ಬೀ ಎಂ ಟೀ ಸಿ ಬಸ್ಸಲ್ ನಿನ್ನೆ ಒಂದು ಬಾಕ್ಸು-ಬಾಂಬು-ಆ ಆತಂಕದ ಕ್ಷಣಗಳು!

ಬೀ ಎಂ ಟೀ ಸಿ ಬಸ್ಸಲ್ ನಿನ್ನೆ ಒಂದು ಬಾಕ್ಸು-ಬಾಂಬು-ಆ ಆತಂಕದ ಕ್ಷಣಗಳು!

ಚಿತ್ರ
ದಿನ ನಿತ್ಯ  ಹಲವು ಸಾವಿರ -ಲಕ್ಷ  ಸಂಖ್ಯೆಯಲ್ಲಿ  ಮಹಾನಗರದ  ಮಹಾಜನತೆಯನ್ನು  ಒಂದೆಡೆಯಿಂದ ಮತ್ತೊಂದೆಡೆ-ಮಗದೊಂದೆಡೆ ಸಾಗಿಸುವ ಈ ಬೀ  ಎಂ ಟೀ  ಸಿ  ಬಸ್ಸುಗಳು-ಚಾಲಕ- ನಿರ್ವಾಹಕ-ಅಧಿಕಾರಿಗಳ ಕರ್ತವ್ಯ ಪರತೆ -ಪ್ರಯಾಣಿಕರಿಗೆ ಒದಗಿಸಿರುವ  ಅತ್ಯುತ್ತಮ ಸೌಲಭ್ಯಗಳು -ಕೆಲವು  ಕೊರತೆಗಳು -ಇತ್ಯಾದಿ ಬಗ್ಗೆ ಬಹುಪಾಲು ಎಲ್ಲರಿಗೂ ಗೊತ್ತಿರುವದ್ದೆ...ಬೆಂಗಳೂರಿಗೆ ಕಾಲಿಟ್ಟಾಗಿಂದ  ಇಲ್ಲಿವರ್ಗೆ  ನನ್ನ ಪ್ರಯಾಣ ಬೀ  ಎಂ ಟೀ  ಸಿ  ಬಸ್ಸಲ್ಲೇ...ಒಂದು ಇಲ್ಲಿ ಸಮೂಹ  ಸುರಕ್ಷತೆ ಇದೆ ಎನ್ನುವುದು, ಮತ್ತೊಂದು ಹಣದ ಉಳಿತಾಯ !
 
ಪೀಠಿಕೆ  ಸಾಕು-ಈಗ ಮುಖ್ಯ ವಿಷಯಕ್ಕೆ ಬರುವ..ನಿನ್ನೆ  ರಾತ್ರಿ ಏನಾಯ್ತು?
 
ನಿನ್ನೆ ಆಫೀಸಿಂದ ಹೊರಟು ಮೆಜೆಸ್ಟಿಕ್ ತಲುಪಿ  ೨೭೩ಸಿ ಬಸ್ಸು ಹತ್ತಿ ಮತ್ತಿಕೆರೆಯಲ್ಲಿ ಇಳಿದು  ಅಲ್ಲಿ ೨೭೧ಎನ್ ಬಸ್ಸು ಹತ್ತಿದೆ. ಹತ್ತುವಾಗಲೇ ಬಾಗಿಲ ಹತ್ತಿರ ಒಂದು ಪ್ಯಾಕ್ ಮಾಡಿದ ದೊಡ್ಡ ರಟ್ಟಿನ ಬಾಕ್ಸ್ ದಾರಿಗೆ ಅಡ್ಡಲಾಗಿ  ಇಕ್ಕಿದ್ದು ಇಕ್ಕಿದ್ದು ಕಾಣಿಸಿತು.ನಿರ್ವಾಹಕನಿಗೆ ಪ್ರಶ್ನಿಸಿದರೆ-ಅದು ನನ್ನದೇ ಎಂದು  ನನ್ನನ್ನೇ ಪ್ರಶ್ನಿಸಬೇಕೆ? ನಂದಲ್ಲ-ಗೊತ್ತಿಲ್ಲ -ಈಗ ತಾನೇ ನಾನು ಬಸ್ಸು ಹತ್ತಿದ್ದು ಎಂದೆ..ಆಮೇಲೆ ನಿರ್ವಾಹಕ ಮುಂದೆ ಸಾಗಿ ಎಲ್ಲರನ್ನು ದಾರಿಗೆ ಅಡ್ಡಲಾಗಿ ಇಕ್ಕಿರುವ ಆ ಬಾಕ್ಸ್ ವಾರಸುದಾರರು ಯಾರು ಎಂದು ಮತ್ತೆ ಮತ್ತೆ ಪ್ರಶ್ನಿಸಿದರೂ ಯಾರೊಬ್ಬರೂ ತುಟಿ ಪಿಟಕ್ ಎನಲಿಲ್ಲ...!
 
