ಫೆಂಗ್ ಶುಯಿ ಲಾಂಚನಗಳಲ್ಲಿ ಪ್ರಾಣಿ ಪಕ್ಷಿಗಳು

ಫೆಂಗ್ ಶುಯಿ ಲಾಂಚನಗಳಲ್ಲಿ ಪ್ರಾಣಿ ಪಕ್ಷಿಗಳು

ಫೆಂಗ್ ಶುಯಿ ಲಾಂಚನಗಳಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳು:-------

ನಾನು ನನ್ನ ಹಿಂದಿನ ಬರವಣಿಗೆಯಲ್ಲಿ ಫೆಂಗ್ ಶುಯಿ ಎಂದರೇನು ?ಮತ್ತು, ಫೆಂಗ್ ಶುಯಿಯಲ್ಲಿ ದೇವರಂತೆ ಪೂಜ್ಯ ಭಾವನೆಯಿಂದ ನೋಡುವ ಆರಾಧಿಸುವ ಫುಕ್ ,ಲುಕ್, ಸಾಯು, ನಗುವ ಬುದ್ಧ ಮತ್ತು ಕೆಲವು ಸಂಕೇತಗಳ  ಬಗ್ಗೆ ಬರೆದಿದ್ದೆ.ಹಾಗೆ ಮಿಂಬಲೆಯಲ್ಲಿ ಫೆಂಗ್ ಶುಯಿ ಬಗ್ಗೆ ದೊಡ್ಡ ಗ್ರಂಥ ಬರೆಯುವಸ್ಟು ವಿಚಾರಗಳಿವೆ.ಆದರೆ ನನಗೆ ಸದ್ಯಕ್ಕೆ ಕುತೂಹಲ ಹುಟ್ಟಿಸಿದ ವಿಷಯವೆಂದರೆ ಪರಿಸರದಲ್ಲಿನ ಅನೇಕ ಪ್ರಾಣಿ ,ಪಕ್ಷಿಗಳನ್ನು ವಾಸ್ತುವಿನ ಅಂಶಗಳಾಗಿ ಪರಿಗಣನೆಗೆ ತೆಗೆದುಕೊಂಡಿರುವುದು.

ಫೆಂಗ್ ಶುಯಿ ಪ್ರಾಚೀನ  ಚೀನಾ ಇತಿಹಾಸದ ಕೊಡುಗೆ.ಮುಖ್ಯವಾಗಿ ಪ್ರತಿ ದಿನ ಸೂರ್ಯ ಹುಟ್ಟಿ ಮುಳುಗುವವರೆಗೂ ನಮ್ಮೆಲ್ಲರ   ಊಟ,ಸ್ನಾನ,ನಿದ್ದೆ,ವಿಶ್ರಾಂತಿ,ಭೋಗ,ಕೂಟ,,ಶೌಚ,ವೃತ್ತಿ,ಹವ್ಯಾಸ,ಪ್ರಯಾಣ,ಅಳು,ನಗು,ಹೊಸಬರ ಪರಿಚಯ,ಜಗಳ ಮುಂತಾದವು ಎಲ್ಲಾ ಇದ್ದೇ  ಇರುತ್ತವೆ.ಸ್ವಾಭಾವಿಕವಾಗಿ ಒಬ್ಬ ವ್ಯಕ್ತಿ ದಿನಂದಿನ ದಿನಗಳಲ್ಲಿ ಈ ಎಲ್ಲ ಕೆಲಸಗಳು ಶಿಸ್ತಿನಿಂದ  ನಡೆದು ನೆಮ್ಮದಿಯಿಂದಿರಲು ಇಚ್ಚಿಸುತ್ತಾನೆ.ಇದಕ್ಕೆ ಸರಿಯಾಗಿ ಸರಿಯಾದ ವ್ಯವಸ್ತಿತವಾದ ಶಿಸ್ತಿನಿಂದ ,ಆಯಾ ಕಾಲಕ್ಕೆ ಆಯಾ ಕೆಲಸಗಳು ಜರುಗಲೇಬೇಕು ಎಂಬ ನಿಯಮವನ್ನು , ಕಾರ್ಯರೂಪಕ್ಕೆ ತಂದು  ನೆಮ್ಮದಿ ಜೀವನ ರುಪಿಸಿಕೊಳ್ಳುತ್ತಾನೆ.ಇದೇ ಆಧಾರದ ಮೇಲೆ ಫೆಂಗ್ ಶುಯಿಯು ಕೆಲವು ಸಂಕೇತಗಳನ್ನು ರೂಪಿಸಿದೆ.ಅದೇ ಪ್ರಕಾರ ವಸ್ತುಗಳನ್ನು ತಯಾರಿಸಲಾಗುತ್ತದೆ.ಅಂಥಹ ವಸ್ತುಗಳನ್ನೇ ತಂದು ಮನೆಯಲ್ಲಿರಿಸಬೇಕು. ಏನು ಅಂದ್ರೆ  ಶುಯಿ ಶಾಸ್ತ್ರ ನಿರ್ದೇಶಿಸಿದ ದಿಕ್ಕು ಮತ್ತು ಸ್ಥಾನಗಳಲ್ಲಿ ಮಾತ್ರ ಇರಿಸಬೇಕು.ವಿಶೇಷತೆ ಇರುವುದು ಇಲ್ಲೇ ,ಆ ಸಂಕೇತ ಅಥವಾ ಪ್ರತಿಮೆಗಳು ಪ್ರಾಣಿ ಮತ್ತು ಪಕ್ಷಿಗಳ ರುಪದಲ್ಲಿರುತ್ತವೆ. ಅವು ಶೋಕೇಸ್ ವಸ್ತುಗಳಲ್ಲ .ಹಾಗೆ ಅವುಗಳನ್ನು ಹೂವು ಪತ್ರೆ ವಿಭೂತಿ ಕುಂಕುಮ ಬಳಿದು ಪೂಜೆ ಮಾಡುವಂತೆಯೂ ಇಲ್ಲ.ಮನಸ್ಸಿನಲ್ಲಿಯೇ ಅವುಗಳ ಇರುವಿಕೆಯನ್ನು ಆರಾಧಿಸಬೇಕು.

