ಬಹುಮಾನಿತ ಕಥೆ

ಬಹುಮಾನಿತ ಕಥೆ

ಇದ್ದಕಿದ್ದಂತೆ ಒಬ್ಬ ಮುದಿಯ ಆ ಹುಡುಗಿ ಹತ್ರಕ್ಕೆ ಹೋದ. ಎನೇನೊ ವಿಚಿತ್ರವಾಗಿ ಹಲ್ಲು ಕಿಸೀತಾ ಇದ್ದಿದ್ದು ನೋಡಿದ್ರೆ ನನ್ನ ಅನುಮಾನ ನಿಜ ಅಯ್ತು. ಇನ್ನೇನು ಅವಳ ಮೈಮೆಲೆ ಬಿದ್ದೆ ಬಿಟ್ಟ ಅನ್ನೋವಾಗ ಒಬ್ಬ ಧಡಿಯ ಬಂದು ಮುದುಕನ್ನ ಒಂದೇ ಕೈಯಲ್ಲಿ ಎತ್ತಿ ಹುಡುಗಿ ಇಂದ ಒಂದು ಮೀಟರ್ ದೂರ ನಿಲ್ಲಿಸಿಬಿಟ್ಟ. "ಲೇ ಮುದಿಯ ನೀ ಕೊಡೊ ಕಾಸಿಗೆ ಅವಳ ಕಾಲುಂಗರ ಕೂಡ ಮುಟ್ಟಕಾಗಲ್ಲ, ತೊಲಗಾಚೆ" ಅಂತ ಹಿಂದೀಲಿ ಬೈದು ಕಳಿಸಿಬಿಟ್ಟ. ನಾನು ಒಳಗೊಳಗೆ ಖುಶಿ ಪಡ್ತ ಇದ್ದೆ; ಎರಡು ಹೊತ್ತಿನ ಊಟಕ್ಕೆ ಒಂದು ದಾರಿ ಆಯ್ತು ಅಂತ.

ಸಣ್ಣಕ್ಕೆ ಸುರಿಯೊ ಮಳೇಲಿ ಅರ್ಧ ಗಂಟೆ ಇಂದ ಕಾದು ಕಾದು ಚಳಿ ಇಂದ ನಡಗೋಕೆ ಶುರು ಆಯ್ತು. ಅಸ್ಟರಲ್ಲೆ ಆಸಾಮಿ ಬಂದೆ ಬಿಟ್ಟ. ಅಲ್ಲೆ ಹತ್ತರ್ದಲ್ಲೆ ಇದ್ದ ಹೋಟ್ಲಿಗೆ ಹೋಗಿ ಎರಡು ಟೀ ಆರ್ಡರ್ ಮಾಡಿದೆ. ಆ ವಯ್ಯ ಇದ್ದಕಿದ್ದಂತೆ ಬಾಯಿ ತೆಗೆದು, ಕಾಡು ಹಂದಿ ಥರ ಹಲ್ಲು ಕಿಸೀತಾ, ’ಎರಡಲ್ಲ ೪ ಇಗ ತಗೊಂಡು ಬಾ ೪ ಅಮೇಲೆ’ ಅನ್ಬೇಕೆ?. ಅದಕ್ಕೆ ವೈಟೆರ್, ’ಇಬ್ಬರಿಗೆ ೮ ಕಪ್ ಟೀ ನಾ’ ಅಂತ ಗೊಣಗ್ತಾ ಹೋದದ್ದು ಕೇಳಿಸ್ತು. ಈ ವಯ್ಯ ’ಇಬ್ಬರಿಗೆ ೮ ಅಲ್ಲಪಾ, ಒಬ್ಬರಿಗೆ ೭, ಇನ್ನೊಬ್ಬರಿಗೆ ಒಂದು’ ಅಂತ ಹೇಳಿದ್ದು ಅವನಿಗೆ ಕೇಳ್ಸ್ತೊ ಇಲ್ವೊ?. ಕೊಳ್ಗೆರಿಲಿರೊ ಚರಂಡಿ ಥರ ಇದ್ದ ಅವನ ಬಾಯಿ ಇಂದ ಸ್ವಲ್ಪ ದೂರಾನೆ ಕೂತು, ಆ ಹುಡುಗಿ ಬಗ್ಗೆ ವಿಚಾರ್ಸಕ್ಕೆ ಶುರು ಮಾಡ್ದೆ. ಸೂಳೆಮಗ ಹುಡುಗೀರ ಬಗ್ಗೆ ಅಷ್ತ್ಟು ಕೆಟ್ಟದಾಗಿ ಮಾತಾಡ್ತಾನೆ ಅಂದ್ರೆ ಅಸಹ್ಯವಾಗುತ್ತೆ. ಕೆಲಸ ಅಗ್ಬೇಕು ಅಂದ್ರೆ ಕತ್ತೆ ಕಾಲಾದ್ರೂ ಹಿಡೀಲೆ ಬೇಕು ಅಂತ ಸುಮ್ನಾದೆ. ಅಲ್ಲಿಂದ ಹೊರಗೆ ಬಂದಾಗ ದಾರೀಲಿದ್ದ ಚರಂಡೀಲಿ ಕೆಂಪು ಮಳೆ ನೀರು ಹರೀತಾ ಇದ್ದಿದ್ ನೊಡಿ ಮತ್ತೆ ಅವನದೆ ನೆನಪಾಯ್ತು. ಸೂಳೇಮಗ ಇಲ್ಲೆನಾದ್ರೂ ನೀರು ಬದ್ಲು ಟೀ ಹರೀತಾ ಇದ್ದಿದಿದ್ರೆ, ಚರಂಡಿಲಿರೊ ಹುಳುಗಳ ಥರ ಇಲ್ಲೆ ಬಿದ್ದಿರ್ತಿದ್ನೆನೊ ಅನ್ನುಸ್ತು.

