ಬದುಕೆಂಬ ಬಂಡಿಯ ನೊಗವನ್ನೊತ್ತು ?.

ಬದುಕೆಂಬ ಬಂಡಿಯ ನೊಗವನ್ನೊತ್ತು ?.

 

 

ಇನ್ನಾರು ನಿನಗೆ ಜೊತೆ

ನಾನೇ ಬರುವೆನಲ್ಲ !..

ಯಜಮಾನನೆಂದು ಅಳುಕ ಪಡಬೇಡ ?.

ಎಳೆದುಕೊಂಡು ಮುಂದೆ ಸಾಗು ...!.

 

ನಮ್ಮ ಬದುಕಿನಲ್ಲಿ ಮಳೆಯು

ರಭಸದಿಂದ ಸುರಿಯುವ ಹೊತ್ತು

ಸೇರ ಬೇಕಿದೆ ನಮ್ಮ ಮನೆಯ ಸರಿಹದ್ದು

ಆಯಾಸವಾಗಿದೆಯೆಂದು ಮಾತ್ರ ಹೇಳಬೇಡ ?.

ನಿಧಾನವಾಗಿ ಮುಂದೆ ಚಲಿಸು.

 

ಸ್ವಲ್ಪವೇ ದೂರ

ಸಾಗಿ ನಡೆದರೆ ನಮ್ಮ ಮನೆ.

ನಿನಗಾಗಿ ಒಣ ಹುಲ್ಲನಾದರು ನೀಡುತ್ತೇನೆ

ಹಸಿವನಂತು ಉಳಿಸಲಾರೆ.

 

ನಿನ್ನ ಜೊತೆಗಾರನನ್ನು

ನಾ ಮಾಡಿದ ಸಾಲವೆ ಹೊತ್ತೊಹ್ದಿತು

ಇನ್ನು ಈ ಚಕ್ಕಡಿಯ ನೊಗಕ್ಕೆ

ನಿನ್ನೊಬ್ಬನ ಕುತ್ತಿಗೆ ಸಾಲದು.

ನನ್ನನ್ನೆ ನಿನ್ನ ಜೊತೆಗಾರನೆನ್ನುಕೊ

ಶಾಂತವಾಗಿ ಮುಂದೆ ನಡೆ.

 

ಬಾಳ ದಾರಿಯಲಿ ಬದುಕೆಂಬ ಬಂಡಿ

ಸರಾಗವಾಗಿ ಸಾಗಲೇ ಬೇಕು

ಎತ್ತು ಏರಿಗೆ ಕೋಣ ನೀರಿಗೆಂದರೆ

ಬದುಕು ಅರ್ಧಕ್ಕೆ ಕೊನೆಗೊಳ್ಳುತ್ತದೆ.

 

ನಮ್ಮ ಚಿಂತೆ ಎಂದೂ

ನಮ್ಮೊಂದಿಗೆ ಇದ್ದೆ ಇರುತ್ತದೆ.

ಅಳುಕ ಪಡಬೇಡ

ನೊಂದು ಕಣ್ಣೀರು ಸುರಿಸ ಬೇಡ

ನಾವತ್ತರು ಸುರಿವ ಮಳೆ

ನಮ್ಮಳುವನ್ನು ನುಂಗಿ ನೀರಾಗಿಸುತ್ತಿದೆ

ಅದು ಇನ್ನು ತಾನೆ

ಯಾರಿಗೆ ಕಾಣಲು ಸಾಧ್ಯ.

 

ನಾನಿರುವ ತನಕ ನೀನು

ನಾ ಹೋದ ಮೇಲೆ ಇನ್ನೇನು ?.

ನಡೆ ನಡೆ ಸೇರಬೇಕಿದೆ

ನಮ್ಮ ಮನೆಯ ಸರಿಹದ್ದು.

 

ನಮಗಾಗಿ ಒಂದೊ ಎರಡೊ

ಜೀವಗಳು ಎದುರು ನೋಡಬಹುದು

ಅವುಗಳಿಗಾದರು

ಒಂದಷ್ಟು ತೃಪ್ತಿಯನಾದರು ಉಣಿಸೋಣ

ನಾಳಿಗಾಗಿ ಕಾಯುವುದು ಬೇಡ ?.

 


                                                        ವಸಂತ್

 

ವಿಶೇಷ ಸೂಚನೆ:- ಚಿತ್ರಕೃಪೆ ವಿಜಯ ಕರ್ನಾಟಕ ದಿನ ಪತ್ರಿಕೆ

 

 

Rating
No votes yet

Comments