ಬಯಕೆಗಳ ಮಾಯೆ (ಶ್ರೀ ನರಸಿಂಹ 34)

ಬಯಕೆಗಳ ಮಾಯೆ (ಶ್ರೀ ನರಸಿಂಹ 34)

ಮನಸಿನಲಿ ಬರುವ ಬಯಕೆಗಳಿಗೆ ಮಿತಿ ಎಂಬುವುದಿಲ್ಲ
ಪಡೆಯಲಿಚ್ಛಿಸುವುದು  ಮನಸು ತಾ ಬಯಸಿದುದನೆಲ್ಲ
ಆಸೆ ಎಂಬುದು ಮದಿರೆಯೊಳು ತುಂಬಿಹ ನಶೆಯಂತೆ
ದಾಸನಾದರೆ ಇದಕೆ ಬಾಳಿನಲಿ ತಪ್ಪದು ನಿನಗೆ ಚಿಂತೆ
 
ಬಯಸಿದುದನೆಲ್ಲ ಪಡೆಯಲೇ ಬೇಕೆನುವ ಛಲವೇಕೆ
ಸಿಗದಿರಲು ಮನಸು ನಿರಾಸೆಯ ಹೊಂದುವುದೇತಕೆ
ಮಗುವಿಗೇನು ಬೇಕೆಂಬುದ ತಾಯಿ ತಿಳಿದಿರುವಂತೆ
ನರಹರಿಯೆ ಈಡೇರಿಸುವ ನಮ್ಮ ಬಯಕೆಗಳನಂತೆ
 
ಬಯಸಿದುದು ಸಿಗಲಿ,ಸಿಗದಿರಲಿ ಸಮಚಿತ್ತದಲವನು ಸ್ವೀಕರಿಸು
ನಿನಗೆ ಬೇಕಿಹುದೇನೆಂದರಿತಿಹ ಶ್ರೀನರಸಿಂಹನಲಿ ಮನಸನಿರಿಸು

 

Rating
No votes yet

Comments