ಈ ವಿಚಾರ ನಮಗೆ ತಿಲಿದುಬರುವುದು ಪ್ರಾಚೀನ ಚೀನೀಯರು ಪ್ರಕೃತಿ ಪ್ರಿಯರು ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ಅವುಗಳ ಇರುವಿಕೆಯ ಮತ್ತು ಅವುಗಳ ಗುಣ,ಲಕ್ಷಣ,ಚಲನ,ವಲನ ಗಳ ಆಧಾರದ ಮೇಲೆ ಅವು ಮಾನವನ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿ ,ಆಳವಾಗಿ ಆಲೋಚಿಸಿ ಆ ಪ್ರಾಣಿ ಪಕ್ಷಿಗಳು ಅಥವಾ ಪ್ರತಿಮೆಗಳು ಮಾನವನ ಜೀವನಕ್ಕೆ ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಆಧಾರದ ಮೇಲೆ ಒಳ್ಳೆಯದು ಮತ್ತು ಕೆಟ್ಟದು ಎಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು  ತಿಳಿಯುತ್ತದೆ.ಹಗೆ ಮಿಂಬಲೆಯಲ್ಲಿ ಫೆಂಗ್ ಶುಯಿ ವಾಸ್ತುವಿನಲ್ಲಿ  ನನಗೆ ಸಿಕ್ಕ ಕೆಲವೊಂದು ಪ್ರಾಣಿ ,ಪಕ್ಷಿಗಳ  ನಿಜರೂಪದ ಮತ್ತು ಪ್ರತಿಮೆಗಳ ಪ್ರಭಾವ ಹೇಗೆ ಇದೆ ಎಂಬುದನ್ನು ಈ ಕೆಳಗೆ ತಿಳಿಸಿದ್ದೇನೆ.
 

1 ). ಆನೆಗಳು ---

 

ಆನೆಯು ಫಲವತ್ತತೆ, ವಂಶಾಭಿವೃಧಿ,ಅದ್ರುಸ್ಟದ ಸಂಕೇತ .ಮಕ್ಕಳಿಲ್ಲದವರು ಹಾಗು ಮಗು ಬೇಕೆನ್ನುವ ದಂಪತಿಗಳು ತಮ್ಮ ಮಲಗುವ ಹಾಸಿಗೆಯ ಮಗ್ಗುಲಿಗೆ ಒಂದು ಜೊತೆ ಆನೆ ವಿಗ್ರಹ ಗಳನ್ನು ಇರಿಸಿಕೊಳ್ಳಬೇಕು.ಮನೆಯ ಮುಖ್ಯ ಬಾಗಿಲಿನ ಒಳಗೆ ಇಲ್ಲವೆ ಹೊರಗೆ ಒಂದು ಜೊತೆ ಆನೆಗಳನ್ನಿರಿಸುವುದು ,ಜೊತೆಗೆ ಆನೆಗಳಹಿಂದೆ ಬೆಲೆಬಾಳುವ ವಸ್ತುಗಳನ್ನಿರಿಸಿದ ಅಲಂಕೃತ ಬುಟ್ಟಿಯನ್ನಿರಿಸಿದರೆ ಶುಭ, ಸಂಪತ್ತು ಮತ್ತು ಐಶ್ವರ್ಯ ಜೊತೆಯಲ್ಲಿ ಅದೃಸ್ಟ ಬರುವುದು ಎಂದು ನಂಬಲಾಗುತ್ತದೆ.
 

