ಫೆಬ್ರವರಿ 14
ಸೂರ್ಯನ ಪ್ರಕಾಶಮಾನವಾದ ಕಿರಣಗಳು ಕಿಟಕಿಯ ಸರಳುಗಳನ್ನು ಭೇಧಿಸಿಕೊಂಡು ಬಂದು ಕಣ್ಣು ಚುಚ್ಚಿದಾಗಲೇ ಓಹ್...ಬೆಳಗಾಯಿತು ಗೊತ್ತಾಗಿದ್ದು. ಆ ಸೂರ್ಯನಿಗೆ ಅದೇನು ಆತುರವೋ ಗೊತ್ತಿಲ್ಲ, ಇಷ್ಟು ಬೇಗ ಎದ್ದು ಬಿಡುತ್ತಾನೆ. ಅಥವಾ ಅವನಿಗೂ ಯಾರಾದರೂ ಅಲಾರಂ ಇಟ್ಟಿರುತ್ತಾರ??!!. ಇಷ್ಟು ವರ್ಷದಿಂದ ಹೆಚ್ಚುಕಡಿಮೆ ಒಂದೇ ಸಮಯಕ್ಕೆ ಎದ್ದು ಬಿಡುತ್ತಾನೆ. ಒಂದು ದಿವಸವಾದರೂ ನಿಧಾನವಾಗಿ ಏಳಬಾರದ? ಹಾಗೆಂದು ದಿನವೂ ಅಂದುಕೊಳ್ಳುತ್ತೇನೆ...ಆದರೆ ಅವನು ಮಾತ್ರ ಬದಲಾಗಿಲ್ಲ. ಹೌದು ಕಾಲ ಬದಲಾಯಿತು, ಜನ ಬದಲಾದರು, ಜನರ ಮನಸುಗಳೂ ಬದಲಾಯಿತು. ಆದರೆ ಅವನು ಮಾತ್ರ ನಿಶ್ಚಲ.
ಎದ್ದು ಒಮ್ಮೆ ಸಮಯ ನೋಡಿದರೆ ಇನ್ನೂ ಎಂಟೂವರೆ ಘಂಟೆ ತೋರಿಸುತ್ತಿತ್ತು. ಕನ್ನಡಿಯ ಮುಂದೆ ಹೋಗಿ ನಿಂತರೆ ಕಣ್ಣುಗಳು ಹೆಡ್ ಲೈಟಿನ ಹಾಗೆ ಆಗಿದ್ದವು. ರಾತ್ರಿ ಕುಡಿದ ರಮ್ಮಿನ ಪ್ರಭಾವ ಅದಾಗಿತ್ತು. ನನ್ನ ಬಾಯಿ ನನಗೆ ವಾಕರಿಕೆ ತರಿಸುತ್ತಿತ್ತು. ಆದರೆ ಇದೇನು ಹೊಸದಲ್ಲ. ದಿನ ಬೆಳಿಗ್ಗಿನ ಕಥೆಯೇ ಅಲ್ಲವೇ?. ರೂಮಿನಲ್ಲಿ ನೋಡಿದರೆ ಅದೆಷ್ಟೋ ರುಂಡ ಕಳೆದುಕೊಂಡು ಬರೀ ಮುಂಡ ಮಾತ್ರ ಉಳಿಸಿಕೊಂಡು ಅನಾಥ ಶವಗಳಂತೆ ಬಿದ್ದಿದ್ದ ಸಿಗರೇಟಿನ ತುಂಡುಗಳು, ಬ್ರಾಂಡಿನ ವ್ಯತ್ಯಾಸವಿಲ್ಲದೆ ಅಣ್ಣ ತಮ್ಮಂದಿರಂತೆ ಒಂದೇ ಕಡೆ ಗುಂಪಾಗಿ ಬಿದ್ದಿದ್ದ ಖಾಲಿ ಬಾಟಲಿಗಳು...
