ ಬಗ್ಗೆ... ಇಲ್ಲಿ ವಿಶೇಶವೆಂದರೆ

ನಾಯಕಿಯರು ಮುಂದಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ....

೧) " ಸಿಟ್ಟ್ಯಾಕೋ ಸಿಡಕ್ಯಾಕೋ ನನ್ ಜಾಣ...." ಎಲ್ ಆರ್ ಈಶ್ವರಿ ಹಾಡಿದ ಈ ಹಾಡು ಎಂದಿಗೂ ಹಸಿರಾಗಿದೆ. ನಾಯಕಿ ಇಲ್ಲಿ
ನಾಯಕನಿಗೆ ಮುಕ್ತವಾಗಿ ಆಹ್ವಾನ ನೀಡುತ್ತಾಳೆ... ಒಟ್ಟಾಗಿ ಇರುವ ಎಂದು. ಬಹುಶ ಕನ್ನಡದ ಮೊದಲ bold ಹಾಡು
ಇದು ಆಗಿರಲು ಸಾಕು. ಆದರೆ ನನಗೆ ಈ ಗೀತೆಯ ಬಗ್ಗೆ ಹೆಚ್ಚು ಗೊತ್ತಿಲ್ಲ ಯಾರು ಬರೆದವ್ರು, ಯಾವ ಚಿತ್ರದ್ದು ಇತ್ಯಾದಿ.

೨) "ನಿಲ್ಲಯ್ಯೋ ನಿಲ್ಲೊ ಓ ಕೆಂಚು ಮೀಸ್ಯೋನೆ..." ಮಂಜುಳಾ ಆಗ top ನಲ್ಲಿದ್ದರು... ಬಜಾರಿ ಪಾತ್ರ ಮಾಡುವುದರಲ್ಲಿ
ಎತ್ಟಿದ ಕ್ಯೆ . ನಾಯಕನ ಬೆನ್ನು ಹತ್ತಿ ತನಗೆ ಅವನ ಮೇಲೆ ಮನಸ್ಸಾಗಿರುವದನ್ನು ಹೇಳುತ್ತ ತಾನು ಪಟ್ಟ ಪಾಡು ಹೇಳುತ್ತಾಳೆ..
"ಗುಡ್ಡ ಬೆಟ್ಟ ಹತ್ತಿ ಬಂದೆ ಹಳ್ಳ ಕೊಳ್ಳ ದಾಟಿ ಬಂದೆ " ಉದಯಶಂಕರ ಈ ಹಾಡು ಬರೆದಾಗ ಅವರ ಮನದಲ್ಲಿ ಏನಿತ್ತೋ
ಗೊತ್ತಿಲ್ಲ. ಆದರೆ ಹಾಡು ಅದ್ಬುತ ವಾಗಿ ಮೂಡಿ ಬಂದಿದೆ. ’ಬದುಕು ಬಂಗಾರವಾಯಿತು’ ನಮ್ಮ ಹುಬ್ಬಳ್ಳಿ ಗೆಳೆಯರು ತೆಗೆದ
ಚಿತ್ರ. ರಂಗರಾವ್ ಸಂಗೀತ ಇಂಪಾಗಿತ್ತು.

೩) " ಮುತ್ತು ಮಳೆಗಾಗಿ ಹೊತ್ತು ಕಾದಿದೆ...." ವಾಣಿ ಜಯರಾಂ ಹಾಡಿದ ತುಂಟ ಹಾಡು. ಇಲ್ಲಿ ನಾಯಕಿ ಶಹರದವಳು.
ಅವಳ ಆಹ್ವಾನ ಎಂಥದು ನೋಡ್ರಿ " ಕೆನ್ನೆ ಕೆಂಪಗಾಗಿ ತಂಪು ಕೋರಿದೆ ". ಗೀತಪ್ರಿಯ ಬರೆದ ರಸಿಕ ಗೀತೆ ಇದು.
ವಿಜಯ್ ಭಾಸ್ಕರ ಸಂಗೀತ ಸೊಗಸಾಗಿದೆ. ’ಬೆಳುವಲದ ಮಡಿಲಲ್ಲಿ ’ ಒಂದು ಅಪರೂಪದ ಚಿತ್ರ - black&white-
ಸಿನೇಮಾ.

೪) " ಏ ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ ದನಿಯಲಿ ವಿನೂತನ ಜೀವ ಭಾವ ನೀ ತಂದೆ "
ಎಂತಹ ಸೊಗಸಾದ ಕಲ್ಪನೆ ನಾಯಕಿಯ ಎದೆಯಲ್ಲಿ ಕೋಗಿಲೆ ಇದೆ ಪ್ರೇಮ ಅದಕೆ ಹೊಸ ಭಾಶೆ ಬರೆದಿದೆ.
ಒಂದು ಸಾಮಾನ್ಯ ಸನ್ನಿವೇಶ ಆದರೇನು ಉದಯ್ ಶಂಕರ್ ಎನ್ನುವ ಮಾಂತ್ರಿಕ ಹೊಸ ದಿಕ್ಕು ತೋರಿಸಿದರು.
ಜಾನಕಿ ಹಾಡಿದ ಒಂದು ಸುಂದರ ಗೀತೆ ಇದು. ರಾಜನ್ ನಾಗೇಂದ್ರ ರ ಸಂಯೋಜನೆಯಲ್ಲಿ ಮೂಡಿದ ಹಾಡು
ಅಜರಾಮರ.

೫) "ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ..." ಗ್ರಾಮೀಣ ಸೊಗಡಿನ ಚಿತ್ರ ’ಪರಸಂಗದ ಗೆಂಡೆತಿಮ್ಮ’. ಸನ್ನಿವೇಶ
ನಾಜೂಕಿನದ್ದು. ವಿವಾಹಿತ ಮಹಿಳೆ ಪರಪುರುಶನನ್ನು ಮೋಹಿಸಿರುತ್ತಾಳೆ ಆದರೆ ಹಾಡಿನಲ್ಲಿ ಎಲ್ಲೂ ಅಶ್ಲೀಲತೆ ಇಲ್ಲ
ಇದ್ದದ್ದು ಕಾವ್ಯದ ಕುಸುರಿ ಕೆಲಸ. " ಆಸೆ ಗಂಧ ಹರಡೈತೆ " ಎನ್ನುವ ಸಾಲು ನೀಡುವ ಪುಳಕದ ಮಜಾ ಹೇಗಿದೆ.
ದೊಡ್ದ ರಂಗೇಗೌಡರು ಗ್ರಾಮೀಣ ಹಿನ್ನೆಲೆಯವರು. ತಮ್ಮ ಅನುಭವ ಧಾರೆ ಎರೆದಿದ್ದಾರೆ.
ಜಾನಕಿಯವರೇ ಸ್ವತ ಹೇಳಿದ್ದಾರೆ ಅವರು ಹಾಡಿದ ಉತ್ತಮ ಗೀತೆಗಳಲ್ಲಿ ಇದು ಒಂದು.

Rating
No votes yet