ಬುದ್ಧ ಮತ್ತು ಬೇಡ

ಬುದ್ಧ ಮತ್ತು ಬೇಡ

ಬಹಳ ಹಿಂದೆ ಓದಿದ ಈ ಬರಹ, ಬಹುಶಃ ’ಕಸ್ತೂರಿ’ ಪತ್ರಿಕೆಯಲ್ಲಿ ಬಂದಿತ್ತು ಅನ್ಸುತ್ತೆ. ಸುಮಾರು ೨೦-೨೫ ವರ್ಷಗಳ ಕೆಳಗೆ ಓದಿದ್ದು. Exact ಆಗಿ ಜ್ನಾಪಕ ಇಲ್ಲ. ಆದರೆ, ಹೆಚ್ಚುಕಮ್ಮಿ ಈ ರೀತಿ ಇತ್ತು.

ಒಮ್ಮೆ ಕಾಡೆಲ್ಲ ಅಲೆಯುತ್ತ, ಬುದ್ಧ ಬಾಯಾರಿ ಒಂದು ಸಂರಕ್ಷಿತ ಕೊಳದ ಬಳಿ ಬಂದು ಇನ್ನೇನು ನೀರು ಕುಡಿಯಲು ಹೋಗುತ್ತಾನೆ. ಅಷ್ಟರಲ್ಲಿ ಎಲ್ಲಿಂದಲೊ ಬಂದ ಅಶರೀರವಾಣಿ ಹೇಳುತ್ತೆ ’ತಾಳು, ನೀನೇನಾದರು ಈ ನೀರನ್ನು ಕುಡಿದು ಈ ಕೊಳವನ್ನು ಹಾಳು ಮಾಡಿದರೆ, ನೀನು ಕೂಡಲೇ ಸಾಯುತ್ತೀಯ, ಎಚ್ಚರಿಕೆ’

ಬುದ್ಧ ಅದನ್ನು ಕೇಳಿ ಕೊಳದಿಂದ ಹಿಂತೆಗೆದು, ಅಲ್ಲೆ ಕುಳಿತು ದಣಿವಾರಿಸಿಕೊಳ್ಳುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಒಬ್ಬ ಬೇಡ ಬಂದು, ಅದೇ ಕೊಳದಿಂದ ನೀರು ಕುಡಿದು, ಸ್ನಾನ ಮಾಡಿ, ತನ್ನ ಪ್ರಾಣಿಗಳನ್ನೂ ತೊಳೆಸಿ ಅಲ್ಲಿಂದ ತೆರಳುತ್ತಾನೆ. ಬುದ್ಧನಿಗೆ ಆಶ್ಚರ್ಯವಾಗಿ ಆ ಅಶರೀರವಾಣಿಯನ್ನು ಕೇಳುತ್ತಾನೆ ’ಅರೆ, ಈಗ ತಾನೆ ಆ ಬೇಡ ಬಂದು ಈ ಕೊಳವನ್ನು ಹೀಗೆ ಹಾಳುಗೆಡವಿದರೂ, ನೀನು ಯಾವ ಮಾತನಾಡದೆ ಅವನನ್ನು ಸುಮ್ಮನೆ ಬಿಟ್ಟೆಯಲ್ಲ? ಇದು ಯಾವ ರೀತಿಯ ನ್ಯಾಯ?’'

ಆಗ ಅಶರೀರವಾಣಿ ಉತ್ತರಿಸುತ್ತದೆ ’ಆ ಬೇಡ ಏನೂ ಅರಿಯದವ, ಅವನಿಗೆ ಈ ಕೊಳ ಸಂರಕ್ಷಿಸಲ್ಪಟ್ಟಿದ್ದು ಅಂತ ನಾ ಹೇಳಿದ್ದರೂ, ಅವನಿಗೆ ಅದೇನು ಅರ್ಥವಾಗುತ್ತಿರಲಿಲ್ಲ. ಹಾಗಾಗಿ, ನಾನು ಎಚ್ಚರಿಸಿದ್ದರೂ, ಅವನು ನೀರು ಕುಡಿಯುತ್ತಿದ್ದ. ಹೀಗೆ ಇಂಥವರೆನ್ನೆಲ್ಲಾ ನಾನು ಕೊಲ್ಲುತ್ತ ಬಂದರೆ, ಇಡೀ ಪ್ರಪಂಚವೇ ಬರಿದಾಗಬಹುದು. ನೀನು ತಿಳಿದವ, ಜ್ನಾನಿ, ಬುದ್ಧ. ನಿನ್ನಂಧವನು ಅಂಧ ಕೆಲಸವನ್ನು ಮಾಡಿದ್ದರೆ, ಅದು ಅಕ್ಷಮ್ಯವಾಗುತ್ತದೆ’. ಬುದ್ಧ ಈ ಮಾತು ಕೇಳಿ ನಾಚಿಕೆಪಡುತ್ತಾನೆ.

