ಬಹು - ಭಾಷಾ - ತಮಾಷಾ!!!

ಬಹು - ಭಾಷಾ - ತಮಾಷಾ!!!

ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಉಪಯೋಗಿಸಿ ವಾಕ್ಯಗಳನ್ನು ಹೇಳುವಾಗ ತುಂಬ ಸಲ ತಮಾಷೆಯಾಗಿ ಕಾಣತ್ತೆ, ಕೇಳತ್ತೆ ಮತ್ತು ಅನುಭವಕ್ಕೆ ಬರತ್ತೆ. ಇದು ಇಲ್ಲಿ ಸರ್ವೇ ಸಾಮಾನ್ಯ (ಅಮೇರಿಕಾ ಕನ್ನಡಿಗರಲ್ಲಿ) ಆಗ್ತಾನೇ ಇರತ್ತೆ. ಆದರೆ ನಾನು ಸಣ್ಣವಳಿದ್ದಾಗ ಅನುಭವಿಸಿದ್ದು ಬಲು ಮಜಾ ಈಗಲೂ ಕೊಡ್ತಾ ಇದೆ. ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ ಅನ್ನಿಸಿತು.....................

ನಮ್ಮ ಸಣ್ಣ ಊರಲ್ಲಿ (ಕಡೂರಲ್ಲಿ), ಯಾರೋ ಐಯ್ಯಂಗಾರ್ ಸಂಸಾರ (ಒಟ್ಟಿನಲ್ಲಿ ಮನೆಯಲ್ಲಿ ತಮಿಳ್ ಮಾತಾಡುವರು) ಎಲ್ಲೋ ನಾರ್ತ್ ಇಂದ ಬಂದಿದ್ದರು. ಮೂಲತಃ ಕನ್ನಡದವರು (ಕೆಲಸದ ಮೇಲೆ ನಾರ್ತ್ ಲ್ಲಿ ಇದ್ದರೂ ಅಂತ ಕಾಣತ್ತೆ) , ಹಾಗಾಗಿ ಕನ್ನಡನೂ ಚೆನ್ನಾಗಿ ಗೊತ್ತಿತ್ತು.
ಅವರ ಮನೆಯಲ್ಲಿ ಒಂದು ಪಾಟಿ ಇತ್ತು(ಅಜ್ಜಿ). ಅಜ್ಜಿ, ಅವರ ಮೊಮ್ಮಗ ಗಲಾಟೆ ಮಾಡಿದಾಗ, ನಡೆದು ಎಲ್ಲಿಗಾದರೂ ಹೋಗುವಾಗ, "ಗಂಭೀರ ಮೇ ವಾಡ" ಅನ್ನುತ್ತಿದ್ದರು. ನಾವೆಲ್ಲಾ ಸಣ್ಣ ಮಕ್ಕಳು ಆಗ "ಅವರು ಕನ್ನಡನೇ ಮಾತಾಡುತ್ತಿದ್ದಾರೆ ಅಂತ ನಂಬಿ, ಕನ್ನಡದಲ್ಲಿ ಹಾಗೆ ಹೇಳೋದು "ಸುಮ್ಮನೆ ಬಾ (ಚೇಷ್ಟೆ, ಗಲಾಟೆ ಮಾಡದೆ)" ಅಂತ ಅಂದ್ಕೊಂಡು ಯಾವಾಗಲೂ ಹಾಗೆ ಹೇಳಿ, ಕಡೆಗೆ ನಮ್ಮ ಮಕ್ಕಳು "ಅದೇನ್ ಸರಿಯಾಗಿ ಕನ್ನಡದಲ್ಲಿ ಮಾತಾಡಿ" ಅಂತ ಹೇಳಬೇಕಾಯಿತು. ಇಲ್ಲಿ ಗಂಭೀರ---ಕನ್ನಡ, ಮೇ---ಹಿಂದಿ, ವಾಡ---ತಮಿಳ್-
ಹೀಗೆ ೩-ಭಾಷಾ ಯಿಂದ ಕೂಡಿದ ಸಣ್ಣ ವಾಕ್ಯ (ಫ್ರೇಸ್) ತುಂಬಾ ಹ್ಯಾಂಡಿಯಾಗಿದೆ. ಈಗಲೂ (ಅಮೇರಿಕಾದಲ್ಲೂ ನನ್ನ ಮಕ್ಕಳಿಗೆ) ಕೆಲವು ಸಲ "ಗಂಭೀರ ಮೇ ವಾಡ" ಅಂತ ಹೇಳಿದ್ದುಂಟು. ಅವರಿಗೆ ಅದರರ್ಥ ಚೆನ್ನಾಗಿ ಗೊತ್ತಾಗಿದೆ----"ಸುಮ್ಮನೆ ತೆಪ್ಪಗೆ (ಗಲಾಟೆ ಮಾಡದೆ )ಬಾ ಅಂತ. ನನ್ನ ಮಗ ಹೇಳ್ತಾನೆ "ಗಂಭೀರ ಮೇ ವಾಡ" ಸೌಂಡ್ಸ್ ಬೆಟರ್ ದ್ಯಾನ್ ದ ರಿಯಲ್ ಕನ್ನಡ ಫ್ರೇಸ್, ಇಟ್ ಈಸ್ ಮೋರ್ ಫ್ರೆಂಡ್ಲೀ. ನೋಡಿ, ನಿಮಗೂ ಈ ರೀತಿ ಅನುಭವ ಆಗಿದ್ರೆ, ಹೇಳಿ................

