ಬನ್ನಿ, ಕೀಳುವ ನಾಣ್ಯಗಳ

ಬನ್ನಿ, ಕೀಳುವ ನಾಣ್ಯಗಳ

ಯಾವುದಾದರೂ unreasonable demand ತೆಗೆದುಕೊಂಡು ಕಾಸಿಗೆಂದು ಅಮ್ಮನ ಹತ್ತಿರ ಹೋದಾಗ ಅಮ್ಮ "ದುಡ್ಡೇನೂ ಮೇಲಿಂದ ಉದುರೋದಿಲ್ಲ, ನಿಮ್ಮಪ್ಪ ಎಷ್ಟು ಕಷ್ಟಪಟ್ಟು ಹಣ ದುಡಿಯೋದು ಅನ್ನೋದು ನಿನಗೆ ಗೊತ್ತಾ ಎಂದು ಪೊರಕೆ ಬೀಸಿ  ಅಟ್ಟಿದ್ದು ನೆನಪಿದೆ ತಾನೇ? ಹಾಗೇನಾದರೂ ಹಣದ ತಾಪತ್ರಯ ಬಂದರೆ ಕೆಳಗೆ ಹೇಳಿದ ಸ್ಥಳಗಳಿಗೆ ಹೋಗಿ, ಕಾಸನ್ನು ಕಿತ್ತು ತನ್ನಿ. ಅದೂ ಪುಕ್ಕಟೆಯಾಗಿ. ಇಲ್ಲಿ ಪೊರಕೆಯ ಹಾವಳಿಯೂ ಇಲ್ಲ, ಅಮ್ಮನ ರಗಳೆಯೂ ಮೊದಲೇ ಇಲ್ಲ.


ನಮ್ಮ ಮಾಜಿ ಒಡೆಯ ಇಂಗ್ಲೆಂಡಿನ ಕೆಲವೊಂದು ಸ್ಥಳಗಳಲ್ಲಿ ಜನ ಮರದ ಕೊಂಬೆಗೂ, ಬುಡಕ್ಕೂ,ಟೊಂಗೆ ಗಳಿಗೂ ನಾನ್ಯಗಳನ್ನು ಸಿಕ್ಕಿಸುತ್ತಾರಂತೆ. ಭಾರತದಲ್ಲಿ ಮಾತ್ರವಲ್ಲ, ಆಧುನಿಕ ರಾಷ್ಟ್ರಗಳಲ್ಲೂ ನಂಬಿಕೆಗಳಿಗೆ ಕೊರತೆಯಿಲ್ಲ. ಮರಗಳಿಗೆ ಈ ನಾಣ್ಯ ಸಿಕ್ಕಿಸುವ ಕಾರಣ ಏನೆಂದರೆ ಅದೃಷ್ಟ ತಮಗೆ ಒಲಿಯಲಿ ಎನ್ನುವ ಆಸೆ. ಅಷ್ಟು ಮಾತ್ರ ಅಲ್ಲ, ಎಷ್ಟು ನಾಣ್ಯಗಳನ್ನು ಸಿಕ್ಕಿಸುತ್ತೆವೆಯೋ ಅಷ್ಟು ಮಕ್ಕಳಾಗಬಹುದು ಎಂದು ಆಶಯ. ಒಹ್, ಈ ಹರಕೆ ನಮ್ಮ ದೇಶದಲ್ಲಿ ನಡೆಯೋಲ್ಲ ಬಿಡಿ. ಮೊದಲೇ ಜನಸಂಖ್ಯಾ ಸ್ಫೋಟ, ಅದರ ಮೇಲೆ ಇಂಥ ಹರಕೆ ಇಟ್ಟುಕೊಂಡು ಜನ ಮಲಗುವ ಕೋಣೆ ಸೇರಿದರೆ ಆಗುವ ಅನಾಹುತ ಯಾವ ಸರಕಾರಕ್ಕೂ ಬೇಡ.



 



 



 


ಚಿತ್ರ ಕೃಪೆ: www.amusingplanet.com

Rating
No votes yet

Comments