ಇದೊಂದು ವಿವರಣೆ ನನ್ನನ್ನು ಯಾವಾಗಲೂ ನೆನಪಾಗುತ್ತದೆ. ನಾನು ಜನ ರಸ್ತೆಯಲ್ಲಿ ಉಗುಳುವುದು, ಪಾರ್ಕಿನಲ್ಲಿ ಕಸವನ್ನು ಎಸೆಯುವುದು, ಕಸದ ತೊಟ್ಟಿಯ ಸುತ್ತಲೇ ಕಸ ಹಾಕುವುದಂಥಹುದನ್ನು ನೋಡಿದಾಗ, ಇದು ಇಂಥ ಜನರಿಗೇ ಅನ್ವಯವಾಗುವುದು ಅನ್ನಿಸುತ್ತದೆ. ಇವರೆಲ್ಲರನ್ನು ನೋಡಿದಾಗ ನನಗೆ ಆಶ್ಚರ್ಯವಾಗುತ್ತದೆ. ಹಾಗೆ ಮಾಡುವವರಲ್ಲಿ ಹೆಚ್ಚಿನವರು ಓದಿದವರ ಹಾಗೆ ಕಾಣ್ತಾರೆ. ಆದರೆ ಅವರ್ಯಾರೂ ತಿಳಿದವರ ಹಾಗಂತೂ ಕಾಣ್ಸೋದಿಲ್ಲ. ನನ್ನ ಗುರುಗಳು ಜಿ. ರಾಮಚಂದ್ರ ಅಂಥ, ಅವರು ಹೇಳ್ತಾ ಇರ್ತಿದ್ರು. ’ನೀನು ಬರೀ ಓದಿದ್ರೆ ಸಾಲ್ದಯ್ಯ, ಓದಿದವರಲ್ಲ ಬುದ್ದಿವಂತರು, ತಿಳಿದವರು ಆಗೋಲ್ಲ. ಹತ್ತು ತಿಳಿಗೇಡಿಯಾದ ವಿದ್ಯಾವಂತರಿಗಿಂತ, ಒಬ್ಬ ತಿಳಿವಳಿಕಯುಳ್ಳ ಹೆಬ್ಬೆಟ್ಟು ಎಷ್ಟೋ ವಾಸಿ!’ ಎಷ್ಟೊಂದು ನಿಜ. ಕೇವಲ ಶಿಕ್ಷೆಯಿಂದಲೇ ನಾವು ಜನರನ್ನು ದಾರಿಗೆ ತರಲು ಸಾಧ್ಯವೇ? ಯಾವಾಗ ನಾಗರೀಕರಾದ ನಾವು ಸುಸಂಸ್ಕೃತರಾಗುವುದು?

ಇನ್ನೊಂದು ಮಾತೂ ನಮ್ಮ ಗುರುಗಳು ಹೇಳ್ತಿದ್ರು ’Rules ಅನ್ನೋದು ನಿನಗೆ ಇಷ್ಟ ಇಲ್ದಲೇ ಇದ್ದಿದ್ರೆ, ಆ Rule ಅನ್ನು ಬದಲಾಯಿಸೋಕ್ಕೆ ಹೋರಾಡು. ಆ ನಿಯಮವನ್ನು ಮುರಿದು, ನಿನ್ನ ಅಸಮ್ಮತಿಯನ್ನು ತೋರಿಸೋಕೆ ಹೊರಟ್ರೆ, ಪ್ರಪಂಚವೇ ಒಂದು ದೊಂಬಿಯಾಗುತ್ತದೆ’

ಗೆಳೆಯರೇ, I think, ನಮಗೆ ಪ್ರತಿದಿನವೂ ಅನೇಕ ಬಾರಿ ಆ ಬುದ್ಧನ ಪರಿಸ್ಥಿತಿ ಎದುರಾಗುತ್ತದೆ. ನಮ್ಮ reaction  ಹೇಗಿರಬೇಕು. ಬುದ್ಧನ ಆ ಅಂತರಂಗದ ವಾಣಿ, ನಮ್ಮಲ್ಲೂ ಯಾಕೆ ಮೊಳಗೊಲ್ಲ? ನಾವು ಅಷ್ಟು ಅವಿವೇಕಿಗಳಾಗಿದ್ದೇವೆಯೆ? ನಮ್ಮ ಸುತ್ತಲಿನ ಪರಿಸರಕ್ಕೆ ಅಷ್ಟು Insenstive  ಆಗಿದ್ದೇವೆಯೇ? ಯೋಚಿಸಿ ನೋಡಿ, ಹೇಳಿ.

ಕೊನೆ ಹನಿ: ಇವತ್ತು ಒಬ್ಬ Customer ಮೀಟಿಂಗ್ ಇತ್ತು. ಒಬ್ಬರು ಹೇಳಿದ್ದರು, ’Prady (ನನ್ನ short name), ನಿನ್ನ Passion is infectious' ಅಂತ. ಆ ರೀತಿಯಾದ Passion  ಅನ್ನು ನನ್ನಲ್ಲಿ ಬೆಳೆಸಿದ ಆ ಗುರುವಿಗೆ ನನ್ನ ನಮನ.

ಮತ್ತೆ ನಾಳೆ ಸಿಗುವ.

ಪ್ರದ್ಯುಮ್ನ ಬೆಳವಾಡಿ.

Feb 11, 2007: 00:00 AM.

Rating
No votes yet

Comments