ಬದುಕು - ಪುಸ್ತಕ, - ಸಾರ್ಥಕ, - ಸಂಪದ.

ಬದುಕು - ಪುಸ್ತಕ, - ಸಾರ್ಥಕ, - ಸಂಪದ.


೧.ಬದುಕು - ಪುಸ್ತಕ


ಓಡುತಲಿ ಇರ ಬೇಕು, ನಿಲ್ಲದೆ ನಡೆಯದೆ,
ಇದ್ದಲ್ಲಿ ಇರಲದುವೆ ಬಾಳೆಂಬ ಜಾಡಿನಲಿ.
ನೋಡಿ ತೆರೆದೋದುತಲಿ ಇರ ಬೇಕು, ಜ್ನಾನವಿರೆ
ಮಸ್ತಕದ ತಿರುಳಲಿ, ಬಾಳೆಂಬ ಗ್ರಂಥದಲಿ.


೨. ಬದುಕು - ಸಾರ್ಥಕ .


 ಎಣಿಸುತ್ತ ಗುಣಿಸುತ್ತ ಕೂಡಿಕಳೆಯುತ್ತ
 ತಿದ್ದಿ ತೀಡುತ್ತಾ ಮತ್ತಳಿಸಿ ಬರೆಯುತ್ತ,
 ಮನದ ಕೊಳೆಯನ್ನು ಗುಡಿಸಿ ವರೆಸುತ್ತ,
 ಸ್ವಚ್ಚವಗಿಸೆ ಮನುಜ, ಬದುಕು ಸಾರ್ಥಕವು.


೩.ಬದುಕು - ಸಂಪದ


ಎಡಬಿಡದೆ ಹರಿಸುತಲಿ ಮನದ ಚಿಂತನೆಯ,
ಬಡಬಡಿಸಿ ಬರೆಯುತಲಿ ಪದಪದದ ಸಾಲುಗಳ,
ಎಣಿಸಿ ಪೋಣಿಸಿ ಹೊಸೆದು ಎಸೆಯುತಿರೆ ಸಮ್-ಪದವ
‘ಮುಖಪುಟದಿ ಉಳಿಸುವುದು ಸಂಪದದಿ ಅಂಕಿತವ ‘
 

Rating
No votes yet

Comments