ಇವೆಲ್ಲವನ್ನೂ ನೋಡಿದರೆ ಯಾರು ಬೇಕಾದರೂ ಆರಾಮಾಗಿ ಹೇಳಿಬಿಡಬಹುದಾಗಿತ್ತು. ಇದೊಂದು ಭಗ್ನ ಪ್ರೇಮಿಯ ರೂಮೆಂದು. ಮೊಬೈಲಿನಲ್ಲಿ ಡೇಟ್ ಫೆಬ್ರವರಿ 14 ಎಂದು ತೋರಿಸುತ್ತಿತ್ತು. ಇವತ್ತಿಗೆ ಸರಿಯಾಗಿ ಆರು ವರ್ಷ ಆಗಿತ್ತು ನನ್ನ ಲವ್ವಿಗೆ ಪೋಸ್ಟ್ ಮಾರ್ಟಂ ಆಗಿ. ಪ್ರತಿ ವರ್ಷ ಇದೆ ದಿನಾಂಕದಂದು ಕಾಲೇಜಿನ ಬಳಿ ಹೋಗುತ್ತಿದ್ದ ಅಭ್ಯಾಸ ಇಟ್ಟುಕೊಂಡಿದ್ದೇನೆ. ಅಲ್ಲಿಗೆ ಹೋದರೆ ಅವಳೇನು ಬರುವುದಿಲ್ಲ. ಆದರೆ ಆ ನೆನಪುಗಳು ಒಂದೆರೆಡು ದಿನಕ್ಕಾಗುವಷ್ಟು ಕಿಕ್ ಕೊಡುತ್ತದೆ ಎಂದು ಅಷ್ಟೇ. ಅಸಲಿಗೆ ಅವಳ ಅಮಲು ಇಳಿದಿದ್ದರೆ ಅಲ್ವ...
ಎರಡು ವಾರವಾಗಿತ್ತು ಶೇವ್ ಮಾಡಿ...ಮೊದಲಾಗಿದ್ದರೆ ವಾರಕ್ಕೆ ಎರಡು ದಿನ....ಅವಳಿಗೆ ಗಡ್ಡ ಎಂದರೆ ಆಗುತ್ತಿರಲಿಲ್ಲ...ಯಾವಾಗಲೂ ನೀಟ್ ಶೇವ್ ಇರಬೇಕು ಎನ್ನುತ್ತಿದ್ದಳು. ಸರಿ ಇವತ್ತು ಶೇವ್ ಮಾಡಿಕೊಳ್ಳೋಣ ಎಂದೆನಿಸಿ ಶೇವ್ ಮಾಡಿ ಸ್ನಾನ ಮಾಡಿ ರೆಡಿ ಆಗಿ ಕಾಲೇಜಿನ ಬಳಿ ಬಂದೆ. ಹೋದ ವರ್ಷಕ್ಕೂ ಇವಾಗಲೂ ಬಹಳಷ್ಟು ಬದಲಾವಣೆ ಆಗಿದೆ. ನನ್ನಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿರಲಿಲ್ಲ. ಒಂದೇ ಒಂದು ಎಂದರೆ ಹೋದ ವರ್ಷ ಇದ್ದ ಕಂಪನಿ ಬಿಟ್ಟು ಹೊಸ ಕಂಪನಿ ಸೇರಿದ್ದೇ ಅಷ್ಟೇ. ಅದೂ ನನಗಾಗಿ ಅಲ್ಲ....ಮನೆಯವರಿಗಾಗಿ...ಅಪ್ಪ ಅಮ್ಮನಿಗಾಗಿ.
ಆರು ವರ್ಷದ ಹಿಂದೆ ನಾವುಗಳು ಕುಳಿತು ಕೈಯಲ್ಲಿ ಸಿಗರೇಟ್ ಸೇದುತ್ತಾ ಹೋಗಿ ಬರುತ್ತಿದ್ದ ಹುಡುಗಿಯರನ್ನು ರೇಗಿಸುತ್ತಿದ್ದ ಕಟ್ಟೆ ಇದ್ದ ಜಾಗದಲ್ಲಿ ಈಗ ಸಣ್ಣದಾದ ಪಾರ್ಕೊಂದು ಬಂದಿದೆ. ಈ ಪಾರ್ಕು ಮುಂಚೆ ಏನಾದರೂ ಇದ್ದಿದ್ದರೆ...ಅಲ್ಲೇ ಒಂದು ಹೂ ಕಿತ್ತು ಅವಳಿಗೆ ಕೊಡುತ್ತಿದ್ದೆನೇನೋ...ಅದೇ ಕಟ್ಟೆಯ ಮೇಲೆ ಕುಳಿತಿದ್ದಾಗಲೇ ಅಲ್ಲವೇ ನನಗೂ ಅವಳಿಗೂ ಲವ್ ಆಗಿದ್ದು. ನನಗೆ ಇವತ್ತಿಗೂ ಅನುಮಾನ....ಅದು ಹೇಗೆ ಲವ್ವಾಯಿತೋ ಗೊತ್ತಿಲ್ಲ...ಇಬ್ಬರೂ ಒಬ್ಬರಿಗೊಬ್ಬರೂ ಹೇಳಿಕೊಂಡಿರಲಿಲ್ಲ..ಆದರೂ ಲವ್ವಾಗಿತ್ತು. ಅಲ್ಲಿಯವರೆಗೂ ಕಾಲೇಜಿನ ಆಂಗ್ರಿ ಯಂಗ್ ಮೆನ್ ಆಗಿದ್ದ ನಾನು ಅಂದಿನಿಂದ ಚಾಕಲೇಟ್ ಹೀರೋ ಆದೆ.
