ಬಂದೇ ಬರುವುದು

ಬಂದೇ ಬರುವುದು

ಬಂದೇ ಬರುವುದದೊಂದು ದಿನ ಭೂಮಿಯೊಳು
ಜೀವಮೌನದ ಭಾವ ಸಾಂದ್ರತೆಯನಡರ್ದು
ಕಣ್ಣ ಪಟಲದ ಮುಂದೆ ಬಿರಿದು ನಕ್ಷತ್ರಗಳು
ಉದಯದೊಳು ಮಗುದೊಮ್ಮೆ ದಿನಚರಿಯ ಬಿಡದೆ

ಕಡಲ ತೀರದೊಳು ಬಡಿ-ಬೀಸುತಲೆಗಳು
ನೋವಿನೊಳೂ ನಲಿವಿನೊಳೂ ಭೇದಗಳನ್ನೆಣಿಸದೆಯೆ
ಉಳಿದೇ ಉಳಿವುದದೊಂದು ನಿಜ ಭವದೊಳಗೆ
ಅಂತರಾತ್ಮದ ಭಾವ ಆವರಿಸಿದುದನ್ನುಳಿದು

ಅಪರೂಪದಾ ತಾಣ ಅಪರೂಪದಾ ಜೀವ
ಅಂತರಾತ್ಮದ ಭಾವ ನಿಜದಿ ಬಯಸಿದುದನ್ನುಳಿದು
ಉಳಿದೇ ಉಳಿವುದದೊಂದು ನಿಜ ಭವದೊಳಗೆ
ಅಂತರಾತ್ಮದ ಭಾವ ಆವರಿಸಿದುದನ್ನುಳಿದು

ಬಂದೇ ಬರುವುದದೊಂದು ದಿನ ಭೂಮಿಯೊಳು
ಜೀವಮೌನದ ಭಾವ ಸಾಂದ್ರತೆಯನಡರ್ದು

Rating
No votes yet

Comments

Submitted by nageshamysore Thu, 01/16/2014 - 22:12

ಕೃಷ್ಣಪ್ರಕಾಶ ಬೋಳುಂಬು ರವರೆ, ಕವನದ ಆಶಾವಾದದಭಾವ, ಪರಿಕಲ್ಪನೆ -ಎರಡೂ ಇಷ್ತವಾಯ್ತು. ತೇಲು ದೋಣಿಯೂ ಅದೆ ಲಯದಲ್ಲಿ ಚೆನ್ನಾಗಿ ಬಂದಿದೆ, ಧನ್ಯವಾದಗಳು.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by kpbolumbu Fri, 01/17/2014 - 14:57

In reply to by nageshamysore

ನಾಗೇಶ್ ಅವರೇ,
ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಯಾರೋ ಒಮ್ಮೆ ಕೇಳಿದ್ದರು, ಯಾರಿಗೂ ಅರ್ಥವಾಗದ ಇಂಥ ಕವನಗಳನ್ನು ಬರೆಯುವ ಉದ್ದೇಶವೇನು ಅಂತ. ಇಂಥ ಕವನಗಳು ನಮಗೆ ಬೇಡವೆಂದೂ ಕೆಲವರು ಹೇಳಿದ್ದರು. ಆದರೆ ಅರ್ಥ ಮಾಡಿಕೊಳ್ಳುವವರು ಇದ್ದಾರೆ ಎಂದು ತಿಳಿದಾಗ ಆನಂದದೊಂದಿಗೆ ಅಚ್ಚರಿಯೂ ಆಯಿತು.