ಪ್ರೇಮ ಪತ್ರ
ಪ್ರಿಯ ಗೆಳಯ ,
ನಿಮ್ಮ ಪ್ರೀತಿಯ ಅರಾದಕಿ ಇಲ್ಲಿ ಸುಖವಾಗಿದ್ದೀನಿ ,ನಿಮ್ಮ ಬರುವಿಗಾಗಿ ಶಬರಿಯಂತೆ ಕಾಯುತ್ತಿದ್ದೀನಿ .ಇನಿಯಾ ಈ ಸುಂದರ ಸಂಜೆ ನನ್ನನ್ನು ನೀವು ಒಪ್ಪಿಸಿದ ದಿನಕ್ಕೆ ಕರೆದೊಯ್ಯುತಿಧೆ ,ಅದು ನನ್ನ ಮಕರ ಸಂಕ್ರಮಣದಂತೆ ,ನನ್ನ ಬಾಳಿನ ದಿಕ್ಕು ಬದಲಿಸಿದ ದಿನ,ಬಾಳ ಸಂಗಾತಿಯ ಬಗ್ಗೆ ಒಂದು ದಿನ ಯೋಚಿಸದ ಮನಸಿಗೆ ,ಮೂರು ವರ್ಷಗಳಿಂದ ಆತ್ಮೀಯ ಗೆಳಯನಾಗಿದ್ದ ನೀವು ಆ ದಿನ ನನ್ನನ್ನು ಕುರಿತು
"ಬರೀ ಮೋಜು ಹಣ,ಗೆಳಯರ ಬಳಗ ನಡುವಿದ್ದ ನನಗೆ ಜೀವನವೇನು ಎಂದು ತಿಳಿಸಿದ್ದು ನೀನು ,ಸ್ನೇಹ ,ಸಂಬಂಧ ,ವಾತ್ಸಲ್ಯ ಗಳ ಬೆಲೆ ಅರ್ಥೈಸಿದ್ದು ನೀನು ,ನೀನು ನನ್ನ ಬಾಳ ಸಂಗಾತಿಯಾಗಲು ಒಪ್ಪಿದರೆ ನನ್ನಂಥ ಪುಣ್ಯಜೀವಿ ಯಾರಿಲ್ಲ ,ನಿನಗೆ ಅದೆಲ್ಲ ನಿನ್ನ ತಂದೆ ತಾಯಿಯಿಂದ ಬಳುವಳಿಯಾಗಿದ್ದು ಯಾರನ್ನಾದರು ಬದಲಿಸುವೆ ,ಆದರೆ ನಿನ್ನಿಂದ ಬದಲಾದ ವ್ಯಕ್ತಿಯ ಜೊತೆ ಜೀವನ ಪೂರ್ತಿ ಹೆಜ್ಜೆ ಇಡಲು ನಿನ್ನ ಮನಸು ಬೇಡ ಅನ್ನೊಲ್ಲ ಅಂತ ನಂಬ್ತೀನಿ."
ಇಷ್ಟು ಹೇಳಿದ ನಂತರ ,ಯಾವಾಗಲು ಗೆಳಯರು ಮತ್ತು ಓದಿನ ಬಗ್ಗೆ ಮಾತನಾಡುತಿದ್ದ ನೀವು ಇಷ್ಟೆಲ್ಲಾ ಮಾತನಾಡಿದ್ದು ಕೇಳಿ ಅರೆನಿಮಿಷ ಮೈಮರೆತಿದ್ದರಲ್ಲಿ ಅಚ್ಚರಿ ಇಲ್ಲ . ನಿಮ್ಮ ಅಷ್ಟು ಮಾತಿಗೆ ಒಪ್ಪದೇ ನನ್ನ ತಂದೆ ತಾಯಿ ಒಪ್ಪಿದರೆ ಮಾತ್ರ ಮತ್ತು ಎಂದು ಮೂರ್ನಾಲ್ಕು ಕಂಡಿಷನ್ಸ್ ಇಟ್ಟರು ನೀವು ಅಯ್ತೆಂದು ಹೇಳಿ ನನ್ನ ಒಪ್ಪಿಸಿದ್ದು ಮೆಚ್ಚುಗೆಯ ವಿಷಯ.
