ಬರಲಿರುವ ಪೊಲ್ಲುಶನ್ ಫ್ರೀ, ಕಡಿಮೆ ವೆಚ್ಚದ ಕಾರುಗಳು!

ಬರಲಿರುವ ಪೊಲ್ಲುಶನ್ ಫ್ರೀ, ಕಡಿಮೆ ವೆಚ್ಚದ ಕಾರುಗಳು!

ಇನ್ನು ಕೆಲವೇ ವರುಶರಳಲ್ಲಿ ಈಗ ಇರುವ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು, ಮೂಲೆ ಸೇರಲಿವೆ, ಇಲ್ಲವೇ ಬದಲಾಗಲಿವೆ. ಮುಂದಿನ ದಿನಗಳಲ್ಲಿ ಜ಼ೀರೋ ಪೊಲ್ಲುಶನ್ ಮೋಟಾರುಗಳು ರೋಡುಗಳಿಗೆ ಇಳಿಯಲಿವೆ. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಕಾರ್ ಒಂದು ಒಳ್ಳೆಯ ಜತನವಾಗಿದೆ, ಆದರೆ ಅದನ್ನು ತುಂಬಾ ಹೊತ್ತು ಚಾರ್ಜ ಮಾಡಬೇಕಿರುವದರಿಂದ ಅದರದೇ ಆದ ಲಿಮಿಟೇಶನ್‍ಗಳನ್ನು ಹೊಂದಿದ್ದು, ಜನರಿಗೆ ಹಿಡಿಸಲಿಲ್ಲ ಅಂತಲೇ ಹೇಳಬಹುದು. ಈ ಲಿಮಿಟೇಶನ್‍ಗಳನ್ನು ತೆಗೆದು ಹಾಕಿಕೊಂಡು ಮುಂದಿನ ದಿನಗಳಲ್ಲಿ ಬಯೋ ಫ಼್ರೆಂಡ್ಲಿ ಕಾರುಗಳು ಮುನ್ನುಗ್ಗಲಿವೆ.

ಬಯೋ ಕಾರ್‌ಗಳ ಬಗೆಗಳು

ಹೈಬ್ರಿಡ್ ಕಾರು: ಎರಡು ಇಲ್ಲವೇ ಹೆಚ್ಚಿನ ಬಗೆಯ ಇಂಧನವನ್ನು ಬಳಸಿಕೊಂಡು ಓಡುವ ಕಾರುಗಳನ್ನು ಹೈಬ್ರಿಡ್ ಕಾರು ಅನ್ನುತ್ತಾರೆ. ಎಲೆಕ್ಟಿಕ್-ಪೆಟ್ರೋಲಿಯಮ್ ಕಾರುಗಳು, ಎಲೆಕ್ಟ್ರಿಕ್ ಮತ್ತು ಪೆಟ್ರೋಲ್ ಕಾರುಗಳನ್ನು ಕೂಡಿಸಿ ಸೇರಿಸಿ ಮಾಡಿದಂತದು, ಇದು ಪೆಟ್ರೋಲ್ ಬಳಕೆಯನ್ನು ಕಡಿಮೆಗೊಳಿಸುವದಲ್ಲದೇ ಅದರಿಂದ ಉಂಟಾಗುವ ಪೊಲುಶನ್ ತಡೆಯುತ್ತದೆ.

ಹೈಡ್ರೋಜೆನ್ ಕಾರು: ಹೈಡ್ರೊಜನ್ ಕಾರು ನೀರನ್ನು ಬಳಸಿಕೊಂಡು ಓಡುತ್ತದೆ!, ಹೌದು. ನೀರು, ಎರಡು H ಮತ್ತು ಒಂದು O ನ ಕಣಗಳಿಂದ ಆಗಿದೆ. ನೀರಿನಿಂದ ಎಚ್ ಮತ್ತು ಓಗಳನ್ನು ಬೇರೆಗೊಳಿಸಲು ಎಲೆಕ್ಟ್ರಿಕ್‍ನ್ನು ಬಳಸಲಾಗುತ್ತದೆ. ಕಾರಿನಲ್ಲಿ hydrogen fuel cell ಅಳವಡಿಸಲಾಗಿರುತ್ತದೆ, ಇದು ಹೈಡ್ರೊಜೆನ್‍ನ್ನು ಬಳಸಿಕೊಂಡು ಕರೆಂಟ್‍ನ್ನು ಹುಟ್ಟು ಹಾಕುತ್ತದೆ. ಈ ಕರೆಂಟನ್ನು ಬಳಸಿ ಕಾರು ಓಡುತ್ತದೆ. ಬಿ.ಎಮ್.ಡಬ್ಲು, ಫ಼ೋರ್ಡ್ ಮುಂತಾದ ಕಂಪನಿಗಳು ಈಗಾಗಲೇ ಹೈಡ್ರೋಜೆನ್ ಕಾರುಗಳನ್ನು ಹುಟ್ಟಾಕಿವೆ.

