ಸಾಮಾನ್ಯವಾಗಿ ನಮ್ ದೇಶದಲ್ಲಿ ಎಲ್ಲ ಭಾಷೆಯ ಚಿತ್ರಗಳು ರಿಲೀಸ್ ಆಗಿ ಬಹುತೇಕರು ಅವುಗಳನ್ನ ನೋಡುವರು. ಕೆಲವು ಉತ್ತಮ ಚಿತ್ರಗಳನ್ನು ನನ್ನ ಹಾಗೆ ತಪ್ಪಿಸಿಕೊಂಡ ಕೆಲವರಿಗಾಗಿ ಅವುಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಬರಹ ಸರಣಿ ಶುರು ಮಾಡಿದ ನನಗೆ ಹಳೆಯ ಅತ್ಯುತ್ತಮ ಆಂಗ್ಲ ಚಿತ್ರಗಳ ಬಗ್ಗೆ ಬರೆಯುವ ಅನ್ನಿಸಿತು. ಮೊದಲು ಬರೆದದ್ದು ಆ ತರಹದ ಕೆಲವು, ಆದರೆ ಆಮೇಲೆ ನಮ್ಮ ದೇಶದಲ್ಲಿ ಹಲವು ಭಾಷೆಗಳಲ್ಲಿ ಆಂಗ್ಲ ಚಿತ್ರಗಳಿಗೆ ಮೀರಿಸಿದ ಅತ್ಯುತ್ತಮ ಚಿತ್ರಗಳು ಬರುವವು -ಅವುಗಳನ್ನೂ ಕೆಲ ಜನ ಮಿಸ್ ಮಾಡಿಕೊಂಡಿರಬಹ್ದು ಆ ತರಹದವುಗಳ ಬಗ್ಗೆ ಬರೆಯುವ ಎಂಬ ಆಲೋಚನೆ ಬಂದದ್ದೆ ಈ ಬರಹಕ್ಕೆ ಮತ್ತು ಇದರ ನಂತರ ಬರುವ ಇನ್ನೊಂದು ಬರಹಕ್ಕೆ ಪ್ರೇರಣೆ.
ಈ ಸಿನೆಮಾ(ಬಾಗ್ಭನ್) ರಿಲೀಸ್ ಆದಾಗ ನಗರದಲ್ಲಿ ನಾ ಪಿಯುಸಿ ಓದುತ್ತಿದ್ದೆ. ಇದ್ಯಾವ್ದೋ ಪ್ಯಾಮಿಲಿ ಡ್ರಾಮ....ಅಂತ ನೋಡದೆ ಇದ್ದೆ.
ಸುಮಾರು ವರ್ಷಗಳು ಕಳೆದು ಚಲನ ಚಿತ್ರಗಳ ಬಗ್ಗೆ ವಿಶೇಷ ಆಸಕ್ತಿ ಹೆಚ್ಚಿ, ಉತ್ತಮ ಚಿತ್ರಗಳನ್ನು ನೋಡುವ ಅಂತ ನೆಟ್ನಲ್ಲಿ ಆ ತರಹದ ಚಿತ್ರಗಳ ಪಟ್ಟಿಗಾಗಿ ಹುಡುಕಿದಾಗ ಸಿಕ್ಕ ಚಿತ್ರಗಳ ಹೆಸರಲ್ಲಿ ಇದೂ ಒಂದು. ಸರಿ ಡೀವಿಡಿ ಖರೀದಿಸಿ ನೋಡಿದೆ.ಅಮಿತಾಬಚ್ಚನ್ -ಹೇಮಾ ಮಾಲಿನಿ ಜೋಡಿ ಮಾಡಿದ ಮೋಡಿ ನಾ ಹೇಗೆ ಹೇಳಲಿ?
ಕಥೆ:
ನಾಲ್ವರು ಮಕ್ಕಳನ್ನು ಒಬ್ಬ ಸಾಕು ಮಗನನ್ನು ಹೊಂದಿದ ಅಮಿತಾಬ್ ಮತ್ತು ಹೇಮಾ ದಂಪತಿ ಆರಂಭದಲ್ಲಿ ಮಕ್ಕಳು -ಸಂಸಾರದಲ್ಲಿ ಭಲೇ ಖುಷಿಯಾಗಿರುತ್ತಾರೆ.
ಆಫೀಸಿಗೆ ಹೊರಡುವ ಮೊದಲು - ಬಂದ ನಂತರ ಅಮಿತಾಬ್ ನೋಡ ಬಯಸುವುದು ಎದುರುಗೊಳ್ಳ ಬಯಸುವದು ಪತ್ನಿಯನ್ನು. ಇದು ದಿನಂಪ್ರತಿ ಚಾಚೂ ತಪ್ಪದೆ ನಡೆಯುತ್ತದೆ.
ಅಮಿತಾಬ್ ನಿವೃತ್ತಿಯಾಗುವ ಸಮಯ ಹತ್ತಿರ ಬಂದಿತು. ಇಷ್ಟು ದಿನ ಹೆಂಡತಿ -ಮಕ್ಕಳನ್ನು ಕೆಲ ಘಂಟೆಗಳ ಮಟ್ಟಿಗೆ ಮಿಸ್ ಮಾಡಿಕೊಂಡದ್ದು ಸಾಕು ಇನ್ನು ಮೇಲಾರ ಹೆಂಡತಿ ಮಕ್ಕಳೊಡನೆ ಆರಾಮವಾಗಿರುವ ಎಂದು ಅಮಿತಾಬ್ ಯೋಚಿಸುವರು ಈ ಬಗ್ಗೆ ಹೆಂಡತಿಗೂ ಹೇಳುವರು.... ನಿವೃತ್ತಿ ನಂತರ ಹೇಗೆ ಸಮಯ ಕಳೆಯಬಹುದು ಎಂಬ ಬಗ್ಗೆ ಚರ್ಚೆ -ಕನಸುಗಳು...
ಇಲ್ಲಿವರೆಗೆ ಎಲ್ಲವೂ ಸರಿ.....
ಆದರೆ, ಮಕ್ಕಳೊಡನೆ ಈ ವಿಷಯವಾಗಿ ಮಾತಾಡಿದಾಗ ಅವರ ವರ್ತನೆ-ಅಭಿಪ್ರಾಯ ಗಳೇ ಬೇರೆ! ಮೊದಲು ಖುಷಿಯಾಗಿ ಮಾತಾಡಿಸುತ್ತಿದ್ದ, ಅಕ್ಕರೆ ಮಮಕಾರ ತೋರುತ್ತಿದ್ದ ತಮ್ಮ ಮಕ್ಕಳು ಇವರಿಬ್ಬರನ್ನ ಹಾಲಲ್ಲಿ ಕೂರಿಸಿ ತಾವೆಲ್ಲ ಒಂದು ರೂಮ್ ಗೆ ಹೋಗಿ ತಂದೆ ತಾಯಿಯನ್ನ ಹೇಗೆ? ಯಾರು ನೋಡಿಕೊಳ್ಳಬೇಕು ಎಂದು ಬಿಸಿ ಬಿಸಿ ಚರ್ಚೆ ನಡೆಸುವರು.
ಮಕ್ಕಳ ಈ ವರ್ತನೆ ದಂಪತಿಗಳಿಗೆ ಶಾಕ್ ಕೊಡುವದು.
