ಬಿನ್ನಾಣವದೆಷ್ಟು ಈ ಕವಿತೆಗೆ?
ಬರೆಯಬೇಕೆಂಬಾಸೆಯನ್ನು ಒರೆಗಲ್ಲಿಗೆ ಹಚ್ಚಿದರೆ
ಬರೆಯಲೇನೆಂಬ ಉದ್ವೇಗ
ಬರೆಯಲು ತುಸು ಸಮಯವೂ ದೊರೆಯದಿರುವಾಗ
ಬರೆಯುವಾಸೆಯ ಅದುಮಿ ಕಾರ್ಯದ ಕರೆಗೆ ಓಗೊಡುವ ಆವೇಗ
ಸಂಪದದ ಸೆಳೆತವೂ ಸಂಸಾರದ ಎಳೆತವೂ
ಸೊಂಪಾಗಿ ನಿದ್ರಿಸಿದ ಆಲಸ್ಯವೂ
ಮನದ ಮೂಲೆಯಲ್ಲಿ ಹಾಡುವ ಹಕ್ಕಿಯ ಬಾಯಿ ಕಟ್ಟಿ
ಕೈ ಕಾಲ್ಮುರಿದು ಕೂಡಿಸಿದ ವೈಪರೀತ್ಯವೋ?
ಅರವಿಂದರ ಮಾತಿದು ಕಾವ್ಯ ಆತ್ಮದಿಂದ ಆತ್ಮಕ್ಕೆ ತಲುಪಬೇಕಂತೆ
ಬರೆಯುವ ಮುನ್ನ ಬರೆಸುವ ಹಕ್ಕಿ ಒಳಗಿನಿಂದ ಇಂಪಾಗಿ ಹಾಡ ಬೇಕಂತೆ
ಹಕ್ಕಿಯ ಹಾಡಿಗೆ ತಕ್ಕ ತಾಳವ ಹಾಕಿ ಮೆಚ್ಚಿದ ಓದುಗ
ಪಕ್ಕವಾದ್ಯವ ನುಡಿಸಿ ಆನಂದಿಸಬೇಕಂತೆ
ಮನದೊಳಗಣ ಸಿಂಹ ಘರ್ಜಿಸ ಬೇಕಲ್ಲ
ಎದೆಯೊಳಗಿನ ಕೋಗಿಲೆ ಉಲಿಯಬೇಕಲ್ಲ
ಬುದ್ಧಿಯೊಳಗಣ ಬುದ್ಧ ಹೊರಬರಬೇಕಲ್ಲ
ನಿದ್ದೆಯೊಳಿಹ ಚೇತನ ಎದ್ದು ಕುಣಿಯಬೇಕಲ್ಲ!
ಬಿನ್ನಾಣವದೆಷ್ಟು ಈ ಕವಿತೆಗೆ?
ಹೊರಬರುವ ಮುನ್ನವೆ ವೈಯ್ಯಾರದಿ ಒಳಸರಿವ ಪರಿಯೇನು
ಎಷ್ಟು ತರದ ಬಟ್ಟೆ ಬದಲಾಯಿಸುವ ಸೊಬಗೇನು
ಇದು ಚೆಂದವೋ ಇದು ಸರಿಯೊಎಂದು
ಮನದ ಕನ್ನಡಿಯೊಳು ನೋಡುವ ಬಿಂಕವೇನು?
ಕೊನಗೂ ಹೊರಬಂದಳು ವೈಯ್ಯಾರಿ
ಕೋಂಕುನೋಟವಬೀರಿ
ಪದಗಳ ಆಭರಣಗಳ ಝಣಝಣಿಸುತ್ತ
ಅಲಂಕಾರಗಳ ಸೊಬಗಿಂದ ಮೆರೆಯುತ್ತ
ಅರ್ಥವಿಶ್ಲೇಷಣೆಯ ದೊಡ್ಡ ಬೊಟ್ಟನ್ನಿಟ್ಟು
ಮಾರ್ದವತೆಯೆಂಬ ನೀಳ್ಜಡೆಯ ಬೀಸುತ್ತ
ನಳಿನಮುಖಿ ನಾಚಿ ಹೊರಬಂದಳು
ಕುಡಿನೋಟ ಬೀರಿ ಬೀರಿ ಮೆರೆದಳು
ಎಲ್ಲರಿಗಿಂತ ನಾನೇ ಚೆಂದ ಎಂಬ ಹಮ್ಮು ಬೇರೆ
ಪಲ್ಲವಿಸುವೆ ಎಲ್ಲರೆದೆಯೊಳೆಂಬ ಹುಚ್ಚು ಆತ್ಮ ವಿಶ್ವಾಸ ಬೇರೆ
ಎಲ್ಲರ ದೃಷ್ಟಿಯಲ್ಲಿ ವಿಭಿನ್ನ ಅಭಿವ್ಯಕ್ತಿ ಇರುವುದು-ಇವಳೀಗೇನು ಗೊತ್ತು?
