ಬಯಕೆಗಳಿರದ ಮನುಜ
[ಇಲ್ಲಿ ಪ್ರಾಸಗಳ ಹಂಗಿಲ್ಲ; ಭಾವನೆಗಳಿಗೆ ಬಂಧನವಿಲ್ಲ. ಮನಸೇ ನೇರವಾಗಿ ನೀರಾಗಿ ಹರಿದಿರುವ ಒಂದು ಅಂಬೆಗಾಲಿನ ಯತ್ನ. ತಪ್ಪಿದ್ದರೆ ಸಹೃದಯರು ದಯಮಾಡಿ ಮನ್ನಿಸುವುದು. ]
ಬಯಕೆಗಳಿರದ ಮನುಜ
ಬಯಕೆಗಳಿರದ ಮನುಜ
ಶೂನ್ಯನಾವೆಯಂತೆ
ಇತರರವನಿಗೆ ಢಿಕ್ಕಿ ಹೊಡೆದರೂ
ಅವನಿತರರಿಗೆ ಎಡತಾಕಿದರೂ
ಮಿಥ್ಯ ನಿರ್ವಾತವೊಂದೇ ಅಲ್ಲಿರುವುದು
ಬಯಕೆಗಳಿರದ ಮನುಜ
ಬುದ್ಧನಂತೆ ಸ್ಥಿತಪ್ರಜ್ಞ
ಕ್ರೂರತೆಯೂ ಕೂಡಾ
ಅವನೆದುರಿಗೆ ಮುಗ್ಧಮಗುವಾಗುವುದು
ಬಯಕೆಗಳಿರದ ಮನುಜ
ಮಹಾಮೌನಕ್ಕೆ ಶರಣಾಗಿರುವ ಮುನಿಯಂತೆ
ಕಾಮ ಕ್ರೋಧಗಳೂ ಪ್ರೀತಿ ಸ್ನೇಹಗಳೂ
ಅವನಿಗೆ ಬೇಲಿ ಕಟ್ಟಲಾರವು
ಬಯಕೆಗಳಿರದ ಮನುಜ
ಇಂದೇ ಅರಳಿರುವ ಹೂವಿನಂತೆ
ಮುಂದಿನದರರಿವು ಅವನಿಗಿಲ್ಲ
ಅರಿವಾದರೂ ಚಿಂತೆಯಿಲ್ಲ
ಬಯಕೆಗಳಿರದ ಮನುಜ
ನನ್ನಂತೆ, ನಾಸ್ತಿಕನೂ ಅಲ್ಲ
ಅಸ್ತಿಕನೂ ಅಲ್ಲ ನಂಬದೆಯೂ
ನಂಬಿ ಬದುಕಿಹನು.
-> ನ. ಗೋ. ಪ್ರ.
Rating
Comments
ಉ: ಬಯಕೆಗಳಿರದ ಮನುಜ
ಉ: ಬಯಕೆಗಳಿರದ ಮನುಜ
In reply to ಉ: ಬಯಕೆಗಳಿರದ ಮನುಜ by ppsringeri
ಉ: ಬಯಕೆಗಳಿರದ ಮನುಜ