ಬೇಜಾನ್ ಚರ್ಚಿಸಿದರೂ ಯಾರೊಬ್ಬರೂ ದಂಪತಿಗಳನ್ನು ತಮ್ಮೊಡನೆ ಇರಿಸಿಕೊಳ್ಳಲು ಸಜ್ಜಾಗಿಲ್ಲ!
ಅದ್ಕೆ ಅವರವರು ಕೊಡುವ ಕಾರಣಗಳು:
- ಮನೆ ಚಿಕ್ಕದು
- ಈಗ ತಾನೇ ಸೆಟ್ಟಲ್ ಆಗಿರುವೆವು...
- ಈ ಹಳೆಯ ಕಾಲದ ದಂಪತಿಗಳು ನಮಗೆ ಸೆಟ್ ಆಗೋಲ್ಲ.
- ನಾವೇ ಯಾಕೆ ನೋಡಿಕೊಳ್ಳಬೇಕು?
- ಅವರು ನಮಗಿಂತ ಹೆಚ್ಚಾಗಿ ನಿಮ್ಮನ್ನು ಚೆನ್ನಾಗಿ ಎತ್ತಿ ಆಡಿಸಿರುವರು.
ಇತ್ಯಾದಿ.
ಕೊನೆಗೆ ಎಲ್ಲರೂ ಜಗಳ ಸ್ಟಾಪ್ ಮಾಡಿ 6 ತಿಂಗಳುಗಳ ಕಾಲ ತಂದೆ ತಾಯಿಯನ್ನ ಒಬ್ಬೊಬ್ಬರ ಮನೆಯಲ್ಲಿ ನೋಡಿಕೊಳ್ಳಲು ನಿರ್ಧರಿಸಿ ಆ ವಿಷಯವನ್ನು ದಂಪತಿಗಳಿಗೆ ಹಿಂಜರಿಯುತ್ತ ಹೇಳಿದಾಗ ದಂಪತಿಗಳಿಗೆ ಆಗುವ ಶಾಕ್, ಕುಸಿವ ಕನಸಿನ ಗೋಪುರ , ಕಣ್ಣಾರೆ ನೋಡಬೇಕು.
ಛೆ..ಛೆ ! ಇದೆಂತ ಭಂಡ ಮಕ್ಕಳು? ಎಂಬ ಭಾವ ಬರದೆ ಇದ್ದೀತೆ?
ಅಷ್ಟು ವರ್ಷಗಳ ಕಾಲ ಜೊತೆಯಾಗಿದ್ದು ಬಾಳಿ ಬದುಕಬೇಕಾದ ಆ ಹಿರಿ ಜೀವಗಳನ್ನು ಬೇರೆ ಬೇರೆ ಮಾಡಿ 6 ತಿಂಗಳಿಗೊಮ್ಮೆ ಅಲ್ಲಿಂದ ಇಲ್ಲಿಗೆ - ಇಲ್ಲಿಂದ ಅಲ್ಲಿಗೆ ಬದಲಾಯಿಸುವ ಅವರಿಬ್ಬರನ್ನು ಬೇರೆ ಮಾಡುವುದಕ್ಕಿಂತ 'ಮಹಾಪಾಪ' ಬೇರೆ ಇದ್ದೀತೆ?
ದಿನಂಪ್ರತಿ ಹೆಂಡತಿಯೊಡನೆ ನವ ಯುವಕರನ್ನು ನಾಚಿಸುವಂತೆ ಮೀರಿಸುವಂತೆ ಸರಸ ಸಲ್ಲಾಪ -ನಡೆಸುವ ಪ್ರೀತಿಸುವ ಪತಿ ಅಮಿತಾಬ್ -ತನ್ನ ಹೆಂಡತಿಯ ಮುಖವನ್ನೇ ಸದಾ ನೋಡ ಬಯಸುವ ಅಮಿತಾಬ್ ಹೀಗೆ ಹೆಂಡತಿಯನ್ನು ಅಗಲಿ ಇರಲು ಸಾಧ್ಯವೇ? ಆ ಊಹೆಯೇ ಅಮಿತಾಬ್ ಅವರಿಗೆ ಭಯ ತರಿಸುವುದು -ಕೆಟ್ಟದ್ದು ಅನ್ನಿಸುವ್ದು..ಆದ್ರೆ ಬೇರೆ ವಿಧಿ ಇಲ್ಲ. ಇದನ್ನು ಒಪ್ಪದ ಹೆಂಡತಿಯನ್ನ ಹೇಗೋ ಒಪ್ಪಿಸಿ ಆ ನಿರ್ಣಯಕ್ಕೆ ಸಮ್ಮತಿ ಕೊಡುವರು.
ಈ ಒಪ್ಪಂದದಂತೆ ಒಬ್ಬರ ಮನೆಗೆ ಹೋಗಲು ಹೆಂಡತಿ ಗಂಡ ಅಗಲಿ ಬೇರೆ ಬೇರೆ ಕಾರಲ್ಲಿ ಕೂರುವಾಗ ಇಬ್ಬರಿಗೂ ಅಳು ಒತ್ತರಿಸಿ ಬರುವುದು...ಈ ಜನುಮದಲ್ಲಿ ಮತ್ತೆ ನಾವ್ ಒಂದಾಗುವೆವೇ? ಎಂಬ ಭಾವ.
ಇದ್ಯಾವ್ದೂ ಬೇಡ ನಾವಿಬ್ಬರೇ ನಮ್ ಮನೆಯಲ್ಲಿ ಇರುವ ಎಂದು ಹೇಳುವ ಹೆಂಡತಿಗೆ ಸಮಾಧಾನ ಮಾಡಿ ಕಳುಹಿಸಿದ ಅಮಿತಾಬ್ ಇನ್ನೊಬ್ಬ ಮಗನ ಮನೆಗೆ ಹೊರಡುವರು. ಮೊದಲಿಗೆ ಎಲ್ಲವೂ ಸುಸೂತ್ರ -ಖುಷಿ -ಸಂತಸದ ದಿನಗಳು-ಸಮಸ್ಯೆ ಅಂದ್ರೆ ಹೆಂಡತಿ ಗಂಡ ಅಗಲಿ ಇರುವದು...ಅದಕಾಗಿ ಗಂಡ ಹೆಂಡತಿ ಪತ್ರ ಬರೆವ್ದು -ಕಾಲ್ ಮಾಡುವದು ಮಾಡುತ್ತಾ ಆದಷ್ಟು ಖುಷಿ ಆಗಿರಲು ಯತ್ನಿಸುವರು.
ಕೆಲ ದಿನಗಳ ನಂತರ ಮನೆಯವರ ವರ್ತನೆಯಲ್ಲಿ ಬದಲಾವಣೆ ಕಾಣಿಸಿ ಮಾತು ಮಾತಿಗೆ ಅಸಹನೆ -ಅಹಂಕಾರ-ದರ್ಪ-ಹತಾಶೆ, ಯಾವಾಗ ಈ 6 ತಿಂಗಳು ಮುಗಿಯುತ್ತೋ ಎಂಬ ಭಾವ ಕಾಣಿಸಿ ದಂಪತಿಗಳಿಗೆ ಅವರವರ ಜಾಗದಲ್ಲಿ ಆತಂಕ-ಕಾಡುವುದು. ಈ ಮಧ್ಯೆ ಹೆಂಡತಿ ಮಾತು ಕೇಳಿ ತಂದೆಗೆ-ತಾಯಿಗೆ ಬಯ್ಯುವ ಮಕ್ಕಳು- ಮೊಮ್ಮಕಳ ಅಕ್ಕರೆ -ಅವರ ಸ್ವೇಚ್ಚಾ ವರ್ತನೆ ಇವರಿಗೆ ಹಿಡಿಸದು...ಆದರೆ ಹೇಳಿದರೂ ಕಿವಿಗೆ ಹಾಕಿಕೊಳ್ಳಲು ಯಾರೂ ಸಿದ್ಧರಿಲ್ಲ.