ಪಾಪ ಮುಗುದೆ.ನಡೆವಳು ಎಡವದೇ.......ನಿಜವೇ...
ದೃಷ್ಟಿಯಿಂದಲೇ ಸೃಷ್ಟಿ-- ಅಭಿರುಚಿಗಳು ಹಲವು
ಸೌಂದರ್ಯದ ಮಾನದಂದ ಪ್ರತಿಯೊಬ್ಬನಿಗೂ ವಿಭಿನ್ನ
ಪಾಪ ಇವಳಿಗೇನು ಗೊತ್ತು ?....ಅಲಂಕರಿಸಿ ನೆಡೆದಿದ್ದಾಳೆ
ಸಂಪದದಂಗಣದಲ್ಲಿ ನಿರ್ಬಿಡೆಯಿಂದ
ಇಲ್ಲಿ ಎಲ್ಲರೂ ನನ್ನವರೆಂಬ ಹೆಮ್ಮೆಯೇ?
ಪ್ರಪಂಚವನು ಮರೆತು ತನ್ನ ಲೋಕದಲ್ಲಿ ತೇಲಾಡುತ್ತಿದ್ದಾಳೆ
ಪ್ರಶಂಸೆಯ ಪರಿಧಿಯನ್ನು ಮೀರಿ.......
Rating
Comments
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
In reply to ಉ: ಬಿನ್ನಾಣವದೆಷ್ಟು ಈ ಕವಿತೆಗೆ? by vani shetty
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
In reply to ಉ: ಬಿನ್ನಾಣವದೆಷ್ಟು ಈ ಕವಿತೆಗೆ? by prasannakulkarni
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
In reply to ಉ: ಬಿನ್ನಾಣವದೆಷ್ಟು ಈ ಕವಿತೆಗೆ? by prasannakulkarni
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
In reply to ಉ: ಬಿನ್ನಾಣವದೆಷ್ಟು ಈ ಕವಿತೆಗೆ? by gopaljsr
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
In reply to ಉ: ಬಿನ್ನಾಣವದೆಷ್ಟು ಈ ಕವಿತೆಗೆ? by santhosh_87
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
In reply to ಉ: ಬಿನ್ನಾಣವದೆಷ್ಟು ಈ ಕವಿತೆಗೆ? by Chikku123
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
In reply to ಉ: ಬಿನ್ನಾಣವದೆಷ್ಟು ಈ ಕವಿತೆಗೆ? by kavinagaraj
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
In reply to ಉ: ಬಿನ್ನಾಣವದೆಷ್ಟು ಈ ಕವಿತೆಗೆ? by RAMAMOHANA
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
In reply to ಉ: ಬಿನ್ನಾಣವದೆಷ್ಟು ಈ ಕವಿತೆಗೆ? by gowri parthasarathy
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
In reply to ಉ: ಬಿನ್ನಾಣವದೆಷ್ಟು ಈ ಕವಿತೆಗೆ? by ಗಣೇಶ
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
In reply to ಉ: ಬಿನ್ನಾಣವದೆಷ್ಟು ಈ ಕವಿತೆಗೆ? by bhalle
ಉ: ಬಿನ್ನಾಣವದೆಷ್ಟು ಈ ಕವಿತೆಗೆ?
ಉ: ಬಿನ್ನಾಣವದೆಷ್ಟು ಈ ಕವಿತೆಗೆ?