ಬ್ಲೇಡ್ ಕಾಣದ ಗಡ್ಡಕ್ಕೆ ವಾರಕ್ಕೆರಡು ಬಾರಿ ಬ್ಲೇಡ್ ಕಾಣುವ ಸೌಭಾಗ್ಯ ಒದಗಿಸಿದೆ. ಅವಳೆದುರಿಗೆ ಕೆಟ್ಟ ಕೆಲಸ ಮಾಡುವಂತಿರಲಿಲ್ಲ, ಅಂದರೆ ಕಟ್ಟೆಯ ಮೇಲೆ ಕುಳಿತು ಹುಡುಗಿಯರನ್ನು ರೇಗಿಸುವಂತಿಲ್ಲ,ಸಿಗರೇಟ್ ಸೇದುವಂತಿ
ಲವ್ವಲ್ಲಿ ಬಿದ್ದ ಪ್ರತಿಯೊಬ್ಬ ಪ್ರೇ
ಆಗ ಕಾಲೇಜಿನ ಎದುರುಗಡೆ ಇದ್ದ ಕಾಕಾ
ಪುಳಿಯೋಗರೆಯಂತೆ ಘಮ ಘಮ ವಾಸನೆ ಬರು
ನಾನೇನೆ ವಿವರಣೆ ಕೊಟ್ಟರೂ ಅವಳಿಗೆ ಸ
ನಮ್ಮ ಕಾಲೇಜಿನ ಪಕ್ಕದಲ್ಲಿ ಆಗಷ್ಟೇ
ಬಲ್ಲ ಮೂಲಗಳಿಂದ ತಿಳಿದು ಬಂದ ಮಾಹಿ
ಏಕೆಂದರೆ ನಮ್ಮ ಪ್ರೇಮ ಶುರುವಾದ ನಂ
Comments
ಜಯಂತ್, . . . . .. . .
ಜಯಂತ್, . . . . .. . . ಕಾಲುಗಳು, "ಮಿಸ್ಡ್" ಕಾಲುಗಳು, "ಇನಕಮಿಂಗ್" ಕಾಲುಗಳೂ, . . .. ಗಂಟೆ ಗಟ್ಟಲೆ ಮಾತನಾಡಿದ್ದು. . . .. . ಎಲ್ಲಾ ನೀರಿನಲ್ಲಿ ಮಾಡಿದ ಹೋಮದಂತೆ ಆಯ್ತಲ್ಲಾ! ಫೆ. 14ಕ್ಕೆ ಇನ್ನೂ ಎರಡು ತಿಂಗಳು ಇದೆಯಲ್ಲಾ, ಆಗಲೇ, "ಪ್ರೇಮಿಗಳ ದಿನ" ನೆನಪಿಸಿ, ಮನದ ಒಂದು ಮೂಲೆಯಲ್ಲಿ ಬೆಚ್ಚನೆಯ ಝಳಕನ್ನು, ಇನ್ನೊಂದು ಮೂಲೆಯಲ್ಲಿ ಬೇಸರದ ಛಳಕನ್ನೂ ಎಬ್ಬಿಸಿದ್ದೀರಾ! ಬರಹ ಚೆನ್ನಾಗಿದೆ.
In reply to ಜಯಂತ್, . . . . .. . . by sasi.hebbar
ನಿಮ್ಮ ಮೆಚ್ಚುಗೆಗೆ ಅನಂತ
ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು ಶಶಿ ಅವರೇ :)