ನೋವು ಹತಾಶೆ -ಅಗಲಿಕೆ ನುಂಗಿಕೊಂಡು ಬದುಕುವ ದಂಪತಿಗಳಿಗೆ ಈ ರೀತಿ ಬಾಳುವುದು ಇಷ್ಟವಾಗದೆ ತಾವಿಬ್ಬರೇ ಮೊದಲಿನ ಹಾಗೆ ಒಂದಾಗಿ ಕೊನೆವರೆಗೆ ಬಾಳುವ ಎಂದು ತೀರ್ಮಾನಿಸಿ ಆ ಬಗ್ಗೆ ಫೋನಲ್ಲಿ ಮಾತಾಡುವರು. ಮತ್ತೊಬ್ಬ ಮಗನ ಹತ್ರ ಹೋಗುವ ಸಮಯ ಬಂದಾಗ ಇವರನ್ನ ಕರೆದುಕೊಂಡು ಹೋಗಲು ಬರುವಾಗ ಇವರಿಬ್ಬರು ಯಾರಿಗೂ ಏನೂ ಹೇಳದೆ ಕೇಳದೆ ತಾವಿಬ್ಬರು ಸೇರಲು ಹೊರಡುವರು.
ಇತ್ತ ಮಕ್ಕಳು - ಇವರ ಇರುವಿಕೆ ಕಾಣದೆ-ತಪ್ಪಿಸಿಕೊಂಡರೋ ? ಅವ್ರಿಗೆ ಏನಾರ ಆಯ್ತೆ ನಮ್ಮ ತಲೆ ಮೇಲೆ ಬಂದ್ರೆ ಎಂಬ ಚಿಂತೆ. ಮಕ್ಕಳೆಲ್ಲ ತಮ್ಮ ತಮ್ಮಲ್ಲಿ ಕಚ್ಚಾಡುವರು.
ದಂಪತಿಗಳಿಬ್ಬರು ಹಲವು ದಿನಗಳ ನಂತರ ಮೀಟ್ ಆಗಲು ಕಾತರಿಸುವ-ಒಬ್ಬರನ್ನೊಬ್ಬರು ನೋಡಿದಾಗ ಅವರಲ್ಲಿ ಆಗುವ ಸಂತೋಷ-ಉದ್ವೇಗ- ಕಣ್ಣಾರೆ ನೋಡಿಯೇ ಆನಂದಿಸಬೇಕು...
ಆ ಕ್ಷಣದಲಿ ನೋಡುವವರ (ಪ್ರೇಕ್ಷಕ-ವೀಕ್ಷಕ)ಮನದಲ್ಲಿ ಆಗುವ ಸಂತಸ-ಕಾತರ-ನಿರೀಕ್ಷೆ-ಉದ್ವೇಗ ಅವ್ರಿಗೆ ಗೊತ್ತು! ಆ ಸಂಮೋಹನಕಾರಿ ಸನ್ನಿವೇಶ ಮೊದಲಿಗೆ ನೋಡುವ-ಒಟ್ಟಾಗುವ ಯುವ ಪ್ರೇಮಿಗಳನ್ನು ನಾಚಿಸುವಂತಿದೆ..
ಆಮೇಲೆ ಅಮಿತಾಬ್ ತಮ್ಮ ಪತ್ನಿಯನ್ನ ಅವರಿಗೆ ಇಷ್ಟವಾದ ಸ್ಥಳ ಹೋಟೆಲ್ಗೆ ಕರೆದೊಯ್ದು ತಮ್ಮ ದುಡ್ಡಲ್ಲಿ (ಅಮಿತಾಬ್ ಆ ಮಧ್ಯೆ ಮನೆಯಲ್ಲಿನ ಆ ಅಸಹನೀಯ ಮೌನ -ಮಾತು ಕಥೆ ಮರೆಯಲು ಬೇರೊಂದು ಪಾರ್ಟ್ ಟೈಮ್ ಜಾಬ್ ಹುಡುಕಿ ಕೊಂಡಿರುತ್ತಾರೆ ಅದೇ ಸಂಪಾದನೆ)ಊಟ ಮಾಡಿಸಿ ಬರುವಾಗ ಕಾರ್ ನೋಡಿ ನೋಡಿ ಖುಷಿ ಪಡಬೇಕು-ಅದು ಕೊಳ್ಳಲು ಕಾಸೆಲ್ಲಿದೆ ಅಂತ ಮುನ್ನಡೆವಾಗ ಆ ಕಾರು ಮಾರಲು ನಿಯೋಜಿಸಲ್ಪಟ್ಟ ನೌಕರ ಇವರಿಗೆ ದುಂಬಾಲು ಬಿದ್ದು ಅಟ್ಲೀಸ್ಟ್ ಓಡಿಸಿ ನೋಡಿ ಎಂದು ಪುಸಲಾಯಿಸುವನು. ಕಾರಲ್ಲಿ ಕೂತು ಸುಮಾರು ಹೋಗಿ ಬರುವ ದಂಪತಿಗಳಿಗೆ ಈ ಕಾರು ಬುಕ್ ಮಾಡಲೇ ? ಎಂದಾಗ ಶಾಕ್!
ನಾವ್ ಬರೀ ಟೆಸ್ಟ್ ಡ್ರೈವ್ ಅದೂ ನೀ ಹೇಳಿದ್ದಕ್ಕೆ ಮಾಡಿದ್ದು ನೋಡಿದ್ದು ಎಂದರು ಕೇಳದೆ ಅಮಿತಾಬ್ ಮೇಲೆ ಹಲ್ಲೆ ಮಾಡುವಾಗ 'ಅನಿರೀಕ್ಷಿತ' ವ್ಯಕ್ತಿ ಪ್ರವೇಶ...ಅಮಿತಾಬ್ ಎಷ್ಟು ಮಹನೀಯರು ,ಹೇಗೆ ಎಂದೆಲ್ಲ ಹೇಳಿ ಅವರು ಇಷ್ಟ ಪಟ್ಟ ಆ ಕಾರನ್ನೇ ನೀಡಿ ತನ್ನ ಮನೆಗೆ ಕರೆದೊಯ್ಯುವನು. ಆಮೇಲೆ ದಂಪತಿಗಳಿಗೆ ತಮ್ಮ ಮಕ್ಕಳು ಎಷ್ಟು ಸ್ವಾರ್ಥಿಗಳು? ಈ 'ಮನುಷ್ಯ ಎಷ್ಟು ನಿಸ್ವಾರ್ಥಿ-ಕರುಣಾಮಯಿ.. ನಿಜವಾದ ಮಗ ಎಂಬ ಭಾವ ಮೂಡುವುದು.
ಅಲ್ಲಿಂದ ಮುಂದೆ ಅಮಿತಾಬ್ಗೆ ಶುಕ್ರ ದೆಸೆ..! ಮಕ್ಕಳಿಗೆ ಶನಿ ಕಾಟ ಶುರು.... ! ಆದರೆ ಇಲ್ಲಿಗೆ ಕಥೆ ಮುಗಿದಿಲ್ಲ.!! ಸಿನೆಮ ಇನ್ನು ..... ಬಾಕಿ ಇದೆ..!!
