ಬಿಡುಗಡೆಯ ಬಯಸಿ

ಬಿಡುಗಡೆಯ ಬಯಸಿ

ಅದೇ ಬೆಳಗು ಅದೇ ಸೂರ್ಯ ಅದೇ ಪಯಣ ಅದೇ ದಾರಿ ಅದೇ ತಿರುವು ಅದೇ ಹೆಜ್ಜೆ ಅದೇ ಆಫೀಸ್ ಅದೇ ಫೇಸ್ ಅದೇ ಕಂಪ್ಯೂಟರ್ ಅದೇ ಸಾಫ್ಟ್ವೇರ್ ಅದೇ ಫೇಸ್ಬುಕ್ ಅದೇ ಲುಕ್ ಅದೇ ಪ್ರಾಜೆಕ್ಟ್ ಅದೇ ರಿಲೀಸ್ ಅದೇ ಡೆಡ್ಲೈನ್ ನೋ ಸಿಲ್ವರ್ಲೈನ್ ಯಾವಾಗ್ಲೂ ಸಿಟಿಂಗ್ ಜೊತೆಗೆ ಕಿತ್ತೋಗಿರೋ ಮೀಟಿಂಗ್ ವೀಕೆಂಡ್ ಸಹ ವೀಕ್ ಡೇ ಬರಲಿ ಮತ್ತೊಮ್ಮೆ ಆ ಬಾಲ್ಯ ತಿಂದು ತಿರುಗುತ್ತಿದ್ದ ಕಾಲ ಬಾಲ್ಯವಲ್ಲದಿದ್ದರೂ ಹಿಂದಿನ ಖುಷಿಯ ದಿನಗಳಾದರೂ ಮರಳಿ ಬರಲಿ ಬದುಕೇ ಬರಡಾಗಿದೆ ಬಯಕೆಗಳು ಬಾಡಿಹೋಗಿದೆ ಭಾವನೆಗಳು ಬಂಧಿಯಾಗಿವೆ ಬಿಡುಗಡೆಯ ಬಯಸುವ ಬದಲಾವಣೆ ಬೇಕಿದೆ
Rating
No votes yet

Comments