ಬಾಳ ದಾರಿಯಲಿ ಸಾಗಿದೆ ಈ ಪಯಣವು ...
ತಿಳಿಯಲಾರದಾದೆನು ನಾನು ಈ ಬದುಕ ...
ತಿಳಿದು ತಿಳಿಯದಂತಾದೆನೊ ನಾನು?
ಎನೆಂದು ತಿಳಿಯದು ಎಂತೆದು ಅರಿಯದು
ಅರಿತು ಅರಿಯದಂತಾದೆನೊ ನಾನು??
ಬಾಳ ದಾರಿಯಲಿ ಸಾಗಿದೆ ಈ ಪಯಣವು ...
ಇದ್ದುದ ಬಿಟ್ಟು ಇರದುದರ ಕಡೆಗೆ!
ಆಸೆಯೆಂಬ ಬಿಸಿಲು ಕುದುರೆಯ ಬೆಂಬತ್ತಿ
ಮರಳುಗಾಡಿನಲ್ಲಿ ಮರಿಚಿಕೆಯ ಹಾಗೆ
ತಣಿಸಲಾರೆನು ನಾನು ಈ ಮನದ ಹಂಬಲವ ...
ಸುಡುವ ಬೆಂಕಿಗೆ ತುಪ್ಪವ ಸುರಿದು ಆರಿಸುವುದೆಂತು?
ಕಟ್ಟುತಿರಲು ನಾನು ಆಸೆಯೆಂಬ ಸೌಧವನು
ಹೆಣೆಯುತಿಹುದು ಜೇಡವು ತನ್ನಸುತ್ತ ಬಲೆಯ
ಗಾಳಿಯನು ಮುಟ್ಟಿಯಲಿ ಹಿಡಿದು ನಿಲ್ಲಿಸಲುಂಟೆ?
ಮನಸಿನ ಈ ರೌದ್ರ ನರ್ತನಕೆ ಕಡಿವಾಣ ಹಾಕುವುದುಂಟೆ?
ಆಸೆ ನಿರಾಸೆ ದುಃಖ ದುಮ್ಮಾನ ಪ್ರವಾಹೋಪಾದಿಯಲಿ ಬರಲು
ಭಗವಂತ ನೀ ನನಗೆ ದಾರಿ ಎನಲು
ಮುರ್ಖಮನವೆ ನೀ ಕೇಳು
ಆಸೆಯೆ ದುಃಖಕ್ಕೆ ªÀÄÆಲ
ತಿಳಿದು ತಿಳಿಯದಂತಿರಬೇಡ
ಅರಿತು ಅರಿಯದಂತಿರಬೇಡ
ಈ ಅಜ್ಞಾನವನ್ನರಿತು
ಸಾಗು ನೀ ಮುಂದೆ ಜ್ಞಾನದ ದಾರಿಯಲಿ
ಗೋಚರಿಸುವುದು ನೂರೆಂಟು ನಕ್ಷತ್ರಗಳು
ಕತ್ತಲ ರಹದಾರಿಯಲಿ!!
Rating