ಬಾಂಡ್... ಶೇನ್ ಬಾಂಡ್

ಬಾಂಡ್... ಶೇನ್ ಬಾಂಡ್


ಚಿತ್ರ ಕೃಪೆ: [:http://cricinfo.com|ಕ್ರಿಕ್ ಇನ್ಫೊ]

ಶ್ರೀಲಂಕಾದಲ್ಲಿ ಹೀನಾಯವಾಗಿ ಸೋತು ಬಂದು ಇನ್ನೂ ವಾರಗಳೇ ಕಳೆದಿಲ್ಲ, ಭಾರತ ತಂಡಕ್ಕೆ... ಆಗಲೇ ಅಷ್ಟು ನಮ್ಮ ಯೋಗ್ಯತೆಗೆ ಸಾಲದು ಎಂಬಂತೆ ಮತ್ತೊಂದು ಬಾರಿ ಇನ್ನಷ್ಟು ಹೀನಾಯವಾಗಿ ಸೋತಿದ್ದಾರೆ.

ಇಂದು ಅವರನ್ನು ಮನೆಗೋಡಿಸಿ ಮೊದಲೇ ಕೆಟ್ಟದಾಗಿ ಆಡುತ್ತಿರುವ ಭಾರತ ತಂಡವನ್ನು ಇನ್ನೂ ಕೆಟ್ಟದಾಗಿ ಕಾಣುವಂತೆ ಮಾಡಿದವರು ಬ್ರಿಟಿಷ್ ಧೂತ ವಿಭಾಗದ ಬಾಂಡ್ ಅಲ್ಲ... ನ್ಯೂಜಿಲೆಂಡಿನ ಬಾಂಡ್. 'ಪಾಪ ಈಗ ತಾನೆ ಇಂಜುರಿಯಿಂದ ವಾಪಸ್ ಬಂದಿದ್ದಾನೆ, ಅವನಿಗೆ ಮೊದಲ ತರಹ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ' ಎಂದು ಕಾಮೆಂಟ್ರಿ ತಂಡ ಮಾತನಾಡಿಕೊಂಡ ಕೆಲವೇ ನಿಮಿಷಗಳಲ್ಲಿ ಭಾರತ ತಂಡದ ಮೂರು ವಿಕಟ್ ಉರುಳಿಸಿಯೇ ಬಿಟ್ಟಿದ್ದ. ನಮ್ಮವರು ಹೀಗೆ ಆಡುವರೆ? ಇಂಜುರಿಯಿಂದ ವಾಪಸ್ ಬಂದ ಬೌಲರ್ ಒಬ್ಬ ನಮ್ಮ ಭಾರತ ತಂಡದವನಾದರೆ ಅರ್ಧಕ್ಕರ್ಧ ಸ್ಪೀಡ್ ಕಮ್ಮಿಯಾಗಿ ಹೋಗಿರುತ್ತೆ! (ನಮ್ಮ ತಂಡದ ಝಹೀರ್ ಖಾನ್ ಗೊತ್ತಲ್ಲ!)

ಇನ್ನು ಭಾರತದ ತಂಡದ ವರ್ಚಸ್ಸು ಕಡಿಮೆಯಾಗಿರುವ ಬಗ್ಗೆ [:http://content-ind.cricinfo.com/videoconseries/content/story/217147.html|ಕ್ರಿಕ್ ಇನ್ಫೊದಲ್ಲೊಂದು] ಬಹಳ ಚೆನ್ನಾಗಿರುವ ಲೇಖನ ಇದೆ. [:http://content-ind.cricinfo.com/videoconseries/content/story/217147.html|ಓದಿ.]
(ವರ್ಚಸ್ಸು ಕಡಿಮೆಯಾದರೂ ತಂಡದಲ್ಲಿ ಭಾಗವಹಿಸುವ ಆಟಗಾರರಿಗೆ ಹರಿದು ಬರುವ ಹಣವೇನೂ ಕಡಿಮೆಯಾಗಿಲ್ಲ. ಸಾಲದೆಂಬಂತೆ ಎಲ್ಲಿ ನೋಡಿದರೂ ಇವರುಗಳ ಜಾಹಿರಾತುಗಳು ಬೇರೆ!)

