ಬಾಲ್ಯದ ಸವಿನೆನಪು.........
ಶ್ರಿ ರಾಮ್ ಶ್ರಿ ಗುರುಭ್ಯೂನಮ:
ಬಾಲ್ಯದ ಸವಿನೆನಪು.........
ನಾನು ೯ನೆ ತರಗತಿಯಲ್ಲಿ ಓದುವಾಗ ನಡೆದ ಘಟನೆ: ೧೯೬೯
ಆಗಿನ ಕಾಲದಲ್ಲಿ ಈಗಿನಂತೆ ಮಾಧ್ಯಮಗಳಿರಲಿಲ್ಲ. ಮನೆಯಲ್ಲಿ ಅಪ್ಪಾ ಅಮ್ಮನ ಮಾತಿನಿಂದ ಅಣ್ಣಾ ತಮ್ಮರ ಹರಟೆಇಂದ ಕೆಳಿ ತಿಳಿಯುವದು, ಶಾಲೆಯಲ್ಲಿ ಪುಸ್ತಕದಿಂದ ಮತ್ತು ರೆಡಿಯೊದಿಂದ ಕೆಳುವಕೆಲಸ ಇತ್ತು. ಇರಲಿ......
ಯು.ಪಿ.ಜಿ.ಹ್ಚ್ ಶಾಲೆ. ಆನವಟ್ಟಿ. ಸೊರಬ ತಲ್ಲುಕ್, ಶಿವಮೊಗ್ಗ ಜಿಲ್ಲಾ, ಕರ್ನಟಕ ರಾಜ್ಯ. ಇದು ನಮ್ಮ ಶಾಲೆ.
ನಮ್ಮ ಮನೆಇಂದ ೫ ನಿಮಿಶದ ನಡಿಗೆ ಹಾದಿ. ಎಂದಿನಂತೆ ಬೆಳಿಗ್ಗೆ ನನ್ನ ಎಲ್ಲಾ ದಿನಚರಿ ಮುಗಿಸಿಕೊಂಡು ೧೦.೩೦ ಕ್ಕೆ ಅಮ್ಮ ತಯಾರಿಸಿದ ಅನ್ನಾ ಕಾಳಿನ ಹುಳಿ, ಮಜ್ಜಿಗೆ ಹುಳಿ, ಗೊಜ್ಜು, ಭಜ್ಜಿ, ಪಲ್ಯ, ತಂಬುಳಿ, ಹಪ್ಪಳಾ, ಸಂಡಿಗೆ ಹೀಗೆ ಸವಿಯಾದ ಊಟವನ್ನು ಅಪ್ಪಾ, ಅಣ್ಣಾ, ತಮ್ಮ ನೊಟ್ಟಿಗೆ ಕುಳಿತು ಊಟ ಮಡಿಕೊಂಡು ತಯಾರಾಗಿ ಲಗುಬಗೆಇಂದಲೆ ಶಾಲೆಗೆ ಸರಿಯಗಿ ೧೦.೪೫ಕ್ಕೆ ಹೋಗಿ ಸೆರಿದ್ದೆವು. ಸ್ವಾಮಿದೇವನೆ ಲೋಕ ಪಾಲನೆ ಎಂಬ ಪ್ರಾರ್ಥನೆಯೊಂದಿಗೆ ಆರಂಭಿಸಿ ರಾಷ್ಟ್ರಗೀತೆ ಹೇಳಿ ಅಂದಿನ ಪಂಚಾಂಗ ಸುಭಾಷಿತ ಹೇಳುವದು ಮತ್ತು ದಿನ ಪತ್ರಿಕೆಯಲ್ಲಿನ ಸ್ವದೇಶದ ಹಾಗು ವಿದೇಶದ ಮುಖ್ಯ ಸಮಾಚಾರ ಓದುವದು. ನಂತರ ನಮ್ಮ ನಮ್ಮ ತರಗತಿಗೆ ಹೋಗುವದು. ಮೊದಲಿಗೆ ಇಂಗ್ಲಿಷ ಅಥವ ಕನ್ನಡ ಕ್ಲಾಸ್ ನಡೆಯುತ್ತಿತ್ತು. ಆಗ ಇಛ್ಚಿತ ವಿಷಯ ಸಯನ್ಸ್ ಅಥವ ಆರ್ಟ್ಸ್ ಆಗಿತ್ತು. ಅದರಲ್ಲಿ ಸಯನ್ಸ್ ವಿದ್ಯರ್ಥಿನಿ ಅಂದರೆ ಅಂಬುತಾಯಿ, ಗೀತಾಬಾಯಿ, ಹಚ್, ಸುನಂದಾ.
