ಬನ್ನಂಜೆ ಗೋವಿಂದಾಚಾರ್ಯರಿಗೆ ಅಭಿನಂದನೆ

ಬನ್ನಂಜೆ ಗೋವಿಂದಾಚಾರ್ಯರಿಗೆ ಅಭಿನಂದನೆ

ಬನ್ನಂಜೆ ಗೋವಿಂದಾಚಾರ್ಯರಿಗೆ ಅಭಿನಂದನೆ

ಋಷಿಯಂತೆ ಸಾಧನೆಯು ಹಸನಾದ ಹೊಂಗನಸು
ಹೊಸಹೊಸತರಲಿ ಭಾಷ್ಯೆ ಹೊಸಬಗೆಯ  ಮೀಮಾಂಸೆ
ವಿಷಯ ವಿಸ್ತಾರಗಳ ಮೂಲ ಸೂಕ್ಷ್ಮದ ರೀತಿ ಅಚ್ಚರಿಯು ಹೃದಯಂಗಮ |
ಬಸುರುಕ್ಕಿ ಶಾರದೆಯು ಜಿಹ್ವೆಯೊಳು ನಲಿದಾಡಿ
ಕಸುವುಳ್ಳ ನುಡಿಮೋಡಿ ಹೆಸರಾಯ್ತು ಲೋಕದಲಿ
ಯಶಕಂಡರುನ್ನತದ ಪದುಮಸಿರಿ ಬನ್ನಂಜೆ ಗೋವಿಂದ ಆಚಾರ್ಯರು ||

ರಾಮಕಥೆ ರಮಣೀಯ ಭಾಗವತ ಮನನೀಯ
ರೋಮಹರ್ಷಣರಂತೆ ಭಾರತದ ವರ್ಣನೆಯ
ಲಾ ಮಹಿಮ ನಲ್ನುಡಿಗಳಪರಿಮಿತ ಜ್ಞಾನನಿಧಿ ಭಂಡಾರ ವೇದಾಂತದ |
ಗಮ್ಯವಾಗದ ತಾಣಕೊಯ್ದು ನಿಲಿಸುತ ನಮ್ಮ
ರಮ್ಯಲೋಕವ ತೆರೆದು ಕಾಣಿಸುತ ಜೀವನದ
ನೆಮ್ಮದಿಯ ಪಥತೋರಿ ಬೆಳಗಿಸುವ ಮುಂಬೆಳಕು ದೇದೀಪ್ಯವಾಗ್ಭಾಸ್ಕರ ||

ವಂದನೆಯು ತಮಗಿದೋ ತಮ್ಮ ಸಿರಿಪದತಳಕೆ
ವಂದನೆಯು ತಮ್ಮ ಸಿರಿ ಸಾಧನೆಯ ಪಥಕೆಮ್ಮ
ವೃಂದವೇ ಮಣಿಯುತಿದೆ ಅಧ್ಯಾತ್ಮ  ಚೇತನದ ಸನಿಹಸೌಖ್ಯವ ಹೊಂದುತ  |
ಚೆಂದವಾಗಿರಿಸಿರಲಿ ಭಗವಂತ ಅನವರತ
ಎಂದೆನುತ ಬೇಡುವೆವು ಕಂದಮ್ಮಗಳ ಸಹಿತ
ಇಂದಿದೋ ಕಿರಿದಾದ ಕಿರಿಯರಿತ್ತಿಹ ಪ್ರೀತಿ ಸಂಮಾನ ತಮಗೀಯುತ ||

(ನಿನ್ನೆ ದಿನ 05/03/2011 ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವ ನಮ್ಮ ಪ್ರಜ್ಞಾ ಭಾರತಿ ವಿದ್ಯಾ ಮಂದಿರ ಶಾಲೆಗೆ ಮಾನ್ಯಶ್ರೀ ಬನ್ನಂಜೆ ಗೋವಿಂದಾಚಾರ್ಯರು ಬಂದಿದ್ದರು. ಅವರಿಗೆ ನಾವು ಕೊಟ್ಟ ಕಿರು ಸಂಮಾನದ ಅಭಿನಂದನಾಗೀತೆ. ವಾರ್ಧಿಕ ಷಟ್ಪದಿಯಲ್ಲಿದೆ.)                             
                                                                                                               - ಸದಾನಂದ            

 

Rating
No votes yet

Comments