ಮೊನ್ನೆ ಮೊನ್ನೆ ಹೈದರಾಬಾದಲ್ಲಿ ನಡೆದ ಬಾಂಬ್ ಧಾಳಿ ಇನ್ನೂ ಹಸಿರಾಗಿರೋದು ಮತ್ತು  ಮೊಬೈಲ್-ರೇಡಿಯೋ-ಸೈಕಲ್ ಬಾಕ್ಸ್ ಬಾಂಬು  ಎಂದೆಲ್ಲ ಓದಿ ನೋಡಿ ತಿಳಿದಿರುವ ನಾನು ಮತ್ತು ಇತರ ಸಹ ಪ್ರಯಾಣಿಕರಿಗೆ ದಿಗಿಲಾಗಿ ಅಲ್ಲಿ  ಒಂಥರಾ ಆತಂಕಕಾರಿ ವಾತಾವರಣ ನಿರ್ಮಾಣ ಆಯ್ತು..ಅಲ್ದೇ ಅದು ಎರಡು ಬಾಗಿಲ ಬಸ್ಸು ಮತ್ತು ಎರಡೂ ಬಾಗಿಲು ಹಾಕಿರುವುದು -ಒಂದು ವೇಳೆ  ಜನ ದಿಗಿಲಾಗಿ ಬಾಗಿಲತ ಒಟ್ಟಾಗಿ ನುಗ್ಗಿದರೆ  ಆ ಗದ್ದಲದಲ್ಲಿ ಕೆಲ ಜನರ ಕೈ ಕಾಲು ಮುರಿಯುವ -ಪ್ರಾಣ ಹಾನಿ ಆಗುವ ಸಂಭವವೂ ಇತ್ತು ಎನ್ನಿ..ಮತ್ತಿಕೆರೆಯಿಂದ ಬೀ ಈ ಎಲ್ ಸರ್ಕಲ್ ವರೆಗೆ ಪ್ರಯಾಣಿಕರನ್ನ ಪ್ರಶ್ನಿಸಿ ಪ್ರಶ್ನಿಸಿ ಸುಸ್ತಾದ ನಿರ್ವಾಹಕ  ಮತ್ತೆ ನನ್ನ ಕಡೆ ಬಂದಾಗ ನನ್ನ ಮನದ ಆತಂಕ -ಊಹೆ -ಸಂದೇಹವನ್ನು ಹೊರ ಹಾಕಿದೆ...
ಸಾರ್ ಅದ್ರಲ್ಲಿ ಬಾಂಬ್ ಇರಬಹುದ ಅಂತ..?
ಅದ್ಕೆ ಅವರು ಇದ್ರೂ ಇರಬಹುದು -ಯಾರೂ ಆ ಬಾಕ್ಸ್ ತಮ್ಮದು ಎಂದು ಹೇಳುತ್ತಿಲ್ಲ..ಅದು ಇಲ್ಲಿ ಯಾವಾಗ ಹೇಗೆ ಬಂತು ಅಂತ ನಾನೂ ಗಮನಿಸಿಲ್ಲ ..ಎಂದಾಗ ನಾನು  ಅದು ನಾನು ಮತ್ತಿಕೆರೆ ಮುಖ್ಯ ಬಸ್ಸು ನಿಲ್ದಾಣದಲ್ಲಿ ಹತ್ತಿದಾಗಲೇ ಇತ್ತು ಎಂದಾಗ ಮಾವರು ಬಹುಶ ಇದು ಮತ್ತಿಕೆರೆ ರಾಮಯ್ಯ ಬಸ್ಸು ನಿಲ್ದಾಣ ಅಥವಾ ಅದ್ಕೂ ಹಿಂದೆ ಮಲ್ಲೇಶ್ವರ-ಯೆಶವಂತಪುರದಲ್ಲಿ  ಈ ಬಸ್ಸಲ್ಲಿ ಬಂದಿರಬೇಕು ಎಂದರು...
 