ಮತ್ತೆ ಮಕ್ಕಳು- ದಂಪತಿ ಒಟ್ಟಾಗುವರೇ ?, ಮುಂದೆ ಏನಾಗಲಿದೆ?, ಅಂತ್ಯ ಏನು, ಎಂಬ ಕುತೂಹಲವೇ?
ಅದಕ್ಕಾಗಿ ಚಿತ್ರ ನೋಡಿ.....!!
ಈ ಚಿತ್ರ ಅದಾಗಲೇ ಕನ್ನಡದಲ್ಲಿ ಡಾ :ವಿಷ್ಣುವರ್ಧನ್ ಮತ್ತು ಜಯಪ್ರದ ತಾರಾಗಣದಲ್ಲಿ 'ಈ ಬಂಧನ ' ಹೆಸರಲಿ ಬಂದಿದೆ. ಹಿಂದಿ ಚಿತ್ರಕ್ಕೆ ಯಾವ ಮಟ್ಟದಲ್ಲೂ ಕಡಿಮೆ ಇಲ್ಲ. ಒಂದೇ ಬೇಜಾರಿನ -ಸಂಗತಿ ಎಂದರೆ...ಆ ಹಿಂದಿ ಚಿತ್ರದಲ್ಲಿ ಮಕ್ಕಳ ಪಾತ್ರಗಳಿಗೆ 'ಧಾರವಾಹಿ' ನಟರನ್ನ ತೆಗೆದುಕೊಂಡಿದ್ದರು ಅದನ್ನೇ ಕನ್ನಡದಲ್ಲೂ ಯಥಾವತ್ತಾಗಿ 'ಇವರೂ ' -ನಮ್ಮವರು ಪಾಲಿಸಬೇಕೆ..?
ಕೆಲವು ಸನ್ನಿವೇಶಗಳು:
1.ಅಮಿತಾಬ್- ಹೇಮಾ ಮಾಲಿನಿ ಒಟ್ಟಿಗೆ ಮುಖ್ಯ ದ್ವಾರ ತೆಗೆವ ದೃಶ್ಯ-ಆ ಸಮಯದಲಿ ಇಬ್ಬರ ಮುಖಭಾವ..
2. ಮಕ್ಕಳು ಯಾರೊಡನೆ ತಾವಿರಬೇಕು ಎಂದು ಜೋರಾಗಿ ವಾದದಿ ತೊಡಗಿರುವ ಆ ಸಮಯದ ದಂಪತಿಗಳ ತಳಮಳ-ಆತಂಕ.
3.ತಾವಿಬ್ಬರು ಬೇರೆ ಬೇರೆ ಆಗಬೇಕಾಗಿ ಬಂದ ಸಂದರ್ಭದಲ್ಲಿ ಮೂಕವಾಗಿ ಮುಖ ನೋಡುತ ಕಣ್ಣೀರು ಹಾಕುವ ದೃಶ್ಯ, ಆ ಅಗಲಿಕೆ.
4.ಅಮಿತಾಬ್ ಕನ್ನಡಕ ಹೊಡೆದು ಹೋಗಿ (ಮೊಮ್ಮಗ ಬೀಳಿಸಿ)ಮಗನಿಗೆ ಅದನ್ನು ಬದಲಿಸಿ ತರಲು ಹೇಳಿದಾಗ ಅವನಿಗೆ ಅದಕ್ಕೆ ಸಮಯವೇ ಸಿಗೋಲ್ಲ.
ಒಡೆದ ಕನ್ನಡಕದಲ್ಲಿ ನೋಡುವ ಅಮಿತಾಬ್ ನಟನೆ
5.ಕನ್ನಡಕವನ್ನು ಸರಿ ಮಾಡಿಸಿ ಕೊಡುವ ಮೊಮ್ಮಗ (ತಂದೆ ತಾಯಿ ಕೊಟ್ಟ ಪಾಕೆಟ್ ಮನಿ ಮೂಲಕ)-ಆ ಸಮಯದಲ್ಲಿ ಮೊಮ್ಮಗ -ತಾತನ ನಟನೆ...
6.ಮಗನಿಗೆ ಹುಟ್ಟು ಹಬ್ಬದ ಸಂದರ್ಭದಲ್ಲಿ ಸ್ವತಹ ತಾನೇ ಕೈಯಾರೆ ಉಣಿಸುವ ಕೊಡುವ ಊಟದ ಡಬ್ಬಿ ಹಿಡಿದು ತಾಯಿ ಆಫೀಸಿಗೆ ಬಂದಾಗ ಸಿಡುಕುವ ಮಗ-ಹೇಮಾ ಮಾಲಿನಿ ಆಘಾತ..
7.ಸರ ಕಳೆದಿದೆಯೆಂದು ಮನೆಯಲ್ಲ ಹುಡುಕಿ-ಕೊನೆಗೆ ನಿಮ್ಮ ತಾಯಿಯೇ ಕದ್ದಿರಬಹುದು ಎಂದು ಹೆಂಡತಿ ಹೇಳಿದ್ದು -ತಾಯಿಗೆ ಹೇಗೆ ಕೇಳುವುದು ಎಂಬ ಮಗನ ದುಗುಡ
ಅದು ಗೊತ್ತಾಗಿ ಹೇಮಾ ಮಾಲಿನಿ ತಾ ಅದನ್ನು ಕದ್ದಿಲ್ಲ್ಲ-ತೆಗೆದುಕೊಂಡೂ ಇಲ್ಲ-ಅದರ ಅವಶ್ಯಕತೆಯೂ ತನಗಿಲ್ಲ ಎನ್ನುವುದು-ಮಗ ಹೆಂಡತಿ ಕಣ್ಣೀರು ತನಗೆ ಬೇಜಾರು ಮೂಡಿಸಿ ಕೋಪ ತರಿಸಿತು ಎಂದಾಗ ಹೆಂಡತಿ ಕಣ್ಣೀರು ಕಾಣಿಸಿತು-ತಾಯಿ ಕಣ್ಣೀರು-ಕರುಳು ಆರ್ತನಾದ ನಿನಗೆ ಕೇಳಿಸಲಿಲ್ಲವೇ? ಎಂಬ ದೃಶ್ಯದ ಸನ್ನಿವೇಶ...ಆ ಕ್ಷಣದಿ ನಮ್ಮ ಕಣ್ಣಲ್ಲೂ ಕಣ್ಣೀರು ಪಕ್ಕಾ ...
8.ದೀಪಾವಳಿಯಲ್ಲಿ ಅಡುಗೆ ಏನು? ಊಟ ಏನು ಮಾಡಿದಿರಿ? ಎಂದು ಹೆಂಡತಿ ಕೇಳಿದಾಗ -ಏನೂ ಇಲ್ಲದಿದ್ದರೂ ಯಾಕೆ ಬೇಜಾರು ಮಾಡುವದು ಎಂದು ಅಮಿತಾಬ್ -ಏನೋ ತಿನ್ನುತ್ತಿರುವ ಹಾಗೆ ಶಬ್ದ ಮಾಡುವದು, ಆ ನಟನೆ ಹೆಂಡತಿಗೆ ಗೊತ್ತಾಗಿ ಕ್ರುದ್ಧಳಾಗುವುದು -ಅಸಹಾಯಕತೆಯಿಂದ ಚಡಪಡಿಸುವುದು, ಆ ದೃಶ್ಯ ಕರುಳು ಹಿಂಡುವುದು.