ಹೈಡ್ರೊಜೆನ್ ಕಾರುಗಳನ್ನು ತಯಾರು ಮಾಡುವದು ತುಸು ದುಬಾರಿ ಆದುದರಿಂದ ಇವುಗಳ ತಯಾರಿಕೆಯನ್ನು ಸೋಯಿ ಮಾಡಲು ಹಲವು ಕಂಪನಿಗಳು ಜತನಗೈಯ್ಯುತ್ತಿವೆ.

ಈ ಪಾಪೆಯಲ್ಲಿ ನೀವು ನೋಡುತ್ತಿರುವದು, ಬಿಎಮ್‍ಡಬ್ಲು ಕಾರಿಗೆ ಅಳವಡಿಸಲಾಗಿರುವ ಹೈಡ್ರೋಜೆನ್ ತುಂಬಿಸಲು ವಾಲ್ವ್.

 

 

 

 

ಕಾಂಪ್ರೆಸ್ ಮಾಡಿದ ಗಾಳಿ ಕಾರು: ಇಂಡಿಯಾದಲ್ಲೇ ಕೆಲವೇ ದಿನಗಳಿಗೆ TATA/MDI OneCat ಅನ್ನುವ ಕಾರು ಓಡಾಡಲಿದೆ. ಇದು ಗಾಳಿಯ ಮೇಲೆ ಓಡುತ್ತದೆ!! ಗಾಳಿಯನ್ನು ಒತ್ತಡಕ್ಕೊಳಪಡಿಸಿ fuel  ಆಗಿ ಬಳಸಿಕೊಳ್ಳಲಾಗುತ್ತದೆ. ಟಾಟಾದವರು, ಎಮ್.ಡಿ.ಐ ಒಂದಿಗೆ ಒಪ್ಪಂದ ಮಾಡಿಕೊಂಡು ಟಾಟಾ ಈ ಕಾರನ್ನು ತಯಾರು ಮಾಡುತ್ತಿದೆ. ಈ ಕಾಂಪ್ರೆಸ್ಡ್ ಏರ್‍‍ನು ಕೂಡ ಪೆಟ್ರೋಲ್/ಡೀಸೆಲ್ ಗಳಂತೆ ಪಂಪ್‍ಗಳಲ್ಲಿ ತುಂಬಲಾಗುತ್ತದೆ,, ಆದರೆ ಇದು ಅವುಗಳಿಗಿಂತ ತುಂಬಾ ಚೀಪ್!. ಈ ಕಾರನ್ನು ಮಂದಿ ಮೆಚ್ಚಿಕೊಂಡರೆ ಮುಂದಿನ ಕಾರು ಉದ್ದೆಮ ಬೇರೆನೇ ಆಗುವದು.

ಸೋಲಾರ್ ಕಾರು: ಕೆಲ ವರುಶದ ಹಿಂದೆ ಕೆಲ ಐ.ಐ.ಟಿ ಓದುಗರು ಸೋಲಾರ್ ಕಾರ್ ಒಂದನ್ನು ಹುಟ್ಟು ಹಾಕಿದ್ದರು. ಸೋಲಾರ್ ಕಾರ್‌ಗಳು ಈಗಿನ ಮಟ್ಟಿಗೆ ಎಕ್ಸೆರಿಮೆಂಟ್ ಲೆವೆಲ್ಲಿನಲ್ಲೇ ಇದ್ದರೂ ಮುಂಬರುವ ದಿವಸಗಳಲ್ಲಿ ಇವು ಸಾದ್ದೆತೆಗಳಾಗುವದಲ್ಲಿ ಅನುಮಾನವಿಲ್ಲ. 

University of Michigan ಮತ್ತು University of Minnesota ಅವರ ಸೋಲಾರ್ ಕಾರುಗಳು

 

ಸೋಲಾರ್ ಕಾರುಗಳಿಗೆ ಬಾನುವಿನ ಕದಿರೇ fuel. ಹಾಗಾಗಿ ಇವುಗಳನ್ನು ನಡೆಸುವದು ಎಲ್ಲಕ್ಕಿಂತ ಚೀಪ್. ಆದರೆ ಇವನ್ನು ತಯಾರು ಮಾಡುವದು ಈಗಿನ ಮಟ್ಟಿಗೆ ತುಟ್ಟಿ, ಟೆಸ್ಲಾ ಮೋಟಾರ್ಸ್ ಅನ್ನುವ ಕಂಪನಿ ತಯಾರು ಮಾಡಿದ Tesla Roadster ಅನ್ನುವ ಎಲೆಕ್ಟ್ರಿಕ್ ಸ್ಪೋರ್ಸ್ ಕಾರಿಗೆ ತುಂಬಾ ಬೇಡಿಕೆ ಇದೆ ಅಂತೆ.

Rating
No votes yet