ಬಾಳೇ ಬಿಸಿಲು ನೀನೆ ತಂಗಾಳಿ - ಹಿಂದಿ ಗಜಲ್ ಅನುವಾದ
ಮೊದಲು 'ಸಾಥ್ ಸಾಥ್' ಹಿಂದಿ ಚಿತ್ರದಲ್ಲಿನ ಈ ಗಜಲ್ ಅನ್ನು https://youtu.be/-GRqHkV9Bls ಈ ಕೊಂಡಿಯಲ್ಲಿ ನೋಡಿಕೊಂಡು, ಕೇಳಿಕೊಂಡು ಬನ್ನಿ. ಇದನ್ನು ಹಾಡಿದ್ದು ಗಜಲ್ ಗಾಯಕ ಜಗಜಿತ್ ಸಿಂಗ್. ಇದರಲ್ಲಿ ನೀವು ಫರೂಕ್ ಶೇಕ್ ಮತ್ತು ದೀಪ್ತಿ ನವಲ್ ಅವರನ್ನು ನೋಡುವಿರಿ.
ಈಗ ಈ ಹಾಡಿನ ಛಾಯಾನುವಾದವನ್ನು ನಾನು ಮಾಡಿರುವುದನ್ನು ನೋಡಿ . ಇದನ್ನು ಮೂಲ ಧಾಟಿಯಲ್ಲಿ ಹಾಡುವಂತೆ ಸಾಧ್ಯವಿದ್ದಷ್ಟು ಪ್ರಯತ್ನಿಸಿ ಮಾಡಿದ್ದೇನೆ. ನೀವೂ ಹಾಡಿಕೊಳ್ಳಲು ಪ್ರಯತ್ನಿಸಿ!
ನಿನ್ನ ಕಂಡ ದಿನವೇ ನಾ ಅಂದೆ(*)
ಬಾಳೇ ಬಿಸಿಲು ನೀನೆ ತಂಗಾಳಿ
ನೀನು ಬಂದಂದು ಬಾಳು ತಿಂಗಳೊಲು
ಹಗಲು ಇರುಳು ಹರುಷದಾ ಹೊನಲು
ಅರಳಿದವು ಇಂದೂ ಕೂಡ ಬಯಕೆಯಾ ಹೂವು
ಬಾಡಿದವು ಇಂದೇ ಬಯಕೆಯಾ ಹೂವು
ಹಾಡಲಾರೆ ಯಾವ ಹಾಡನು ನಾನು
ಹೊಮ್ಮಿತೇಕೆ ಹೃದಯದೀ ತಾನು
Rating