ನೀವು ನನ್ನ ಕಂಡರೆ ಯಾಕಿಷ್ಟು ಅಕ್ಕರೆ ಎಂದೆಲ್ಲ ಕೇಳಿದಾಗ ಉತ್ತರಿಸುತ್ತಿರಲ್ಲಿಲ್ಲ ಇವಾಗ ಹೇಳ್ತೀನಿ ನೋಡಿ ,"ನಿಮಗೆ ತಿಳಿದ ಹಾಗೆ ನಾನು ನಿಮಗೆ ಯಾವಗಲು ತಂದೆ ತಾಯಿಯ ಪ್ರೀತಿಯ ಬಗ್ಗೆ ಹೇಳುತ್ತಿದುರಿಂದ ನಿಮಗೆ ವಾತ್ಸಲ್ಯದ ,ಸಂಬಂದಗಳ ಅರಿವಾಗಿರಬಹುದು ,ಅದೇ ರೀತಿ ನಿಮಗೆ ತಿಳಿಯದೆ ನನ್ನನ್ನು ಬಹಳ ತಿದ್ದಿದ್ದೀರಿ ,ನನಗೆ ಸಮಯ ಪ್ರಜ್ಞೆ (ಇಂಟರ್ವ್ಯೂ ಟೈಮ್ ಲಿ ), ಸುಲಭವಾಗಿ ಎಲ್ಲರನ್ನು ನಂಬುತಿದ್ದವಳಿಗೆ ಹೊರಪ್ರಪಂಚ ಏನೆಂದು ಉದಾಹರಣೆ ಕೊಟ್ಟು ಬೈಯ್ತಿದ್ದಿರಿ ,ಕೇಳುವಾಗ ನನ್ನ ಅಪ್ಪನ ಮಾತುಗಳೆಲ್ಲ ನೆನ್ಪಾಗುತಿದ್ದವು ,ನನ್ನ ಉತ್ತರಗಳು ನೇರವಾಗಿದ್ದರು ಅದು ಎಲ್ಲರಿಗು ಇಷ್ಟವಾಗುವುದಿಲ್ಲ ಹಾಗೆಯೇ ತಪ್ಪುಗಳನ್ನ ತಿಳಿಹೇಳೋಕೆ ಹೋಗ್ಬೇಡ ನನ್ನಂತೆ ಎಲ್ಲರು ಇರಲ್ಲ ,ನಿನ್ನನ್ನು ಒರಟೆಂದು ಬಾವಿಸುತ್ತಾರೆ ಎಂದೆಲ್ಲಾ ಹೇಳುತ್ತಾ ,ಕಲ್ಲಂತಿದ್ದ ನನ್ನನ್ನು ಕೆತ್ತಿ ಸುಂದರ ಶಿಲ್ಪಿಯಾಗಿ ಮಾಡಿ ಅದಕೆ ಜೀವ ತುಂಬಿದಿರಿ ,ಇದರಿಂದ ನಾನು ಎಡವದೆ ಈ ಹಂತಕ್ಕೆ ತಲುಪಲು ಸಾಧ್ಯವಾಗಿ ,ಒಳ್ಳೆಯ ಮಗಳಾಗಿ ,ಕೆಲಸ ಎಲ್ಲವುದರಲ್ಲಿ ಸಂತೃಪ್ತಳಾಗಿದ್ದೇನೆ ,ಈ ಖುಷಿಗೆ ಕಾರಣ ನೀವು .ನೀವೇ ಹೇಳುವ ಹಾಗೆ ನನಗೆ ಅರಿವಿಲ್ಲದೆ ನಿಮಗೆ ಉಷಾರಿಲ್ಲದಿದ್ದಾಗ ದಿನಕ್ಕೆ ಮೂರ್ನಾಲ್ಕು ಬಾರಿ ಕಾಲ್ ಮಾಡ್ತಿದ್ದು ನಿಜ,ಆದ್ರೆ ಯಾವಾಗೆಲ್ಲ ಮಾಡಿದ್ದೆ ಎಂದು ಹೇಳಿದಾಗ ಆ ದಿನ ನನ್ನ ಬೆಳಗ್ಗಿನ ರಂಗೋಲಿ ಹಾಳಾಗುತ್ತಿದ್ದಿದು ,ಆ ದಿನ ಏನೋ ಸಪ್ಪಗಿರುತಿದ್ದುದನ್ನು ನೆನೆದು ಆಶ್ಚರ್ಯವಾಗಿತ್ತು,ಅದೇ ರೀತಿ ಸಾಮನ್ಯವಾಗಿ ನನ್ನ ಹುಟ್ಟುಹಬ್ಬದ ದಿನ ರಜೆ ಇರ್ತಿದ್ರಿಂದ ನೀವು ವಿಷ್ ಮಾಡೋಕೆ ನಿಮ್ಮೂರಿಂದ ಬಂದು ಹೋಗುವಾಗ ಆಗ್ತಿದ್ದ ನೋವು ಸಂಕಟ ನಾನೆಂದು ನಿಮ್ಮತ್ರ ಹೇಳಿರಲ್ಲಿಲ್ಲ, ಬೈ ಅಂತ ಹೇಳಿ ಮುಖ ತಿರುಗಿಸಿದವಳು ಮತ್ತೆ ಈ ಕಣ್ಣೀರನ್ನು ತೋರಿಸಲಾಗದೆ ಹಿಂದಿರುಗದೆ ಬರುತ್ತಿದ್ದೆ ,ಇದಕ್ಕೆ ನೀವು ಕೊಬ್ಬು ಅಂತ ರೆಗ್ಸಿದ್ದು ಉಂಟು ,ಅದೆಲ್ಲ ನೆನೆದರೆ ನಗು ಬರುತ್ತಿದೆ ." ನನ್ನ ಮನಸ್ಸು ನಿಮ್ಮನ್ನ್ನು ಎಂದೋ ಒಪ್ಪಿದ್ದು ಅರಿವಾಗಿ ನೀವು ಕೇಳಿದಾಗ ಒಪ್ಪಿದೆ ,ಇದರಿಂದ ಯಾವ ಮನಸಿಗೂ ನೋವಗಬಾರ್ದೆಂದು ದೇವರಲ್ಲಿ ನನ್ನ ಪ್ರಾರ್ತನೆ .
ಇತ್ತೀಚಿಗೆ ಕೆಲಸದ ಜಂಜಾಟದಲ್ಲಿ ಅಲ್ಪಮಾತುಗಾರನಾಗಿರುವ ನಿಮಗೆ ಬೇಕಾಗಿಯೇ ಸಂದೇಶ ಕಳಿಸಿ ಕೆಣಕಿ ಬೈಯುವಂತೆ ಮಾಡಿ ,ನೀವು ಬೈಯುತಿದ್ದಾಗ ಇಲ್ಲಿ ನಗುತ್ತಾ ನಿಮ್ಮನ್ನು ಆಲಿಸುತ್ತಿರುತ್ತೇನೆ ,ಈ ಮಾರ್ಗದಿಂದ ನಿಮ್ಮ ದ್ವನಿ ಕೇಳಿ ನನ್ನ ಎಲ್ಲ ಚಿಂತೆಗಳನ್ನು ಮರೆತು ಸುಖಜೀವಿಯಾಗುತ್ತೇನೆ ,ಇದು ನಿಮಗೆ ತಿಳಿದಿರದೆ ನನ್ನಲ್ಲಿ ಕೋಪವಿದ್ದರೆ ಕ್ಷಮಯಿರಲಿ . ಜೀವ ತುಂಬಿದ್ದ ಜೀವವನ್ನು ಸೇರಲು ಈ ಜೀವ ಯಾವಾಗಲು ಹಾತೊರೆಯುತ್ತಿರುತ್ತದೆ . ನಮ್ಮ ಜೋಡಿ ಹೂವಿನ ಹಾರದಂತಿದ್ದು ಹೂಗಳು ನಾವಾಗಿ ಅವನ್ನು ಸೇರಿಸಿದ ದಾರವಾದ ಪ್ರೀತಿ ಯಾವಾಗಲೂ ಗಟ್ಟಿಯಾಗಿರಲೆಂದು ,ಅದು ಜನ ,ದೇವರು ಮೆಚ್ಚುವ ಹಾಗಿರಲೆಂದು ಬಯುಸುತ್ತೇನೆ . ನನ್ನ ಈಗಿನ ಸಂದರ್ಭ ನೆನೆದು ಒಂದು ಪುಟ್ಟ ಕವನ ಬರೆದಿದ್ದೇನೆ ಒಪ್ಪಿಕೊಂಡು ಮೆಚ್ಚುಗೆಯಾದಲ್ಲಿ ತಿಳಿಸಿ .
