ಫೆಬ್ರವರಿ ೨೧ -ನಾಶವಾಗುತ್ತಿರುವ ಭಾಷೆಗಳು- ಕನ್ನಡ

ಫೆಬ್ರವರಿ ೨೧ -ನಾಶವಾಗುತ್ತಿರುವ ಭಾಷೆಗಳು- ಕನ್ನಡ

http://www.ethnolog… ಎಂಬ ತಾಣದಲ್ಲಿ ಇದೀಗ ಜಗತ್ತಿನ ಭಾಷೆಗಳ ಪೈಕಿ ಯಾವ ಯಾವ ಭಾಷೆಗಳು ವಿನಾಶದ ಅಂಚಿನಲ್ಲಿವೆ ಎಂಬ ಬಹು ವಿಸ್ತೃತ ಮಾಹಿತಿ ಇದೆ. ಆಸಕ್ತರು ನೋಡಿ. ಸದ್ಯದಲ್ಲೆ ಅಲ್ಲಿ ಸಂಗ್ರಹಿಸಿದ ವಿವರಗಳನ್ನು ಈ ಬ್ಲಾಗ್ ನಲ್ಲಿ ನಿಮ್ಮೊಡನೆ ಹಂಚಿಕೊಳ್ಳುವೆ. ಭಾಷೆಗಳು ಕಣ್ಮರೆಯಾಗುವುದೆಂದರೆ ಬದುಕಿನ ವೈವಿಧ್ಯವೇ ಕಳೆದುಹೋದಂತೆ. ನೆನಪಿರಲಿ, ಕನ್ನಡ ಕೂಡ ಈ ಸರ್ವೆ ಪ್ರಾಕಾರ ಅಪಾಯದ ಅಂಚಿನಲ್ಲಿರುವ ಭಾಷೆ. ಈ ಬಗ್ಗೆ ತಿಳಿಯಲು ಕುತೂಹಲವಿದೆಯೇ? ಶ್ರೀ ಸುಗತ ಅವರು ಬರೆದಿರುವ ಎಕುಶೆ ಫೆಬ್ರವರಿ ಪುಸ್ತಕ ನೋಡಿ. ಫೆಬ್ರವರಿ ೨೧ ಈ ದಿನಾಂಕವನ್ನು ಜಾಗತಿಕ ಮಾತೃಭಾಷಾ ದಿನ ಎಂದು ಯು ಎನ್ ಘೋಷಿಸಿದೆ. ಆ ದಿನದ ಮಹತ್ವ ಗೊತ್ತೆ? ಹಿಂದೆ ಪಾಕೀಸ್ತಾನದ ಭಾಗವಾಗಿದ್ದ ಬಂಗ್ಲಾ ದೇಶದಲ್ಲಿ ಫೆಬ್ರವರಿ ೨೧, ೧೯೭೧ ಒಂದು ಬಹುದೊಡ್ಡ ಭಾಷಾ ಆಂದೋಲನ ನಡೆಯಿತು. ಪಾಕಿಸ್ತಾನವು ಉರ್ದು ಒಂದೇ ಆಡಳಿತ ಮತ್ತು ಶಿಕ್ಷಣ ಭಾಷೆ ಎಂದು ಘೋಷಿಸಿದ್ದನ್ನು ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳು ಜನ ಸಾಮಾನ್ಯರು ಎಲ್ಲ ಬಲು ದೊಡ್ಡ ಪ್ರತಿಭಟನೆ ನಡೆಸಿದರು, ಡಾಕಾದಲ್ಲಿ. ಪಾಕೀಸ್ತಾನದ ಸೈನ್ಯ ಅನೇಕ ನೂರು ಪ್ರತಿಭಟನೆಕಾರರನ್ನು ಕೊಂದಿತು. ತಮ್ಮ ಮಾತೃಭಾಷೆಯನ್ನು ಕಾಪಾಡಿಕೊಳ್ಳಬೇಕೆಂಬ ಹಂಬಲವೂ ಬಂಗ್ಲಾ ಸ್ವತಂತ್ರ ಹೋರಾಟದ ಒಂದು ಕಾರಣ. ಅಂದು ಆದ ಭಾಷಿಕ ದಮನ ಮುಂದೆ ಯುಎನ್ ಒದ ಗಮನ ಸೆಳೆದು ಫೆಬ್ರವರಿ ೨೧ ಅನ್ನು ಜಾಗತಿಕ ಮಾತೃಭಾಷಾ ದಿನವನ್ನಾಗಿ ಘೋಷಿಸಿತು. ಇಂಗ್ಲಿಷಿನ ಪ್ರಭಾವದಿಂದ ಅಸಂಖ್ಯಾತ ಯೂರೋಪಿಯನ್ ಭಾಷೆಗಳು ತತ್ತರಿಸಿವೆ. ತಮ್ಮ ಭಾಷೆಗಳನ್ನು ಉಳಿಸಿಕೊಳ್ಳಲು ಹೋರಾಡುತ್ತಿವೆ. ಕನ್ನಡ ತನಗೆ ಜಾಗತಿಕವಾಗಿ ಬಂದಿರುವ ಅಪಾಯವನ್ನು ಗ್ರಹಿಸಲಾರದಾಗಿದೆ ಅನ್ನಿಸುತ್ತದೆ.
Rating
No votes yet

Comments