ಕೊನೆಗೊಮ್ಮೆ ಭಾರತ ತಂಡದವರು ಆಟಕ್ಕಿಳಿದಾಗ ಇದ್ದಕ್ಕಿದ್ದಂತೆ ಅವರ ಆಟವನ್ನು ನೋಡಿ ಅವರ ಬಟ್ಟೆಯ ಬಣ್ಣವನ್ನು ಗಮನಿಸದೇ ಹೋದಿರೋ, 'ಇದ್ಯಾವುದೋ ಲೋಕಲ್ ಮ್ಯಾಚು' ಎಂದು ಚಾನಲ್ ಬದಲಾಯಿಸುವ ಸಾಧ್ಯತೆ ಹೆಚ್ಚು! ಭಾರತ ತಂಡದವರು ಹಣ ಪಡೆದುಕೊಳ್ಳುವುದರಲ್ಲಿ ತೋರಿಸುವ ಪ್ರೊಫೆಶನ್ನಲಿಸ್ಮ್ ಆಟದಲ್ಲಿ ತೋರದೆ ಹೋಗುತ್ತಾರಲ್ಲ ಎಂಬ ವ್ಯಥೆ ಯಾವಾಗಲೂ ಇದ್ದದ್ದೇ ಅಲ್ಲವೆ?
ಹೀಗೆಲ್ಲಾ ಕಳಪೆ ಆಟವನ್ನು ಭಾರತ ತಂಡ ಕರುಣಿಸಿದಾಗ ತಂಡದಲ್ಲಿರದ ಲಿಟ್ಟಲ್ ಮಾಸ್ಟರ್ ನೆನಪು ಎಲ್ಲರಿಗಾಗುತ್ತದೆ! ಪಾಪ, ಸಚಿನ್ನಾದ್ರೂ ಎಷ್ಟು ದಿನ ಭಾರತ ತಂಡದ ಬ್ಯಾಟಿಂಗ್ ಭಾರ ವಹಿಸಿಕೊಳ್ಳಬೇಕು?

ಕೊನೆಗೊಂದಷ್ಟು ನಿಮಿಷಗಳು ಕೊನೆಯಲ್ಲುಳಿದ ಇಬ್ಬರು ಯೋಧರಂತೆ ಪಠಾಣ್ ಹಾಗೂ ಯಾದವ್ ಸೋಲೊಪ್ಪಿಕೊಳ್ಳದೆ ಯುದ್ಧಮಾಡಿದರಾದರೂ ಬಾಂಡಿನ ಸ್ವಿಂಗಿಗೆ ಅವರು ಯಾವ ಮೂಲೆ? (ಇಲ್ಲಿ ಮಾಲೆ ಎಂದು ಓದಿಕೊಳ್ಳುತ್ತಿರುವವರು ಸರಿಪಡಿಸಿರುವ ತುಂಗ ಫಾಂಟನ್ನೋ ಅಥವಾ [:http://salrc.uchicago.edu/resources/fonts/main.html|ಇನ್ನಿತರ ಯಾವುದೇ ಕನ್ನಡ ಯುನಿಕೋಡ್ ಫಾಂಟನ್ನೋ] ನಿಮ್ಮ ಸಿಸ್ಟಮ್ಮಿಗೆ ಹಾಕಿಕೊಳ್ಳಿ) :)

ಟಾಡಾಟ್ಟಡಾ.... 'ಬಾಂಡ್'... 'ಶೇನ್ ಬಾಂಡ್'... ಎಂದು ಭಾರತ ತಂಡದವರಿಗೆ 'ನಿಮಗೆ ನಾಚಿಕೆಗೇಡು... ಕ್ರಿಕೆಟ್ ಆಡೋಕ್ಕೆ ಬರೋದಿಲ್ಲ' ಎಂದು ಹೀಯಾಳಿಸಿ, ಅಟ್ಟಹಾಸದಿಂದ ಮುಕ್ತಾಯವಾಗಿ ಭಾರತೀಯರಿಗೆ 'ಅದೇ ಹಳೆಯ ಕಥೆ' ಬಿತ್ತರಿಸಿತು, ಇವತ್ತಿನ ಮ್ಯಾಚ್!

Rating
No votes yet

Comments