ಪ್ರಿಯ ನೆನಪಿದೆ ನೀವು ನನ್ನನ್ನು ಒಪ್ಪಿಸಿದ ದಿನಾಂಕ
ಮನಸ್ಸು ಹಕ್ಕಿಯಾಯ್ತು ಗೊತ್ತಾದಾಗ ನೀವು ಪ್ರೀತಿಯ ಆರಾದಕ
ಪಡೆದಿರುವಿರಿ ಪ್ರೀತಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ
ಜೀವ ಮಿಡಿಯುತಿದೆ ,ಇದಕೆ ನಿಮ್ಮನ್ನು ಸೇರುವ ತವಕ
ಮನಸ್ಸು ಸಪ್ಪಗಾಗಿದೆ ಪ್ರಿಯ ,ಇದಕೆ ಅಪ್ಪಾಜಿ ಒಪ್ಪಿಗೆಯ ಆತಂಕ
ನಗದು ,ಆಸ್ತಿ ಬೇಡ ಗೊತ್ತು ಇವು ಜಾಸ್ತಿಯದಷ್ಟು ನೆಮ್ಮದಿಗೆ ಮಾರಕ
ನೀರಿಕ್ಷಿಸುವುದೊಂದೇ ,ನಿಮ್ಮ ಪ್ರೀತಿ -ನನ್ನ ಉಸಿರು ಇರುವ ತನಕ
ಅಪ್ಪಾಜಿ ಒಪ್ಪಿದ ದಿನ ನನ್ನ ಮನಸಾಗುವುದು ನಿರಾತಂಕ
ನಿರಾತಂಕ ಮನಸ್ಸು ನಿಮ್ಮನು ಸೇರಿದ ದಿನ ಈ ಜೀವನ ಸಾರ್ಥಕ .
ಇಂತಿ ನಿಮ್ಮ ನಲ್ಲೆ
ಬೋ .ಕು .ವಿ
Comments
ವಿನುತ ಬಿ,ಕೆ ರವರೆ, ಲಕ್ಷ್ಮೀಕಾಂತ
ವಿನುತ ಬಿ,ಕೆ ರವರೆ, ಲಕ್ಷ್ಮೀಕಾಂತ ಇಟ್ನಾಳ ರ ನಮಸ್ಕಾರಗಳು. ತಮ್ಮ ಒಳಮನದ ಪತ್ರೊಪ್ಪಿಗೆ, ಮನಸಿನ ಮಾತುಗಳಿಂದ ಸತ್ವಯುತವಾಗಿದೆ. ಕವನದ ರೂಪದಲ್ಲಿಯೂ ಒಳ್ಳೆಯ ಪ್ರಯತ್ನ.ಧನ್ಯವಾದಗಳು. ಬರೆಯುತ್ತಿರಿ.
In reply to ವಿನುತ ಬಿ,ಕೆ ರವರೆ, ಲಕ್ಷ್ಮೀಕಾಂತ by lpitnal@gmail.com
+1 (ಪ್ರೇಮ ಪತ್ರ) ಮತ್ತು ಚಿತ್ರ
+1 (ಪ್ರೇಮ ಪತ್ರ) ಮತ್ತು ಚಿತ್ರ ತುಂಬಾ ಸೊಗಸಾಗಿದೆ, ನಾಗೇಶ ಮೈಸೂರು, ಸಿಂಗಪುರದಿಂದ
In reply to +1 (ಪ್ರೇಮ ಪತ್ರ) ಮತ್ತು ಚಿತ್ರ by nageshamysore
ನಾಗೇಶ ರವರೆ ಧನ್ಯವಾದಗಳು ..
ನಾಗೇಶ ರವರೆ ಧನ್ಯವಾದಗಳು ..
