ಬಹಳ ದಿನಗಳ ನಂತರ ಹೀಗೊಂದು ಸ್ಕೆಚ್
ಚಿತ್ರ
ಬಹಳ ದಿನಗಳ ನಂತರ ಹೀಗೊಂದು ವ್ಯಂಗ್ಯಚಿತ್ರ ಬಿಡಿಸಿದೆ. ಚಿತ್ರ ಮೂಡಿಬಂದ ರೀತಿ ನನಗೇ ಅಷ್ಟು ಇಷ್ಟವಾಗಲಿಲ್ಲ. ಆದರೆ ಚಿತ್ರ ಬಿಡಿಸಲು ಕಳೆದ ಸಮಯ ಖುಷಿ ಕೊಟ್ಟಿತು.
ಬಿಹಾರದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲೆಯಲ್ಲಿ ತಯಾರಿಸಿದ ಆಹಾರ ತಿಂದು ಸತ್ತು ಹೋದ ಮಕ್ಕಳ ಸುದ್ದಿ ನಿಮಗೆಲ್ಲ ಗೊತ್ತೇ ಇದೆ. ಕರ್ನಾಟಕದಲ್ಲಿ ಬಹುಶಃ ಚಿತ್ರದಲ್ಲಿರುವಂತೆ ಆಗುತ್ತಿರಬಹುದು.
(ದೊಡ್ಡ ಗಾತ್ರದ ಚಿತ್ರವನ್ನು ವೀಕ್ಷಿಸಲು ಬಲಭಾಗದಲ್ಲಿರುವ ಪುಟ್ಟ ಚಿತ್ರದ ಮೇಲೆ ಕ್ಲಿಕ್ ಮಾಡಿ).
Rating
Comments
ಉ: ಬಹಳ ದಿನಗಳ ನಂತರ ಹೀಗೊಂದು ಸ್ಕೆಚ್
ಸರಳ ಮತ್ತು ಸಕಾಲಿಕ. ಇದನ್ನು ನೋಡುವ ಸ್ವಲ್ಪ ಮೊದಲು ಸಿಂಗಪುರದ ಆಂಗ್ಲ ಪ್ರತ್ರಿಕೆಯೊಂದರಲ್ಲಿ ' ಭಾರತದಲ್ಲಿ ಮಧ್ಯಾಹ್ನದೂಟ ನಿರಾಕರಿಸುತ್ತಿರುವ ಮಕ್ಕಳು' ತಲೆಬರಹದಡಿಯ ಸೀರಿಯಸ್ ಲೇಖನ ಓದಿ ಸಂಪದಕ್ಕೆ ಬಂದರೆ, ಲಘು ಲಹರಿಯ ನಿಮ್ಮ ಈ ವ್ಯಂಗ್ಯ ಚಿತ್ರ :-)
- ನಾಗೇಶ ಮೈಸೂರು
ಉ: ಬಹಳ ದಿನಗಳ ನಂತರ ಹೀಗೊಂದು ಸ್ಕೆಚ್
ನಾಡಿಗರೆ,
ಬಹಳ ದಿನಗಳ ನಂತರ ಹೀಗೊಂದು ಸ್ಕೆಚ್ ಎನ್ನುವ ಶೀರ್ಷಿಕೆಯನ್ನು ಓದುತ್ತಿದ್ದಂತೆ ಕುತೂಹಲದಿಂದ ಒಳಹೊಕ್ಕು ನೋಡಿದರೆ ಬಿಹಾರಿನ ಕಲುಷಿತ ಆಹಾರದ ಕುರಿತಾದ ಸ್ಕೆಚ್ ಇದೆ. ನನ್ನೀ ಸುನೀಲರೆಂದಂತೆ ಇದು ನಿಜಕ್ಕೂ ತಲೆತಗ್ಗಿಸುವಂತಾಹದ್ದು. ಇದಕ್ಕೆ ಕಾರಣರಾದವರಿಗೆ ಖಂಡಿತಾ ಸ್ಕೆಚ್ ಹಾಕಬೇಕು! ಅದೇನೇ ಇರಲಿ ನಿಮ್ಮ ಸ್ಕೆಚ್ ಸುಂದರವಾಗಿ ಮೂಡಿ ಬಂದಿದೆ.
ಉ: ಬಹಳ ದಿನಗಳ ನಂತರ ಹೀಗೊಂದು ಸ್ಕೆಚ್
ವ್ಯಂಗ್ಯ ಮನಮುಟ್ಟುತ್ತದೆ ಆದರು ಒ೦ದು ಅನುಮಾನ ದೊಡ್ಡವರು ಅದನ್ನೆಲ್ಲ ತಿನ್ನುವರಾ? ಬೇಕಿದ್ದಲೆ ಅದನ್ನೆಲ್ಲ ಮಾರಿ ಬಂದ ಹಣವನ್ನು ಪಡೆಯುವರು, ಉಳ್ಳವರಿಗೆ ಹಣವೆ ಅಹಾರ, ಬಡವರಿಗೆ ಅನ್ನವೆ ಅಹಾರ ಅಲ್ಲವೆ ?
ಉ: ಬಹಳ ದಿನಗಳ ನಂತರ ಹೀಗೊಂದು ಸ್ಕೆಚ್
ನಿಜಕ್ಕೂ ಇಂತಹ ಸೂಚನೆಗಳನ್ನು ಹಿರಿಯ ಅಧಿಕಾರಿಗಳು ನೀಡುತ್ತಲೇ ಇರುತ್ತಾರೆ. ಶಿಕಾರಿಪುರದಲ್ಲಿ ಒಮ್ಮೆ ಹಿಂದುಳಿದ ವರ್ಗದ ಹಾಸ್ಟೆಲ್ ಒಂದರಲ್ಲಿ ಕಳಪೆಯಾಗಿ ಊಟ ಕೊಡುವ ಬಗ್ಗೆ ದೂರುಗಳು ಬಂದಾಗ ನಾನು ಪರಿಶೀಲನೆಗೆ ಹೋಗಿದ್ದು ದೂರು ಸತ್ಯವೆಂದು ಕಂಡಿತ್ತು. ಹಾಜರಿದ್ದ ಅಲ್ಲಿನ ವಾರ್ಡನ್ ಸಬೂಬು ಹೇಳಿದಾಗ ಒಂದು ತಟ್ಟೆಯಲ್ಲಿ ಅದೇ ಊಟವನ್ನು ಹಾಕಿಸಿ ಆ ವಾರ್ಡನ್ ಸ್ವತಃ ತಿನ್ನುವಂತೆ ಮಾಡಿದ್ದ ಘಟನೆ ನೆನಪಾಯಿತು. ಉತ್ತಮ ವ್ಯಂಗ್ಯ ಚಿತ್ರವಿದು!