ಆಗ ನನಗೆ ೧೪ ವರ್ಷ. ಎಲ್ಲ ಆಟ ಪಾಟಗಳಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಆಗ ನಮಗೆ ವಿಜ್ಞಾನದ ಸರ್ ಡಿ. ಬಿ. ಯಸ್.ಯೆಂದು, ತುಂಬಾ ಚನ್ನಾಗಿ ವಿಜ್ನಾನ,ಗಣಿತ ಪಾಟ ಮಾಡುತ್ತಿದರು. ಒಂದು ದಿನ ವಿಜ್ಞಾನದ ತರಗತಿಯಲ್ಲಿ ೩ ಜನರಿಗೆ ಪಾಟ ಮಡುತ್ತಿದ್ದಾಗ ಕೈಯಲ್ಲಿನ ಚೊಕ್ ಪೀಸಿನಿಂದ ಹೊಳೆಯುವ ಕರಿ ಬೊರ್ಡಿನ ಮೇಲೆ ಒಂದು ಸಯನ್ಸಿನ ಪ್ರಯೋಗದ ಚಿತ್ರ ಬಿಡಿಸಿ ಮುಗಿಸುವ ಕ್ಷಣದಲ್ಲಿದ್ದರು, ತುಂಬ ಸ್ಟ್ರಿಕ್ಟ ಮಾಸ್ತರ ಇದ್ದರಿಂದ ಕ್ಲಾಸ್ ತುಂಬ ಸ್ಥಬ್ದವಾಗಿತ್ತು. ಅವರು ಬೊರ್ಡಿನ ಮೆಲಿನ ಆಕ್ರುತಿಯನ್ನು ಕುರಿತು ಇದು ಏನು ಎಂದು ಪ್ರಶ್ನಿಸಿದರು. ನಾವು ಬೇರೆ ವಿಚಾರದಲ್ಲಿ ಮಗ್ನರಾಗಿದ್ದೆವು. ನಾನೇ ಬೇಗನೆ ಉತ್ತರಿಸಬೆಕೆಂಬ ಆತುರತೆಇಂದ ವಿನೋದದಿಂದ "ಚಿತ್ರ" ಎಂದುಬಿಟ್ಟೆ.ಆಗ ಮೆಷ್ಟ್ರಿಗೆ ತುಂಬ ಕೋಪ ಬಂದುಬಿಟ್ಟಿತ್ತು, ಇಷ್ಟೊಂದು ಕಷ್ಟ ಪಟ್ಟು ಪ್ರಯೋಗದ ಚಿತ್ರ ಬಿಡಿಸಿದಾಗಲೂ ನನ್ನ ಉತ್ತರದಿಂದ ಕೋಪದ ಜೊತೆಗೆ ನಗುವೂ ಬಂದಿತು!!!!!!! ಎಕೆಂದರೆ "ನೈಟ್ರಸ್ ಆಕ್ಸೈಡಿನ "ನಗುವಿನ ಅನೀಲ" ದ ಪಾಟ ಮಾಡುವದರ ಆರಂಭದಲ್ಲಿಯೆ ಮೆಷ್ಟ್ರಿಗೆ ನನ್ನ ಮಾತಿನಿಂದ ತುಂಬಾ ನಗು ಬಂದೇಬಿಟ್ಟಿತು. ಆ ಪ್ರಯೊಗವನ್ನು ಶುರು ಮಡುವಮೊದಲೆ ಬಿಟ್ಟು ಬಿಡದೆ ನಗುತ್ತಿದ್ದದ್ದನ್ನುಕಂಡು ನಮಗೆಲ್ಲರಿಗೂ ನಗು ಬಂದಿತು. ಅಷ್ಟರಲ್ಲಿಯೆ ಸಮಯ ಮುಗಿದು ಘಂಟೆ ಬಾರಿಸಿತು. ಇಂದಿಗೂ ಆ ದಿನ ನೆನೆಸಿಕೊಂಡರೆ ಸಾಕು, ಉಕ್ಕಿ ಉಕ್ಕಿ ನಗು ಬರುತ್ತದೆ.
ನಗುವಿನ ಅನಿಲ ಕಂಡುಹಿಡಿದ ವಿಜ್ಞಾನಿಗೆ ಅನಂತ ಅನಂತ ಧನ್ಯವದಗಳು!!!!
ಅಂಬುಜಾ ಜೋಶಿ...
Comments
ಉ: ಬಾಲ್ಯದ ಸವಿನೆನಪು.........
ಉ: ಬಾಲ್ಯದ ಸವಿನೆನಪು.........
ಉ: ಬಾಲ್ಯದ ಸವಿನೆನಪು.........