2).ಮೀನುಗಳು ---
 

 
-ಮೀನುಗಳು ಸಂಪತ್ತು ವೃಧಿಗೆ ,ಶುಭ ಶಕುನಕ್ಕೆ ಸಂಕೇತವಾಗಿವೆ.ಫೆಂಗ್ ಶುಯಿ ಮನೆಯಲ್ಲಿ  ಅಕ್ವೇರಿಯುಂ ಇಟ್ಟುಕೊಳ್ಳಲು ಹೇಳುತ್ತದೆ. ಮೀನುಗಳನ್ನು  ಒಂದು ಗಾಜಿನ ಪಾತ್ರೆಯಲ್ಲಿಡಬಹುದು.ಅವುಗಳಲ್ಲಿ 8 ಕೆಂಪು ಅಥವಾ ಹೊಂಬಣ್ಣದ ಮೀನುಗಳು ಹಾಗೂ ಒಂದು ಕಪ್ಪು ಬಣ್ಣದ ಮೀನು ಇರಬೇಕು.ಯಾವುದಾದರೊಂದು ಗೋಲ್ಡ್ ಫಿಷ್ ಸತ್ತರೆ ಆಜಾಗದಲ್ಲಿ ಇನ್ನೊoದು ಅದೇ ಬಣ್ಣದ ಮೀನನ್ನು ತಂದು ಅಕ್ವೀರಿಯುಂ ಸೇರಿಸಬೇಕು.ಗೋಲ್ಡ್ ಫಿಶ್ ಸತ್ತರೆ ಅದು ತನ್ನೊಂದಿಗೆ ಮನೆಯ ದುರದ್ರುಸ್ತವನ್ನು ತನ್ನೊದಿಗೆ ಒಯ್ದು ಬಿಡುತ್ತದೆ.ಹೃದಯ ತೊಂದರೆ ಯಿರುವವರು ಈ ಮೀನುಗಳ ಆಟ ನೋಡುತ್ತಾ ಕಾಲ ಕಳೆದರೆ ರೋಗ ಬಾಧೆ ಕಡಿಮೆಯಗುವದು ಎಂದು ಹೇಳಲಾಗುತ್ತದೆ.

ಅಕ್ವೇರಿಯಂ ಇಡಲು ನಡುಮನೆ ಒಳ್ಳೆಯ ಜಾಗ ,ಪೂರ್ವ ,ಉತ್ತರ,ಆಗ್ನೀಯ ದಿಕ್ಕುಗಳಲ್ಲಿರಿಸಬಹುದು.ನೆನಪಿರಲಿ ನೀರು ಯಾವಾಗಲು ಶುಚಿಯಗಿರುವಂತೆ ನೋಡಿಕೊಳ್ಳಬೇಕು.
 

ಎರೆಡು ಮೀನುಗಳ ಸಂಕೇತ -----

ಇದು ಗಂಡ ಹೆಂಡತಿಯರ ಪ್ರೀತಿಯ ಸಂಕೇತ ಕುಟುಂಬದಲ್ಲಿ ಸಾಮರಸ್ಯ ಹಿತ ಹಾಗು ಒಗ್ಗಟ್ಟನ್ನು ಇದು ಸೂಚಿಸುತ್ತದೆ.ಇದು ಶುಭಕಾರಿ ಚಿ (ಚೈತನ್ಯ ) ಯನ್ನು ಹೆಚ್ಚಿಸುತ್ತದೆ.ಇದು ರಕ್ಷಣಾ ಸಂಕೇತವೂ ಹೌದು.ಇದು ಇದ್ದ ಕಡೆ ವಿವಾಹ ವಿಚೇದನವು ಸಂಭವಿಸುವುದಿಲ್ಲ.ಚೀನೀಯರು ಅದ್ರುಸ್ತ ಹೆಚ್ಚಿಸಿಕೊಳ್ಳಲು ,ಸಿರಿ  ಸಂಪತ್ತು ಹೆಚ್ಚಾಗಿಸಲು ಬಗೆ ಬಗೆಯ ಮೀನುಗಳನ್ನು ಸಾಕುತ್ತಾರೆ.
 

