ಬಸ್ಸು ಪಯಣ ಭೂಗೋಳ-ಪ್ರವಾಸ, ಕೆಫೆಯ ಚರ್ಚೆ ಕಾಲ-ಪ್ರವಾಸ: ಗಾದೆಗೊಂದು ಗುದ್ದು-೬೫
(೩೩೧) ಅದು ಬಹಿರಂಗಗೊಂಡಾಗ ನಿನ್ನನ್ನು ಕುರಿತಾದ ಆ ವಿಷಯವನ್ನು ಸ್ವತಃ ನಿನಗೆ ನೀನೇ ಹೇಳಿಕೊಳ್ಳಲು ಸಂಕೋಚಪಡುವುದನ್ನೇ ’ಎಂಬರಾಸ್‍ಮೆಂಟ್’ ಎನ್ನುವುದು.
(೩೩೨) ಕನಸುಗಳು ತಾವೇ ತಾವಾಗಿ ಹುಟ್ಟಿಕೊಳ್ಳುತ್ತವೆ. ಸ್ವತಃ ಸರ್ವಶಕ್ತ ಚಕ್ರವರ್ತಿಯೊ ಅದನ್ನು ಸೃಷ್ಟಿಸಲಾರ!
(೩೩೩) ದುರಂತಗಳು ಮಾತ್ರ ಕಣ್ಮನಸೆಳೆವ ಸುದ್ಧಿಯಾಗುವ ಸಾಮರ್ಥ್ಯ ಹೊಂದಿರುವುದು ಸುದ್ಧಿಮಾಧ್ಯಮದ ದುರಂತ!
(೩೩೪) ನಾವು ಮೋಕ್ಷದ ತಿಕ್ಕಲು ಹತ್ತಿಸಿಕೊಂಡಿರುವವರೆಗೂ ಬದುಕಿನ ಆಹ್ಲಾದವನ್ನು ಸವಿಯಲಾರೆವು’ ಎಂಬುದೇ, ಯಾರು ಮೋಕ್ಷ ಪಡೆದವರೆಂದು ನಾವು ಭಾವಿಸಿದ್ದೇವೋ, ಅಂತಹವರ ಬೋಧನೆಯ ಸಾರ!
(೩೩೫) ಬಸ್ಸಿನಲ್ಲಿ ಪಯಣಿಸುವುದು ಭೂಗೋಳ-ಪ್ರವಾಸವಾದರೆ ಕೆಫೆಯಲ್ಲಿ ಚರ್ಚಿಸುವುದು ಕಾಲ-ಪ್ರವಾಸ!
Rating