ಬದುಕೆಂಬುದು ಸಾವಿನ ಕನಸಾದರೆ, ಸಾವು ಬದುಕಿನ ಆಶಾವಾದವೆ?: ಗಾದೆಗೊಂದು ಗುದ್ದು-೬೪
(೩೨೬) ಮಿಕ್ಕೆಲ್ಲ ಪ್ರಾಣಿಗಳಿಗೆ ತಿಂದುದೆಲ್ಲವೂ ಭೋಜನವೇ. ಮಾನವರಿಗಾದರೆ ತಟ್ಟೆಯೊಳಗಿನದೆಲ್ಲ, ತಟ್ಟೆಯ ಒಳಗಿರುವುದು ಮಾತ್ರ ಊಟ!
(೩೨೭) ವಿಶ್ವದ ಅತ್ಯಂತ ವಿಕ್ಷಿಪ್ತ ಆಗುಹೋಗುಗಳು ಸುಮ್ಮನೆ ಕುಳಿತುಕೊಳ್ಳುವುದರಲ್ಲಿ ಅಡಕವಾಗಿದೆ.
(೩೨೮) ನಮ್ಮಲ್ಲಿಲ್ಲದ, ಆದರೆ ಇತರರು ಹೊಂದಿರುವ ಸಾಮರ್ಥ್ಯವೇ ಪ್ರತಿಭೆ! ನಮ್ಮ ಪ್ರತಿಭೆಯ ಬಗ್ಗೆ ಇತರರಿಗೆ ಲವಲೇಶದ ಸೂಚನೆಯೊ ಇಲ್ಲದಿದ್ದಲ್ಲಿ ಅದೇ ’ಗುಟ್ಟು’ ಎನ್ನಿಸಿಕೊಳ್ಳುತ್ತದೆ!
(೩೨೯) ದೈವವು ಮನುಷ್ಯರನ್ನು ಕಾಣಲಾಗದು. ಭ್ರಷ್ಟ ದೈವ ಮಾತ್ರ ಹಾಗೆ ಮಾಡಬಲ್ಲದು. ಹಾಗಾದ ಕೂಡಲೆ ಹಾಗೆ ಕಂಡುಬಂದ ಮಾನವ ಮೋಕ್ಷ ಹೊಂದಿಬಿಡುತ್ತಾನೆ.
(೩೩೦) ಬದುಕಿರುವುದೆಂದರೆ ಸಾವಿನ ನಂತರದ ಜೀವನದ ಬಗ್ಗೆ ಕನಸು ಕಾಣುವುದು. ಸಾಯುವುದೆಂದರೆ ಅಂತಹ ಕನಸನ್ನು ಕಾಣುವ ಅವಕಾಶವನ್ನು ಕಳೆದುಕೊಳ್ಳುವುದು ಎಂದರ್ಥ!
Rating