ಡ್ರ್ಯಾಗನ್ ಫಿಶ್ -----

ಇದನ್ನು ರಕ್ಕಸ ಮೀನು ,(ಆರೋವಾನ) ,ಫೆಂಗ್ ಶುಯಿ ಮೀನು ಎಂದು ಕರೆಯುತ್ತಾರೆ.ಜೀವಂತ ಡ್ರ್ಯಾಗನ್ ಫಿಶ್ ನ್ನು ಅಕ್ವೀರಿಯುಂ ನಲ್ಲಿ ತಂದಿಟ್ಟುಕೊಳ್ಳಬೇಕು.ಈ ಮೀನು ಚಟುವಟಿಕೆಯಿಂದ ಆಡುತ್ತಿರಬೇಕು ಮೀನಿನ ಚರ್ಮ,ಹುರುಪೆಗಳು ನಸುಗೆಂಪು,ಇಲ್ಲವೇ ಹೊನ್ನಿನ ,ಬೆಳ್ಳಿಯ ಬಣ್ಣದಿಂದ  ಹೊಳೆಯುತ್ತಿರಬೇಕು.ಈ ಮೀನು ಮಂಕಾದರೆ ಪರಿಣಾಮಕಾರಿಯಲ್ಲ.ಈ ರಕ್ಕಸ ಮೀನು ಲಭ್ಯವಿಲ್ಲದಿದ್ದಲ್ಲಿ ಅದರ ಮಾದರಿಯ ಚಿತ್ರ ಇಲ್ಲವೇ ವಿಗ್ರಹವನ್ನಿರಿಸಬಹುದು.ಮನೆಗಳ ಅಥವಾ ಕಛೇರಿಗಳ ಉತ್ತರ,ಪೂರ್ವ,ಅಥವಾ ಆಗ್ನೀಯ ಭಾಗಗಳಲ್ಲಿ ಈ ಡ್ರ್ಯಾಗನ್ ಫಿಶ್  ಇರಿಸಬಹುದು.
 

ಕುದುರೆ -----------

ಇದು ಘನತೆ ,ಗಾಭೀರ್ಯ,ಉದಾತ್ತತೆಯ ಸಂಕೇತ .ಯಾಂಗ್ ನ ಸ್ವರೂಪ .ಕಪ್ಪ ಕಾಣಿಕೆಗಳನ್ನು ಹೊತ್ತು ಬರುವ ಬಿಳಿ ಕುದುರೆ ತುಂಬಾ ಶ್ರೇಸ್ಟವಾದುದು,ಶುಭಾಕರವಾದುದು.ಒಬ್ಬ ವ್ಯಕ್ತಿಯ ಮಾರ್ಗದರ್ಶನದಲ್ಲಿ ಅದು ನಡೆದುಕೊಂಡು ಹೋಗುವನ್ತಿರಬೇಕು.ಸವಾರರಿರಬಾರದು,ಕುದುರೆ ಬಣ್ಣ ಬಿಳಿಯದೇ ಇರಬೇಕು.ಕುದುರೆ ಪ್ರತಿಮೆ ಅಥಾ ಪೋಸ್ಟರ್ ನ್ನು ಮನೆ ಅಥವಾ ಕಚೇರಿಯ ದಕ್ಷಿಣ ಭಾಗದಲ್ಲಿರಿಸಬಹುದು.
 

ಮುಂಗುಸಿ----------

ಮುಂಗುಸಿ ಸಿರಿ,ಸಂಪಾದನೆಯ ಹಾಗು ದುರದ್ರುಸ್ತವನ್ನು ಹೊರಹಾಕಿ,ಅದ್ರುಸ್ತ ಹೆಚ್ಚಿಸುವದು.ಚಿನ್ನದ ಗಟ್ಟಿಗಳಮೇಲೆ ಕುಳಿತಿರುವ ಹಾಗೆ,ಮತ್ತು ಇದು ತನ್ನ ಬಾಯಿಂದ ಒಡವೆ ,ರತ್ನ ಶಿಲೆಗಳನ್ನು ತರುವ ರೀತಿ ವಿಗ್ರಹಗಲಿರುತ್ತವ್ವೆ.ಈ ಪ್ರತಿಮೆಯು ಮನೆಯಲ್ಲಿ ಆಭರಣಗಳು ,ಐಶ್ವರ್ಯ ವನ್ನು ಹೆಚ್ಚಿಸಲು ಬೇಕಾದ ಚೈತನ್ಯ ನೀಡಲು ವಾಸದ ಕೋಣೆಯಲ್ಲೂ ಇದನ್ನು ಪ್ರದರ್ಶಿಸಬಹುದು.
 

ಫುನಾಯಿಗಳು----

 
 
ಫೆಂಗ್ ಶುಯಿ ಫುನಾಯಿಗಳು ಸಿಂಹಗಳಂತೆ ಕಾಣುತ್ತವೆ.ಮನೆಯೊಳಗೇ ದುರುದ್ದೇಶದಿಂದ ಬರುವ ಜನಾರನ್ನು ತಡೆಯಲು ,ಕೆಟ್ಟದ್ದನ್ನು ತೊಡೆದುಹಾಕಲು,ಮನೆಯನ್ನು ಋಣಾತ್ಮಕ ಶಕ್ತಿಗಳಿಂದ ಕಾಪಾಡಲು,ಈ ಪ್ರತಿಮೆಗಳನ್ನು ಮನೆಯ ಹೆಬ್ಬಾಗಿಲ ಹೊರಗಡೆ ಇಡುವುದು ಸೂಕ್ತ.ಎತ್ತರದ ಜಾಗದಲ್ಲಿ ಫುನಾಯಿಗಳ ಜೋಡಿ ಇರಿಸಬೇಕು.
 

