ಬಿಂದಿಗೆಯ ಸದ್ದು

ಬಿಂದಿಗೆಯ ಸದ್ದು

ಸುನಿಲ್ ಜಯಪ್ರಕಾಶ್ ಅವರು ಭರತೇಶ ವೈಭವದ ಬಗ್ಗೆ ಮಾತಾಡುತ್ತ, ಒಂದು ಸಂಸ್ಕೃತ ಶ್ಲೋಕದ ಪ್ರಸ್ತಾಪ ಮಾಡಿ, ಅದನ್ನು ಕನ್ನಡಿಸಲು ಸಾಧ್ಯವೇ ಎಂದರು. ನನ್ನ ಪ್ರಯತ್ನ ಇಲ್ಲಿದೆ ನೋಡಿ:


ರಾಮನಭಿಷೇಕಕ್ಕೆ ನೀರನ್ನು ತರುತಿರುವ
ಯುವತಿಯು ಕೈಯಿಂದ ಬಿಂದಿಗೆಯು ಬಿದ್ದಾಗ
ಮೆಟ್ಟಿಲಿನ ಮೇಲುರುಳುತ್ತ ಮಾಡಿತದು ಸದ್ದನ್ನು
ಠಾ ಠಣ್ ಠ ಠಣ್ ಠಣ್ ಠ ಠ ಠಣ್ ಠಣಿರೆಂದು

रामाभिषेके जलमाहरान्त्याः
हस्ताच्य्तो हेमघटो युवत्याः
सोपानमासाद्य करोति शब्दम्
ठा ठं ठ ठं ठं ठ ठ ठं ठ ठं ठः

(ಕಾಳಿದಾಸನದೆಂದು ಹೇಳಲಾದ ಒಂದು ಸಂಸ್ಕೃತ ಶ್ಲೋಕ - ಅನುವಾದ ನನ್ನದು)

ಈ ರೀತಿಯ ಪದ್ಯಗಳಿಗೆ ಸಮಸ್ಯಾ ಪೂರಣ ಪದ್ಯಗಳೆಂದು ಹೆಸರು. ಒಂದು ಸಾಲನ್ನು ಕೊಟ್ಟಾಗ, ಪದ್ಯದ ಉಳಿದ ಸಾಲುಗಳನ್ನು  ಕವಿ ಪೂರಯಿಸಬೇಕು.

ಇಲ್ಲಿ, ಠಾ ಠಂ ಠ ಠಂ ... ಹೀಗೆ, ಅರ್ಥವಿರದಂತಹ ಒಂದು ಸಾಲನ್ನು ಕೊಟ್ಟಿರುವಾಗ ಕವಿ ಅದನ್ನು ಜಾಣ್ಮೆಯಿಂದ ಮೊದಲ ಮೂರು ಸಾಲು ಬರೆದು, ಅದಕ್ಕೆ ಒಳ್ಳೆಯ ಅರ್ಥ ಕಲ್ಪಿಸಿದ್ದಾನೆ.

ಸಮಸ್ಯಾಪೂರಣದ ಬಗ್ಗೆ ಆಸಕ್ತಿ ಇರುವವರು, ಈ ಎರಡು ಇಂಗ್ಲಿಷ್ ಬರಹಗಳನ್ನು ಓದಬಹುದು.

ಸತ್ತವಳೆದ್ದು ಹೋದರೇನಿದು ವಿಚಿತ್ರ? : http://neelanjana.wordpress.com/2007/10/11/

Gouri Cooks Beef:

http://neelanjana.wordpress.com/2007/10/04/gouri-cooks-beef/

(ಇದರ ಬಗ್ಗೆ ಸಂಪದದಲ್ಲಿ ಈ ಮೊದಲೇ ಚರ್ಚೆ ಆಗಿದೆ)


-ಹಂಸಾನಂದಿ

Rating
No votes yet