ಬಬ್ಲಿ

ಬಬ್ಲಿ

ನಿನ್ನೆ ರಾತ್ರಿ ಹನ್ನೊಂದುವರೆಯಲ್ಲಿ ನಮ್ಮ ಮನೆಯ ಲ್ಯಾಂಡ್ ಲೈನ್ ಗೆ ಕರೆ ಬಂತು. ಫೋನ್ ಎತ್ತಿದರೆ ನಮ್ಮ ರಮೇಶ್ ಜೋರಾಗಿ ಅಳ್ತಾ ಇದ್ದಾರೆ.

-" ಏನ್ರಿ ಆಯ್ತು? ಯಾಕೆ ಅಳ್ತಾ ಇದ್ದೀರಿ?"

-"ನಮ್ಮ ಬಬ್ಲಿ  ಸತ್ತೋಗಿಬಿಡ್ತು " ಅಳುತ್ತಲೇ ರಮೇಶ್ ಹೇಳಿದರು. ನಮ್ಮ ಲಲಿತಾ, ಸಹನಾ ಎಲ್ಲರೂ ಅಳ್ತಾ ಇದ್ದಾರೆ. ಎಷ್ಟರಮಟ್ಟಿಗೆ ಎಂದರೆ, ಮುಂದೆ ಯಾವ ಮಾತೂ ಅವರ ಬಾಯಿಂದ ಬರುತ್ತಿಲ್ಲ, ಬರೀ ಅಳು...ಅಳೂ...ಅಳು.

ಸರಿ, ಇನ್ನು ಸುಮ್ಮನಿರುವಂತಿಲ್ಲ ವೆಂದು ನನ್ನ ಪತ್ನಿಯನ್ನೂ ಕರೆದುಕೊಂಡು ಗಾಡಿಯಲ್ಲಿ ರಮೇಶ್ ಮನೆಗೆ ಹೋಗ್ತೀವಿ, ಮೂರೂ ಜನರು ತಲೆಗೆ ಸ್ನಾನ ಮಾಡಿ ಅಳ್ತಾ ಕೂತಿದ್ದಾರೆ.

ಹಿಂದಿನ ಬೀದಿಯ ಡಾಕ್ಟರ್ ಮನೆ ನಾಯಿ....

[ಈ ನಾಯಿಯ ಹೆಸರು ಗೊತ್ತಿರಲಿಲ್ಲ , ಹಾಗಾಗಿ ಇದೀಗ ರಮಶ್ ಮನೆಗೆ ಫೋನ್ ಮಾಡಿದರೆಈಗಲೂ ಮನೆಮಂದಿಯೆಲ್ಲಾ ಅಳ್ತಾಕೂತಿದ್ದಾರೆ. ಅದೇ ಸಂಕಟದಲ್ಲಿ ಬಬ್ಲಿಯ ಸ್ಮರಣೆ ಮಾಡಬೇಕಿದೆ]

ಅದರ ಹೆಸರು ಪಮ್ಮಿ  ಪ್ರತಿನಿತ್ಯವೂ ಸಂಜೆ  ನಮ್ಮ ರಮೇಶ್ ಮನೆ ಹತ್ತಿರ ಬರ್ತಾ ಇತ್ತಂತೆ. ಇವೆರಡೂ ಒಂದರ್ಧ ಗಂಟೆಆಟವಾಡಿಕೊಂಡು ನಂತರ ಪಮ್ಮಿಯನ್ನು ಅವರ ಮನೆಗೆ ಕರೆದುಕೊಂಡು ಹೋಗುತ್ತಿದ್ದರಂತೆ. ಎಂದಿನಂತೆ ನಿನ್ನೆಯೂ  ಸಂಜೆ ಪಮ್ಮಿ ನಮ್ಮ ರಮೇಶ್ ಮನೆಗೆ ಬಂದಿದೆ. ಸಾಮಾನ್ಯವಾಗಿ ಪಮ್ಮಿ ಬಂದರೆ ಸಾಕು ಬಬ್ಲಿ ಅದರ ವಾಸನೆ ಯಿಂದಲೇ ತಿಳಿದುಕೊಂಡು ಮನೆಯ ಹೊರಗೆ ಬಂದು ಅದರೊಡನೆಆಟಾವಾಡುತ್ತಿದ್ದುದು ನಿನ್ನೆ ಹೊರಗಡಗೆ ಹೋಗಿಯೇ ಇಲ್ಲ. ನಮ್ಮ ಲಲಿತಳೇ " ಯಾಕೆ ಪಮ್ಮಿ ಬಂದರೂ ನೀನಿನ್ನೂ ಹೊರಟಿಲ್ಲ ಅಂತಾ  ಬಬ್ಲಿಗೆ ಗದರಿಸಿ ಬಲವಂತವಾಗಿ ಹೊರಗೆ ಓಡಿಸಿದ್ದಾಳೆ. ಸರಿ ಇವೆರಡೂ  ಆಟವಾಡಬೇಕೆನ್ನುವಷ್ಟರಲ್ಲಿ  ರಸ್ತೆಯಲ್ಲಿ ಬಂದ ಜೀಪೊಂದು ಬಬ್ಲಿ ಮೇಲೆರಗಿ ಮುಂದೆ ಹೋಗಿಯೇ ಬಿಟ್ಟಿದೆ. ಸರಿಯಾಗಿ ತಲೆಯಮೇಲೆ ಚಕ್ರಹರಿದ ಪರಿಣಾಮ ವಿಲ ವಿಲ ಒದ್ದಾಡಿ ಬಬ್ಲಿ ಕೊನೆಯುಸಿರೆಳೆದಿದೆ. ಇವರ ಚೀರಾಟಕ್ಕೆ ರಸ್ತೆಯ ಜನರೆಲ್ಲಾ ಬಂದು ಇವರನ್ನು ಸಮಾಧಾನ ಪಡಿಸಲು ಎತ್ನಿಸಿ, ಕೊನೆಗೆ  ಮನೆ ಯ ಹತ್ತಿರವೇ ಬಬ್ಲಿಗೆ ಅಂತ್ಯಸಂಸ್ಕಾರ ಮಾಡಿ, ನಾವು ಹೋಗುವಾಗ ಅವರೆಲ್ಲಾ ಅವರವರ ಮನೆಗೆ ತೆರಳಿದ್ದರು.