ಮೂರು ಕಾಲು ಕಪ್ಪೆ----

ಮೂರೂ ಕಾಲು ಕಪ್ಪೆ ತುಂಬಾ ಅದ್ರುಸ್ತ ದಾಯಕ ,ಅದು ತನ್ನ ಬಾಯಲ್ಲಿ ಒಂದು ಅಥವಾ ಮೂರು ನಾಣ್ಯಗಳನ್ನು ಇಟ್ಟುಕೊಂಡಿರುತ್ತದೆ.ಇದನ್ನು ಮುಖ್ಯ ದ್ವಾರದ ಬಳಿ ಕಪ್ಪೆಯು ಮನೆಯೊಳಗೇ ನೋಡುತ್ತಿರುವಂತೆ ಇರಿಸಬೇಕು.ಈ ಕಪ್ಪೆಯನ್ನು ಆದಸ್ತು ಶುಚಿಯಗಿದಬೇಕು .ಇದರ ಮೇಲೆ ಧೂಳು ಇರದಂತೆ ಮೆತ್ತನೆಯ ಬಟ್ಟೆಯಿಂದ ಒರೆಸುತ್ತಿರಬೇಕು.
 

ಲೋಹದ ಆಮೆ-----
 

 
ಇದು ದೀರ್ಘಯುಶ್ಯದ ,ದೀರ್ಘ ಅವಕಾಶಗಳ,ದೀರ್ಘ ಮುನ್ನಡೆಯ ಸಂಕೇತ.ಇದು ನಾವು ಜೀವನದಲ್ಲಿ ಮುಂದೆ ಬರಲು ಹೆಚ್ಚೆಚ್ಚು ಅವಕಾಶಗಳನ್ನು ಕಲ್ಪಿಸುತ್ತದೆ.ಲೋಹದಿಂದ ತಯಾರಿಸಿರುವ ಆಮೆಯ ಪ್ರತಿಮೆಯನ್ನು ನೀರು ತುಂಬಿದ ಪಾತ್ರೆ ಯಲ್ಲಿರಿಸಿ ಮನೆಯ ಉತ್ತರ ಭಾಗದಲ್ಲಿರಿಸಿ.
 

ಡ್ರ್ಯಾಗನ್ ಆಮೆ (ರಕ್ಕಸ ಆಮೆ)------

ಇದು ಆಮೆ ಮತ್ತು ಡ್ರಾಗನ್ ನ ಸಂಯೋಗವಾಗಿದೆ.ಇದು ಆಮೆಯ ಶರೀರ,ಡ್ರ್ಯಾಗನ್ ತಲೆಯನ್ನು ಹೊಂದಿರುತ್ತದೆ.ಇದು ನಾಣ್ಯಗಳ ಗಟ್ಟಿಗಳ ಹಾಸಿಗೆಯ ಮೇಲೆ ಕುಳಿತಿದ್ದರೆ ಸಿರಿ ಸಂರುಧ್ಧಿ ಯನ್ನು ಸೂಚಿಸುತ್ತದೆ.ಬಾಯಲ್ಲಿರುವ ನಾಣ್ಯ ಹಣದ ಹರಿವು ಹೆಚ್ಚುವುದನ್ನು ಸೂಚಿಸುತ್ತದೆ.ಮೇಲೆ ಕೂತಿರುವ ಮರಿ ಆಮೆಯು ವಂಶಜರ ಅದ್ರುಸ್ತದ ಸಂಕೇತ .ಈ ಪ್ರತಿಮೆಯನ್ನು ಮನೆ ಅಥವಾ ಕಛೇರಿಗಳ ಪೂರ್ವ ಅಥವಾ ಉತ್ತರ ಭಾಗದಲ್ಲಿದಬೇಕು .
 

ಹಸು ಮತ್ತು ಗೋವು-----
 

ಫೆಂಗ್ ಶುಯಿ ಯಲ್ಲಿ ಹಸು ಮತ್ತು ಗೋವುಗಳ ಪ್ರತಿಮೆಯು ಅದ್ರುಸ್ಟದಾಯಕ.ಆಗ್ನೇಯ ದಿಕ್ಕಿನಲ್ಲಿ  ಈ  ಚಿತ್ರ ,ಪ್ರತಿಮೆ ಇದಬಹುದು.ನಾಣ್ಯಗಳು ಮತ್ತು ಚಿನ್ನದ ಗಟ್ಟಿಗಳ ಮೇಲೆ ಕುಳಿತಿರುವ ಹಸುವಿನ ಪ್ರತಿಮೆಯನ್ನು  ಮನೆ ಅಥವಾ ಕಛೇರಿ ಎಲ್ಲಿಯಾದರೂ ಇಡಿ, ಇದು ಒಳ್ಳೆಯ ಅದ್ರುಸ್ತ ವನ್ನು ಕೊಡುತ್ತದೆ .
 