ಕೊನೆಗೆ ಧೈರ್ಯ ಮಾಡಿ ಆ ಬಾಕ್ಸನ ಒಂದು ಮೂಲೆಯಲ್ಲಿ ರಟ್ಟು ಎತ್ತಿ ನೋಡಿದರು-ಆಗ ಎಲ್ಲರ ಜೀವ ಬಾಯಿಗೆ ಬಂದ ಹಾಗಿತ್ತು! ನಾವೆಲ್ಲಾ ಢವ ಗುಟ್ಟುವ ಎದೆಯೊಡನೆ ಉಸಿರಾಡೋದು ಮರೆತು  ನೋಡುತ್ತಿದ್ದೆವು...,ನಿರ್ವಾಹಕ ಬಾಕ್ಸಿಗೆ ಕೈ ಹಾಕಿದ-ಒಂದು ಮೂಲೆ ಕಡೆ ಮೆಲ್ಲಗೆ ಓಪನ್ ಮಾಡಿ ಒಳಗೆ ಇಣುಕಿದ...
ನಮ್ ಹೃದಯದ ಬಡಿತ ಜೋರಾಯ್ತು...!ತಲೆ ಎತ್ತಿ ನಮ್ಮತ್ತ ನೋಡಿದ ನಿರ್ವಾಹಕ ನಕ್ಕ..
 
ಅಲ್ಲೇನಿತ್ತು?
ಅದರಲಿ ಅದೇ ತಾನೇ ಖರೀದಿಸಿದ ಪ್ರಿಂಟಿಂಗ್ ಪೇಪರನ (ಎ ೪ ಸೈಜ್)೧೦ ಪೇಪರ್ ಬಂಡಲ್ ಇದ್ದವು...! ಸ್ಸರಿ....ಇಲ್ಲಿಗೆ ಕಥೆ-ವ್ಯಥೆ ಸುಖಾಂತ್ಯವಾಯ್ತಲ್ಲ  ಎಂದು ನಾನೂ ಮತ್ತು ಎಲ್ಲರೂ ನಿರಾಳವಾದೆವು..ಆದರೆ ಈಗ ಅಸಲು ಸಮಸ್ಯೆ ಶುರು ಆಯ್ತು....
 
ಇದರ ಮಾಲೀಕರು ಯಾರು?
ಮತ್ತೊಮ್ಮೆ ಎಲ್ಲರತ್ತ ಸಾಗಿ ನಿರ್ವಾಹಕರು ಪ್ರಶ್ನಿಸಿದರೂ ಯಾರೊಬ್ಬರೂ ನನ್ನದು ಎನ್ನುತ್ತಿಲ್ಲ. ಹೀಗೂ ಉಂಟೆ?
ಉಂಟು.. ಆಮೇಲೆ ಕೊನೆ ಸ್ಟಾಪ್ ಗೆ ಬಂದಾಗಲೂ ಯಾರೂ ಅದರತ್ತ ಸುಳಿಯದೇ ಇರಲು, ಮೆಲ್ಲಗೆ ಎದ್ದ ಒಬ್ಬ ಆಸಾಮಿ ಅದರ ಮೇಲೆ ಕೈ  ಹಾಕಿ ಎತ್ತಿಕೊಂಡು ಬಾಗಿಲತ್ತ ಸರಿದ...
ಆಗ  ಈ ಸುಸಮಯಕ್ಕಾಗಿ ಕಾಯ್ತಿದ್ದ ನಾವ್ ಪ್ರಯಾಣಿಕರೆಲ್ಲ   ಒಟ್ಟಿಗೆ ಎದ್ದು ನೀ ಯಾರು? 
ಈ ಬಾಕ್ಸ ಏನು?ಇಲ್ಯಾಕೆ ಅನಾಥವಾಗಿ ಇಷ್ಟು ಹೊತ್ತು ಬಿದ್ದಿತ್ತು...?ಅಸ್ಟು ಸಮಯ ಕೇಳಿದರೂ ಪ್ರಶ್ನಿಸಿದರೋ ತುಟಿ ಪಿಟಕ್ ಎನದೆ ಇದ್ದ ನೀನು ಈಗ ಅದು ಎತ್ತಿಕೊಂಡದ್ದು ಯಾಕೆ? ಅದು ನಿನ್ನದೇನ?ಎಂದೆಲ್ಲ ಪ್ರಶ್ನೆಗಳ ಸುರಿಮಳೆ ಸುರಿದೆವು...
ಮುಂದೇನಾಯ್ತು?
 