ನಿಜಕ್ಕೂ ಅವಳ ಮನೆ ಯಾವ ಎಂ.ಪಿ, ಎಂ.ಎಲ್.ಎ ಮನೆಗೂ ಕಮ್ಮಿ ಇರ್ಲಿಲ್ಲ. ಅಸ್ಟಕ್ಕೂ, ಅಲ್ಲಿಗೆ ಬರೋರೂ ಅಂಥವರೆ ತಾನೆ. ಆ ಚಾ-ಕುಡುಕನಿಂದಾಗಿ ನಾನು ಒಳಗೆ ಬಂದಿದ್ದಾಯ್ತು. ಆದರೆ ಇಲ್ಲೆನಾದ್ರೂ ಇವಳು ಕ್ಯಾತೆ ತೆಗೆದ್ರೆ ನನ್ನ ಗತಿ ಅಸ್ಟೆ. ಅಸ್ಟರಲ್ಲೆ ಅವಳ ಬಂದು, ’ಕೂತಿರಿ ಸ್ನಾನ ಮಾಡಿ ಬಂದು ಬಿಡ್ತಿನಿ’ ಅಂತ ಹೆಳಿ ಒಳಗೊಗ್ತ ಇರ್ಬೆಕಾದ್ರೆ ನಾನೆ ತಡ್ದು, ಇಲ್ಲ ಅದು ನಾನು ಅದಕ್ಕಲ್ಲ ಬಂದದ್ದು ಅಂತ ತೊದಲ್ತ ಹೇಳಿಬಿಟ್ಟೆ. ಅವಳು ಒಂದು ಕ್ಷಣ ಅವಕ್ಕಾಗಿ, ನಂತರ ಜೋರಾಗಿ ನಗ್ತಾ, ’ಜನ ಇಲ್ಲಿಗೆ ’ಅದಕ್ಕಲ್ದೆ’ ಇನ್ನ್ಯಾತಕ್ಕೆ ಬರ್ತಾರೋ’, ಅಂತ ವ್ಯಂಗ ಆಡಿದ್ಲು. ಅವಳು ಹಿಂದೀಲಿ, ನಾನು ಹಿಂದಿ-ಇಂಗ್ಲೀಷ್ ಅಲ್ಲಿ ಮಾತಡ್ತ, ಮಾತಡ್ತ ಬರೊಬ್ಬರಿ ಐದು ನಿಮಿಶ ಆದ ಮೇಲೆ ಅವಳಿಗೆ ಹೇಳ್ಡೆ ನಾನು ಯಾಕೆ ಬಂದದ್ದು ಅಂತ. ನಾನು ಅನ್ಕೊಂಡಗ್ಗೆ ಅವಳೇನು ರೊಚ್ಚಿಗೇಳಿಲ್ಲ, ಬದಲಾಗಿ ಯಾರ್ಗಾದ್ರೂ ಹೇಳ್ಬೆಕು ಅಂತ ಕಾಯ್ತಾ ಇರೊರ ಹಾಗೆ, ಅವಳ ಕಥೇನ ಹೇಳೊಕೆ ಶುರು ಮಾಡಿಯೆ ಬಿಟ್ಲು.