ಜೋಡಿ ಸಿಂಹಗಳು-------

 
ಫೆಂಗ್ ಶುಯಿ ಪ್ರಕಾರ ಸಿಂಹಗಳು ಮನೆ ,ಮತ್ತಿತರ ಸ್ಥಳಗಳನ್ನು ರಕ್ಷಿಸುವ ,ಕೆಟ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುವ ,ರಕ್ಷಿಸುವ ಕೆಲಸ ಮಾಡುತ್ತವೆ.ಇವುಗಳನ್ನು ಮನೆಯಲ್ಲಿಯೂ ಅಲ್ಲದೆ ದೇವಾಲಯಗಳು,ಅರಮನೆಗಳಲ್ಲಿಯು ಇಡುತ್ತಾರೆ.ಬಾಗಿಲಿನ ಎರೆಡೂ ಪಕ್ಕಗಳಲ್ಲಿ ಜೋಡಿ ಸಿಂಹಗಳನ್ನಿರಿಸಬಹುದು .ಸಾಮಾನ್ಯವಾಗಿ ಸಿಂಹಗಳ ಮುಂದಿನ ಪಾದಗಳು ನೆಲದ ಮೇಲಿರುವಂತೆ ತೋರಿಸಲಾಗುತ್ತದೆ.ಪಿಂಗಾಣಿಯಿಂದ ಮಾಡಿದ ವಿಗ್ರಹಗಳನ್ನು ಮನೆಯ ಮುಂದೆಯೂ ಇರಿಸಿಕೊಳಬಹುದು.
 

ಕೆಲೂನ್-------

ಈ ವಿಗ್ರಹ ನೋಡಲು ಸಿಂಹದ ತಲೆಯನ್ನು ಹೊಂದಿರುತ್ತದೆ,ಕೊಂಬುಗಳಿರುತ್ತವೆ,ಸೊಂಟದ ಭಾಗ ಜಿಂಕೆಯ ಶರೀರ  ಹೋಲುತ್ತದೆ.ಮೇಕೆ ಕಾಲುಗಳಿರುತ್ತವೆ ,ಇದನ್ನು ಕಿಮಿರ ಎಂದು ಕರೆಯುವರು.ಇದರ ಬೆನ್ನಿನ ಮೇಲೆ 3 ನಾಣ್ಯಗಳನ್ನಿರಿಸಿರುತ್ತಾರೆ.ಮುಖ್ಯ ದ್ವಾರದ ಎಡ ಭಾಗದಲ್ಲಿ ಇದನ್ನು ಇರಿಸಲಾಗುತ್ತದೆ.ಕೆಟ್ಟ ಶಕ್ತಿಗಳು ಮನೆ ಪ್ರವೀಶಿಸದಂತೆ ತಡೆಯುತ್ತದೆ.ಕೆಲೂನ್ ನ ಮೂಲ ರೂಪದ ರೀತಿ ಇನ್ನೊಂದು ರೂಪವಿದೆ.ಈ ಎರೆಡು ವಿಗ್ರಹಗಳನ್ನು ಜೋತೆಗಿರಿಸಿ ಪೂಜಿಸುವುದು ಪುಣ್ಯ ಬರುವದು ಎಂದು ನಂಬಲಾಗುತ್ತದೆ.ಈ ಎರಡನೆಯ ತದ್ರೂಪಿ ಕೆಲೂನ್ ವಾಸ್ತು ದೋಷ ಪರಿಹರಿಸುತ್ತದೆ.
 

ಚಿಲಿನ್--------- 

 
ಇದು ಡ್ರ್ಯಾಗನ್ ತಲೆಯನ್ನು ,ಕುದುರೆ ಶರೀರವನ್ನು ಹೊಂದಿದೆ.ಇದು ಹಳದಿ ನದಿಯಿಂದ ಎದ್ದುಬಂದದ್ದು ,ಬೆನ್ನಿನ ಮೇಲೆ ನಿಗೂಢ ಮಚ್ಚೆ ಹೊಂದಿರುತ್ತದೆ ಎಂದು ಹೇಳಲಾಗುತ್ತದೆ..ಇದು ಸಮೃದ್ಧಿ ,ಯಶಸ್ಸು,ದೀರ್ಘಾಯಸ್ಸು,ಮಾದರಿಮಕ್ಕಳು ಇವುಗಳ ಸಂಕೇತವೇ ಚಿಲಿನ್.ಮನೆಯ ಹೆಬ್ಬಾಗಿಲಿನ ಸಮೀಪ ಇದನ್ನಿರಿಸಬಹುದು.ಇದು ವೃತ್ತಿಯಲ್ಲಿ ಬಡ್ತಿ,ಸೇನೆಯಲ್ಲಿರುವವರಿಗೆ ಶುಭದಾಯಕ.  ಈ ಪ್ರತಿಮೆಯನ್ನು ಹಿತ್ತಳೆಯಿಂದ  ಮಾಡಿರಬೇಕು.ಜೋಡಿಯಾಗಿ ಈ ಪ್ರತಿಮೆ ಇರಿಸಬೇಕು.
 