ಆಗ ನಿರ್ವಾಹಕರು ಅದು ಖರೀದಿಸಿದ ಬಿಲ್ಲು ಕೇಳಿದರೆ ಅವನ ಹತ್ತಿರ ಬಿಲ್ -ಬಿಲ್ಕುಲ್ ಇಲ್ಲ..ಅದು ಅವ್ನದಾಗಿದ್ದರೆ ತಾನೇ ಬಿಲ್ಲು ಅವನತ್ರ ಇರೋದು. ಯಾರೂ ವಾರಸುದಾರರು ಇಲ್ಲದ ಆ ಬಹು ಬೆಲೆ ಬಾಳುವ ಪೇಪರ್ ಮನೆಗೆ ಒಯ್ಯುವ ಎಂದು  ಎತ್ತಿಕೊಂಡದ್ದು ಎಂದು ಗೊತಾಯ್ತು...
 
ಆ ಬಾಕ್ಸ್ ಈಗ ಆಗ್ ಅಗೊತ್ತಾಗಿದ್ದು -ಬಿಟ್ಟಿ  ಸಿಕ್ರೆ ರಾಮನೂ ಬಿಡೋಲ್ಲ..ಭೀಮನೂ ಬಿಡೋಲ್ಲ...ಅಂತ.!
ಆದ್ರೆ- ಇದೆ ಚಾನ್ಸ್ ಎಂದು ಬಿಟ್ಟಿ  ಬಾಕ್ಸ್ ಎತ್ತಿಕೊಂಡ ಆ ಆಸಾಮಿ ಮುಖ ಕಳೆಗುಂದಿ  ಆ ಸನ್ನಿವೇಶ ನೋಡಲು ಮಜವಾಗಿದ್ದ್ರೂ -ಅವನ ಆ ಸ್ಥಿತಿ ಕಂಡು ಮನ ಮರುಗಿತು. ವಶಕ್ಕೆ  ಹೋಯ್ತು. ಅಲ್ಲಿಗೆ ನಾವೆಲ್ಲಾ ಬಸ್ಸು ಇಳಿದು ಮನೆಗೆ ಹೋದೆವು..
ನಿರಾಳವಾಗಿ.
ಬಾಕ್ಸ್  ಕಥೆ ಏನಾಯ್ತು? ಗೊತ್ತಿಲ್ಲ..!
 
ಒಂದೋ ಆ ನಿರ್ವಾಹಕ ಅದನ್ನು ಸ್ಟೇಷನರಿಯವರಿಗೆ ಮಾರಿರಬೇಕು..
ಅಥವಾ ಮನೆಗೆ ಹೊಯ್ದು ಮಕ್ಕಳಿಗೆ  ಹೋಂ ವರ್ಕ್ ಮಾಡಲು ಕೊಟ್ಟಿರಬೇಕು...
ಆ ಬಾಕ್ಸ್ ಏನಾಯ್ತು ಎಂದು ಇವತ್ತು ರಾತ್ರಿ ಮತ್ತೆ ಪ್ರಯಾಣ ಮಾಡುವಾಗ ಆ ನಿರ್ವಾಹಕರು ಸಿಕ್ಕಾಗ ಕೇಳಿ ತಿಳಿಸುವೆ..
 
ಒಂದೊಮ್ಮೆ ಆ ಬಾಕ್ಸಲ್ಲಿ ನಿಜವಾದ ಬಾಂಬ್ ಇದ್ದರೆ..ಇದ್ದಿದ್ದರೆ  ? ಇದು ಬರೆಯಲು ಸ.ವಾ ಇರುತ್ತಿರಲಿಲ್ಲ.!
 