9.ಹೋಳಿ ಹಬ್ಬದ ಸಂದರ್ಭ -ಮತ್ತು ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಮೊದಲು ಹೆಂಡತಿ ಮಕ್ಕಳು ಜೊತೆ-ಬೇರೆಯಾದ ನಂತರ ಯುವಕ ಯುವತಿ-ಪ್ರೇಮಿಗಳ ಜೊತೆ ಹಾಡು ಹಾಕುತ್ತ ಹೆಜ್ಜೆ ಹಾಕುವ ಅಮಿತಾಬ್ -ಈ ಸನ್ನಿವೇಶಗಳು ಯುವ ನಟರನ್ನು ನಾಚಿಸುವಂತಿವೆ.
10.ದಂಪತಿಗಳು ಮರಳಿ ಒಂದಾಗುವ-'ಅನಿರೀಕ್ಷಿತ' ವ್ಯಕ್ತಿ ಮನೆ ಸೇರುವ - ಆ ವ್ಯಕ್ತಿಯ -ಅವನ ಹೆಂಡತಿಯ ಮಮತೆ-ಕೃತಜ್ನತೆ -ಸತ್ಕಾರ-ಗೌರವ ದೃಶ್ಯಗಳು.
11.ಅಮಿತಾಬ್ ಕೆಲಸ ಮಾಡುತ್ತಿದ್ದ (ಪಾರ್ಟ್ ಟೈಮ್)ಆ ಸ್ಥಳವನ್ನು ಬಿಟ್ಟು ಹೊರಡಲು ಅಮಿತಾಬ್ ಸಿದ್ಧರಾದಾಗ ಅವರ ಅಗಲಿಕೆ ಭರಿಸದೆ ಹಾಗೂ ದಂಪತಿಗಳ ಪುನರ್ಮಿಲನಕ್ಕೆ ಧಕ್ಕೆ ತರದೇ ಇರಲು ಮಾಲೀಕ ಗೆಳೆಯ (ಪರೇಶ್ ರಾವಲ್ ಮತ್ತು ದಂಪತಿ ಹಾಗೂ ಯುವಜನತೆ )ಕಣ್ಣೀರು ಹಾಕಿ ಬೀಳ್ಕೊಡುವ ದೃಶ್ಯ.
12.ಪ್ರೇಕ್ಷಕರಿಗೆ -ಮಕ್ಕಳಿಗೆ ಶಾಕ್ ನೀಡುವ ಅಮಿತಾಬ್ , ಕೊನೆಯಲ್ಲಿ.
ಚಿತ್ರ ಹಿಂದಿಯಲಿ-ಕನ್ನಡದಲ್ಲಿ ನೋಡದೆ ಮಿಸ್ ಮಾಡಿಕೊಂಡಿದ್ದರೆ ಇದೇ ಸುಸಮಯ....ನೋಡಿ...ಫೀಲ್ ಆಗಿ...ಬದಲಾಗಿ...
ಅಮಿತಾಬ್ ಮತ್ತು ಹೇಮಾ ಮಾಲಿನಿ ಬಹುತೇಕ ಚಿತ್ರಗಳಲ್ಲಿ ಈ ಮೊದಲೇ ನಟಿಸಿರುವರು -ಆದ್ರೆ ಅವರ ಚಿತ್ರಗಳಲ್ಲಿ ಇದು ಮೊದಲ ಸಾಲಲ್ಲಿ ನಿಲ್ಲುವ ಚಿತ್ರ.
ಅಮಿತಾಬ್-ಹೇಮಾ ಮಾಲಿನಿ ಜೋಡಿ(ಇದೇ ಮಾತು ,ಕನ್ನಡ ಚಿತ್ರ ಮತ್ತು ವಿಷ್ಣುವರ್ಧನ್ -ಜಯಪ್ರದ ನಟನೆಗೆ ಹೇಳಬಹ್ದು) ತೆರೆ ಮೇಲೆ ನೋಡೋಕೆ ಕಣ್ಣಿಗೆ ಹಬ್ಬ-ಅವರ ದುಖ ಸುಖ-ಖುಷಿ ಆ ಕ್ಷಣದಲ್ಲಿ ನಮ್ಮದೂ ಹೌದು...
ಈ ವಯಸ್ಸಲ್ಲಿ ಅಮಿತಾಬ್ ಯಾವ ಯುವ ನಟರಿಗೂ ಕಮ್ಮಿ ಇಲ್ಲ-
ಇದೇ ಮಾತು ಹೇಮಾ ಮಾಲಿನಿ ಅವರಿಗೂ ಅನ್ವಯಿಸುವುದು.
ಕೊನೆ ಕುಟುಕು...!!
ಇದು ಚಿತ್ರ ಮಾತ್ರ-ಹೀಗೆಲ್ಲ ಆಗಲು ಸಾಧ್ಯವಿಲ್ಲ -ಎಲ್ಲೋ ಕೆಲವರು ಆ ರೀತಿ ಇರಬಹುದು ಎಂದು ಎಂದುಕೊಂಡರೂ -
ಹಿರಿಯ ನಾಗರೀಕರಿಂದ ತುಂಬಿ ತುಳುಕುತ್ತಿರುವ ಅನಾಥಾಶ್ರಮಗಳು-ವೃದ್ಧಾಶ್ರಮಗಳು-ನೆಮ್ಮದಿ ನಿಲಯಗಳು-ಅಲ್ಲಿನವರ ನೋವು ದುಖ ದುಮ್ಮಾನದ ವಿಷಯಗಳು
ಬೇರೆಯದೇ ಕಥೆ ಹೇಳುತ್ತಿವೆ.
ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು-ಮಾತಾ ಪಿತರ ಬಗ್ಗೆ ಈ ಅಸಡ್ಡೆ -ಅನಾಧಾರ -ತಾತ್ಸಾರ-ತೋರ್ಸಿ ಅವರ ಬದುಕು ತಾತ್ವಾರ ಮಾಡುತ್ತಿರುವುದು ನಾವೆಲ್ಲಾ ದಿನ ನಿತ್ಯ ಕಣ್ಣಾರೆ ನೋಡುತ್ತಾ ಕೇಳುತ್ತ ಇರುವ ದೃಶ್ಯ-
ಯಾಕೆ ಹೀಗೆ?, ಎಲ್ಲಿ ಏನು ತಪ್ಪಿದೆ?, ಇದಕೆ ಪರಿಹಾರ ಏನು?
ಈ ವಿಷಯದಲ್ಲಿ ವಿದ್ಯಾವಂತರೂ -ಅವಿದ್ಯಾವಂತರು -ಉಪದೇಶ ಪಂಡಿತರೂ ಸಮರೆ.
ಹಿರಿಯರ ಬಗ್ಗೆ ಆದರ-ಅಭಿಮಾನ-ಗೌರವ-ಸಮ್ಮಾನ ನೀಡಬೇಕು ಎಂದು ಮಕ್ಕಳಿಗೆ ಚಿಕ್ಕ ವಯಸ್ಸಲ್ಲೇ ಪಾಲಕರು ತಿಳಿ ಹೇಳುವ ಈ ದೇಶದಲ್ಲಿ ಅದನ್ನು ಮರೆತು ಹೀಗಾಡುವ ಮಕ್ಕಳನ್ನು (ಬಹುಪಾಲು ಗಂಡಸರೇ -ಮತ್ತು ಪಾಲನೆ-ಪೋಷಣೆ -ಆಸ್ತಿ ಹಕ್ಕು ಜೊತೆ ಅವರಿಗೆ ಸೇರಿದ್ದು)ಕಂಡು ಮನ ಮರುಗುವುದು...ವ್ಯಥೆ ತರುವುದು.