ಬಬ್ಲಿಗೆ ಇಟ್ಟಿರುವ ಹೆಸರ ಬಗ್ಗೆ ನನ್ನ ಆಕ್ಷೇಪಣೆ ಇತ್ತು. ಅದಕ್ಕೆ ಪುನರ್ನಾಮಕರಣ ಮಾಡುವ ಮುನ್ನ ಬಬ್ಲಿ ಕಣ್ಮರೆಯಾಗಿದೆ.ಮನುಷ್ಯ-ಮನುಷ್ಯರ ನಡುವಿನ ಸಂಬಂಕ್ಕೂ, ಮನುಷ್ಯ-ಪ್ರಾಣಿಗಳ ನಡುವಿನ ಸಂಬಂದಕ್ಕೂ  ತುಂಬಾ ವೆತ್ಯಾಸವಿದೆ. ನಾವು ಎಷ್ಟು ಪ್ರೀತಿಸಿತ್ತೇವೆಯೋ ಅದರ ನೂರುಪಟ್ಟು ಪ್ರಾಣಿಗಳು ನಮ್ಮನ್ನು ಪ್ರೀತಿಸುತ್ತವೆ.ಮನುಷ್ಯನಾದರೋ ಎಲ್ಲಕ್ಕೂ ಲೆಕ್ಖಾಚಾರ ಹಾಕಿಯೇ ವ್ಯವಹರಿಸುತ್ತಾನೆ. ಪ್ರೀತಿಯ ಹಿಂದೆಯೂ ಕೂಡ ಸ್ವಾರ್ಥ ಅಡಗಿರುತ್ತದೆ.ಆದರೆ ಪ್ರಾಣಿಗಳು ಹಾಗಲ್ಲ.

ನಮ್ಮ ಮಾವನ ಮನೆಯಲ್ಲಿ ಒಂದು ನಾಯಿ ಇತ್ತು. ಅದರ ಹೆಸರು ಬ್ಲಾಕಿ. ಕಪ್ಪು ನಾಯಿ. ಸುಮಾರು ಎರಡೂವರೆ ಅಡಿ ಉದ್ದ, ಒಂದು ಅಡಿ ಎತ್ತರ ವಿತ್ತು.ಪ್ರತಿನಿತ್ಯ ನಮ್ಮ ಮಾವ ಮನೆಗೆ ಹಿಂದುರುಗಿದಮೇಲೆ ಅವರ ಮೈಮೇಲೆಲ್ಲಾ ಆಟವಾಡಿ ಸಮಾಧಾನ ಪಟ್ಟಮೇಲೆಯೇ  ಅವರನ್ನು ಕುರ್ಚಿಯಿಂದ ಏಳಲು ಬಿಡುತ್ತಿದ್ದುದು. ನಮ್ಮ ಮಾವಊರಲ್ಲಿಲ್ಲಾ ಎಂದರೆ ಅವರ ಒಂದು ಬಟ್ಟೆಯನ್ನು ಕಚ್ಚಿಕೊಂಡು ಹೋಗಿ ತನ್ನ ಬೆತ್ತದ ಕುರ್ಚಿಯಮೇಲೆ  ಹಾಕಿಕೊಂಡು ಅದರ ಪಕ್ಕ ಮಲಗುತ್ತಿತ್ತು. ಇಷ್ಟೊಂದು ಪ್ರೀತಿಸುತ್ತಿದ್ದ ಬ್ಲಾಕಿ ಒಂದು ದಿನಖಾಯಿಲೆಗೆ ಗುರಿಯಾಯ್ತು. ಅದೆಂತದೋ ಹುಣ್ಣಾಗಿ ಅದಕ್ಕೆ ಎರಡು-ಮೂರು ತಿಂಗಳು ನಿತ್ಯವೂ ವೈದ್ಯರು ಬಂದು ಚಿಕಿತ್ಸೆ ಮಾಡಿದರೂ ಫಲಕಾರಿಯಾಗಲೇ ಇಲ್ಲ. ಕೊನೆಗೇ ಹಾಗೇ ನೆರಳೀ ನೆರಳೀ ಐದಾರು ತಿಂಗಳಲ್ಲಿ ಕೊನೆಯುಸಿರೆಳೆಯಿತು.ಆ ಸಂದರ್ಭವನ್ನು ಗಮನಿಸಬೇಕು. ನಾಯಿಯ ಮೈನ  ಹುಣ್ಣಿನಿಂದ ಕೆಟ್ಟ ವಾಸನೆ.ರಕ್ತ-ಕೀವು ಇಳಿಯುತ್ತಿದೆ.ಆದರೂ ನಮ್ಮ ಮಾವನ ಮನೆಯಲ್ಲಿ ಒಬ್ಬರೂ ಬೇಸರಿಸಲೇಇಲ್ಲ. ಅದರ ಕೊನೆ ಉಸಿರಿರುವ ವರೆಗೂ ಮಗುವಿನಂತೆ ಅರೈಕೆ ಮಾಡಿಬಿಟ್ಟರು.