ಒಟ್ಟಿನಲ್ಲಿ ನಿನ್ನೆ ರಾತ್ರಿ  ಮನೆ ತಲುಪುವವರೆಗೆ-ತಲುಪಿದ ಮೇಲೆ -ಇವತ್ತೂ ಅದೇ ಗುಂಗು ಮನದಲ್ಲಿ ಮನೆ ಮಾಡಿತ್ತು..ಸಂಪೂರ್ಣ ಸುರಕ್ಷತೆ ಕನಸಿನ ಮಾತೆ?
 
ಏನೋಪ್ಪ ಗೊತ್ತಿಲ್ಲ!
ಚಿತ್ರ ಮೂಲ: 
 
ಲೇಖಕರದು
(ಬಸ್ಸಲ್ಲಿ ಮೊಬೈಲಿನಲಿ ಕ್ಲಿಕ್ಕಿಸಿದ್ದು )  
 
Rating
No votes yet

Comments

Submitted by swara kamath Tue, 03/12/2013 - 22:47

ಸಪ್ತಗಿರಿ ಅವರೆ, ಇಂಥಹ ಘಟನೆಗಳು ಬಿ ಎಮ್ ಟಿ ಸಿ ಬಸ್ಸಿನಲ್ಲಿ ಎಷ್ಟಾಗುತ್ತವೊ ದೇವರಿಗೆ ಗೊತ್ತು. ದೇವರ ದಯೆ ,ನೀವು ಪ್ರಯಾಣಿಸಿದ ಬಸ್ಸಿನಲ್ಲಿ ಸಿಕ್ಕ ಆ ಬಾಕ್ಸನಲ್ಲಿ ಅಂಥಹ ಮಾರಕ ವಸ್ತು ಇರದಿರುವುದೇ ನಿಮ್ಮ ಪುಣ್ಯ. ಲಕ್ಷಗಟ್ಟಲೆ ಪ್ರಯಾಣಿಕರು ದಿನನಿತ್ಯ ಬಸ್ಸಿನಲ್ಲಿ ಹೋಗುವಾಗ ಯಾರಾದರೊಬ್ಬ ದುಷ್ಟ ವ್ಯಕ್ತಿ ಇಂಥಹ ಪೆಟ್ಟಿಗೆಯಲ್ಲಿ ಮಾರಕ ವಸ್ತುಗಳನ್ನಿಟ್ಟಿದ್ದರೆ ಗೊತ್ತಾಗುವುದು ಬಹಳ ಕಷ್ಟ. ಯಾವುದಕ್ಕು ನಮ್ಮ ನಶೀಬು ಸರಿ ಇರಬೇಕು.ನಿಮ್ಮ ದಿನನಿತ್ಯದ ಬಸ್ಸಗಳ ಪ್ರಯಾಣ ಬೇಸರ ಮೂಡಿಸುತ್ತೆ. ಆದರೆ ಅದು ಬದುಕಿನ ಅನಿವಾರ್ಯತೆ ಕೂಡ. ಆ ಭಗವಂತನ ರಕ್ಷೆ ತಮಗೆ ಸದಾ ಇರಲಿ. ವಂದನೆಗಳು

Submitted by venkatb83 Sat, 03/16/2013 - 22:14

In reply to by swara kamath

ಹಿರಿಯರೇ ನೀವ್ ಹೇಳಿದ ಹಾಗೆ ಇದು ಅನಿವಾರ್ಯ - ಗುರು ಹಿರಿಯರು ಬಂಧು ಬಳಗದ ಹಾರೈಕೆ ಇದ್ದಾಗ ಏನೂ ಆಗಲಿಕ್ಕಿಲ್ಲ. ಹಾರೈಕೆ + ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ..
\।/

Submitted by ಗಣೇಶ Tue, 03/12/2013 - 23:43

ಸಂಶಯಾಸ್ಪದ ವಸ್ತುವಾಗಿರುವಾಗ ಅದನ್ನು ಮುಟ್ಟುವ ಮೊದಲು ಜನರನ್ನೆಲ್ಲಾ ಕೆಳಗಿಳಿಸಬೇಕಿತ್ತು. ಕಂಡಕ್ಟರ್ ಅದಕೊಪ್ಪದಿದ್ದಲ್ಲಿ ಜನರಿಗೆ ಇಳಿಯಲು ತಿಳಿಸಿ ತಾವೂ ಬಸ್ಸಿಂದ ಇಳಿಯಬೇಕು. ಇದಕ್ಕೆಲ್ಲಾ ಹೆದರಿದರೆ ಹೇಗೆ ಎಂದಲ್ಲ-ಜಾಗ್ರತೆ ಇರುವುದು ಬುದ್ಧಿವಂತಿಕೆ.