ಈ ಚಿತ್ರವನ್ನು ಒಂದು ಸಾರಿ ನೋಡಿದವರು ಬದಲಾಗದೆ ಇರರು...
ಉತ್ತಮ ಸಂದೇಶದ ಅತ್ತ್ಯುತ್ತಮ ತಾರಾಗಣದ ಚಿತ್ರ.
ಸಕಾಲಿಕ-
ಯಾವತ್ತೂ ಸಲ್ಲುವ ಚಿತ್ರ.
ನೋಡಿ....
ಚಿತ್ರ ಮೂಲ:
http://http://www.taazastat.com/movieimage/size_600_500/2519-19537-baghban-wallpaper-1213015.jpg
http://mimg.sulekha.com/hindi/baghban/stills/baghban20.jpg
http://mimg.sulekha.com/hindi/baghban/stills/baghban16.jpg
http://bollywood.allindiansite.com/img/baghban1.jpg
http://www.dailyalbum.com/albums/var/albums/Indianstar4/Baghban/Stills/Baghban-Stills%20_3_.jpg?m=1290888829
http://st.gdefon.ru/wallpapers_original/films/63025_lyubov-i-predatelstvo_or_baghban_1024x768_(www.GdeFon.ru).jpg
http://www.chirag-entertainers.com/film/EBandhana/EB31.jpg
http://www.vishnuvardhan.com/images/EE%20Bhanda/eeb8.jpg
ನನ್ನ ಐ ಎಂ ಡಿ ಬಿ ಬರಹ:
http://www.imdb.com/title/tt0337578/reviews-36
ಐ ಎಂ ಡಿ ಬಿ :
http://www.imdb.com/title/tt0337578/
ಪೂರ್ತಿ ಸಿನೆಮ ಯೂಟೂಬ್ನಲ್ಲಿ ಅಧಿಕೃತವಾಗಿ :
http://www.youtube.com/watch?v=2XnA1YT1KPY
ವಿಕಿಪೀಡಿಯ:
http://en.wikipedia.org/wiki/Baghban_(film)
Comments
ವೆಂಕಟೇಶ ರವರಿಗೆ ವಂದನೆಗಳು
ವೆಂಕಟೇಶ ರವರಿಗೆ ವಂದನೆಗಳು
" ಬಾಗಬಾನ್" ಹಾಗೂ " ಈ ಬಂಧನ " ಚಿತ್ರಗಳ ಕುರಿತು ತಾವು ಬರೆದ ಬರಹವನ್ನು ಓದಿದೆ. ಎರಡೂ ಚಿತ್ರಗಳು ಚೆನ್ನಾಗಿವೆ, ಅವುಗಳಲ್ಲಿ ನನಗೆ " ಈ ಬಂಧನ " ಇಷ್ಟವಾದ ಸಿನೆಮಾ, ಇದರ ಹಾಡುಗಳು 'ಬಾಗಬಾನ್' ಚಿತ್ರೆದ ಹಾಡುಗಳಿಗಿಂತ ಕೇಳಲು ಮಧುರವಾಗಿವೆ, ವಿಷ್ಣು ಮತ್ತು ಜಯಪ್ರದಾ ಚೆನ್ನಾಗಿ ಅಭಿನಯಿಸಿದ್ದಾರೆ. ನಿಮ್ಮ ಎಲ್ಲ ಬರಹಗಳನ್ನು ಓದುತ್ತಿರುವೆ, ಅವು ಯಾವ ಚಿತ್ರಗಳನ್ನು ನಾನು ನೊಡಿಲ್ಲ, ತಮ್ಮ ಬರಹಗಳನ್ನು ಓದುವುದರಿಂದ ಆ ಚಿತ್ರಗಳನ್ನು ನೋಡಿದಷ್ಟೆ ಸಂತಸ ವಾಗುತ್ತದೆ. ಬರವಣಿಗೆಯನ್ನು ಹೀಗೆಯೆ ಮುಂದುವರೆಸಿಕೊಂಡು ಹೋಗಿ, ಧನ್ಯವಾದಗಳು. -------
In reply to ವೆಂಕಟೇಶ ರವರಿಗೆ ವಂದನೆಗಳು by H A Patil
ಹಿರಿಯರೇ
ಹಿರಿಯರೇ
ಈ ಬರಹಕ್ಕೆ ಬಂದ ಪ್ರತಿಕ್ರಿಯೆಗಳ ಮೂಲಕ (ಶ್ರೀಯುತ ಶ್ರೀನಿವಾಸ್ ಅವರು ಮತ್ತು ಗುರುಗಳು)ಈ ಚಿತ್ರಗಳಿಗೆ ಮೂಲ ಪ್ರೇರಣೆ -
ಮೂಲ ಕನ್ನಡ ಚಿತ್ರ ಸ್ಕೂಲ್ ಮಾಸ್ಟರ್ ಅಂತ ಗೊತ್ತಾಯ್ತು....!!
ಈ ಸಿನೆಮಾಗಳ ಬಗೆಗಿನ ಬರಹಗಳು ಮುಂದುವರೆಯಲಿವೆ..
ತಮ್ಮ ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\|/
ಒಳ್ಳೆ ವಿಮರ್ಶೆ ವೆಂಕಟೇಶ್‌ರವರೆ.
ಒಳ್ಳೆ ವಿಮರ್ಶೆ ವೆಂಕಟೇಶ್‌ರವರೆ. ನೀವು ಪಂತಲು ಅವರ ಸ್ಕೂಲ್ ಮಾಸ್ಟರ್ (೧೯೫೮) ನೋಡಿದ್ದಿರಾ? ಇದೇ ಕಥಾ ಹಂದರವುಳ್ಳ ಆ ಚಿತ್ರದ ಬಗ್ಗೆ ಈ ಕೆಳಗಿನ ಕೊಂಡಿಯಲ್ಲಿ ಓದಿ. ಈ ಚಿತ್ರ ನನ್ನ ಅಚ್ಚು ಮೆಚ್ಚಿನ ಚಿತ್ರಗಳಲ್ಲಿ ಒಂದು :-)
http://saangatya.wordpress.com/2012/06/02/%E0%B2%AC%E0%B2%BF-%E0%B2%86%E0%B2%B0%E0%B3%8D-%E0%B2%AA%E0%B2%82%E0%B2%A4%E0%B2%B2%E0%B3%81-%E0%B2%9A%E0%B2%BF%E0%B2%B0%E0%B2%82%E0%B2%A4%E0%B2%A8-%E0%B2%B8%E0%B3%8D%E0%B2%95%E0%B3%82%E0%B2%B2/
"‘ಸ್ಕೂಲ್ ಮಾಸ್ಟರ್’ ಇಪ್ಪತ್ತೈದು ವಾರಗಳ ದಾಖಲೆ ಪ್ರದರ್ಶನ ಕಂಡಿತಲ್ಲದೆ ರಾಷ್ಟ್ರಪತಿಗಳ ರಜತ ಪದಕವನ್ನು ತನ್ನದಾಗಿಸಿಕೊಂಡಿತು. ಈ ಸಾಧನೆ ಮಾಡಿದ ಮೊದಲ ಚಿತ್ರ ಸ್ಕೂಲ್ ಮಾಸ್ಟರ್."