ಡ್ರ್ಯಾಗನ್------

ಇದು ಕಲ್ಪನೆಯ ಪ್ರಾಣಿ  ,ಯಾಂಗ್ ಶಕ್ತಿಯ ಸಂಕೇತ .ಮನೆ ಅಥವಾ ಕಚೇರಿಯಲ್ಲಿ ಪೂರ್ವ ಭಾಗದಲ್ಲಿರಿಸಬಹುದು.ಮನೆಯಲ್ಲಿ ಚೈತನ್ಯ ತುಂಬಲು ಈ ಪ್ರತಿಮೆ ಸಹಕಾರಿಯಾಗಿದೆ.ಪೂರ್ವದ ವಸ್ತು ಮರ ಮರದ ಡ್ರ್ಯಾಗನ್ ತುಂಬಾ ಒಳ್ಳೆಯದು.ಪಿಂಗಾಣಿ ,ಹರಲಿನಲ್ಲಿಯು ಇಡಬಹುದು.ಲೋಹದ ಡ್ರ್ಯಾಗನ್ ಅಪಾಯಕಾರಿ.
 

ಫೀನಿಕ್ಸ್-ಮತ್ತು ಡ್ರ್ಯಾಗನ್------

ಫೀನಿಕ್ಸ್-ಒಂದು ಕಾಲ್ಪನಿಕ ಪಕ್ಷಿ.ಬಯಕೆ ಈಡೇರಿಸುವ ಅದ್ರುಸ್ತದ ಸಂಕೇತ.ಇದು ಅವಕಾಶಗಳನ್ನು,ಕೀರ್ತಿಯನ್ನು ,ಹಾಗು ಮಾನ್ಯತೆಯನ್ನು ತರುವುದು.ಮನೆ ಇಲ್ಲವೇ ಕಚೇರಿಯಲ್ಲಿ ದಕ್ಷಿಣ ಮೂಲೆಯಲ್ಲಿ ಫೀನಿಕ್ಸ್ ಪ್ರತಿಮೆ ಅಥವಾ ಡ್ರ್ಯಾಗನ್ ಚಿತ್ರ ಇಡಬಹುದು. ಫೀನಿಕ್ಸ್-ಮತ್ತು ಡ್ರ್ಯಾಗನ್ ಒಟ್ಟಿಗೆ ಇದ್ದರೆ  ತುಂಬಾ ಸಮರ್ಥಶಾಲಿ  ಎಂದು ಫೆಂಗ್ ಶುಯಿ ಹೇಳುತ್ತದೆ .ಇದು ಯಶಸ್ವಿ ವಿವಾಹ ,ಸಮೃಧಿ,ಮತ್ತು ಬಹು ಸಂತಾನ,ವಿವಾಹಿಕ ಬಂಧನ ಗಟ್ಟಿಯಾಗುತ್ತದೆ,ಧನ ,ಧಾನ್ಯ ,ಅದ್ರುಸ್ತ ಹೆಚ್ಚುತ್ತದೆ.ಡ್ರ್ಯಾಗನ್ –ಪುರುಷ(ಯಾಂಗ್) ಹಾಗು ಫಲವತ್ತತೆಯ ಸಂಕೇತವಾದರೆ ,ಫೀನಿಕ್ಸ್ ಸ್ತ್ರೀ(ಯಿನ್) ಸೌಂದರ್ಯದ ಸಂಕೇತ.ಡ್ರ್ಯಾಗನ್ ಕುಟುಂಬದ ಯಜಮಾನ.

ಈ ಜೋಡಿಯಾ ಸಂಕೇತವನ್ನು ಕುಟುಂಬದ ಮುಖ್ಯಸ್ತನಿಗೆ ಅದ್ರುಸ್ಟಹೆಚ್ಚಿಸುವ ಸಲುವಾಗಿ ಮನೆಯ ವಾಯುವ್ಯ(NW)ಭಾಗದಲ್ಲಿರಿಸಬೇಕು.ಮನೆ ಒಡತಿಯ ಅದ್ರುಸ್ತ ಹೆಚ್ಚಿಸಲು ಮನೆಯ ನೈಋತ್ಯ (SW)ಭಾಗದಲ್ಲಿರಿಸಬೇಕು.ಅದೇ ಪೂರ್ವ ಭಾಗದಲ್ಲಿರಿಸಿದರೆ ಮನೆಯ ಎಲ್ಲ ಕುಟುಂಬದ ಸದಸ್ಯರು ಆರೋಗ್ಯದಿಂದಿರುತ್ತಾರೆ.ದಕ್ಷಿಣ ದಲ್ಲಿರಿಸಿದರೆ ಅವಕಾಶಗಳು ಮತ್ತು ಮಾನ್ಯತೆಗಳು ,ಗೌರವಾದರಗಳು ಒದಗಿ ಬರುತ್ತವೆ.
 

