ಬಾ ಮತ್ತೆ ಸ್ವಾಮಿ ವಿವೇಕಾನಂದ

ಬಾ ಮತ್ತೆ ಸ್ವಾಮಿ ವಿವೇಕಾನಂದ

 

 

 

 

 

 

 

 


 ಬಾ ಮತ್ತೆ ಸ್ವಾಮಿ ವಿವೇಕಾನಂದ

ಬಾ ಮತ್ತೆ ಮತ್ತೆ ಬಾ |

ಸ್ವಾಮಿ ವಿವೇಕಾನಂದ ||
ನಿಲುವುದ ಕಲಿಸಲು ಬಾ |
ಎಚ್ಚರಿಸಲು ನಮ್ಮನು ಬಾ ಬಾ  ||ಪ||

ಗುರಿತಪ್ಪಿದೆ ಯುವ ಜನತೆ |

ಕುರಿ ಮಂದೆಯ ತೆರವಿಹುದೇ ||
ನೋಡಲೊಮ್ಮೆ ಈ ಜಗದೇ |
ನೀನೇ ಬರಬೇಕಾಗಿದೆ ||೧||
ಬಾ ಮತ್ತೆ ಮತ್ತೆ ಬಾ |
ಸ್ವಾಮಿ ವಿವೇಕಾನಂದ ||
ನಿಲುವುದ ಕಲಿಸಲು ಬಾ |
ಎಚ್ಚರಿಸಲು ನಮ್ಮನು ಬಾ ಬಾ  ||ಪ||

ತಾರುಣ್ಯದ ಸಾರ್ಥಕತೆ |
ಲಾವಣ್ಯದ ಬೋಧಕತೆ ||
ಸಾಕಾಗಿದೆ ಯಾಂತ್ರಿಕತೆ |
ಬೇಕಿದೆ ಆಧ್ಯಾತ್ಮಿಕತೆ ||೨||
ಬಾ ಮತ್ತೆ ಮತ್ತೆ ಬಾ |
ಸ್ವಾಮಿ ವಿವೇಕಾನಂದ ||
ನಿಲುವುದ ಕಲಿಸಲು ಬಾ |
ಎಚ್ಚರಿಸಲು ನಮ್ಮನು ಬಾ ಬಾ  ||ಪ||

ಮಲಗಿದವರ ಮೇಲೆಬ್ಬಿಸು ಬಾ |
ನಡುಗುವವರ ಎದೆಯುಬ್ಬಿಸು ಬಾ ||
ಗುರಿತೋರುವ ಸದ್ಗುರುವಾಗಿಯೆ ನೀ |
ಭಾರತರೆಲ್ಲರ ಪರವಾಗಿರು ಬಾ ||೩||
ಬಾ ಮತ್ತೆ ಮತ್ತೆ ಬಾ |
ಸ್ವಾಮಿ ವಿವೇಕಾನಂದ ||
ನಿಲುವುದ ಕಲಿಸಲು ಬಾ |
ಎಚ್ಚರಿಸಲು ನಮ್ಮನು ಬಾ ಬಾ  ||ಪ||


                                                        - ಸದಾನಂದ  

 

Rating
No votes yet