In reply to ಒಳ್ಳೆ ವಿಮರ್ಶೆ ವೆಂಕಟೇಶ್‌ರವರೆ. by ಶ್ರೀನಿವಾಸ ವೀ. ಬ೦ಗೋಡಿ
ಶ್ರೀಯುತ ಶ್ರೀನಿವಾಸ್ ಅವರೇ
ಶ್ರೀಯುತ ಶ್ರೀನಿವಾಸ್ ಅವರೇ
ನೀವ್ ಕೊಟ್ಟ ಕೊಂಡಿ ಮೂಲಕ ಅಲ್ಲಿಗೆಲ್ಲ ಹೋಗಿ ಆ ಬರಹಗಳನ್ನ ಓದಿದೆ...
ಒಂದು ಹಳೆಯ ಚಿತ್ರವನ್ನು ಹಿಂದಿಯಲ್ಲಿ -ಮತ್ತೆ ಅದನ್ನೇ ಕನ್ನಡದಲ್ಲಿ ರಿಮೇಕ್ ಮಾಡುವುದು ಅಚ್ಚರಿ...!!
ಬಾಗ್ ಬನ್ ನೋಡಿ ಆಮೇಲೆ ಈ ಬಂಧನ ನೋಡಿ -ಅವೇ ಮೂಲ ಚಿತ್ರಗಳು ಎಂದುಕೊಂಡಿದ್ದೆ....!!
ಈಗ ಓದಿದರೆ ಕನ್ನಡದಲಿ ಆ ಕಾಲದಲೇ ಈ ಬಗ್ಗೆ ಒಂದು ಚಿತ್ರ ಬಂದಿತ್ತು ಎಂದು ತಿಳಿಯಿತು...
ತಮ್ಮ ಚಿತ್ರಕ್ಕೆ ಈ ಕನ್ನಡ ಚಿತ್ರ ಸ್ಪೂರ್ತಿ ಎಂದು ಹೇಳಲು ಹಿಂದಿಯವರಿಗೆ ಮುಜುಗರವೇ>......
ಅಮಿತಾಬ್ ಅವರಿಗೂ ಈ ವಿಷ್ಯ ಗೊತ್ತಿರಲಿಲವೇ? ವಿಷ್ಣು ಅವರೂ ಈ ಬಗ್ಗೆ ಎಲ್ಲೋ ಹೇಳಿದ ಹಾಗಿಲ್ಲ...
ಬರಹ ಅಪರೂಪದ ಮಾಹಿತಿ ಒದಗಿಸಿದೆ...
ಆ ವಿವರಗಳ ಬಗೆಗೆ ನನ್ನ ಗಮನೆ ಸೆಳೆದುದಕ್ಕಾಗಿ ಕೊಂಡಿ ಸಹಾಯಕ್ಕಾಗಿ--
ನನ್ನಿ
ಶುಭವಾಗಲಿ.
\|
In reply to ಶ್ರೀಯುತ ಶ್ರೀನಿವಾಸ್ ಅವರೇ by venkatb83
'ಈ ಬಂಧನ'ದಲ್ಲಿ ಇವೆರಡೂ ಚಿತ್ರಗಳ
'ಈ ಬಂಧನ'ದಲ್ಲಿ ಇವೆರಡೂ ಚಿತ್ರಗಳ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಒಂದು ಕಡೆ ವಿಷ್ಣುವರ್ಧನ್ ಹೇಳುತ್ತಾರೆ.
"ಇದು ಬಾಗಿದ ಬೆನ್ನಿನ (ಬಾಗ್ ಬನ್) ಕತೆ. ಇದು ನಡುಗುವ ಕೈಗಳ (ಸ್ಕೂಲ್ ಮಾಸ್ಟರ್) ಕತೆ"
ಸಪ್ತಗಿರಿಯವರೆ
ಸಪ್ತಗಿರಿಯವರೆ
ಬಾಗ್ ಬಾನ್ ಈಗ ನೋಡುತ್ತಿರುವಿರಿ, ಹಾಗಿದ್ದರೆ ಸುಮಾರು 1960 65 ಸುಮಾರಿನಲ್ಲಿ ಬಿಡುಗಡೆಯಾಗಿದ್ದ
;ಸ್ಕೂಲ್ ಮಾಸ್ಟರ್ ' ಎ0ಬ ಕನ್ನಡ ಸಿನಿಮಾ ನೋಡಿ , ಪ0ತಲು ನಿರ್ದೇಶನ ಅನ್ನಿಸುತ್ತೆ, ಅತಿ ಉತ್ತಮ ಹಾಡುಗಳು, ತಮಿಳಿನ ಶಿವಾಜಿಗಣೇಷನ್ ಕನ್ನಡದಲ್ಲಿ ಅಭಿನಯಿಸಿದ್ದಾರೆ , ಸಂಪದದಲ್ಲಿಯೆ ಹಿಂದೆ ಬಂದಿರುವ ಒಂದು ಬರಹ ಇದೆ
http://sampada.net/article/10744
ಹೆಚ್ಚು ಕಡಿಮೆ ಇದೆ ಕತೆ, ಅದೆ ವ್ಯಥೆ , ಪಂತಲುರವರ ಅಭಿನಯ ಮನತುಂಬುತ್ತೆ, ನಾನು ಟಿ.ವಿ.ನಲ್ಲಿಯೊ ಎಲ್ಲಿಯೊ ನೋಡಿದ್ದು ಮರೆತಿರುವೆ
In reply to ಸಪ್ತಗಿರಿಯವರೆ by partha1059
ಗುರುಗಳೇ-
ಗುರುಗಳೇ-
ನೀವು ಮತ್ತು ಶ್ರೀಯುತ ಶ್ರೀನಿವಾಸ್ ಅವರು ಈ ಬಗ್ಗೆ ಗಮನ ಸೆಳೆದಾಗಲೇ ನನಗೆ ಈ ಚಿತ್ರಗಳಿಗೆ ನಮ್ಮದೇ ಕನ್ನಡ ಮೂಲ ಚಿತ್ರ ಸ್ಪೂರ್ತಿ ಅಂತ ತಿಳಿದದ್ದು..!!
ಕನ್ನಡದ ಸ್ಕೂಲ್ ಮಾಸ್ಟರ್ ಬಗ್ಗೆ ಆಗಾಗ ಓದಿದ್ದೆ-ಕೇಳಿದ್ದೆ ಆದರೆ ನೋಡಿರಲಿಲ್ಲ...ನಾ ಗಮನಿಸಿದ ಹಾಗೆ ಆ ಚಿತ್ರವನ್ನು ಇದ್ವರ್ಗೂ ಟೀ ವಿ ಯಲಿ ನಾ ನೋಡಿದ ನೆನಪಿಲ್ಲ..ಅಥವಾ ಅವರು ಹಾಕಿಲ್ಲವೇನೋ....!!
ಸಾಧ್ಯವಾದರೆ ಆ ಮೂಲ ಚಿತ್ರವನ್ನು ಖಂಡಿತ ನೋಡುವೆ...
>>ನೀವ್ ಕೊಟ್ಟ ಲಿಂಕ್ ಬರಹ ಓದಿ ಪ್ರತಿಕ್ರಿಯಿಸಿರುವೆ..
ತಮ್ಮ ಪ್ರತಿಕ್ರಿಯೆಗೆ + ಕೊಂಡಿಗೆ ನನ್ನಿ
ಶುಭವಾಗಲಿ..
