ಬಾಲ್ಯ

ಬಾಲ್ಯ

ಮರಳಿ ಬಾ ಬಾಲ್ಯವೇ
ನೀ ಒಮ್ಮೆ ಮಧುರ
ಸವಿನೆನಪ ಹೊತ್ತು
ಹಾರ ಬೇಕೆನಿಸಿದೆ ಒಮ್ಮೆ ನಾ ಈ ಭುವಿಯ ಬಿಟ್ಟು

ಸಿಕ್ಕ ಸಿಕ್ಕ ಮರವ ಹತ್ತಿ
ಕಂಡಿದ್ದೆಲವ ತಿಂದು
ಅರಗಿಸಿಕೊಳ್ಳಲಾಗದೆ ಕಕ್ಕಿದ್ದು
ನಾ ಆ ಬಾಲ್ಯದಲ್ಲೇ

ಮುಂಗಾರ ಮಳೆಯಲ್ಲಿ
ಪಟ ಪಟನೆ ಬಿದ್ದ
ಆಲಿಕಲ್ಲು ಹೆಕ್ಕಿ ತಿಂದಿದ್ದು
ನಾ ಆ ಬಾಲ್ಯದಲ್ಲೇ

ಕಾಲ್ ಎಡವಿ ಬಿದ್ದಾಗ
ನಿಮಿಷ ನಿಮಿಷಕ್ಕೆ
ಅಮ್ಮನ ಮಡಿಲಲ್ಲಿ ಮುಕವಿಟ್ಟು ಅತ್ತಿದ್ದು
ನಾ ಆ ಬಾಲ್ಯದಲ್ಲೇ

ಜೀವ ಜಂಜಾಟದ
ಪರಿವಿಲ್ಲದೆ ನನ್ನದೇ
ಲೋಕದಲ್ಲಿ ತಲ್ಲೀನವಾಗಿದ್ದು
ನಾ ಆ ಬಾಲ್ಯದಲ್ಲೇ

ಮೇಲು ಕೀಳುಗಳೆಂಬ ಬೇಧವಿಲ್ಲದ
ಬಡವ ಬಲ್ಲಿದನೆಂಬ ತಾತ್ಸಾರವಿಲ್ಲದ
ಶುಭ್ರ ಮನಸಿನ ಬಾಲ್ಯವೇ
ಮರಲಿಬಿಡು ಒಮ್ಮೆ
ಕರೆದೋಯ್ದುಬಿಡು ನನ್ನ ಆ ಲೋಕಕ್ ಒಮ್ಮೆ .

Rating
No votes yet