In reply to ನಾಗೇಶ ರವರೆ ಧನ್ಯವಾದಗಳು .. by Vinutha B K
ವಿನುತಾರವರೆ, ನಿಮಗೂ ಸೇರಿದಂತೆ
ವಿನುತಾರವರೆ, ನಿಮಗೂ ಸೇರಿದಂತೆ ಧನ್ಯವಾದ ಈ ಕವಿತೆಯಲ್ಲಿ ಹಾಕಿದ್ದೆ - ಡಾ. ಉಷಾರಾಣಿಯವರ ಲೇಖನದ ಪ್ರತಿಕ್ರಿಯೆಯಲ್ಲಿ. ನೀವು ಗಮನಿಸಿದರೊ ಇಲ್ಲವೊ ಗೊತ್ತಿಲ್ಲ - ಅದಕ್ಕೆ ಮತ್ತೆ ಲಿಂಕು ಸೇರಿಸಿದ್ದೇನೆ, ನಾಗೇಶ ಮೈಸೂರು
http://sampada.net/%E0%B2%88-%E0%B2%A6%E0%B2%BF%E0%B2%A8-%E0%B2%A4%E0%B…
In reply to ವಿನುತಾರವರೆ, ನಿಮಗೂ ಸೇರಿದಂತೆ by nageshamysore
ಭಾವಜೀವಿಗಳಿಗೆ ಹೊಸ ರೀತಿಯ
ಭಾವಜೀವಿಗಳಿಗೆ ಹೊಸ ರೀತಿಯ ಧನ್ಯವಾದ ತಿಳಿಸಿ ,ಮತ್ತಷ್ಟು ಭಾವೊನ್ಮುಕರಾಗಿ ಲೇಖನಿ ಹಿಡಿಯುವಂತಿದೆ ನಿಮ್ಮ ಕವನ ..
ಧನ್ಯವಾದಗಳು ..
In reply to ವಿನುತ ಬಿ,ಕೆ ರವರೆ, ಲಕ್ಷ್ಮೀಕಾಂತ by lpitnal@gmail.com
ಲಕ್ಷ್ಮೀಕಾಂತ ರವರೆ ಧನ್ಯವಾದಗಳು .
ಲಕ್ಷ್ಮೀಕಾಂತ ರವರೆ ಧನ್ಯವಾದಗಳು ... ಒಂದು ಕಾದಂಬರಿ ಬರೆಯುವ ಪ್ರಯತ್ನದಲ್ಲಿದ್ದೇನೆ , ವಾರಪತ್ರಿಕೆ ಅಥವಾ ದಿನಪತ್ರಿಕೆ ಯ ವಿಶೇಷ ಸಂಚಿಕೆಯಲ್ಲಿಯಲ್ಲಿ ಪ್ರಕಟಿಸುವ ಆಸೆ ಇದೆ ,ಸಹಾಯವಾಗಲು ವಿಳಾಸ ಗೊತ್ತಿದ್ದರೆ ತಿಳಿಸಿ
ನಿಮ್ಮ ಹೆಸರಿನಲ್ಲಿಯೇ ಪ್ರೇಮಪತ್ರ
ನಿಮ್ಮ ಹೆಸರಿನಲ್ಲಿಯೇ ಪ್ರೇಮಪತ್ರ ಪ್ರಕಟಿಸಿರುವುದಕ್ಕೆ ಏನಾದರೂ ಅರ್ಥವಿರಬಹುದೇ?
In reply to ನಿಮ್ಮ ಹೆಸರಿನಲ್ಲಿಯೇ ಪ್ರೇಮಪತ್ರ by kavinagaraj
ಪ್ರಜಾವಾಣಿಯ ಪ್ರೇಮ ಪತ್ರ
ಪ್ರಜಾವಾಣಿಯ ಪ್ರೇಮ ಪತ್ರ ಸ್ಪರ್ದೆಗೆಂದು ನಾನು ಈ ಪ್ರೇಮ ಪತ್ರ ಬರೆದೆ ,ಫಲಿತಾಂಶದ ದಿನ ಗೆದ್ದ ಮೊದಲ ಮೂರು ಪತ್ರಗಳನ್ನ ನೋಡಿ ನನ್ನ ಪತ್ರ ಯಾವ ಲೆಕ್ಕಕ್ಕೂ ಇಲ್ಲ ಅನ್ನಿಸಿದರು ,ನನಗೆ ಈ ಪತ್ರದ ಮೇಲಿನ ಅಭಿಮಾನ ಕಡಿಮೆಯಾಗಲಿಲ್ಲ ಹಾಗಾಗಿ ಇಲ್ಲಿ ಪ್ರಕಟಿಸಿದ್ದೇನೆ .ಹಾಗೆಯೆ ಸ್ವಲ್ಪ ಅರ್ಥವೂ ಇದೆ ಆದರೆ ಅದು ಕೈ ಮೀರಿ ,ಸದ್ಯಕ್ಕೆ ಇದು ನನ್ನ ಹೊಸ ಕಾದಂಬರಿಯಲ್ಲಿ ಒಂದು ಪತ್ರವಾಗುತ್ತಿದೆ ಅಷ್ಟೆ ...