ಇನ್ನೊಂದು ಅನುಭವ ನಾನು ಹೈಸ್ಕೂಲ್ ನಲ್ಲಿದ್ದಾಗ, ಒಬ್ಬರು ಮುಸ್ಲಿಮ್ ಟೀಚರ್ ಇಂಗ್ಲೀಷ್ ಪಾಠ ಮಾಡುತ್ತಿದ್ದರು. ತುಂಬಾ ಚೆನ್ನಾಗಿ ಹೇಳಿಕೊಡುತ್ತಿದ್ದರು. ಹೀಗೇ ಒಂದು ಸಲ ತರ್ಡ್ ಪರ್ಸನ್ ಸಿಂಗ್ಯೂಲರ್ ವಿಷಯ ಹೇಳಿಕೊಡುತ್ತಿದ್ದರು, ಅದಕ್ಕೆಲ್ಲಾ "ಎಸ್" ಸೇರಿಸಬೇಕು ಪದದ ಕಡೆಗೆ-- -ಉದಾ.. ಹಿಸ್, ಹರ್ಸ್ ಇತ್ಯಾದಿ" ಅಂತ ಇಂಗ್ಲೀಷ್ ನಲ್ಲಿ ಹೇಳಿಕೊಟ್ಟರು. ಆಮೇಲೆ, ಎಲ್ಲರಿಗೂ ಅರ್ಥವಾಯಿತಾ? ಅಂತ ಕೇಳಿದಾಗ, ಕೆಲವರಿಗೆ ( ಸ್ವಲ್ಪ ಮುಸ್ಲಿಮ್ ವಿದ್ಯಾರ್ಥಿಗಳನ್ನೂ ಸೇರಿ) ಅರ್ಥವಾಗಿರಲಿಲ್ಲ ಅಂತ ತಿಳಿದು, ಮುಸ್ಲಿಮ್ ಇಂಗ್ಲೀಷ್ ಟೀಚರ್ " ನಿಮಗೆ ಹೀಗೆ ಹೇಳಿಕೊಟ್ರೇನೇ ಅರ್ಥವಾಗುವುದು- "ಥರ್ಡ್ ಪರ್ಸನ್ ಸಿಂಗ್ಯೂಲರ್ ಕೊ "ಎಸ್" ಲಗಾನಾ" ಅಂತ ಜೋರಾಗಿ ಕಿರಿಚಿದಾಗೆ, ಎಲ್ಲರಿಗೂ ತಡೆಯಲಾರದ ನಗು ಬಂದು, ಎಲ್ಲರೂ "ಈಗ ಪೂರ್ತಿ ಅರ್ಥವಾಯಿತು" ಮುಂದಕ್ಕೆ ಹೋಗೋಣ ಅಂತ ಹೇಳಬೇಕಾಯಿತು. ಈಗಲೂ ಆ ಗ್ರಾಮರ್ ಮಾತ್ರ ನಾನು ತಪ್ಪುವುದೇ ಇಲ್ಲ. ನನ್ನ ಮಗಳಿಗೂ ಅದೇ ಹೇಳಿಕೊಟ್ಟೆ-"ಥರ್ಡ್ ಪರ್ಸನ್ ಸಿಂಗ್ಯೂಲರ್ ಕೊ "ಎಸ್" ಲಗಾನ" . ಇದು ಇಂಗ್ಲೀಷ್ ಗ್ರಾಮರ್ ನಲ್ಲಿ ನೆನಪಿಡಬೇಕಾದ ಒಂದು ಫಾರ್ಮಲ ಆಗಿಬಿಟ್ಟಿದೆ ನನ್ನ ಮೆಮರಿಯಲ್ಲಿ.

Rating
No votes yet

Comments