ಬಾಡಿಹೋದ ಬಳ್ಳಿಯಿಂದ - ಹೊಸ ಕನ್ನಡ ಹಾಡು

ಬಾಡಿಹೋದ ಬಳ್ಳಿಯಿಂದ - ಹೊಸ ಕನ್ನಡ ಹಾಡು

ಬಾಡಿಹೋದ ಬಳ್ಳಿಯಿಂದ - ಹೊಸ ಕನ್ನಡ ಹಾಡು

ನನ್ನ ಮಟ್ಟಿಗೆ ಹಳತಾಗದ ಕೆಲ ಹಾಡುಗಳಿವೆ. ಆ ಪಟ್ಟಿಗೆ ಸೇರಿದ ಹಾಡು 'ಬಾಡಿಹೋದ ಬಳ್ಳಿಯಿಂದ'; ಕೆಳಗಣ ಕೊಂಡಿಯಲ್ಲಿ ನನ್ನ ಧ್ವನಿಯಲ್ಲಿ ಕೇಳಿ. ನಾನು ಹಾಡಿರುವ ಇತರ ಕೆಲವು ಹಾಡುಗಳೂ ಅಲ್ಲಿವೆ. ಸಾಧ್ಯವಾದರೆ ಅತ್ತಲೂ ಕಣ್ಣುಹಾಯಿಸಿ.
http://soundcloud.com/krishnaprakasha-bolumbu/baadihoda


ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೇ
ಮನಸು ಕಂಡ ಆಸೆ ಎಲ್ಲ ಕನಸಿನಂತೆ ಕರಗಿತಲ್ಲ ಉಲ್ಲಾಸ ಇನ್ನೆಲ್ಲಿದೆ
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ

ಹಣತೆಯಲ್ಲಿ ದೀಪ ಉರಿಯೆ ಬೆಳಕಿನಲ್ಲಿ ಬಾಳುವೆ
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ

ನೀರಿನಲ್ಲಿ ದೋಣಿ ಮುಳುಗೆ ಈಜಿ ದಡವ ಸೇರುವೆ
ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೇ
ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರೂ
ನಡೆಸುವಾತ ಬೇರೆ ಅವನ ಇಚ್ಛೆ ಯಾರು ಬಲ್ಲರು

Rating
Average: 2 (1 vote)

Comments

Submitted by kpbolumbu Thu, 04/18/2013 - 12:57

ಎಳವೆಯಲ್ಲಿ ನನಗೆ ಕನ್ನಡ ಹಾಡುಗಳೆಂದರೆ ಪಿ.ಬಿ. ಶ್ರೀನಿವಾಸ್ ಅವರು ಹಾಡುಗಳೇ ಆಗಿತ್ತು. ಪಿ.ಬಿ. ಶ್ರೀನಿವಾಸ್ ಅವರು ಹಾಡಿದ ಹೊಸ ಕನ್ನಡ ಹಾಡೊಂದನ್ನು ಇಲ್ಲಿ ಲಗತ್ತಿಸಿದ್ದೇನೆ. ಈ ಹಾಡು ಪಿ.ಬಿ. ಶ್ರೀನಿವಾಸ್ ಅವರಿಗೆ ಅರ್ಪಣೆಗೊಂಡಿದೆ.