ಬದುಕು ಅಂದರೆ ಇದೇನಾ

ಬದುಕು ಅಂದರೆ ಇದೇನಾ

       ನೆನ್ನೆ ನನ್ನ Friend phone ಮಾಡಿದ್ದಳು ಹಾಗಾಗಿ ನಾನು ಈ ವಿಷಯನ ನಿಮಗೆ ಹೇಳಬೇಕು ಅಂತ ಬರೀತಾ ಇದ್ದೀನಿ. ನಾನು ಡಿಗ್ರಿ ಮಾಡಬೇಕಾದರೆ ನನ್ನ Friends ನೀನು ಡಿಗ್ರಿ ಮುಗಿದ ಮೇಲೆ ಮುಂದೆ ಏನ್ ಅಗ್ಬೇಕು ಅಂದುಕೊಂಡಿದ್ದೀಯ ಅಂತ ಕೇಳ್ತಾ ಇದ್ರು ಅದಕ್ಕೆ ನಾನು ಒಳ್ಳೆ ಗೃಹಿಣಿ ಅಗಬೇಕುಂತ ನನ್ನ ಅಸೆ ಅಂತ ಅವರಿಗೆ ಉತ್ತರ ಹೇಳ್ತಾ ಇದ್ದೆ. ಅದಕ್ಕೆ ನನ್ನ Friends ಅಲ್ಲಾ ಕಣೇ ನಾವು ಕೆಲಸಕ್ಕೆ ಹೋಗಬೇಕು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಬೇರೆಯವರ ಮೇಲೆ Depend ಅಗಬಾರದು ಸ್ವತಂತ್ರವಾಗಿ ಬದಕಬೇಕು ನಾವು ಮಾತ್ರ ಮುಂದೆ ಒಳ್ಳೆ ಕೆಲಸಕ್ಕೆ ಹೋಗುತ್ತೇವೆ ಅಂತ ಹೇಳ್ತಾ ಇದ್ರು. ಆದರೆ ನಾನು ಮಾತ್ರ ನಾವು ಯಾಕೆ ದುಡಿಬೇಕು ದೇವರೇ ನಮಗೆ ದುಡಿಯೋಕೆ ಅಂತ ಒಂದು ಜೀವ ಸೃಷ್ಠಿ ಮಾಡಿರ್ತಾನೆ ನಾವು ಮನೇಲಿ ಆರಾಮವಾಗಿ ಇರಬೇಕು ಅಷ್ಟೆ ಅಂತ ಹೇಳ್ತಾ ಇದ್ದೆ. ಆದರೆ ಆಗಿದ್ದೆ ಬೇರೆ ನಾನು ಡಿಗ್ರಿ ಕೊನೆಯ ವರ್ಷದಲ್ಲಿ ಓದುತ್ತಾ ಇರಬೇಕಾದರೆ ನನ್ನ ಅಣ್ಣ ಹುಷಾರಿಲ್ಲದೆ ಮಲಗಿದ ಅಪ್ಪ ಕೂಡ retired ಅದರು. ಇನ್ನು ಡಿಗ್ರಿ ಮುಗೀತು ಅಮ್ಮ ಹುಷಾರಿಲ್ಲದೆ ಮಲಗ್ ಬಿಟ್ರು ನಾನು ಕೆಲಸಕ್ಕೆ ಹೋಗಬಾರದು ಅಂದುಕೊಂಡಿದ್ದೆ ಆದರೆ ಆ ದೇವರಿಗೆ ನಾನು ಕೆಲಸಕ್ಕೆ ಹೋಗುವುದು ಅಂದ್ರೆ ತುಂಬಾ ಇಷ್ಟ ಅನ್ಸುತ್ತೆ ಕೊನೆಗೂ ನಾನು ಕೆಲಸಕ್ಕೆ ಸೇರಿದೆ. ನನ್ನ Friendsಗೆಲ್ಲಾ ನಾನು ಅಂದುಕೊಂಡಿದ್ದ ಜೀವನ ಸಿಕ್ತು ಹಾಗೆ ಅವರು ಬದುಕಬೇಕು ಅಂದುಕೊಂಡಿದ್ದ ಜೀವನ ನನಗೆ ಸಿಕ್ತು. ಈಗೆ 06 ವರ್ಷ ನಾನು ನನ್ನ ಕೆಲಸ ಮನೆ ಮನೆಯ ಎಲ್ಲಾ ತೊಂದರೆಗಳು ಇದರ ಒಟ್ಟಿಗೆ ಹೊಂದಿಕೊಂಡಿದ್ದೀನಿ. ನನ್ನ ಸ್ನೇಹಿತರು ಅವರ ಮನೆ ಗಂಡ ಮಕ್ಕಳು, ಹೊಸ ಮನೆ ತಗೊಂಡಿದ್ದೀವಿ ಅಂತ ಒಬ್ಬಳು ಹೇಳಿದ್ರೆ ಇನ್ನೊಬ್ಬಳು ನನ್ನ ಮಗ ಸ್ಕೂಲಿಗೆ ಸೇರಿದನೆ ಅಂತಾಳೆ. ನಮ್ಮ ಮನೆಯವರಿಗೆ ಬೇರೆ ಕಡೆ ವರ್ಗ ಆಯ್ತು ಅಂತ ಮತ್ತೊಬ್ಬಳು ಹೇಳ್ತಾಳೆ. ಆದರೆ ನಾನು ಮಾತ್ರ ಅದೇ ನನ್ನ ಹಳೇ ಕೆಲಸದೊಂದಿಗೆ ಹೊಂದಿಕೊಂಡು ಬಿಟ್ಟಿದ್ದೀನಿ. ನಾನು ನನ್ನ ಕೆಲಸದಲ್ಲಿ ತುಂಬಾ ಸಂತೋಷವಾಗಿ ಇದ್ದೀನಿ ಕೆಲಸಕ್ಕೆ ಬರೋದು ಅಭ್ಯಾಸ ಆಗಿ ಹೋಗಿದೆ.


             ಇದೇನಾ ಜೀವನ ಅಂದರೆ ನಾವು ಏನು ಬಯಸುತ್ತೀವೊ ಅದು ನಮಗೆ ಸಿಗೋದಿಲ್ಲ.

Rating
No votes yet

Comments