\|/
ಸಪ್ತಗಿರಿವಾಸಿ,
ಸಪ್ತಗಿರಿವಾಸಿ,
ಉತ್ತಮ ವಿಮರ್ಶೆ. ಬಾಗ್‌ಬನ್ ಎಲ್ಲರೂ ನೋಡಲೇ ಬೇಕಾದ ಚಿತ್ರ. ತಂದೆ ದೇವರು, ತಾಯಿ ದೇವರು ಅಂತ ಮಾತಿನಲ್ಲಿ ಮಾತ್ರ ಹೇಳುವರು. ಮಕ್ಕಳು ವಯಸ್ಸಾದ ತಂದೆ ತಾಯಿಯನ್ನು ನೋಡುತ್ತಿರುವ ರೀತಿ ತೀರಾ ನಿಕೃಷ್ಟ.ತಾಯಿ ಅಂದರೆ ಮೊಮ್ಮಕ್ಕಳನ್ನು ನೋಡಲಿರುವ ಆಯಾ.. ಆ ಮೊಮ್ಮಕ್ಕಳೋ..ಕೆಲ್ಸದವರನ್ನಾದರೂ ಪ್ರೀತಿಯಿಂದ ಮಾತನಾಡಿಸಿಯಾರು, ಅಜ್ಜ/ಅಜ್ಜಿಯಿಂದ ಹಣ ಪೀಕಿಸುವುದನ್ನೇ ಆಲೋಚಿಸುವವು.
ಸಿನೆಮಾದಲ್ಲಿ ಅಮಿತಾಭ್,ಹೇಮಾ ಅಭಿನಯ ನೋಡಿ ಅಳುವರು...ಅದೇ ತಮ್ಮತಮ್ಮ ತಂದೆತಾಯಿ ಅದಕ್ಕಿಂತ ಕಷ್ಟದಲ್ಲಿರುವುದು ಅವರಿಗೆ ಕಾಣಿಸದು. ಸಿನೆಮಾ ಕತೆಯಲ್ಲಿ ತಿರುವು ಬಂದು ಸುಖಾಂತ್ಯವಾಗುವುದು..ಆದರೆ ಹೆಚ್ಚಿನ ಮನೆಗಳಲ್ಲಿ ಹಾಗಾಗುತ್ತಿಲ್ಲ. :(
ಏನೇ ಆಗಲಿ,ಒಂದು ಒಳ್ಳೆಯ ಸಿನೆಮಾಕತೆಯನ್ನು ವಿಮರ್ಶೆಮಾಡಿದ್ದಕ್ಕೆ ಧನ್ಯವಾದಗಳು.
-ಗಣೇಶ.
In reply to ಸಪ್ತಗಿರಿವಾಸಿ, by ಗಣೇಶ
ಗಣೇಶ್ ಅಣ್ಣ-
ಗಣೇಶ್ ಅಣ್ಣ-
ನೀವ್ ಹೇಳಿದ್ದು ಸತ್ಯ ತೆರೆ ಮೇಲಿನ ದೃಶ್ಯಗಳಿಗೆ ಅಳುವ ನಾವ್ -ಅದೇ ದೃಶ್ಯ ನಿಜ ಜೀವನದಲಿ ಎದುರಾದರೆ -ಬಂದರೆ ವರ್ತಿಸುವ-ಪ್ರತಿಕ್ರಿಯಿಸುವ ರೀತಿಯೇ ಬೇರೆ...
ಪುಸ್ತಕ ಓದೋಕೆ.......... ತಿನ್ನೋಕೆ....ಗಾದೆ...ನೆನಪಿಗೆ ಬರ್ತಿದೆ..!!
ಹಾಗೆ ಉಪದೇಶ ಮಾಡೋದು ಸರಳ-ಆಚರಣೆ ಕಷ್ಟ ಎಂಬುದು ಸಹ...!!
ಏನೇ ಆಗಲಿ ಹೆತ್ತು-ಹೊತ್ತು-ಸಾಕಿ ಸಲಹಿದ ಮಾತಾ ಪಿತರ ಬಗ್ಗೆ ಕಾಳಜಿ - ಅತ್ಯವಶ್ಯ ..
ಅತ್ಯವಶ್ಯ ಕರ್ತವ್ಯ..
ನನಗನ್ನಿಸಿದ ಹಾಗೆ ಮಾತಾ ಪಿತರ ಬಗ್ಗೆ ಈ ಪ್ರೀತಿ -ಮಮಕಾರ - ಕಾಳಜಿ- ವಿಷಯಕ್ಕೆ ಬಂದರೆ ಹೆಣ್ಣು ಮಕ್ಕಳೇ ಉತ್ತಮ..
ಹೀಗಾಗಿಯೇ ಬಹುಪಾಲು ಜನ(ನನ್ನೂ ಸೇರಿ)ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಜನಿಸಿದರೇನೆ ಖುಷಿ ಪಡುವರು..ಗಂಡಿಗಿಂತ ಹೆಣ್ಣೇ ಆದರೆ ಚೆನ್ನ ಎಂದು ಹಂಬಲಿಸುವವರಿಗೆ ಕಮ್ಮಿ ಇಲ್ಲ...
ತಮ್ಮ ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\|/
ಸಪ್ತಗಿರಿ ಅವರೆ, ನಾನು "ಸ್ಕೂಲ್
ಸಪ್ತಗಿರಿ ಅವರೆ, ನಾನು "ಸ್ಕೂಲ್ ಮಾಷ್ಟರ್" ಚಿತ್ರ ವನ್ನ ಅನೇಕ ಭಾರಿ ನೋಡಿರುವೆ, ತೀರ ಇತ್ತೀಚೆಗೆ ನಾನು ಯು ಟ್ಯೂಬ್ ನಲ್ಲಿ ಈ ಚಿತ್ರವನ್ನ ಮನೆಯ ಸದಸ್ಯರಿಗೆ ತೋರಿಸಿರುವೆ.ಆದರೂ "ಬಾಗ್ ಬನ್ " ಚಿತ್ರ ನೋಡಲು ಪ್ರಯತ್ನಿಸುತ್ತೇನೆ. ವಂದನೆಗಳು....ರಮೇಶ್ ಕಾಮತ್.
ಶ್ರೀನಿವಾಸ್ ಅವ್ರೆ -
ಶ್ರೀನಿವಾಸ್ ಅವ್ರೆ -
ನೀವ್ ಹೇಳಿದ ಆ ಸಾಲುಗಳನ್ನು -(ವಿಷ್ಣು ಅವರು ಹೇಳುವ-ನೀಡುವ ಸುಳಿವು)ನಾ ಅಷ್ಟಾಗಿ ಗಮನಿಸಿಲ್ಲ ಅನ್ಸುತ್ತೆ...!!
ನೀವು ಸಿನೆಮಾವನ್ನು ನೋಡುವ-ಗ್ರಹಿಸುವ ಪರಿ ಇಷ್ಟ ಆಯ್ತು...
ಸಿನೆಮಾಗಳನ್ನು ಅತಿ ಇಷ್ಟ ಪಟ್ಟು ನೋಡುವ ನನಗೆ ಹಲವೊಮ್ಮೆ ಈ ತರಹದ್ದು ಗಮನಕ್ಕೆ ಬರೋಲ್ಲ---..
ಈ ಬಗ್ಗೆ ನನ್ನ ಗಮನ ಸೆಳೆದುದಕ್ಕೆ ನನ್ನಿ ...
ಶುಭವಾಗಲಿ..
\|