ಬಾಳನೌಕೆ
ನಿರರ್ಗಳವಾಗಿ ಧುಮ್ಮಿಕ್ಕಿ
ಹರಿಯಬೇಕಿದ್ದ ಭಾವಬಿಂದು,
ಸಿಂಧುವಿನಂತೆ ಬತ್ತಿಹೋಗಿದೆ .
ನವರಸಗಳ ಸುರಿಸಿ
ಸವಿಜೇನಾಗಬೇಕಿದ್ದ ಪ್ರೇಮದೊರತೆ,
ಬಿಸುಟ ಕಬ್ಬಿನ ಜಲ್ಲೆಯಂತೆ ಒಣಗಿಹೋಗಿದೆ.
ಮಲ್ಲಿಗೆಯಂತೆ ಕಂಪು ಸೂಸಿ
ಮನಕೆ ತಂಪೆರೆಯಬೇಕಿದ್ದ ಒಲುಮೆ,
ಪಾಪನಾಶಿನಿ ಗಂಗೆಯಂತೆ, ಗಬ್ಬೆದ್ದು ಹೋಗಿದೆ.
ಇಂಪಾದ ಧ್ವನಿಮಾಧುರ್ಯದೊಡನೆ
ಮುದವೀಯಬೇಕಿದ್ದ ಚಿಲುಮೆ,
ಅದೇ ಶಬ್ದಮಾಲಿನ್ಯದ ನಡುವೆ ಕಳೆದುಹೋಗಿದೆ.
ಹೃದಯವನ್ನು ಘಾಸಿಗೊಳಿಸಿ
ಮೌಲ್ಯಗಳನು ಕಡೆಗಣಿಸಿ,
ಅವರವರ ಬಾಳನೌಕೆ ಮುಂದೆಸಾಗಿದೆ..!!
Rating
Comments
ಉ: ಬಾಳನೌಕೆ
In reply to ಉ: ಬಾಳನೌಕೆ by partha1059
ಉ: ಬಾಳನೌಕೆ
ಉ: ಬಾಳನೌಕೆ :ರವಿ ಕಿರಣ್ ಅವ್ರೆ-
In reply to ಉ: ಬಾಳನೌಕೆ :ರವಿ ಕಿರಣ್ ಅವ್ರೆ- by venkatb83
ಉ: ಬಾಳನೌಕೆ :ರವಿ ಕಿರಣ್ ಅವ್ರೆ-
ಇದು ವೈಯಕ್ತಿಕ ಅನುಭವದ
ಇದು ವೈಯಕ್ತಿಕ ಅನುಭವದ ಅಭಿವ್ಯಕ್ತಿಯೇ ಅಥವಾ ಕಲ್ಪಿತ ರಚನೆಯೇ.
ಕಲ್ಪನೆಯಿಂದ ಹೊರಹೊಮ್ಮಿರಲೆಂದು ನನ್ನ ಅಪೇಕ್ಷೆ
In reply to ಇದು ವೈಯಕ್ತಿಕ ಅನುಭವದ by harishsaniha
@ harishsaniha:
@ harishsaniha:
ಸ್ವಲ್ಪ ಅನುಭವ, ಸ್ವಲ್ಪ ಕಲ್ಪನೆ. ನಡೆಯುವ ಘಟನೆಗಳನ್ನು ಅವಲೋಕಿಸಿದಾಗ ಮುಂದೆ ಅಗಬುಹುದಾದ ಸಂಗಿತಿಗಳ ಮುನ್ಸ್ಸೋಚನೆಯೂ ಕೆಲವೊಮ್ಮೆ ಸಿಗಬಹುದು!!
ವಂದನೆಗಳು