ಬಾವಿಯೊಳಗಣ ಕಪ್ಪೆ ಮತ್ತು ಬುದ್ಧ
ಧನ್ಯವಾಗಿದೆಯಿಲ್ಲಿ
ಜೀವ-ಜಂತು ನೆಲ
ಬಾವಿಯೊಳಗಿನ
ಒಂಟಿ ಕಪ್ಪೆಗೆ
ಬುದ್ದ ದೇವನ
ಶ್ರೀರಕ್ಷೆ : ಜ್ಞಾನ ಧೀಕ್ಷೆ ...
ಮಾತಿಗೆ ಅಹಂಕಾರ
ಪಾಶ ; ಮೌನಕೆ
ಆತ್ಮ ವಿಮರ್ಶೆಯ
ಸ್ಪರ್ಶದ ಹರ್ಷ...
ಮಮತಾ ಮೂರ್ತಿ
ಬುದ್ಧನ ಮೌನ ವರ್ತುಲದಿ
ವಟ ವಟ ಕಪ್ಪೆಯ
ಅಹಂಕಾರದ ಸೋಲು...
ಕಡಲ ನೀರಲಿ
ಕರಗಿದ ಮಣ್ಣಿನ
ಕೊಡದ ತೆರದಿ
ಬಾವಿಯ ಕಪ್ಪೆಗೆ
ಅರಿವಿನ ಅನಂತದೆಡೆಗೆ
ನಿರಂತರ ಪಯಣ...
ಕಮಲ ಬೆಲಗೂರ್
Rating