ಬದುಕೆಂಬುದು ಮಿಥ್ಯ... ಸತ್ಯ?

ಬದುಕೆಂಬುದು ಮಿಥ್ಯ... ಸತ್ಯ?

"ನೀನು ದೊಡ್ದವನಾದಗ ಎನಾಗುತ್ತೀಯಾ?" ಎಂಬ ಪ್ರಶ್ನೆ ಕೇಳಿದಾಗ ಮಗು, ತನ್ನ ಮುಕ್ತ ಮನಸ್ಸಿನಿಂದ "ನಾನು ಏರೊಪ್ಲೇನ್ ಓಡಿಸ್ತೇನೆ!" ಎಂದು ಉತ್ತರಿಸಿತು... ಇದನ್ನು ಕೇಳಿದಾಗ, ನನ್ನ ಮನಸ್ಸಿನಲ್ಲಿ ಪ್ರಶ್ನೆಗಳ ಅಲೆಗಳು ಬಡಿದಂತಾಯಿತು! ಕೆಲವನ್ನು ಈ ಲೆಖನದಲ್ಲಿ ವ್ಯಕ್ತಪಡಿಸುತ್ತಿದ್ದೇನೆ!

ಬದುಕಿಗಾಗಿ ಪ್ರತಿಯೊಂದು ಜೀವಿ ಹೊರಾಡುತ್ತದೆ, ಆದರೆ ಕೊನೆಗೆ ಬದುಕು ಮಿಥ್ಯವಾಗುವುದಿಲ್ಲವೆ? ಸಾವು ಸತ್ಯವಾಗುವುದಿಲ್ಲವೆ?
ಬದುಕಿಗಾಗಿ ಹೊರಾಡಿ ನಾವು ಕೊನೆಗೆ ಸಾಯುವಾಗ ಗಳಿಸಿದ್ದನೆಲ್ಲ ಬಿಟ್ಟು ಹೊಗುವ ಸ್ತಿಥಿಯಲ್ಲಿರುತ್ತೇವೆ.

ಮನುಷ್ಯ ತಾನು ಒಂದು ದಿನ ಜಗತ್ತಿನಲ್ಲಿ ಬದುಕಿರುವುದಿಲ್ಲ ಎಂಬುದನ್ನ ಯೋಚನೆ ಕೂಡ ಮಾಡಿರುವುದಿಲ್ಲ! ಅವನಿಗೆ ತಿಳಿಯದೆ ತನ್ನ ಬಗ್ಗೆ ಹಾಗು ಸುತ್ತಲಿರುವ ಜಗತ್ತಿನ ಬಗೆ ಅಪಾರ ಪ್ರೀತಿ ಬೆಳೆಸಿಕೊಂಡಿರುತ್ತಾನೆ! ಒಂದು ರೀತಿಯ possessive ಆಗಿರುತ್ತಾನೆಯೇ?.

ಮಗು ಉತ್ತರಿಸಿದಾಗ ಅದಕ್ಕೆ ಬದುಕು ಒಂದು ಮಿಥ್ಯ ಎಂದು ತಿಳಿಯದೆ ತನ್ನ ಆಸೆಯನ್ನ ವ್ಯಕ್ತ ಪಡಿಸದ್ದನ್ನ ಕಂಡು ನಾನು ಬದುಕಿನ ಕ್ರೌರ್ಯವನ್ನು ಕಂಡೆ! ಇದನ್ನು ಕಂಡರೆ ಬದುಕು ಎಲ್ಲರನ್ನು ಮೂರ್ಖರನ್ನಾಗಿಸುತ್ತದೆ ಎಂದೆನಿಸುವುದಿಲ್ಲವೆ?

ಸಾವು ಸತ್ಯವೆನಿಸಿದಾಗ ಮನುಷ್ಯ ತನ್ನ ಆಸೆಗಳನ್ನು ತೊರೆದು, ಸತ್ಕಾರ್ಯಗಳಲ್ಲಿ ತೊಡಗುತ್ತಾನೆ, ಇದಾಗುವುದು ಬಹಳ ಅಸಹಜವೆನಿಸಿದರೂ ನಿಜವಲ್ಲವೆ?

ಬದುಕುಬೇಕೆಂಬ ಆಸೆ ಬಿಟ್ಟು ಸಾವನ್ನು ಎದರಿಸುವ ಪ್ರಯತ್ನ ಪಡಬೇಕು, ಸಾವನ್ನು ಎದರಿಸುವ ಶಕ್ತಿ ಬರುವುದು ನಾವು ಜೀವನದಲ್ಲಿ ಸ್ವಾರ್ಥಿಯಾಗದೆ ಬದುಕಿದ್ದಾಗ ಮಾತ್ರವಲ್ಲವೆ?

ಇದರ ನಡುವೆ, ಬದುಕು ನಿಜವಾಗ್ಲು ಸತ್ಯವೆ? ಮಿಥ್ಯವೆ? ಉತ್ತರವಿದೆಯ ಗೆಳೆಯರೆ?

ಏರೊಪ್ಲೇನ್ ಓಡಿಸುವ ಕನಸು ಕಂಡ ಮಗು ಈಗ ಅದರ ಪ್ರಯತ್ನದಲ್ಲಿದೆ!

Rating
No votes yet

Comments