ಬಿಡುವಿನ ವೇಳೆಯಲ್ಲಿ ಒಂದಿಷ್ಟು ಕನ್ನಡ ಸೇವೆ

ಬಿಡುವಿನ ವೇಳೆಯಲ್ಲಿ ಒಂದಿಷ್ಟು ಕನ್ನಡ ಸೇವೆ

ನಾನು ಕಳೆದ ೩೭ ವರ್ಷಗಳಲ್ಲಿ ಹೆಚ್ಚಿನ ಸಮಯವನ್ನು ಓದುತ್ತಲೇ ಕಳೆದಿದ್ದೇನೆ. ( ಬರೆಯಲು ಜಾಣತನ ಬೇಕೇ ಹೊರತು ಓದಲು ಬೇಕಿಲ್ಲವಷ್ಟೆ? ) ಈವರೆಗೆ ಓದಿ ತಲೆಯಲ್ಲಿ ತುಂಬಿಕೊಂಡ ವಿಚಾರಗಳನ್ನು 'ಸಂಪದ'ದಲ್ಲಿ ಈವರೆಗೆ ಬರೆದು ತಲೆಯನ್ನು ಕೊಡವಿಕೊಂಡದ್ದಾಯಿತು. ಈ ಸಮಯದಲ್ಲಿ ಶ್ರೀ ಟಿ. ವಿ. ಶ್ರೀನಿವಾಸ ಅವರು ( ' ಸಂಪದ'ದ ಮೂಲಕವೇ ಅವರ ಪರಿಚಯವಾದದ್ದು ) ಕನ್ನಡಸಾಹಿತ್ಯ.ಕಾಂ ನ ಕುರಿತು ತಿಳಿಸಿದರು . ಅವರಿಗೆ ಬರಹಗಳನ್ನು ತಿದ್ದುವ ವಾಲಂಟೀರ್- ಸ್ವಯಂಸೇವಕರ ಅಗತ್ಯ ಇದೆ. ಎಂದು ತಿಳಿಸಿದರು .
ಅವರು ಹೇಳಿದಂತೆ ಯಾಹೂ ಗ್ರುಪ್ ( http://groups.yahoo.com/group/ksc-baraha-team) ನ ಸದಸ್ಯನಾಗಿದ್ದೇನೆ . ಅಲ್ಲಿಯ ರೋಹಿತ್ ಅವರು ಆಗಾಗ ಕೆಲವೊಂದು ಲೇಖನಗಳ ಲಿಂಕ್ ಕೊಡುತ್ತಾರೆ . 'ಬರಹ' ಮತ್ತು 'ನುಡಿ' ತಂತ್ರಾಂಶಗಳನ್ನು ಉಪಯೋಗಿಸಿ ಲೇಖನಗಳ ಕಾಗುಣಿತ ದೋಷಗಳನ್ನು ತಿದ್ದುತ್ತಲೇ , 'ನುಡಿ'ಯಲ್ಲಿನ ಪದಪರೀಕ್ಷಕ( ಅಂದ್ರೆ ಸ್ಪೆಲ್ಲ್ ಚೆಕ್ಕರ್ - ಕನ್ನಡದಲ್ಲಿ ! - ( ಅ. ರಾ. ಸೇ. ಯವರ 'ಸೊಗದಿರುಳು ನಲ್ವಗಲು' ಹಾಸ್ಯ ಕಾದಂಬರಿಯಲ್ಲಿ 'ಸೊಗದಿರುಳ್ ನನಗಕ್ಕೆ / ನಲ್ವಗಲ್ ನಿನಗಕ್ಕೆ' ಎಂದು ವಿಶ್ ಮಾಡಿದಾಗ ಯಾರೋ ' ಏನ್ಸಾ ಅಂಗಂದ್ರೆ ? ' ಅಂತ ಕೇಳ್ದಾಗ 'ಹಂಗಂದ್ರೆ ಕನ್ನಡದಾಗೆ ಗುಡ್ ನೈಟು , ಗುಡ್ ಡೇ ಅಂತ ಕಣಲೇ' ಅಂತ ವಿವರಿಸಿರ್ತಾರೆ!) ಉಪಯೋಗಿಸಿ ಪದಪರೀಕ್ಷಕಕ್ಕೆ ಅದು ಅರಿಯದ ಶಬ್ದಗಳನ್ನು ಸೇರಿರುವದು. ಈವರೆಗೆ ೧೯ ಲೇಕನಗಳನ್ನು ಪರೀಕ್ಷಿಸಿ/ತಿದ್ದಿ ಸುಮಾರು ಇಪ್ಪತ್ತು ಸಾವಿರ ಶಬ್ದ ಸೇ(ಪೇ)ರಿಸಿದ್ದೇನೆ.
ಅಂದರೆ ಇಲ್ಲಿ ನಾನು ಕನ್ನಡ ಶಬ್ದಗಳನ್ನು ಗುರುತಿಸುವ ಶಕ್ತಿಯನ್ನು ಯಂತ್ರಕ್ಕೆ ಕೊಡುತ್ತಿದ್ದೇನೆ . ಅದೇ ಸಮಯಕ್ಕೆ ಅರ್ಧ ಜೀವಮಾನದ ಓದಿನ ನಂತರ ನನಗೆಷ್ಟು ಕನ್ನಡ ಪದಗಳನ್ನು ಗುರುತಿಸಲಾಗುತ್ತದೆ ಎಂಬ ಅಂದಾಜೂ ಸಿಗುತ್ತದಲ್ಲವೆ ?

ನೀವೂ ನಿಮ್ಮ ಬಿಡುವಿನ ವೇಳೆಯನ್ನು ಈ ರೀತಿ ಸದುಪಯೋಗಮಾಡಿಕೊಳ್ಳ ಬಯಸಿದರೆ ( http://groups.yahoo.com/group/ksc-baraha-team) ಗೆ ಸದಸ್ಯರಾಗಿ ನಮ್ಮ ಜತೆಗೆ ಕೈ ಕೂಡಿಸಬಹುದು.

Rating
No votes yet

Comments