ಬಾಲ್ಯಕಾಲದನೆನಪು

ಬಾಲ್ಯಕಾಲದನೆನಪು

ನೆನಪಿದೆಯೇನಮ್ಮಾ....
ಹಬ್ಬಕೆಂದು ಹೊಸಬಟ್ಟೆತಂದು
ಇದುಹರಿಯುವವರೆಗೂ
ಬೇರೆ ಬಟ್ಟೆ ಕೊಡಿಸುವುದಿಲ್ಲವೆಂದಾಗ
ಸಾಯಂಕಾಲದಹೊತ್ತಿಗೇ
ಕಲ್ಲಿನಲ್ಲಿ ಕುಟ್ಟಿ ಹರಿದುತಂದು
ಈಗ ಹೊಸಬಟ್ಟೆ ಕೊಡಿಸೆಂದಾಗ
ನೀನು ಅವಾಕ್ಕಾದದ್ದು

ನೆನಪಿದೆಯೇನಮ್ಮಾ....
ಮನೆಯಾಟವಡಲು ಹೋಗಿ
ಅಡಿಗೆ ಮಾಡಲು ಮೂರುಕಲ್ಲಿಟ್ಟು
ಪುಳ್ಳೆಯಿಟ್ಟಾಗ ನಿಜವಾಗಲೂ ಅದು
ಹತ್ತಿಉರಿದು ಗೋಡೆಗೆಲ್ಲಾ
ಮಸಿಹತ್ತಿಸಿ ಏನುಮಾಡಲೂ
ತಿಳಿಯದೇ ಕಂಗಾಲಾಗಿ ಭಯದಿಂದ
ಕಾಲಿಗೆ ಬುದ್ದಿ ಹೇಳಿದಾಗ
ನೀನು ನಕ್ಕಿದ್ದು

ನೆನಪಿದೆಯೇನಮ್ಮಾ....
ಬೇಡ ಬೇಡವೆಂದರೂ ಕೇಳದೇ
ಮುಸ್ಸಂಜೆಹೊತ್ತು ಆಡಲುಹೋಗಿ ಬಿದ್ದುಮೈಕೈಯೆಲ್ಲಗಾಯಮಾಡಿಕೊಂಡು
ಅಳುತ್ತಾ ಬಂದಾಗ ತಿನ್ನಲುಉಂಡೆ ಕೊಟ್ಟು
ನೀನು ಸುಮ್ಮನಾಗಿಸಿದ್ದು

ಹೇಗೆಸಹಿಸಿದೆಯಮ್ಮಾ ಬಾಲ್ಯದ
ನನ್ನೆಲ್ಲಾ ಈ ತುಂಟಾಟಗಳನ್ನು....
ಸೀತ

Rating
No votes yet

Comments