ಜೋಡಿ ಕೊಕ್ಕರೆಗಳು------

 
ಕೊಕ್ಕರೆ ದೀರ್ಘಯುಷ್ಯ ,ಅಮರತ್ವದ ಸಂಕೇತ,ಮನೆಯಲ್ಲಿ ಶಾಂತಿಯುತ ವಾತಾವರಣ ತಂದುಕೊಡುವ ವಸ್ತುವಾಗಿ ನೋಡಲಾಗುತ್ತದೆ. ಫೆಂಗ್ ಶುಯಿ  ಕೊಕ್ಕರೆಗಳ ಬಣ್ಣ ಕಪ್ಪು,ಬಿಳಿ,ಹಳದಿ,ಮತ್ತು ನೀಲಿ  ಇರುತ್ತವೆ.ಕಪ್ಪು ಕೊಕ್ಕರೆಯು ದೀರ್ಘಾಯುವಿನ ಸಂಕೇತ ಎಂದು ಗುರುತಿಸಿಕೊಂಡಿದೆ.
 

ಹಾರುವ ಕೊಕ್ಕರೆ --------

ಈ ಪ್ರತಿಮೆಯು ರೆಕ್ಕೆ ಬೀಸಿ ಹಾರಿಹೋಗುವಂತೆ ಇರುತ್ತದೆ.ಆಕಾಶವನ್ನು ದಿಟ್ಟಿಸಿ ನೋಡುತ್ತಿರುತ್ತದೆ.ಇದು ಬುಧಿವನ್ತಿಕೆಯ ಸಂಕೇತವು ಹೌದು. ಬಿಳಿಬಣ್ಣದ  ಒಂಟಿ ಕೊಕ್ಕರೆಯನ್ನಿರಿಸಿದರೆ ಅದು ಕುಟುಂಬ ಸದಸ್ಯರ ನಡುವೆ ಹಿತ  ಕಾಪಾಡುವದು,ಜೋಡಿ ಬಿಳಿ ಕೊಕ್ಕರೆಗಳನ್ನಿರಿಸಿದರೆ ಮನೆ ಯಜಮಾನ ಯಜಮಾನಿಯ ನಡುವೆ ಒಗ್ಗಟ್ಟು ಇದ್ದು ಕುಟುಂಬ ಸಲೀಸಾಗಿ ಸಾಗುತ್ತದೆ.ಈ ಕೊಕ್ಕರೆ ಪ್ರತಿಮೆಗಳನ್ನು ಅಡುಗೆ ಮನೆ ಅಥವಾ ಶೌಚ ಗಳಲ್ಲಿರಿಸಬಾರದು.
 

ಲವ್ ಬರ್ಡ್ಸ್-(ಮ್ಯಾಂಡರಿನ್ )-------

ಇವು ಪ್ರೀತಿ ಪ್ರಣಯಗಳ ಸಂಕೇತ.ನವ ವಿವಾಹಿತ ಜೋಡಿಗಳಲ್ಲಿ ಪ್ರೀತಿ ಹೆಚ್ಚಿಸಲು ನೈರುತ್ಯ ದಿಕ್ಕಿನಲ್ಲಿ ಲವ್ ಬರ್ಡ್ಸ್ ಪಂಜರಗಳನ್ನಿರಿಸುತ್ತಾರೆ.ಇವು  ಬೆಸ ಸಂಖೆಯಲ್ಲಿರಬಾರದು , ಸರಿ ಸಂಖ್ಯೆ ಗಳಲ್ಲಿರಬೇಕು .ಒಂದು ಗಂಡು ಮತ್ತೊಂದು ಹೆಣ್ಣು ಜೋಡಿಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು.ಈ ಮ್ಯಾಂಡರಿನ್  ಜೋಡಿಗಳಲ್ಲದೆ ಪ್ರಣಯ ಪಕ್ಷಿಗಳ ಪೋಸ್ಟರ್ ಗಳನ್ನು ಕೂಡ ಹಾಕಬಹುದಾಗಿದೆ.ಅವಿವಾಹಿತರಿಗೆ ಇದರ ಪ್ರಭಾವದಿಂದ ಮದುವೆ ಯೋಗ ಬರುವದು.
 
 

 
 

Rating
No votes yet