ಬಯಕೆ

ಬಯಕೆ

ಬಯಕೆಯೂರಿನ ಬಿಸಿಲಲ್ಲಿ

ಉಂಡದ್ದು ಏನು

ಕಂಡದ್ದು ಏನು

ನಡೆದಿದ್ದು ಏನು

ಹೀಗಿತ್ತು ಹೀಗಿಲ್ಲ

ನಡೆವ ದಾರಿ

ಸುರಿವ ಮಂಜು

ಉರಿವ ಬಿಸಿಲು

ಉಂಡದ್ದು ಒಡಲ ಊಟ,

ಕಂಡದ್ದು ಕನಸೂಟ

ಎದದ್ದು ಬಯಲಿನ ಅರಮನೆ

ನಡೆವ ನೆಲ,

ಕುಡಿದ ಜಲ

ಕಂಡ ನೋಟ

ಎಲ್ಲವು ಕನಸೇ

ಓ ಮನಸೇ ನೀನೇಕೆ ಚಂಚಲ ನಿದ್ದೆಯೊಳಗೆ.

Rating
No votes yet

Comments