Submitted by venkatb83 Sat, 03/16/2013 - 22:25

In reply to by ಗಣೇಶ

ಗಣೇಶ್ ಅಣ್ಣ ಈ ಪ್ರತಿಕ್ರಿಯೆಯನ್ನು ನಾ ನಿಮಿಂದ ನಿರೀಕ್ಷಿಸಿದ್ದೆ.... ಈ ಬರೆವಾಗಲೇ ಆ ರೀತಿಯ ಭಾವ ಬಂದಿತ್ತು ಬಹುಶ ಓದಿದ ಎಲ್ಲರಿಗೂ ಆ ಭಾವ ಬಂದಿರಲಿಕ್ಕೂ ಉಂಟು .. !! ಅದೇ ಕೊನೆಯ ಬಸ್ಸಾಗಿತ್ತು.... ಎಲ್ಲರದೂ ಬೇಗ ಮನೆ ಮುಟ್ಟುವ ಧಾವಂತ....@!! ಇದು ಅವರೆಲ್ಲರ ಮನದಲ್ಲಿ ಬಂದಿರಲಿಕ್ಕಿಲ್ಲ...@!@! ಒಟ್ಟಿನಲ್ಲಿ ಏನೂ ಆಗಲಿಲ್ಲವಲ್ಲ ...;()))
ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ...

\।

Submitted by partha1059 Sun, 03/17/2013 - 09:21

In reply to by venkatb83

ಅದೇ ಕೊನೆಯ ಬಸ್ಸಾಗಿತ್ತು.... ಎಲ್ಲರದೂ ಬೇಗ ಮನೆ ಮುಟ್ಟುವ ಧಾವಂತ.. !!!

ನಿಮ್ಮ ಮಾತು ನಿಜ‌ ಅದು ಕೊನೆಯ‌ ಬಸ್ಸು ಆಗಿತ್ತು..... ಸ್ವಲ್ಪ ಹೆಚ್ಚುಕಡಿಮೆ ಆಗಿದ್ದಲ್ಲಿ ಕಡೆಯ‌ ಬಸ್ಸೆ ಆಗುತ್ತಿತ್ತು !!! ಮತ್ತೆ ತಡ‌ ಮಾಡದೆ ಬೇಗ‌ ಮನೆ ಮುಟ್ಟಿಸುತ್ತಿತ್ತು

Submitted by kavinagaraj Wed, 03/13/2013 - 16:25

ಇಷ್ಟವಾಯಿತು. ಜಾಗೃತರಾಗಿರುವುದಲ್ಲದೆ ಇತರರನ್ನು ಜಾಗ್ರತೆಗೊಳಿಸಿರುವುದು ಒಳ್ಳೆಯದೇ!

Submitted by venkatb83 Sat, 03/16/2013 - 22:29

In reply to by kavinagaraj

;()))

ಹಿರಿಯರೇ ತರಹದ್ದು ಹಂಚಿಕೊಂಡಾಗ ಮುಂದೊಮ್ಮೆ ಆಪತ್ತಿನ ಸಮಯದಲ್ಲಿ ಯಾರ್ಗಾರ ಉಪಯೋಗವಾದೀತು ....ಅಂತ.... ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ...

\।

Submitted by venkatb83 Mon, 03/18/2013 - 18:13

;()))

ಗುರುಗಳೆ
ಹಾ ಅದೂ ನಿಜವೆ...!! ಮೆಲೊಬ್ಬನಿಹನು ಎಲ್ಲವನ್ನು ನೋಡುವನು..ರಕ್ಷಿಸುವನು..!!

ಪ್ರತಿಕ್ರಿಯೆಗೆ ನನ್ನಿ
ಶ್ಹುಭವಾಗಲಿ..

\|