"ಕಾಲೇಜಲ್ಲಿ ನನಗೆ, ಬಾಯ್ ಫ಼್ರೆಂಡ ಅಂತ ಯಾರೂ ಇರ್ಲಿಲ್ಲ. ಕಾಲೆಜೂ ಕೂಡ ಅಂಥ ಪಾಶ್ ಅಲ್ಲ. ಮೇಲಾಗಿ ನನಗೆ ಯಾರ್ ಮೇಲೂ ಅಂಥ ಆಸಕ್ತಿ ಇರ್ಲಿಲ್ಲ, ಒಬ್ಬನ ಹೊರತಾಗಿ. ಅವನ ಮೈಕಟ್ಟೆ ಅಂಥದಿತ್ತು. ಭಾರಿ ಎತ್ತರ, ದಪ್ಪದ, ಆಳು. ಮೂರು ಗಂಟೆ ಥೇಟರಲ್ಲಿ ಡೈನಾಸರ್ ಗಳನ್ನ ನೊಡ್ಕೊಂದು ಹೊರ್ಗೆ ಬಂದ್ರೂನು, ಇವನನ್ನ ನೊಡಿದ ತಕ್ಷಣ ಅಬ್ಬ ಅನ್ಬೆಕು ಅಂಥ ದೇಹ. ಉಂಡು, ತಿಂದು ಆರಾಮಾಗಿರೊ ಟೈಮ್ ಅಲ್ಲಿ ಅದ್ಯಾಕೊ ಸುಮ್ ಸುಮ್ನೆ ಇವನ ಮೇಲೆ ಮನಸಾಗೋಕೆ ಶುರು ಅಯ್ತು; ಕೈಯಲ್ಲಿ, ಪುಸ್ತಕಾನೆ ಇರ್ಲಿ, ಪೆನ್ನೆ ಇರ್ಲಿ, ತಲೆಲಿ ಇವನೆ ಇರ್ತಿದ್ದ. ಕೈನಟಿಕ್ ತಗೊಂಡು ಜೋರು ಸ್ಪೀಡ್ ಅಲ್ಲಿ ಹೊಗ್ತಿರ್ಬೆಕಾದ್ರೆ, ಗಾಳಿ, ತುಂಬಿದ ಎದೆ ಮೆಲೇಲ್ಲ ಆಟ ಆಡ್ತ ಇರ್ಬೆಕಾದ್ರೂ ಅದು ಇವನದೆ ಕೈಗಳಾಗ್ಬರ್ದಾ ಅನ್ನಸ್ತ ಇತ್ತು. ಕಾಲೆಜಿನ ಕಾರಿಡಾರ ಅಲ್ಲಿ ಅವನು ರಭಸದಿಂದ ನಡ್ದು ಬರೊವಾಗ ಕಾಲು ಅಡ್ಡ ಕೊಟ್ಟು ಮೈಮೆಲೆ ಬೀಳಿಸ್ಕೊಬೇಕು ಅಂತ ಅನ್ಸ್ತ ಇತ್ತು. ಹಾಗೆ ಅವನು ಬಿದ್ದಾಗ ನನ್ನೆದೆ ಅಪ್ಪಚ್ಚಿ ಆಗೊದನ್ನ ನೆನಸಿಕೊಂಡು ಮೈ ಜುಮ್ ಅಂತಿತ್ತು.ಆದ್ರೆ ಅತಿ ಆದ್ರೆ ಅಮೃತಾನು ವಿಷ ಅಂತರಲ್ಲ; ಹಾಗೆ ಅಯ್ತು"

" ಯಾಕೆ ಏನಾಯ್ತು?" "ಹುಚ್ಚುಚ್ಚಾಗಿ ಹರೀತ ಇದ್ದ ನನ್ನ ಬಯಕೆಗಳಗನ್ನ ಜೀವನ ಇಡಿ ತೀರ್ಸ್ಕೊ ಅಂತ ಇಲ್ಲಿ ಬಿಟ್ಟು ಹೋದ"