ನಾನು ಕೆ.ಜಿ.ಎಫ್ ನಲ್ಲಿದ್ದೆ. ಪ್ರತಿದಿನವೂ ರಾತ್ರಿ  ಬಂದು ಮಲಗುವಾಗ ಹನ್ನೊಂದರ ಮೇಲಾಗಿರುತ್ತಿತ್ತು. ನಾನೊಬ್ಬನೇ ಕ್ವಾರ್ಟರ್ಸ್ ನಲ್ಲಿದ್ದೆ. ಅಂದು ರಾತ್ರಿ ಬಂದು ಮಲಗುತ್ತೇನೆ.ಪಕ್ಕದ ಮನೆಯ ನಾಯಿ  ತನ್ನ ಕಾಲಿನಿಂದ  ಬಾಗಿಲನ್ನು ಪರ-ಪರ ಕೆರೆಯುತ್ತಿದೆ. ಬಾಗಿಲು ತೆಗೆಯುತ್ತೇನೆ. ನಾಯಿಯು ಬಾಲ ಅಲ್ಲಾಡಿಸುತ್ತಾ ನನ್ನ ಸುತ್ತ-ಮುತ್ತ ಪರದಾಡುತ್ತಿದೆ. ಅದಕ್ಕೆ ಹಸಿವಾಗಿದೆ. ಪಕ್ಕದ ಮನೆಯವರು ಊರಲ್ಲಿಲ್ಲ. ನಾನಾದರೋ ಹೊರಗೆಊಟಮಾಡಿ ಮಲಗಲು ಮನೆಗೆ ಬಂದಿರುವೆ. ಮನೆಯಲ್ಲಿ ಏನೂಆಹಾರ ವಿಲ್ಲ. ಏನುಮಾಡಲೂ ತೋಚಲಿಲ್ಲ. ಒಂದು  ಬನ್ ತಂದು ಹಾಕೋಣವೆಂದರೂ  ಅಂಗಡಿ ಬಾಗಿಲು ಹಾಕಿದೆ. ತಕ್ಷಣ ಒಂದು ಪ್ಲಾನ್ ಹೊಳೆಯಿತು.ಎಲೆ ಅವಲಕ್ಕಿ ಇತ್ತು. ಸ್ವಲ್ಪ ಮೊಸರಿತ್ತು. ಮೊಸರಲ್ಲಿ ಅವಲಕ್ಕಿ ಕಲಸಿಹಾಕಿದರೆ ಆನಂದವಾಗಿ ಲೊಚಗುಟ್ಟುತ್ತಾ ತಿಂದು ಕೊನೆಗೆ ನಮ್ಮ ಮನೆಯ ಬಾಗಿಲ ಬಳಿ ಮಲಗಿ ಬಿಟ್ಟಿತು.

ಬಬ್ಲಿಯ ನೆನಪಲ್ಲಿ ಹಿಂದಿನದೆಲ್ಲವೂ ನೆನಪಾಯ್ತು. 

ನಮ್ಮ  ಸಹನ, ಲಲಿತ, ರಮೇಶರೊಡನೆ ಬಬ್ಲಿಆಡಿತ್ತಿದ್ದ ಆಟವನ್ನು ಅವರು ಜೀವನದಲ್ಲಿ ಮರೆಯುವಂತಿಲ್ಲ. ಅವರಂತೂ ಮಗುವಿನಂತೆ ಬಬ್ಲಿಯನ್ನು  ಮುದ್ದಾಡುತ್ತಿದ್ದರು. ಅಂತಾ ಮುದ್ದು ಬಬ್ಲಿಯನ್ನು ಮರೆಯುವುದಾದರೂ ಹೇಗೆ?

 

Rating
No votes yet

Comments