ಬಾಳ ಪಯಣ....
ಬಾಳ ನೌಕೆಯ ಈ ಪಯಣ,
ನಾವಿಕ ಯಾರೋ? ದಾರಿ ಯಾವುದೋ?
ಆದರೂ ಪಯಣಿಗರು ನಾವು,
ಕಾಣದ ದಾರಿಯ, ಗುರಿಯ ಸೇರಲು ತವಕಿಸುವವರು,
ಜೀವನ ಸಾಗರದ ಮದ್ಯದಲ್ಲೆಲ್ಲೋ ತೇಲುತಿರುವ,
ಗುರಿ ಸೇರಿದೆವೆಂದು ಭಾವಿಸುವವರು,
ಆದರೂ, ಒಂದು ದಿನ ಮುಗಿಯಲೇ ಬೇಕು ಈ ಪಯಣ,
ಆಗಲಿ ಬದುಕಿನ ಪಯಣ ಆನಂದಮಯ....
Rating
Comments
ಉ: ಬಾಳ ಪಯಣ....