"ಎನು ಹೇಳ್ತ ಇದಿರ. ನೀವು ಪ್ರೀತಿಸಿದ ಹುಡುಗನೆ ನಿಮ್ಮನ್ನ.." "ಪ್ರೀತ್ಸಿದಲ್ಲ, ಕಾಮಿಸಿದ್ದ ಹುಡುಗ; ಅಪ್ಪ ತೀರ್ಕೊಂಡ್ ಮೇಲೆ, ಅಮ್ಮನ ಮಾತು ಕೇಳ್ದೆ ಇವನ ಜತೆ ಇಲ್ಲಿಗೆ ಬಂದೆ; ಕೆಲ್ಸ ಕೊಡ್ಸ್ತಿನಿ ಅಂತ ಅವನೆ ಕರ್‍ಕೊಂಡು ಬಂದು ಇಲ್ಲಿ ಬಿತ್ತು ಹೊದ. ಅವನ ಬಗ್ಗೆ ಎನೂ ತಿಳಿದೇ ಮೋಸ ಹೊಗ್ಬಿಟ್ಟೆ. ಈಗ ಅಮ್ಮ ಹೇಗಿದಾರೊ ಎನೊ" "ಆ ಹುಡುಗ?" "ಹೋಗಿರ್ತಾನೆ ಇನ್ನೊಂದಿಸ್ಟು ಜನಕ್ಕೆ ಮರಳು ಮಾಡೋಕೆ"

ನಾನು ಅವಳನ್ನೆ ನೊಡ್ತಾ ಕೂತಿದ್ದೆ. ಯಾವ್ದೆ ಎಮೊಶನ್ ಇಲ್ದೆ ಹೇಳ್ತಾನೆ ಇದ್ಳು. ನನಗೆ ಎನ್ ಮಾಡ್ಬೆಕು ಅಂತಾನೆ ಗೊತ್ತಾಗ್ತ ಇಲ್ಲ. ಸಿನೆಮಾ ಥರ ಇವಳನ್ನ ಇಲ್ಲಿಂದ ಒಡಿಸಿಕೊಂಡು ಹೋಗೊಕು ನನ್ನ ಕೈಲಿ ಆಗಲ್ಲ. ಇವಳ ಕಥೆ ಬರ್ದು ದುಡ್ದು ಮಾಡೊಣ ಅಂತ ಬಂದವನು ನಾನು, ಇವಳಗೆನು ಧನ ಸಹಾಯ ಮಾಡೊದು? ನಾಳೆ ಈ ಕಥೆ ಸಂಪಾದಕರಿಗೆ ಕೊಡ್ತೆನೆ, ಅವರಿಗೆ ಇಷ್ಟ ಆಗಬಹುದು, ದೀಪಾವಳಿ ವಿಷೇಷಾಂಕದಲ್ಲಿ ’ಬಹುಮಾನಿತ ಕಥೆ’ ಅಂತ ಪ್ರಕಟ ಆಗಬಹುದು; ಆದ್ರೆ ಇವಳ ಗತಿ? ಇವಳಂಥ ಬೇರೆ ಹೆಣ್ಮಕ್ಕಳ ಗತಿ? ಅದು ಯಾವತ್ತಿದ್ರೂ ಬದಲಾಗಲ್ಲ. ಯಾಕಂದ್ರೆ ನಮ್ಮ್ ನಿಮ್ಮಂಥ ಸಜ್ಜನರು ಸಮಾಜದ ಸ್ವಾಸ್ಥ್ಯ ಕಾಪಾಡೊ ಕೆಲಸ ಇವಳಂಥ ಬಡಾಯಿಗಳಿಗೆ ಕೊಟ್ಟು, ಲಂಗು ಲಗಾಮಿಲ್ಲದೆ ನಮ್ಮ ಅತಿರೇಕಗಳನ್ನ ಹರಿಬಿಡ್ತಿದ್ದಿವಲ್ಲ? ಅಸ್ಟಕ್ಕೂ ಆ ಚಾ-ಕುಡುಕನಿಗೂ ನನಗೂ ಇರೊ ವ್ಯತ್ಯಸನಾದ್ರೂ ಎನು? ಅವನು ಇವಳ ಮೈ-ಮಾರಿ ಹೊಟ್ಟೆ ತುಂಬ್ಸ್ಕೊತಾನೆ, ನಾನು ಇವಳ ಕಥೆ ಮಾರಿ. ಇದಕ್ಕೆ ಕೊನೆನೆ ಇಲ್ವ?

Rating
No votes yet