" ಬಾ ವಸಂತ "

" ಬಾ ವಸಂತ "

ಚಿತ್ರ

ಬಾ ಕಾಲ ಬಾ ವಸಂತ ಕಾಲ

ನಿನಗಾಗಿ ಕಾಯುತಿದೆ ಮಾಮರಗಳು

ಸುಡು ಬಿಸಿಲಿನಲ್ಲಿ ಚಿಗುರುವ ಆಸೆ

ಪ್ರಕೃತಿ ಸೌಂದರ್ಯದ ಸೊಬಗು ಹೆಚ್ಚಿಸಲು  

 ಬಾ ಕಾಲ ಬಾ ವಸಂತ ಕಾಲ

 

ಕೋಗಿಲೆಯು ಕಾಯುತಿದೆ ನಿನಗಾಗಿ

 ನೀ ಬಂದರೆ ತಾನೆ ಹಾಡಿ ಕುಣಿಯುವುದು

 ಜನರ ಮನ ತಣಿಸುವದು

ರೈತನು ಕಾಯುವನು ನಿನಗಾಗಿ  

ಬರಡಾದ  ಭೂಮಿಯನು ಬಲಗೊಳಿಸುಲು

 

 ನಿನ್ನ ಆಗಮನ ನಮಗೆ ಖುಷಿಯಾಗಿದೆ

ನಿನ್ನಬರುವಿಕೆಗೆ ಕಾಯುತಿದೆ ಜೀವ ಸಂಕುಲ

 ನಿನ್ನಿಂದ ತಾನೆ ಭೂಮಿಯು ಹಚ್ಚ ಹಸಿರು

  ಅದರಿಂದ ತಾನೆ ನಮಗೆ ಉಸಿರು

ಬಾ ಕಾಲ ಬಾ ವಸಂತ ಕಾಲ 

 

 ಎಲ್ಲ ಋತುಗಳಲ್ಲೇ ರಾಜ  ಈ ವಸಂತ

ನಿಸರ್ಗದಲ್ಲಿಯ ಬದಲಾವಣೆಗಳು ಅನಂತ  

 ಎಲ್ಲರ ಖುಷಿ ಮೇರೆಯಿಲ್ಲದಷ್ಟು ಅನಂತ

ಕೂಡಿ ಸ್ವಾಗತಿಸೋಣ  ಈ ಋತು ವಸಂತ

 ಶುರುವಾಗಲಿ ಸಂವತ್ಸರದ ಹೊಸ ಹಂತ.

 

ಚಿತ್ರಕೃಪೆ : ಗೂಗಲ್.

Rating
Average: 4 (2 votes)

Comments

Submitted by H A Patil Thu, 03/19/2015 - 20:39

ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
'ಬಾ ವಸಂತ' ಕವನ ಬಹಳ ಸೊಗಸಾಗಿ ಮೂಡಿ ಬಂದಿದೆ, ಇದಕ್ಕೆ ಅಳವಡಸಿದ ಫೋಟೋ ಸಹ ಅದ್ಭುತವಾಗಿ ಕವನಕ್ಕೆ ಒಂದು ವಿಶೇಷ ರೀತಿಯ ಮೆರಗು ತಂದಿದೆ, ಬರಲಿರುವ ಯುಗಾದಿಯ ಶುಭ ಸಂಧರ್ಭದಂದು ವಸಂತನನ್ನು ಕರೆಯುವ ಮೂಲಕ ಬಹಳ ಅರ್ಥಪೂರ್ಣ ವಾಗಿ ಕಾವ್ಯ ಕೃಷಿಗೆ ಚಾಲನೆ ನೀಡಿದ್ದೀರಿ ಶುಭವಾಗಲಿ, ಧನ್ಯವಾದಗಳು.

Submitted by kavinagaraj Wed, 03/25/2015 - 15:32

ಋತುರಾಜನಿಗೆ ಆಹ್ವಾನ - ಜೀವಕುಲಕ್ಕೆ ತಂಪೆರೆಯುವ ವಸಂತ ಸಕಲರಿಗೂ ಶುಭ ತರಲಿ! ನವೋತ್ಸಾಹ ತುಂಬಲಿ.